ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳನ್ನು ಅಪಡೇಟ್‌ ಮಾಡುವುದು ಹೇಗೆ ಗೊತ್ತಾ..?

|

ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರಿಗೆ ತಮ್ಮ ಫೋನ್ ಅಪ್ ಡೇಟ್ ಆಗಿದೆಯಾ ಇಲ್ವಾ ಅನ್ನೋ ಬಗ್ಗೆ ಕುತೂಹಲವಿರುತ್ತದೆ. ಒಂದು ವೇಳೆ ವರ್ಷಾನುಗಟ್ಟಲೆ ನಿಮ್ಮ ಸ್ಮಾರ್ಟ್ ಫೋನ್ ಅಪ್ ಡೇಟ್ ಆಗದೇ ಇದ್ದಲ್ಲಿ ಅದು ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಆಗಾಗ ಅಪ್ ಡೇಟ್ ಮಾಡಿಕೊಳ್ಳುತ್ತಲೇ ಇರಬೇಕು. ಹೀಗೆ ಫೋನ್ ಅಪ್ ಡೇಟ್ ಮಾಡುವುದಕ್ಕೆ ಎರಡು ವಿಧಾನಗಳಿದೆ.ಒಂದು ಓವರ್ ದಿ ಏರ್ (OTA) ಅಥವಾ ಮಾನ್ಯುವಲ್ ಅಪ್ ಡೇಟ್. ಇದರಲ್ಲಿ ಮ್ಯಾನುವಲ್ ಅಪ್ ಡೇಟ್ ಸ್ವಲ್ಪ ಕ್ಲಿಷ್ಟವಾಗಿರುತ್ತದೆ. ನಾವು ಈ ಲೇಖನದಲ್ಲಿ ಎರಡೂ ಅಪ್ ಡೇಟ್ ಗಳ ಬಗ್ಗೆಯೂ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಆಟೋಮ್ಯಾಟಿಕ್ ಅಪ್ ಡೇಟ್ ಹೇಗೆ?

ಆಟೋಮ್ಯಾಟಿಕ್ ಅಪ್ ಡೇಟ್ ಹೇಗೆ?

ಸಾಮಾನ್ಯವಾಗಿ ಸಾಫ್ಟ್ ವೇರ್ ಅಪ್ ಡೇಟ್ ಗಳು ಸ್ವಯಂಚಾಲಿತವಾಗಿ ನಮ್ಮ ಡಿವೈಸ್ ಗಳಿಗೆ ಬಿಡುಗಡೆಗೊಳ್ಳುತ್ತದೆ. ಇದು ಓವರ್ ದಿ ಏರ್ (OTA ) ಮೂಲಕ ಆಗುತ್ತದೆ. ಹೀಗೆ ಆದಾಗ ನೀವು ನೋಟಿಫಿಕೇಷನ್ ನ್ನು ಪಡೆಯುತ್ತೀರಿ. ಅಪ್ ಡೇಟ್ ಇನ್ಸ್ಟಾಲೇಷನ್ ಗೆ ರೆಡಿ ಇದೆ ಎಂದು ತಿಳಿಸಲಾಗುತ್ತದೆ ಮತ್ತು ನೀವು ಕೇವಲ ಸ್ಟಾರ್ಟ್ ಬಟನ್ ನ್ನು ಟ್ಯಾಪ್ ಮಾಡಿದರೆ ಆಯ್ತು.

ಒಂದು ವೇಳೆ ಅಚಾನಕ್ ಆಗಿ ನಿಮ್ಮ ನೋಟಿಫಿಕೇಷನ್ ನಲ್ಲಿ ನೀವು ಸ್ಟಾರ್ಟ್ ಕ್ಲಿಕ್ಕಿಸದೇ ನೋಟಿಫಿಕೇಷನ್ ಕ್ಲೋಸ್ ಆದಲ್ಲಿ ನೀವು ಮ್ಯಾನುವಲಿ ಓಟಿಎ ಅಪ್ ಡೇಟ್ ಲಭ್ಯವಿದೆಯೇ ಎಂದು ಪರೀಕ್ಷಿಸಬಹುದು. ಅದಕ್ಕಾಗಿ ನೀವು About Device > System Updates > Check for Updates ಗೆ ತೆರಳಬೇಕು. ನೀವು ಯಾವ ರೀತಿಯ ಡಿವೈಸ್ ಬಳಸುತ್ತಿದ್ದೀರಾ ಎಂಬುದರ ಮೇಲೆ ಈ ಫಾರ್ಮೇಟ್ ಬೇರೆ ಕೂಡ ಇರಬಹುದು. ಆದರೆ ಸಾಮಾನ್ಯವಾಗಿ ಎಲ್ಲಾ ಡಿವೈಸ್ ಗಳಲ್ಲೂ ಹೀಗೆ ಇರುತ್ತದೆ.

ಮ್ಯಾನುವಲಿ ಅಪ್ ಡೇಟ್ ಮಾಡುವುದು ಹೇಗೆ?

ಮ್ಯಾನುವಲಿ ಅಪ್ ಡೇಟ್ ಮಾಡುವುದು ಹೇಗೆ?

ನಿಮ್ಮ ಡಿವೈಸ್ ನ್ನು ಮ್ಯಾನುವಲಿ ಅಪ್ ಡೇಟ್ ಮಾಡುವುದಕ್ಕೆ ಹಲವು ಕಾರಣಗಳಿರುತ್ತದೆ. ಅದರಲ್ಲಿ ಪ್ರಮುಖವಾಗಿರುವುದು ಸರಿಯಾದ ಅಂತರ್ಜಾಲ ಸಂಪರ್ಕ ಇಲ್ಲದೇ ಇರುವುದು ಅಥವಾ ವೈ-ಫೈ ನೆಟ್ ವರ್ಕ್ ಇಲ್ಲದೇ ಇರುವುದು ಕೂಡ ಆಗಿದೆ ಅಥವಾ ನಿಮ್ಮ ಡಿವೈಸ್ ನ್ನು ನೀವು ರೂಟ್ ಮಾಡಿದ್ದರೆ ಮತ್ತು ಓಟಿಎ ಅಪ್ ಡೇಟ್ ನ್ನು ನೀವು ರಿಸೀವ್ ಮಾಡದೇ ಇದ್ದಲ್ಲೂ ಮ್ಯಾನುವಲ್ ಅಪ್ ಡೇಟ್ ನ ಮೊರೆ ಹೋಗಬೇಕಾಗುತ್ತದೆ.

1. ನಿಮ್ಮ ಮಾನ್ಯುಫ್ಯಾಕ್ಚರರ್ ಗೆ ಫರ್ಮ್ ವೇರ್ ನ್ನು ಲೊಕೇಟ್ ಮಾಡಿ

1. ನಿಮ್ಮ ಮಾನ್ಯುಫ್ಯಾಕ್ಚರರ್ ಗೆ ಫರ್ಮ್ ವೇರ್ ನ್ನು ಲೊಕೇಟ್ ಮಾಡಿ

ಮೊದಲ ಹಂತವಾಗಿ ಮ್ಯಾನುವಲ್ ಅಪ್ ಡೇಟ್ ಮಾಡಲು ಫರ್ಮ್ ವೇರ್ ನ್ನು ಲೊಕೇಟ್ ಮಾಡಬೇಕು. ಅಂದರೆ ನಿಮ್ಮ ಡಿವೈಸ್ ನಲ್ಲಿ ROM ನ್ನು ಇನ್ಸ್ಟಾಲ್ ಮಾಡಬೇಕು. ಅಧಿಕೃತ ROM ಗಾಗಿ ಪ್ರತಿಯೊಂದು ಡಿವೈಸ್ ನ ತಯಾರಿಕಾ ಕಂಪೆನಿಯ ವೆಬ್ ಸೈಟ್ ಗೆ ತೆರಳಿ ನಿಮ್ಮ ಮಾಡೆಲ್ ನ ಸರಿಯಾದ ROM ನ್ನು ಲೊಕೇಟ್ ಮಾಡಬೇಕು. ಪ್ರಸಿದ್ಧ ಕೆಲವು ಫೋನ್ ತಯಾರಿಕಾ ಕಂಪೆನಿಗಳ ROM ನ್ನು ಇಲ್ಲಿ ಹುಡುಕಾಡಬಹುದು. ಸ್ಯಾಮ್ ಸಂಗ್ (SamMobile), ಸೋನಿ (Xperia Firmware ಅಥವಾ Flashtool), ಎಲ್ ಜಿ (LG Phone Firmware), ಹುವಾಯಿ (EMUI) ಅಥವಾ ಮೊಟೋರೊಲಾ(Motorola Firmware). ನೀವಿಲ್ಲಿ ಉತ್ತಮ ಕಸ್ಟಮ್ ROM ನ್ನು ಇಲ್ಲಿ ಹುಡುಕಬಹುದು.

2. ಫರ್ಮ್ ವೇರ್ ನ್ನು ಇನ್ಸ್ಟಾಲ್ ಮಾಡುವುದು

2. ಫರ್ಮ್ ವೇರ್ ನ್ನು ಇನ್ಸ್ಟಾಲ್ ಮಾಡುವುದು

ROM ನ್ನು ಇನ್ಸ್ಟಾಲ್ ಮಾಡುವುದಕ್ಕಾಗಿ, ನೀವು ನಿರ್ಧಿಷ್ಟ ಪ್ರೋಗ್ರಾಂನ್ನು ಲೊಕೇಟ್ ಮಾಡಬೇಕು ಅದು ನಿಮ್ಮ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗೆ ಹೊಂದಿಕೆಯಾಗುವಂತಿರಬೇಕು ಅಥವಾ ಕಸ್ಟಮ್ ರಿಕವರಿಯನ್ನು ಬಳಸಬಹುದು. ಅದಕ್ಕಾಗಿ ನಿಮ್ಮ ಡಿವೈಸ್ ಅನ್ ಲಾಕ್ ಆಗಿರಬೇಕು ಮತ್ತು ರೂಟೆಡ್ ಆಗಿರಬೇಕು. ಕಸ್ಟಮ್ ROM ಇನ್ಸ್ಟಾಲೇಷನ್ ಬಗ್ಗೆ ಈ ಕೆಳಗೆ ತಿಳಿದುಕೊಳ್ಳಿ.

ಸ್ಯಾಮ್ ಸಂಗ್ ಡಿವೈಸ್ ಗಳು

ಸ್ಯಾಮ್ ಸಂಗ್ ಡಿವೈಸ್ ಗಳು

• KIES: ಸ್ಯಾಮ್ ಸಂಗ್ ಬ್ರ್ಯಾಂಡೆಂಡ್ ಡಿವೈಸ್ ಗಳನ್ನು ಅಪ್ ಡೇಟ್ ಮಾಡಲು ಇದನ್ನು ಬಳಸಲಾಗುತ್ತದೆ. ಇದು ROM ನ್ನು ನಿಮ್ಮ ಪಿಸಿಯಿಂದ ಮೊಬೈಲ್ ಡಿವೈಸ್ ಗೆ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಲು ನೆರವಾಗುತ್ತದೆ.ಡಿವೈಸ್ ನ ಲೋಕೇಷನ್ ಮತ್ತು ಡಿವೈಸ್ ಟೈಪ್ ನ್ನು ಆಧರಿಸಿ KIES ತನ್ನಿಂದ ತಾನೆ ಫರ್ಮ್ ವೇರ್ ನ್ನು ಡೌನ್ ಲೋಡ್ ಮಾಡುತ್ತದೆ. ಒಂದು ವೇಳೆ ನಿಮ್ಮ ಲೋಕೇಷನ್ ಗೆ ಯಾವುದೇ ROM ಬಿಡುಗಡೆಯಾಗಿಲ್ಲದೇ ಇದ್ದಲ್ಲಿ KIES ಮೂಲಕ ಇನ್ಸ್ಟಾಲ್ ಮಾಡಲು ಅಪ್ ಡೇಟ್ ಮಾಡಲು ಅಸಾಧ್ಯ..

• Odin: ಇದು ಸ್ಯಾಮ್ ಸಂಗ್ ಡಿವೈಸ್ ಗಳಲ್ಲಿ ROM ಇನ್ಸ್ಟಾಲ್ ಮಾಡುವುದಕ್ಕೆ ನೆರವಾಗುವ ಮತ್ತೊಂದು ಪ್ರೋಗ್ರಾಂ ಆಗಿದೆ. ಇದರಲ್ಲಿ ROM ನ್ನು ನೀವೇ ಸ್ವತಃ ಇನ್ಸ್ಟಾಲ್ ಮಾಡಲು ಸಹಾಯಕವಾಗಿದೆ.

ಸೋನಿ ಎಕ್ಸ್ ಪೀರಿಯಾ ಡಿವೈಸ್ ಗಳು

ಸೋನಿ ಎಕ್ಸ್ ಪೀರಿಯಾ ಡಿವೈಸ್ ಗಳು

ಫ್ಲ್ಯಾಶ್ ಟೂಲ್: ಈ ಟೂಲ್ ನ್ನು ಸೋನಿ ಎಕ್ಸ್ ಪೀರಿಯಾ ಡಿವೈಸ್ ಗಳಲ್ಲಿ ROM ನ್ನು ಫ್ಲ್ಯಾಶ್ ಮಾಡಲು ಬಳಸಲಾಗುತ್ತದೆ. ಆದರೆ ಒಂದು ನೆನಪಿರಲಿ ಇದು ಕೇವಲ ಸೋನಿ ಎಕ್ಸ್ ಪೀರಿಯಾ ಡಿವೈಸ್ ಗಳಲ್ಲಿ ತಮ್ಮ ಬೂಟ್ ಲೋಡರ್ ಅನ್ ಲಾಕ್ಡ್ ಆಗಿರುವ ಡಿವೈಸ್ ಗಳಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತದೆ. ಸದ್ಯ ಇದು ಬೆಟಾ ಸ್ಟೇಜ್ ನಲ್ಲಿದೆ ಆದರೆ ವಿಂಡೋಸ್ ಪಿಸಿಗಳಲ್ಲಿ ಮಾತ್ರವೇ ಇದು ಕೆಲಸ ಮಾಡುತ್ತದೆ.

HTC ಡಿವೈಸ್ ಗಳು:

HTC ಡಿವೈಸ್ ಗಳು:

• HTC ಸಿಂಕ್ರನೈಜೇಷನ್ ಮ್ಯಾನೇಜರ್: ಹೆಸರೇ ಸೂಚಿಸುವಂತೆ, ಈ ಪ್ರೋಗ್ರಾಂನ್ನು ಅಪ್ ಡೇಟ್ ಗಳನ್ನು ಇನ್ಸ್ಟಾಲ್ ಮಾಡಲು ಹೆಚ್ ಟಿಸಿ ಡಿವೈಸ್ ಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದನ್ನು ಪಡೆಯಲು ನೀವು ಅಧಿಕೃತ ಹೆಚ್ ಟಿಸಿ ವೆಬ್ ಸೈಟ್ ಗೆ ತೆರಳಿ ಪಡೆಯಬಹುದು. ಒಮ್ಮೆ ಇನ್ಸ್ಟಾಲ್ ಆದ ನಂತರ ಯುಎಸ್ ಬಿ ಬಳಸಿ ನಿಮ್ಮ ಸ್ಮಾರ್ಟ್ ಫೋನ್ ನ್ನು ಪಿಸಿಗೆ ಕನೆಕ್ಟ್ ಮಾಡಿಕೊಳ್ಳಿ ಮತ್ತು ಪ್ರೋಗ್ರಾಮ್ ನ್ನು ಬಳಸಬಹುದು. ಇದು ನಿಮಗೆ ಸಾಫ್ಟ್ ವೇರ್ ಅಪ್ ಡೇಟ್ ನ್ನು ಹುಡುಕುತ್ತದೆ. ಆದರೆ ಕೇವಲ ಅಧಿಕೃತ ಅಪ್ ಡೇಟ್ ಗಳು ಮಾತ್ರವೇ ಲಭ್ಯವಿರುತ್ತದೆ.

• HTC ಒನ್ ಟೂಲ್ ಕಿಟ್: ಇದು ಕೆವು ಫೋಕ್ಸ್ ಗಳು ಡೆಲವಪ್ ಮಾಡಿರುವ ಪ್ರೋಗ್ರಾಮ್ ಆಗಿದ್ದು ಎಕ್ಸ್ ಡಿಎ ಡೆವಲಪರ್ ಫೋರಂನಲ್ಲಿ ಬಿಡುಗಡೆಗೊಳಿಸಲಾಗಿದೆ ಮತ್ತು ಇದು ಹೆಚ್ ಟಿಸಿ ಡಿವೈಸ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಟೂಲ್ ಕಿಟ್ ನಲ್ಲಿ ನೀವು ನಿಮ್ಮ ಬೂಟ್ ಲೋಡರ್ ನ್ನು ಅನ್ ಲಾಕ್ ಮಾಡಬಹುದು ಮತ್ತು ಕೆಲವು ಡಿವೈಸ್ ಗಳನ್ನು ರೂಟ್ ಮಾಡಬಹುದು. ಮತ್ತು ಅಧಿಕೃತ ಮ್ತು ಕಸ್ಟಮ್ ROM ನ್ನು ಇನ್ಸ್ಟಾಲ್ ಮಾಡಬಹುದು.

LG ಡಿವೈಸ್ ಗಳು

LG ಡಿವೈಸ್ ಗಳು

LG ಪಿಸಿ ಸ್ಯೂಟ್: ಈ ಪ್ರೋಗ್ರಾಂನ್ನು ಎಲ್ ಜಿ ಬ್ರಿಡ್ಜ್ ಎಂದು ಕೂಡ ಕರೆಯಲಾಗುತ್ತದೆ. ಇದು ಎಲ್ ಜಿ ಡಿವೈಸ್ ಗಳನ್ನು ಅಪ್ ಡೇಟ್ ಮಾಡುತ್ತದೆ ಮತ್ತು ಎಲ್ ಜಿ ಡಿವೈಸ್ ನ ಸರ್ಚ್ ಪೇಜ್ ನ್ನು ಹಿಟ್ ಮಾಡುವ ಮೂಲಕ ನೀವಿದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಒಮ್ಮೆ ಇನ್ಸ್ಟಾಲ್ ಆದ ನಂತರ ಫೋನ್ ಅಪ್ ಡೇಟ್ ಚೆಕ್ ಬಾಕ್ಸ್ ನ್ನು ಕ್ಲಿಕ್ ಮಾಡಿದರೆ ಆಯ್ತು. ಕೆಲವು ಅಧಿಕೃತ ಪ್ರೋಗ್ರಾಮ್ ಗಳಲ್ಲಿ ಇದು ನಿಮ್ಮ ಡಿವೈಸ್ ನಲ್ಲಿ ಕೆಲವು ಅಧಿಕೃತ ಅಪ್ ಡೇಟ್ ಗಳನ್ನು ಮಾತ್ರವೇ ಇನ್ಸ್ಟಾಲ್ ಮಾಡುತ್ತದೆ.

ಮೊಟೋರೊಲಾ ಡಿವೈಸ್ ಗಳು:

ಮೊಟೋರೊಲಾ ಡಿವೈಸ್ ಗಳು:

• RSD ಲೈಟ್: ಮೊಟೋರೊಲಾ ಬಳಕೆದಾರರಿಗೆ ಸಾಮಾನ್ಯವಾಗಿ ಅಪ್ ಡೇಟ್ ಗಳನ್ನು ರಿಸೀವ್ ಮಾಡುವುದರಲ್ಲಿ ಸಮಸ್ಯೆಯಾಗುವುದಿಲ್ಲ.ಆದರೆ ಈ ಟೂಲ್ ಕಿಟ್ ಒಂದು ವೇಳೆ ಮೊಟೋರೊಲಾ ಡಿವೈಸ್ ಗಳಲ್ಲಿ ಏನಾದರೂ ಸಮಸ್ಯೆಯಾದಲ್ಲಿ ಫ್ಲ್ಯಾಶ್ ಸ್ಟಾಕ್ ಫರ್ಮ್ ವೇರ್ ಗಳನ್ನು ಬಳಸಲು ಅನುಕೂಲ ಮಾಡಿಕೊಡುತ್ತದೆ.

Best Mobiles in India

English summary
How to update your Android firmware. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X