App ಬಳಸಿ ಕ್ಷಣಮಾತ್ರದಲ್ಲಿ PF ಹಣ ಪಡೆಯಿರಿ!

By Gizbot Bureau
|

ನಿಮ್ಮ ಪಿಎಫ್ ಖಾತೆಯಲ್ಲಿರುವ ಹಣವನ್ನು ಪಡೆದುಕೊಳ್ಳುವುದು ಹೇಗೆ ಎಂದು ನಿಮಗೆ ತಿಳಿದಿದೆಯಾ? ಪಿಎಫ್ ವಿಚಾರಕ್ಕೆ ಬಂದಾಗ ಅಂತರ್ಜಾಲದಲ್ಲಿ ಅತೀ ಹೆಚ್ಚು ಹುಡುಕುವ ಸಾಮಾನ್ಯ ಪ್ರಶ್ನೆಯೆಂದರೆ ಪಿಎಫ್ ಖಾತೆಯ ಹಣವನ್ನು ಪಡೆಯುವುದು ಹೇಗೆ ಎಂಬುದಾಗಿದೆ. ಈ ಕರೋನಾ ವೈರಸ್ ಸಮಯದಲ್ಲಿ ಈ ವಿಚಾರದ ಹುಡುಕಾಟ ಹೆಚ್ಚುಗೊಂಡಿದೆ. ಒಂದು ವೇಳೆ ನಿಮಗೂ ಕೂಡ ಪಿಎಫ್ ಖಾತೆಯ ಹಣವನ್ನು ಪಡೆಯುವ ಬಗ್ಗೆ ಯಾವುದಾದರೂ ಅನುಮಾನಗಳಿದ್ದಲ್ಲಿ ಈ ಕೆಳಗಿನ ವರದಿಯನ್ನು ಒಮ್ಮೆ ಸಂಪೂರ್ಣ ಓದಿ.

ಪಿಎಫ್

ಪಿಎಫ್ ಖಾತೆಯಿಂದ ಹಣವನ್ನು ಪಡೆಯುವುದಕ್ಕೆ ನೀವು ಎಲ್ಲಿಗೋ ತೆರಳಬೇಕಾಗಿಲ್ಲ. ಅಥವಾ ಯಾರನ್ನೋ ಭೇಟಿ ಮಾಡಬೇಕಿಲ್ಲ. ಕೇವಲ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ನೀವು ಹಣವನ್ನು ಪಡೆಯುವುದಕ್ಕೆ ಅವಕಾಶವಿದೆ. ಸಂಪೂರ್ಣ ಪ್ರೊಸೆಸ್ ಕೇವಲ ಎರಡು ನಿಮಿಷದ ಕಾಲಾವಧಿಯನ್ನು ಬೇಡುತ್ತದೆ.

ಎರಡು ಮಾರ್ಗಗಳಲ್ಲಿ ನೀವು ನಿಮ್ಮ ಪಿಎಫ್ ಮೊತ್ತವನ್ನು ಪಡೆಯಬಹುದು. ಅದಕ್ಕಾಗಿ ನೀವು UMANG ಆಪ್ ನ್ನು ಬಳಸಬಹುದು.

ಪಿಎಫ್

ಪಿಎಫ್( ಪ್ರೊವಿಡೆಂಟ್ ಫಂಡ್) ಖಾತೆಯ ಹಣವನ್ನು ಈ ಕೆಳಗಿನ ಹಂತವನ್ನು ಬಳಸಿ ವಿತ್ ಡ್ರಾ ಮಾಡಿಕೊಳ್ಳಿ

1. ಮೊದಲನೆಯದಾಗಿ UMANG ಆಪ್ ನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿ. EPFO (Employees' Provident Fund Organization) ನ ಎಲ್ಲಾ ಸದಸ್ಯರೂ ಕೂಡ ಈ ಆಪ್ ನ್ನು ಬಳಕೆ ಮಾಡಬಹುದು.

2. ಆಪ್ ನ್ನು ತೆರಿಯಿರಿ ಮತ್ತು EPFO ಗಾಗಿ ಹುಡುಕಾಡಿ.

3. ಎಂಪ್ಲಾಯ್ ಸೆಂಟ್ರಿಕ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಪಿಎಫ್

4. 'Raise Claim' ಆಯ್ಕೆಯನ್ನು ಸೆಲೆಕ್ಟ್ ಮಾಡಿ.

5.ಇದಾದ ನಂತರ,ನಿಮ್ಮ EPF UAN ಸಂಖ್ಯೆಯನ್ನು ನಮೂದಿಸಿ. ಒಂದು ವೇಳೆ ನಿಮಗೆ ಈ ಸಂಖ್ಯೆ ತಿಳಿಯದೇ ಇದ್ದಲ್ಲಿ ಕಂಪೆನಿಯನ್ನು ಕೇಳಿ.

6.ಯುಎಎನ್ ನಂಬರ್ ನ್ನು ಸಬ್ಮಿಟ್ ಮಾಡುವುದಕ್ಕಾಗಿ ನಿಮಗೆ ಒನ್ ಟೈಮ್ ಪಾಸ್ ವರ್ಡ್ ಸಿಗುತ್ತದೆ. ಅದು ನಿಮ್ಮ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ ಬರುತ್ತದೆ. ಅದನ್ನು ಎಂಟರ್ ಮಾಡಿ.

7. ಇದಾದ ನಂತರ, ವಿತ್ ಡ್ರಾವಲ್ ಟೈಪ್ ನ್ನು ಸೆಲೆಕ್ಟ್ ಮಾಡಿ ಮತ್ತು ಮೊತ್ತವನ್ನು ನಮೂದಿಸಿ ಸಬ್ಮಿಟ್ ಬಟನ್ ಒತ್ತಿ.

8. ನಿಮಗೆ ಕ್ಲೈಮ್ ರೆಫರೆನ್ಸ್ ನಂಬರ್ ಸಿಗುತ್ತದೆ. ಇದನ್ನು ಸೇಫ್ ಆಗಿ ಇಟ್ಟುಕೊಳ್ಳಿ.

9. ಸಿಆರ್ಎನ್ ಬಳಸಿ ನಿಮ್ಮ ಕ್ಲೈಮ್ ಸ್ಟೇಟಸ್ ನ್ನು ಚೆಕ್ ಮಾಡಬಹುದು.

10. ಪಿಎಫ್ ಖಾತೆಯಲ್ಲಿರುವ ಹಣವನ್ನು 10 ದಿನಗಳ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಟ್ರಾನ್ಸ್ಫರ್ ಮಾಡಲಾಗುತ್ತದೆ.

ತಿಳಿದುಕೊಂಡಿರಬೇಕಾದ ಸಂಗತಿಗಳು

ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡುವುದಕ್ಕಾಗಿ ನಿಮ್ಮ ಕೆವೈಸಿ ಆಗಿರುವುದು ಬಹಳ ಮುಖ್ಯ. ಯುಎಎನ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕಾಗಿರುತ್ತದೆ. UMANG ಆಪ್ ಕೂಡ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕಾಗುತ್ತದೆ. ಇತರೆ ಹಲವು ಸೇವೆಗಳಿಗಾಗಿಯೂ ಕೂಡ UMANG ಆಪ್ ನ್ನು ಬಳಸಲಾಗುತ್ತದೆ. ಉದಾಹರಣೆಗೆ ಆದಾಯ ತೆರಿಗೆ ಪಾವತಿ, ಗ್ಯಾಸ್ ಸಿಲಿಂಡರ್ ಬುಕ್ಕಿಂಗ್, ಪಾಸ್ ಪೋರ್ಟ್ ಸೇವೆ, ಪಿಎಂ ಆವಾಸ್ ಯೋಜನೆ, ಪ್ಯಾನ್ ಕಾರ್ಡ್ ಇತ್ಯಾದಿ.

Best Mobiles in India

Read more about:
English summary
How To Withdraw Money From PF In Just A Minute

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X