ಜೂಮ್ ವಿಡಿಯೊ ಕಾನ್ಫರೆನ್ಸ್‌ ಆಪ್ ಬಳಕೆ ಹೇಗೆ; ಇಲ್ಲಿವೆ ಟಾಪ್ 5 ಟಿಪ್ಸ್!

|

ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಿ ಲಾಕ್‌ಡೌನ್ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವುದು ಅವಶ್ಯವಾಗಿದೆ. ಈಗಾಗಲೇ ಅನೇಕ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಸೌಲಭ್ಯ ಕಲ್ಪಿಸಿವೆ. ವರ್ಕ್ ಫ್ರಂ ಹೋಂ ಮಾಡುವಾಗ ಆನ್‌ಲೈನ್‌ ಮೀಟಿಂಗ್‌ ನಡೆಸಲು ವಿಡಿಯೊ ಕಾನ್ಫರೆನ್ಸ್‌ ಆಪ್‌ಗಳು ನೆರವಾಗಿವೆ. ಅವುಗಳಲ್ಲಿ ಈ ಲಾಕ್‌ಡೌನ್‌ ಸಂದರ್ಭದಲ್ಲಿ ಜೂಮ್ ಆಪ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ವಿಡಿಯೊ ಕಾನ್ಫರೆನ್ಸ್

ಹೌದು, ಲಾಕ್‌ಡೌನ್‌ ಅವಧಿಯಲ್ಲಿ ಜೂಮ್ ಅಪ್ಲಿಕೇಶನ್ ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದು, ಬಹುತೇಕರು ವಿಡಿಯೊ ಕಾನ್ಫರೆನ್ಸ್‌/ವಿಡಿಯೊ ಕಾಲಿಂಗ್‌ ಈ ಪ್ಲಾಟ್‌ಫಾರ್ಮ್ ಅನ್ನು ಬಳಕೆ ಮಾಡುತ್ತಿದ್ದಾರೆ. ಸ್ಕೈಪ್‌, ಗೂಗಲ್ ಹ್ಯಾಂಗ್‌ಔಟ್‌ ವಿಡಿಯೊ ಕಾನ್ಫರೆನ್ಸ್ ಆಪ್‌ಗಳಿಗೆ ಜೂಮ್ ಅಪ್ಲಿಕೇಶನ್ ಪರ್ಯಾಯವಾಗಿದೆ. ಬಳಕೆದಾರರ ಮಾಹಿತಿ ಸುರಕ್ಷತೆಗಾಗಿ ಎಂಡ್ ಟು ಎಂಡ್‌ ಎನ್‌ಕ್ರಿಪ್ಶನ್ ಫೀಚರ್‌ಅನ್ನು ಜೂಮ್ ಆಪ್‌ ಹೊಂದಿದೆ. ಹಾಗೆಯೇ ಜೂಮ್‌ ಆಪ್‌ನ ಕೆಲವು ಟ್ರಿಕ್ಸ್‌ ಮತ್ತು ಟಿಪ್ಸ್‌ಗಳ ಬಗ್ಗೆ ನೀವು ತಿಳಿಯಬೇಕಿದೆ. ಮುಂದೆ ಓದಿರಿ.

ಮ್ಯೂಟ್‌ ಮೈಕ್

ಮ್ಯೂಟ್‌ ಮೈಕ್

ವಿಡಿಯೊ ಕಾನ್ಫರೆನ್ಸ್‌ಗಾಗಿ ಸದ್ಯ ಜೂಮ್ ಆಪ್‌ ಲೀಡಿಂಗ್‌ನಲ್ಲಿದ್ದು, ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಗರಿಷ್ಠ ಜನರನ್ನು ಕನೆಕ್ಟ್ ಮಾಡಬಹುದಾಗದ ಸೌಲಭ್ಯವನ್ನು ಪಡೆದಿದೆ. ಕರೆ ಕನೆಕ್ಟ್ ಇರುವ ವೇಳೆ ಸದಸ್ಯರ ಮೈಕ್ ಮ್ಯೂಟ್ ಮಾಡುವ ಆಯ್ಕೆ ಇದರಲ್ಲಿದೆ. ಅವರಿಗೆ ಮೈಕ್ ಮ್ಯೂಟ್ ಮಾಡಿ ಎಂದು ಕೇಳದೆ, ನೀವೆ ಅವರ ಮೈಕ್ ಮ್ಯೂಟ್ ಮಾಡಬಹುದಾಗಿದೆ.

ಗ್ಯಾಲರಿ ವ್ಯೂವ್

ಗ್ಯಾಲರಿ ವ್ಯೂವ್

ಜೂಮ್ ಆಪ್‌ನಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮಾಡುವಾಗ ಕರೆ ಮಾಡಿದ ವ್ಯಕ್ತಿಯ ಸ್ಕ್ರೀನ್‌ನಲ್ಲಿನ ದೃಶ್ಯ ಇತರೆ ಕರೆಯಲ್ಲಿರುವವರಿಗೂ ಕಾಣಿಸುತ್ತದೆ. ವಿಡಿಯೊ ಕರೆಯಲ್ಲಿರುವವರಿಗೆ ಸ್ಕ್ರೀನ್ ಉತ್ತಮ ವೀಕ್ಷಣೆಗಾಗಿ ಕರೆ ಮಾಡಿದ ವ್ಯಕ್ತಿ ಗ್ಯಾಲರಿ ಮೋಡ್ ಅನ್ನು ಆನ್ ಮಾಡಬಹುದು. ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಕರೆಯಲ್ಲಿ ಕನೆಕ್ಟ್ ಇರುವ ಸುಮಾರು 49 ವ್ಯಕ್ತಿಗಳು ವೀಕ್ಷಿಸಬಹುದಾಗಿದೆ.

ಸ್ಕ್ರೀನ್ ಶೇರಿಂಗ್

ಸ್ಕ್ರೀನ್ ಶೇರಿಂಗ್

ಜೂಮ್ ಆಪ್‌ನ ಇನ್ನೊಂದು ವಿಶೇಷವೆಂದರೇ ಸಭೆ ನಡೆಸುವಾಗ ಸ್ಕ್ರೀನ್ ಶೇರ್ ಮಾಡಿಕೊಳ್ಳಬಹುದಾಗಿದೆ. ಪರದೆಯ ಕೆಳಭಾಗದಲ್ಲಿರುವ ಟೂಲ್‌ಬಾರ್‌ನಲ್ಲಿ ಹಂಚಿಕೆ ಪರದೆಯ ಐಕಾನ್ ಕ್ಲಿಕ್ ಮಾಡುವ ಮೂಲಕ, ನಿಮ್ಮ ಸಂಪೂರ್ಣ ಡೆಸ್ಕ್‌ಟಾಪ್ ಅನ್ನು ಸಭೆಯಲ್ಲಿ ಭಾಗವಹಿಸುವವರೊಂದಿಗೆ ಅಥವಾ ನಿರ್ದಿಷ್ಟ ವಿಂಡೋದಲ್ಲಿ ಹಂಚಿಕೊಳ್ಳಲು ನೀವು ಆಯ್ಕೆ ಮಾಡಬಹುದು. ಅದು ಚಲನಚಿತ್ರ ಅಥವಾ ಪವರ್‌ಪಾಯಿಂಟ್ ಆಗಿದ್ದರೂ ಸಹ ಅನುಮತಿಸುತ್ತದೆ.

ಹೈಡ್‌ ಆಯ್ಕೆ

ಹೈಡ್‌ ಆಯ್ಕೆ

ಜೂಮ್ ಆಪ್‌ನಲ್ಲಿ ಸಮೂಹ ಕರೆ ಕನೆಕ್ಟ್ ಮಾಡಿದಾಗ ಕೆಲವರು ಆ ಕರೆ ಸಂಬಂಧಿಸಿರುವುದಿಲ್ಲ. ಆಗ ಅವರ ಸ್ಥಳ ಸುಮ್ಮನೆ ಬ್ಲ್ಯಾಂಕ್‌ ಆಗಿ ಇರುತ್ತದೆ. ಈ ಅವಸ್ಥೆ ಆಗದಿರಲು ಜೂಮ್‌ನಲ್ಲಿ ಒಂದು ಆಯ್ಕೆ ಇದೆ. ಅದುವೇ ಹೈಡ್ ನಾನ್ ವಿಡಿಯೊ ಪಾರ್ಟಿಸಿಪೇಟ್‌. ಅಂದರೇ ವಿಡಿಯೊ ಕರೆಯಲ್ಲಿ ಭಾಗಿ ಇಲ್ಲದವರನ್ನು ಹೈಡ್ ಮಾಡುವ ಆಯ್ಕೆ ಇದಾಗಿದೆ.

ಕ್ಯಾಮೆರಾ - ಮೈಕ್ ಆಫ್

ಕ್ಯಾಮೆರಾ - ಮೈಕ್ ಆಫ್

ಸಭೆ ಸೇರಿದಾಗ ತಕ್ಷಣಕ್ಕೆ ಕ್ಯಾಮೆರಾ ಆನ್ ಮಾಡಿ, ಮೈಕ್‌ನಲ್ಲಿ ಮಾತನಾಡುವ ಸಂದರ್ಭ ಇರದು. ಈ ನಿಟ್ಟಿನಲ್ಲಿ ನಿಮಗೆ ಅನುಕೂಲವಾಗಲೆಂದು ಮೈಕ್ ಹಾಗೂ ಕ್ಯಾಮೆರಾ ಸ್ವಯಂಚಾಲಿತವಾಗಿ ಆಫ್ ಆಗುವ ಸೌಲಭ್ಯ ಈ ಆಪ್‌ನಲ್ಲಿ ಕಾಣಬಹುದಾಗಿದೆ. ಆಪ್‌ನ ಸೆಟ್ಟಿಂಗ್‌ ಮೆನುವಿನಲ್ಲಿ ಆಯ್ಕೆಗಳನ್ನು ನೀಡಲಾಗಿದೆ.

Best Mobiles in India

English summary
Zoom has been criticised for collecting data and not being end-to-end encrypted.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X