ಲಾಕ್‌ಡೌನ್‌ ವೇಳೆ ಆನ್‌ಲೈನ್‌ ಮೂಲಕ PF ಅಡ್ವಾನ್ಸ್‌ ಹಣ ಪಡೆಯವುದು ಹೇಗೆ?

|

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಲಾಕ್‌ಡೌನ್‌ನಿಂದಾಗಿ ಅನೇಕ ವಲಯಗಳು ಅಸಮತೋಲನ ಕಂಡಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ನೌಕರರು ಹಣಕಾಸಿನ ತೊಂದರೆ ಎದುರಿಸಿದ್ದಾರೆ. ಈ ನಿಟ್ಟಿನಲ್ಲಿ ಲಾಕ್‌ಡೌನ್‌ನಿಂದಾಗಿ ನೌಕರರು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಆ ಉದ್ಯೋಗಿಯು ತಮ್ಮ ನೌಕರರ ಭವಿಷ್ಯ ನಿಧಿ (ಇಪಿಎಫ್) ಖಾತೆಯಿಂದ ನಿರ್ದಿಷ್ಟ ಮೊತ್ತವನ್ನು ಹಿಂಪಡೆಯುವ ಅವಕಾಶ ಇದೆ.

ಕೋವಿಡ್-19 ಲಾಕ್‌ಡೌನ್

ಹೌದು, ಕೋವಿಡ್-19 ಲಾಕ್‌ಡೌನ್ ಪರಿಣಾಮದಿಂದಾಗಿ ಆರ್ಥಿಕ ಸಮಸ್ಯೆ ಆಗಿದ್ದರೇ ಅಂತಹ ನೌಕರರು ಇದೀಗ ಕೋವಿಡ್‌-19 ಹೆಸರಲ್ಲಿ/ಕಾರಣ ನೀಡಿ ಉದ್ಯೋಗಿಗಳು ಅವರ ಪಿಎಫ್‌ ಖಾತೆಯಿಂದ ಅಡ್ವಾನ್ಸ್‌ ಹಣವನ್ನು ಪಡೆಯಬಹುದಾಗಿದೆ. ಹಾಗಾದರೆ ಆನ್‌ಲೈನ್ ಮೂಲಕ ಪಿಎಫ್ ಅಡ್ವಾನ್ಸ್ /ಮುಂಗಡ ಹಣವನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಕ್ರಮ ಅನುಸರಿಸಿ:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಕ್ರಮ ಅನುಸರಿಸಿ:

ಹಂತ 1. ಅಧಿಕೃತ https://unifiedportalmem.epfindia.gov.in/memberinterface ವೆಬ್‌ಸೈಟ್‌ ಭೇಟಿ ನೀಡಿ, ಲಾಗ್‌ ಇನ್ ಆಗಿ.

ಹಂತ 2. ನಂತರ ಆನ್‌ಲೈನ್‌ ಸೇವೆ -ಕ್ಲೈಮ್‌ (ಫಾರ್ಮ್ 31, 19, 10ಸಿ, 10ಡಿ) ಬಟನ್ ಕ್ಲಿಕ್ ಮಾಡಿರಿ.

ಹಂತ 3. ಲಿಂಕ್ ಮಾಡಲಾದ ನಿಮ್ಮ ಬ್ಯಾಂಕ್‌ ಖಾತೆ ನಂಬರ್ ಪರಿಶೀಲಿಸಬೇಕು.

ಪ್ರೊಸೀಡ್‌ ಫಾರ್‌ ಆನ್‌ಲೈನ್‌ ಕ್ಲೈಮ್‌ ಆಯ್ಕೆ

ಹಂತ 4. ಪ್ರೊಸೀಡ್‌ ಫಾರ್‌ ಆನ್‌ಲೈನ್‌ ಕ್ಲೈಮ್‌ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 5. ಪಿಎಫ್ ಅಡ್ವಾನ್ಸ್‌ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.

ಹಂತ 6. ಆಗ ಅಲ್ಲಿ ಔಟ್‌ಬ್ರೇಕ್‌ ಆಫ್ ಪ್ಯಾಂಡೆಮಿಕ್‌/ಕೋವಿಡ್‌-19 ಕ್ಲಿಕ್ ಮಾಡಿರಿ.

ಆಧಾರ್‌ OTP ಆಯ್ಕೆ

ಹಂತ 7. ನಂತರ ಅಗತ್ಯ ಇರುವ ಹಣ ಮತ್ತು ಬ್ಯಾಂಕ್‌ ಚೆಕ್‌ನ ಸ್ಕ್ಯಾನ್‌ ಚಿತ್ರ ಹಾಗೂ ವಿಳಾಸವನ್ನು ನಮೂದಿಸಿ.

ಹಂತ 8. ಆಧಾರ್‌ OTP ಆಯ್ಕೆ ಮೇಲೆ ಕ್ಲಿಕ್ ಮಾಡಿರಿ.

ಹಂತ 9. ರಿಜಿಸ್ಟರ್ ಮೊಬೈಲ್‌ಗೆ ಬರುವ OTP ಎಂಟ್ರಿ ಮಾಡಿ.

ಉದ್ಯೋಗಿಗಳು ಗಮನಿಸಬೇಕಾದ ಅಂಶಗಳು:

ಉದ್ಯೋಗಿಗಳು ಗಮನಿಸಬೇಕಾದ ಅಂಶಗಳು:

* ಉದ್ಯೋಗಿಗಳು EPFO ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕು.

* ಕೋವಿಡ್‌-19 ಕಾರಣ ನೀಡಿ ಹಣ ಪಡೆಯಬಹುದು.

* ಕೋವಿಡ್‌-19 ಕಾರಣ ನೀಡಿ ಒಂದು ಬಾರಿ ಮಾತ್ರ ಹಣ ಪಡೆಯಬಹುದು.

Best Mobiles in India

Read more about:
English summary
The government has notified the amendment in EPF rules regarding withdrawal of funds from EPF accounts for coronavirus-related financial exigencies.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X