ಗೂಗಲ್‌ ಸರ್ಚ್‌ಬಾರ್‌ನಲ್ಲಿ ಕನ್ನಡದಲ್ಲಿ ಟೈಪಿಸುವುದು ಹೇಗೆ?

By Suneel
|

ಗೂಗಲ್‌'ನಿಂದ ಇಂದು ಬಹುಸಂಖ್ಯಾತ ಭಾಷೆಯಲ್ಲಿ ಮಾಹಿತಿಯನ್ನು ಪಡೆಯಬಹುದು. ಆದರೆ ಇಂಗ್ಲೀಷ್‌ ಭಾಷೆಯೇ ಮೇಲುಗೈ. ಗೂಗಲ್‌ನಲ್ಲಿ ಕನ್ನಡ ಮಾಹಿತಿ ಬೇಕಾದಲ್ಲಿ, ಆ ಮಾಹಿತಿ ಯಾವ ವೆಬ್‌ಸೈಟ್‌ನಲ್ಲಿ ಸಿಗುತ್ತದೆ ಎಂದು ಗೊತ್ತಿದ್ದಲ್ಲಿ, ನೇರವಾಗಿ ಆ ವೆಬ್‌ಸೈಟ್‌ ವಿಳಾಸ ಟೈಪಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಆದರೆ ಮಾಹಿತಿ ಯಾವ ವೆಬ್‌ಸೈಟ್‌ನಲ್ಲಿ ಸಿಗುತ್ತದೆ ಎಂದು ತಿಳಿಯದೇ ಗೂಗಲ್‌ನಲ್ಲಿ ಕನ್ನಡದಲ್ಲಿ ಮಾಹಿತಿ ಹುಡುಕುವುದು ಸ್ವಲ್ಪ ಕಷ್ಟಕರವೇ.

ಗೂಗಲ್‌ನಲ್ಲಿ ನಿರ್ದಿಷ್ಟ ಮಾಹಿತಿಯನ್ನು ಕನ್ನಡದಲ್ಲಿಯೇ(Kannada) ಪಡೆಯಲು ಕನ್ನಡ ಕೀವರ್ಡ್ ಅನ್ನೇ ಟೈಪಿಸಿ ಹುಡುಕಿದರೆ ಆ ಮಾಹಿತಿಗೆ ಸಂಬಂಧಿಸಿದ ಎಲ್ಲಾ ಸೈಟ್‌ಲಿಂಕ್‌ಗಳು ಪ್ರದರ್ಶನವಾಗುತ್ತವೆ. ಆದರೆ ಕನ್ನಡದಲ್ಲಿ ಟೈಪಿಸುವುದು ಹೇಗೆ ಎಂಬುದು ಹಲವರ ಪ್ರಶ್ನೆ. ಆದ್ದರಿಂದ ಇಂದಿನ ಲೇಖನದಲ್ಲಿ ಗೂಗಲ್‌ ಸರ್ಚ್‌ಬಾರ್‌ನಲ್ಲಿ ಕನ್ನಡದಲ್ಲಿ ಟೈಪಿಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಕೆಳಗಿನ ಸಿಂಪಲ್‌ ಸ್ಟೆಪ್‌ಗಳನ್ನು ಪಾಲೋ ಮಾಡಿ.

ಆಪಲ್‌ ಸಿರಿ'ಯೊಂದಿಗೆ ಕಾರ್ಯನಿರ್ವಹಿಸುವ ಟಾಪ್‌ 5 ಆಪ್‌ಗಳು ಯಾವುವು ಗೊತ್ತೇ?

ಹಂತ 1

ಹಂತ 1

ಗೂಗಲ್ ಸರ್ಚ್ ವೆಬ್‌ಸೈಟ್‌ ಓಪನ್‌ ಮಾಡಿ

ಹಂತ 2

ಹಂತ 2

ಸರ್ಚ್‌ ಬಾರ್‌ ಕೆಳಗೆ ಹಲವು ಆಪ್ಶನ್‌ಗಳ ಟ್ಯಾಬ್‌ಗಳು ಕಾಣುತ್ತವೆ. ಅಲ್ಲಿ Apps ಎಂಬಲ್ಲಿ ಕ್ಲಿಕ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 3

ಹಂತ 3

Apps ಎಂಬಲ್ಲಿ ಕ್ಲಿಕ್‌ ಮಾಡಿದ ನಂತರ ನಾವು ತೋರಿಸಿರುವ ವೆಬ್‌ಪೇಜ್‌ ಓಪನ್‌ ಆಗುತ್ತದೆ. ಈ ವೆಬ್‌ಪೇಜ್‌ನಲ್ಲಿ ಗೂಗಲ್‌ ಪ್ರಾಡಕ್ಟ್‌ ಆಪ್‌ಗಳು ಪ್ರದರ್ಶನವಾಗುತ್ತವೆ. ಅವುಗಳಲ್ಲಿ "Google Search' ಎಂಬುದರ ಮೇಲೆ ಕ್ಲಿಕ್‌ ಮಾಡಿ.

ಹಂತ 4

ಹಂತ 4

ನಂತರ ಓಪನ್‌ ಆದ ವೆಬ್‌ಪೇಜ್‌ನ ಕೆಳಭಾಗದಲ್ಲಿ 'Settings' ಆಪ್ಶನ್‌ ಮೇಲೆ ಕ್ಲಿಕ್‌ ಮಾಡಿ. ನಂತರ 'Search Setting' ಆಪ್ಶನ್ ಕ್ಲಿಕ್‌ ಮಾಡಿದರೆ ಹೊಸ ವೆಬ್‌ಪೇಜ್‌ ಓಪನ್‌ ಆಗುತ್ತದೆ.

ಹಂತ 5

ಹಂತ 5

ಓಪನ್‌ ಆದ ವೆಬ್‌ಪೇಜ್‌ನಲ್ಲಿ ಎಡಭಾಗದಲ್ಲಿ "Languages' ಆಪ್ಶನ್ ಮೇಲೆ ಕ್ಲಿಕ್‌ ಮಾಡಿ.

ಹಂತ 6

ಹಂತ 6

ನಂತರ ಹಲವು ಭಾಷೆಗಳ ಆಯ್ಕೆ ಇರುವ ಪೇಜ್‌ ಒಂದು ತೆರೆದುಕೊಳ್ಳುತ್ತದೆ. ಅಲ್ಲಿ 'Show More' ಆಪ್ಶನ್‌ ಕ್ಲಿಕ್‌ ಮಾಡಿ.

ಹಂತ 7

ಹಂತ 7

'Show More' ಆಪ್ಶನ್‌ ಕ್ಲಿಕ್‌ ಮಾಡಿದ ನಂತರ ಹಲವು ಭಾಷೆಗಳು ಪ್ರದರ್ಶನವಾಗುತ್ತವೆ. ಅವುಗಳಲ್ಲಿ ಕನ್ನಡ ಭಾಷೆ ಆಯ್ಕೆ ಮಾಡಿ 'Save' ಬಟನ್‌ ಕ್ಲಿಕ್ ಮಾಡಿ, ಓಕೆ ಕ್ಲಿಕ್ ಮಾಡಿ.

ಹಂತ 8

ಹಂತ 8

ನಂತರ ಗೂಗಲ್‌ ಸರ್ಚ್ ಪೇಜ್‌ ಓಪನ್ ಆಗುತ್ತದೆ. ಓಪನ್‌ ಆದ ಪೇಜ್‌ನಲ್ಲಿ ಸರ್ಚ್ ಬಾಕ್ಸ್‌ ಕೊನೆಯಲ್ಲಿ ಕೀಬೋರ್ಡ್ ಚಿತ್ರ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಲ್ಲಿ ಇಂಗ್ಲೀಷ್‌ ಅಕ್ಷರಗಳಿರುವ ಕೀಬೋರ್ಡ್‌ ದೊಡ್ಡದಾಗಿ ಓಪನ್‌ ಆಗುತ್ತದೆ. ನಂತರ ನೀವು ನಿಮ್ಮ ಸಿಸ್ಟಮ್‌ನಲ್ಲಿ ಸುಲಭವಾಗಿ ಗೂಗಲ್ ಸರ್ಚ್‌ಬಾರ್‌ನಲ್ಲಿ ಯಾವಾಗಲು ಕನ್ನಡದಲ್ಲಿಯೇ ಟೈಪಿಸಬಹುದು.

ಸೂಚನೆ: ಉದಾಹರಣೆಗೆ ಕನ್ನಡದಲ್ಲಿ ನಾನು ಎಂದು ಟೈಪಿಸಲು 'naanu' ಎಂಬ ಇಂಗ್ಲೀಷ್‌ ಅಕ್ಷರಗಳನ್ನು ಟೈಪಿಸಬೇಕು. ಈ ರೀತಿಯಲ್ಲಿ ಕನ್ನಡದಲ್ಲಿ ಟೈಪಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
How to type directly kannada in google search bar. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X