ಆಪಲ್‌ ಸಿರಿ'ಯೊಂದಿಗೆ ಕಾರ್ಯನಿರ್ವಹಿಸುವ ಟಾಪ್‌ 5 ಆಪ್‌ಗಳು ಯಾವುವು ಗೊತ್ತೇ?

By Suneel
|

ಟೆಕ್‌ ಕ್ಷೇತ್ರದಲ್ಲೇ ಈಗಿನ ಮಹತ್ವದ ಬದಲಾವಣೆ ಎಂದರೆ, ಆಪಲ್‌ನ 'ಐಓಎಸ್ 10'ನಲ್ಲಿನ ಸಿರಿ ಇತರೆ ಥರ್ಡ್‌ ಪಾರ್ಟಿ ಆಪ್‌ಗಳಿಗೆ ಸಪೋರ್ಟ್‌ ಮಾಡುವುದು. ಸಿರಿ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ಅದು ಪರಿಮಿತಿ ಹೊಂದಿದೆ. ಕಾರಣ ಆಪಲ್‌ನ ಸಿರಿ ಕೇವಲ ಆಪಲ್‌ ಸ್ವಾಮ್ಯದ ಆಪ್‌ಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಮತ್ತು ಸೇವೆ ನೀಡುತ್ತದೆ. ಆದ್ದರಿಂದ ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್ ಸಾಮರ್ಥ್ಯದ ವರ್ಚುವಲ್‌ ಅಸಿಸ್ಟಂಟ್ ಸ್ವಲ್ಪ ಮಟ್ಟದಲ್ಲಿ ಹಿಂದೆಯೇ ಉಳಿದಿದೆ.

ಆಪಲ್‌ ಈಗ ತನ್ನ 'ಐಓಎಸ್ 10'ನೊಂದಿಗೆ ಸಿರಿ ಮೂಲಕ ಅಭೂತಪೂರ್ವ ಕಾರ್ಯನಿರ್ವಹಣಾ ಫೀಚರ್‌ಗಳನ್ನು ನೀಡುತ್ತಿದೆ. ಈ ಕಾರಣದಿಂದಲೇ ಗೂಗಲ್‌ ಅನ್ನು ಸಹ ಆಪಲ್‌ ಹಿಂದಿಕ್ಕಿದೆ. ಆಪಲ್‌ ಅಧಿಕೃತವಾಗಿ ಐಓಎಸ್‌ 10 ಬಿಡುಗಡೆ ಮಾಡಿದ ನಂತರದಲ್ಲಿ ಮಹತ್ತರ ಬದಲಾವಣೆ ಆಗಿದ್ದು, ಥರ್ಡ್‌ ಪಾರ್ಟಿ ಆಪ್‌ಗಳು ಸಿರಿ ಉಪಯೋಗ ಪಡೆದುಕೊಳ್ಳಬಹುದಾಗಿದೆ.

ವಾಟ್ಸಾಪ್‌ನಲ್ಲಿ ನಿಮ್ಮ ಬೆಸ್ಟ್‌ ಫ್ರೆಂಡ್ ಯಾರು ತಿಳಿಯಲು ಈ ಸಿಂಪಲ್ ಟ್ರಿಕ್ ಸಾಕು!

ಇಂದಿನ ಲೇಖನದಲ್ಲಿ ಸಿರಿ'ಯ(Siri) ಉಪಯೋಗ ಪಡೆದುಕೊಳ್ಳಬಹುದಾದ, ದಿನನಿತ್ಯ ಬಳಸುವ ಟಾಪ್‌ 5 ಆಪ್‌ಗಳು ಯಾವುವು ಎಂದು ತಿಳಿಸುತ್ತಿದ್ದೇವೆ. ಈ ಆಪ್‌ಗಳು ಸಿರಿಯ ಉಪಯೋಗವನ್ನು ಪಡೆದುಕೊಳ್ಳಬಹುದು.

ವಾಟ್ಸಾಪ್

ವಾಟ್ಸಾಪ್

ವಾಟ್ಸಾಪ್‌ ಇಂದು ದಿನನಿತ್ಯ ಬಳಸುವ ಟಾಪ್ ಮೆಸೇಜಿಂಗ್ ಆಪ್‌ ಆಗಿದೆ. ವಾಟ್ಸಾಪ್‌, ಮೆಸೇಜಿಂಗ್‌ ಆಪ್‌ನಲ್ಲಿ ಮೆಸೇಜ್‌ ಸೆಂಡ್‌ ಮಾಡಲು ಮತ್ತು ವಾಯ್ಸ್ ಕರೆ ಮಾಡಲು ಈಗ ಸಿರಿಗೆ ಹೇಳಿದರೆ ಸಾಕು. ಅಂದರೆ ಟೆಕ್ಸ್ಟ್‌ ಮೆಸೇಜ್‌ ಟೈಪಿಸುವ ಬದಲು, ಮತ್ತು ಟ್ಯಾಪ್‌ ಮಾಡಿ ಕರೆ ಮಾಡುವ ಬದಲು ಸಿರಿ'ಗೆ ವಾಯ್ಸ್ ಕಮೆಂಡ್ ನೀಡಿದರೆ ಸಾಕು. ಈ ಫೀಚರ್ ಡ್ರೈವಿಂಗ್ ಮಾಡುವ ವೇಳೆ ಹೆಚ್ಚು ಉಪಯೋಗವಾಗುತ್ತದೆ.

ಊಬರ್

ಊಬರ್

ಏರ್‌ಪೋರ್ಟ್‌ಗೆ ಶೀಘ್ರವಾಗಿ ಹೋಗಬೇಕೇ? ಜಸ್ಟ್‌ ಹಾಗೆ "Get me a ride to the Airport" ಎಂದು ಸಿರಿಗೆ ಹೇಳಿ. ನಂತರ ಸಿರಿಯಲ್ಲಿ ಆಪ್‌ ಪ್ರೀವೀವ್‌ ನೋಡಬಹುದು. ರೈಟ್‌ ಆಯ್ಕೆ ಮಾಡಬಹುದು. ಕಾರನ್ನು ಟ್ರ್ಯಾಕ್ ಮಾಡಬಹುದು. ಡ್ರೈವರ್‌ಗೆ ಕರೆ ಮಾಡಬಹುದು. ಆಪ್ ಓಪನ್ ಮಾಡದೆಯೇ ಈ ಎಲ್ಲಾ ಚಟುವಟಿಕೆಗಳನ್ನು ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿಂಕ್ಡ್‌ಇನ್‌

ಲಿಂಕ್ಡ್‌ಇನ್‌

ವಾಟ್ಸಾಪ್‌'ನಲ್ಲಿ ಸಿರಿ ಬಳಸುವ ರೀತಿಯಲ್ಲೇ, ಮೆಸೇಜ್‌ ಟೈಪಿಸದೇ ಸಿರಿಯಿಂದ ಟೆಕ್ಸ್ಟ್‌ ಮೆಸೇಜ್‌ ಅನ್ನು ಲಿಂಕ್ಡ್‌ಇನ್‌ ಕಾಂಟ್ಯಾಕ್ಟ್‌ಗಳಿಗೆ ಕಳುಹಿಸಬಹುದು. "Send a Linkedin' ಎಂದು ಮೆಸೇಜ್‌ ಸಹಿತ ಮತ್ತು ಯಾರಿಗೆ ಎಂದು ಹೇಳಬೇಕು.

ಪಿಂಟೆರೆಸ್ಟ್‌

ಪಿಂಟೆರೆಸ್ಟ್‌

ಪಿಂಟೆರೆಸ್ಟ್‌ನಲ್ಲಿ ಹಲವು ಮಾಹಿತಿಗಳನ್ನು ಸರ್ಚ್‌ ಮಾಡುವುದು ಈಗ ಇನ್ನಷ್ಟು ಸುಲಭ. ಹಾಗೆ ಸಿರಿಗೆ 'Show me food photos from Pinterest' ಎಂದು ಹೇಳಿ. ನಂತರ ಈ ಮಾಹಿತಿಗೆ ಸಂಬಂಧಿಸಿದ ಎಲ್ಲಾ ಪಿನ್‌ಗಳು ಸ್ಕ್ರೀನ್‌ನಲ್ಲಿ ಪಾಪಪ್‌ ಆಗುತ್ತವೆ.

ಸ್ಕೈಪಿ

ಸ್ಕೈಪಿ

ಮೈಕ್ರೋಸಾಫ್ಟ್ ಸ್ಕೈಪಿ'ಯು ಸಹ ಟೆಕ್ಸ್ಟ್‌ ಮೆಸೇಜ್‌ ಸೆಂಡ್ ಮಾಡಲು ಮತ್ತು ವಾಯ್ಸ್ ಕರೆ ಮಾಡಲು ಸಿರಿಯ ಮೂಲಕ ಅವಕಾಶ ನೀಡುತ್ತದೆ. 'Call xyz on Skeepe' ಎಂದು ಸಿರಿಗೆ ಹೇಳಿದರೆ ಕರೆ ಮಾಡಬಹುದು.

ಸೂಚನೆ: ಐಫೋನ್ ಬಳಕೆದಾರರು ಮಾತ್ರ ಸಿರಿಯ ಉಪಯೋಗವನ್ನು ಈ ಮೇಲಿನ ಆಪ್‌ಗಳಲ್ಲಿ ಪಡೆಯಬಹುದು. ಈ ಆಪ್‌ಗಳು ಸಿರಿಯೊಂದಿಗೆ ವರ್ಕ್‌ ಮಾಡಲು, ಈ ಎಲ್ಲಾ ಆಪ್‌ಗಳಿಗೆ ಆಪ್‌ನ ಆಕ್ಸೆಸ್ ನೀಡಬೇಕು. ಆಕ್ಸೆಸ್ ನೀಡಲು Settings>>Siri>>App>>Support and give access ಆಪ್ಶನ್‌ಗಳನ್ನು ಟ್ಯಾಪ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
5 Most Frequently Used Apps That Work Seamlessly With Apple’s Siri in India. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X