Subscribe to Gizbot

ಫೇಸ್‌ಬುಕ್‌ನಲ್ಲಿ "ಫೇಸ್ ರೆಕಗ್ನಿಷನ್" ಫೀಚರ್ ಆಕ್ಟಿವೇಟ್ ಮಾಡುವುದು ಹೇಗೆ?!!

Written By:

ವಿಶ್ವದಲ್ಲಿಯೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್ ವಾರದ ಹಿಂದಷ್ಟೆ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಈಗಾಗಲೇ ಎಲ್ಲಾ ಬಳಕೆದಾರರಿಗೆ ಈ ಸೇವೆಯನ್ನು ಫೇಸ್‌ಬುಕ್ ನೀಡಿದ್ದು, ಬಳಕೆದಾರರಿಗೆ ಈ ಬಗ್ಗೆ ಸಂದೇಶವನ್ನು ಸಹ ನೀಡುತ್ತಿದೆ.!!

ನಿಮ್ಮ ಅನುಮತಿ ಇಲ್ಲದೆ ಅಥವಾ ನಿಮ್ಮ ಅರಿವಿಗೆ ಬಾರದಂತೆ ಯಾರಾದರೂ ನಿಮ್ಮ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರೆ ಆ ವಿಷಯವನ್ನು ಫೇಸ್‌ಬುಕ್‌, ತನ್ನ ಫೇಸ್ ರೆಕಗ್ನಿಷನ್ ನೋಟಿಫಿಕೇಶನ್ ಮೂಲಕ ನಿಮ್ಮ ಗಮನಕ್ಕೆ ತರುತ್ತದೆ. ಇದರಿಂದ ನಿಮ್ಮ ಫೋಟೊ ಎಲ್ಲಿ ಬಳಕೆಯಾಗಿದೆ ಎಂಬುದು ನಿಮಗೆ ತಿಳಿದುಬಂದಿದೆ.!!

 ಫೇಸ್‌ಬುಕ್‌ನಲ್ಲಿ

ಫೇಸ್‌ಬುಕ್ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನವನ್ನು ತರುತ್ತಿರುವುದು ಫೇಸ್‌ಬುಕ್‌ನಲ್ಲಿರುವ ಫೇಕ್ ಬಳಕೆದಾರರಿಗೂ ಸಹ ಕಡಿವಾಣ ಬೀಳಲಿದೆ.! ಹಾಗಾದರೆ, ಫೇಸ್‌ಬುಕ್‌ನಲ್ಲಿ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನವನ್ನು ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ? 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನದ ಮಿತಿಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಫೇಸ್ ರೆಕಗ್ನಿಷನ್ ತಂತ್ರಜ್ಞಾನ?

ಏನಿದು ಫೇಸ್ ರೆಕಗ್ನಿಷನ್ ತಂತ್ರಜ್ಞಾನ?

ನೀವು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಫೋಟೊದಲ್ಲಿ ನಿಮ್ಮ ಸ್ನೇಹಿತರ ಚಹರೆ ಗುರುತಿಸಿ ಟ್ಯಾಗ್ ಮಾಡಲು ಸಹಾಯ ಮಾಡುವ ವಿಧಾನ ಈಗಾಗಲೇ ಫೇಸ್‌ಬುಕ್‌ನಲ್ಲಿದೆ. ಇದೇ ತಂತ್ರಜ್ಞಾನವನ್ನು ಫೇಸ್‌ಬುಕ್ ಮತ್ತಷ್ಟು ಅಭಿವೃದ್ದಿಪಡಿಸಿ ನಿಮ್ಮ ಫೋಟೊವನ್ನು ಬೇರೆ ಯಾರಾದರೂ ಪೋಸ್ಟ್ ಮಾಡಿದ್ದರೆ ಫೇಸ್ ರೆಕಗ್ನಿಷನ್ ಆ ವಿಷಯವನ್ನು ನಿಮಗೆ ತಿಳಿಸುತ್ತದೆ.

ಫೇಸ್ ರೆಕಗ್ನಿಷನಿಂದ ಏನು ಪ್ರಯೋಜನ?

ಫೇಸ್ ರೆಕಗ್ನಿಷನಿಂದ ಏನು ಪ್ರಯೋಜನ?

ನಕಲಿ ಖಾತೆಗಳನ್ನು ಕ್ರಿಯೇಟ್ ಮಾಡಿ ಅದರಲ್ಲಿ ಇನ್ಯಾರದ್ದೋ ಫೋಟೊ ಬಳಸಿಕೊಂಡು ಫೋಟೊಗಳ ದುರ್ಬಳಕೆ ತಡೆಯುವುದಕ್ಕಾಗಿ ಈ ಫೀಚರ್ ಸಹಾಯ ಮಾಡುತ್ತದೆ. ಇಷ್ಟು ಮಾತ್ರವಲ್ಲದೇ ಈ ಫೀಚರ್ ರಿವೆಂಜ್ ಪೋರ್ನೊಗ್ರಫಿಯನ್ನು ತಡೆಯುತ್ತದೆ ಎಂದು ಫೇಸ್‌ಬುಕ್‌ ಹೇಳಿದೆ.

ಅಪರಿಚಿತ ಮುಖಗಳಿದ್ದರೆ ಕಷ್ಟ!!

ಅಪರಿಚಿತ ಮುಖಗಳಿದ್ದರೆ ಕಷ್ಟ!!

ನೀವು ಪೋಸ್ಟ್ ಮಾಡಿದ ಚಿತ್ರದಲ್ಲಿ ಅಪರಿಚಿತ ಮುಖಗಳಿದ್ದರೆ, ಫೇಸ್ ರೆಕಗ್ನಿಷನ್ ಆ ಮುಖವನ್ನು ಪತ್ತೆ ಹಚ್ಚಿ ಅವರಿಗೆ ವಿಷಯವನ್ನು ತಿಳಿಸುತ್ತದೆ. ಹೀಗಾದರೆ ಆ ಅಪರಿಚಿತ ವ್ಯಕ್ತಿಯಿಂದ ನಿಮಗೆ ತೊಂದರೆ ಉಂಟಾಗುವ ಸಾಧ್ಯತೆ ಕೂಡ ಹೆಚ್ಚಿದೆ.! ಆ ಫೋಟೊ ಅವರಿಗೆ ಟ್ಯಾಗ್ ಆಗುವುದರಿಂದ ಅವರಿಗೆ ನೋಟಿಫಿಕೇಶನ್ ಮೂಲಕ ನಿಮ್ಮ ಫೋಟೊ ಕಾಣಿಸಿಕೊಳ್ಳಲಿದೆ.!!

ಈಗಾಗಲೇ ಆಕ್ಟಿವೇಟ್ ಮಾಡಿದ್ದೀರಾ?

ಈಗಾಗಲೇ ಆಕ್ಟಿವೇಟ್ ಮಾಡಿದ್ದೀರಾ?

ತನ್ನೆಲ್ಲಾ ಬಳಕೆದಾರರಿಗೆ ಈಗಾಗಲೇ ಈ ಸೇವೆಯನ್ನು ಫೇಸ್‌ಬುಕ್ ಪರಿಚಯಿಸುತ್ತಿದೆ. ಫೇಸ್‌ಬುಕ್‌ಗೆ ಲಾಗಿನ್ ಆದ ಕೂಡಲೇ ಫೇಸ್‌ಬುಕ್‌ ರೆಕಗ್ನಿಷನ್ ಆಯ್ಕೆಯನ್ನು ಆಕ್ಟಿವೇಟ್ ಮಾಡಬೇಕೇ ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ. ಅದಕ್ಕೆ ನೀವು ಯೆಸ್ ಎಂಬ ಆಯ್ಕೆ ಒತ್ತಿದರೆ ಈ ಸೇವೆ ಆಕ್ಟಿವೇಟ್ ಆಗಿರುತ್ತದೆ.!!

How to view all photos, pages, comments and posts you liked on Facebook (KANNADA)
ಮ್ಯಾನುವಲ್ ಆಗಿ ಆಕ್ಟಿವೇಟ್!!

ಮ್ಯಾನುವಲ್ ಆಗಿ ಆಕ್ಟಿವೇಟ್!!

ಒಂದು ವೇಳೆ ಈ ಆಯ್ಕೆ ನಿಮಗೆ ಸಿಕ್ಕಿಲ್ಲ ಎಂದಾದರೆ, ಸೆಟ್ಟಿಂಗ್ಸ್ ತೆರೆದು ಅದರಲ್ಲಿ ಪ್ರೈವೆಸಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ನಂತರ ನಿಮಗೆ ಫೇಸ್ ರೆಕಗ್ನಿಷನ್ ಸೆಟ್ಟಿಂಗ್ಸ್ ಎಂದು ಕಾಣಿಸುತ್ತದೆ. ಅಲ್ಲಿ Do you want Facebook to be able to recognize you in Photos and videos ? ಎಂಬ ಪ್ರಶ್ನೆಗೆ Yes ಎಂದು ಆಯ್ಕೆ ಮಾಡಿದರೆ ಸೇವೆ ಆಕ್ಟಿವೇಟ್ ಆಗುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The social media site has been gaining detailed knowledge of your face.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot