ಐಓಎಸ್ 11 ನಲ್ಲಿದೆ ಫೈಲ್ಸ್ ಆಪ್..ಏನೆಲ್ಲಾ ಸಾಧ್ಯ?ಬಳಸುವುದು ಹೇಗೆ?

By Tejaswini P G
|

ಎಷ್ಟೋ ಸಮಯದ ನಂತರ ಆಪಲ್ ಮೊಬೈಲ್ನಲ್ಲಿರುವ ಫೈಲ್ಗಳನ್ನು ನೋಡಲು, ಮ್ಯಾನೇಜ್ ಮಾಡಲು ಮತ್ತು ಸಂಘಟಿಸಲು ಅನುಕೂಲಕರವಾಗುವಂತೆ ಆಪ್ ಒಂದನ್ನು ನೀಡಿದೆ. ಮಾಕ್OS ನಲ್ಲಿರುವ ಫೈಂಡರ್ ನಂತೆ ಐಓಎಸ್ ನಲ್ಲಿ ಬಂದಿದೆ ಫೈಲ್ಸ್ ಆಪ್. ಇದು ಬಳಕೆದಾರರಿಗೆ ಐಕ್ಲೌಡ್ ಮತ್ತು ಇತರ ಕ್ಲೌಡ್ ಆಧಾರಿತ ಸ್ಟೋರೇಜ್ ಪ್ರೊವೈಡರ್ಗಳಲ್ಲಿರುವ ಫೈಲ್ಗಳನ್ನು ನೋಡಲು, ಸಂಘಟಿಸಲು, ಸ್ಟೋರ್ ಮತ್ತು ಶೇರ್ ಮಾಡಲು ಅವಕಾಶ ಮಾಡಿಕೊಡುತ್ತದೆ.

ಐಓಎಸ್ 11 ನಲ್ಲಿದೆ ಫೈಲ್ಸ್ ಆಪ್..ಏನೆಲ್ಲಾ ಸಾಧ್ಯ?ಬಳಸುವುದು ಹೇಗೆ?

ಐಓಎಸ್ 11 ಹೊಂದಿರುವ ಐಪ್ಯಾಡ್ ಮತ್ತು ಐಫೋನ್ಗಳಲ್ಲಿ ಈ ಆಪ್ ಲಭ್ಯವಿದೆ. ಈ ಆಪ್ ಅನ್ನು ನಿಮ್ಮ ಅನುಕೂಲಕ್ಕೆ ಹೇಗೆಲ್ಲಾ ಬಳಸಬಹುದು, ಏನಿದರ ವಿಶೇಷತೆಗಳು ಎಂದು ಈ ಲೇಖನದಲ್ಲಿ ಸಂಪಾದಿಸಲಾಗಿದೆ.

ಥರ್ಡ್ ಪಾರ್ಟಿ ಆಪ್ಗಳನ್ನು ಆಡ್ ಮಾಡಿ

ಥರ್ಡ್ ಪಾರ್ಟಿ ಆಪ್ಗಳನ್ನು ಆಡ್ ಮಾಡಿ

ಫೈಲ್ಸ್ ಆಪ್ ನಲ್ಲಿ ಥರ್ಡ್ ಪಾರ್ಟಿ ಆಪ್ ಗಳಾದ ಬಾಕ್ಸ್, ಡ್ರಾಪ್ಬಾಕ್ಸ್, ಒನ್ಡ್ರೈವ್ ಮೊದಲಾದವುಗಳನ್ನು ಸೇರಿಸಬಹುದಾಗಿದ್ದು ನಿಮ್ಮ ಬೇರೆ ಬೇರೆ ಸಾಧನಗಳಲ್ಲಿರುವ ಫೈಲ್ಗಳೆಲ್ಲವನ್ನೂ ಈ ಮೂಲಕ ನಿಮ್ಮ ಆಪಲ್ ಡಿವೈಸ್ನಲ್ಲಿ ಆಕ್ಸೆಸ್ ಮಾಡಬಹುದಾಗಿದೆ. ಫೈಲ್ಸ್ ಆಪ್ನಲ್ಲಿ ಥರ್ಡ್ ಪಾರ್ಟಿ ಕ್ಲೌಡ್ ಆಪ್ಗಳನ್ನು ಆಡ್ ಮಾಡಲು ಈ ಕೆಳಗೆ ಹೇಳಿದ ಸೂಚನೆಗಳನ್ನು ಅನುಸರಿಸಿ

ಹಂತ 1: ಮೊದಲಿಗೆ ನೀವು ಸೇರಿಸಲು ಬಯಸುವ ಥರ್ಡ್ ಪಾರ್ಟಿ ಆಪ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ

ಹಂತ 2: ಈಗ ಫೈಲ್ಸ್ ಆಪ್ ತೆರೆಯಿರಿ

ಹಂತ 3: ಲೊಕೇಶನ್ಸ್ -> ಎಡಿಟ್ ಮೇಲೆ ಕ್ಲಿಕ್ ಮಾಡಿ

ಹಂತ 4: ಈಗ ನೀವು ಫೈಲ್ಸ್ ಆಪ್ ಮೂಲಕ ಬಳಸಲು ಬಯಸುವ ಥರ್ಡ್ ಪಾರ್ಟಿ ಆಪ್ ನ ಟಾಗಲ್ ಬಟನ್ ಅನ್ನು ಆನ್ ಮಾಡಿ

ಹಂತ 5: ಡನ್ ಮೇಲೆ ಕ್ಲಿಕ್ ಮಾಡಿ

ಫೈಲ್ಗಳನ್ನು ಸಂಘಟಿಸಿ

ಫೈಲ್ಗಳನ್ನು ಸಂಘಟಿಸಿ

ನೀವು ನಿಮ್ಮ ಐಕ್ಲೌಡ್ ಡ್ರೈವ್ ನಲ್ಲಿ ನಿಮ್ಮ ಫೈಲ್ಗಳನ್ನು ಉತ್ತಮ ರೀತಿಯಲ್ಲಿ ಸಂಘಟಿಸಬಹುದಾಗಿದ್ದು, ನೀವು ನಿಮ್ಮ ಒಂದು ಸಾಧನದಲ್ಲಿ ಯಾವುದೇ ಫೈಲ್ ಗೆ ಮಾಡುವ ಬದಲಾವಣೆಗಳು ಐಕ್ಲೌಡ್ ಡ್ರೈವ್ ಬಳಸುವ ಎಲ್ಲಾ ಸಾಧನಗಳಲ್ಲಿ ಕಾಣಿಸಲಿದೆ.

'ATM'ಗೆ ಗುಡ್‌ಬೈ!..ಭವಿಷ್ಯದ ಬ್ಯಾಂಕ್‌ 'ITM' ಮಷಿನ್ ಬರಲಿದೆ ಶೀಘ್ರದಲ್ಲಿ!!.ಎಲ್ಲರೂ ತಿಳಿಯಬೇಕು!?'ATM'ಗೆ ಗುಡ್‌ಬೈ!..ಭವಿಷ್ಯದ ಬ್ಯಾಂಕ್‌ 'ITM' ಮಷಿನ್ ಬರಲಿದೆ ಶೀಘ್ರದಲ್ಲಿ!!.ಎಲ್ಲರೂ ತಿಳಿಯಬೇಕು!?

 ನಿಮ್ಮ ಸ್ನೇಹಿತರೊಂದಿಗೆ ಫೈಲ್ಗಳನ್ನು ಹಂಚಿಕೊಳ್ಳಿ

ನಿಮ್ಮ ಸ್ನೇಹಿತರೊಂದಿಗೆ ಫೈಲ್ಗಳನ್ನು ಹಂಚಿಕೊಳ್ಳಿ

ನಿಮ್ಮ ಐಕ್ಲೌಡ್ ಡ್ರೈವ್ನಲ್ಲಿ ಸಂಗ್ರಹವಾಗಿರುವ ಯಾವುದೇ ಫೈಲ್ ನ ಲಿಂಕ್ ಅನ್ನು ಫೈಲ್ಸ್ ಆಪ್ ಮೂಲಕ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಆ ಫೈಲ್ ಅನ್ನು ಹಂಚಿಕೊಳ್ಳಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ನೀವು ಶೇರ್ ಮಾಡಬಯಸುವ ಫೈಲ್ ಅನ್ನು ಆಯ್ಕೆ ಮಾಡಿ, ಶೇರ್ ಐಕಾನ್ ಮೇಲೆ ಕ್ಲಿಕ್ ಮಾಡಿ.

ನಂತರ ನೀವು ಈ ಫೈಲ್ ಅನ್ನು ಏರ್ಡ್ರಾಪ್, ಮೆಸೇಜಸ್, ಮೇಲ್, ಶೇರ್ಡ್ ನೋಟ್ ಮೊದಲಾದ ಆಯ್ಕೆಗಳ ಮೂಲಕ ಯಾರೊಂದಿಗೆ ಬೇಕಾದರೂ ಶೇರ್ ಮಾಡಬಹುದು. ಅಲ್ಲದೆ ಇತರರನ್ನು ಕೊಲಾಬೊರೇಟ್ ಮಾಡುವ ಸಲುವಾಗಿ ಮೆಸೇಜಸ್, ಮೇಲ್ ಇತ್ಯಾದಿಗಳ ಮೂಲಕ ಆಹ್ವಾನ ಮಾಡಿ ಲಿಂಕ್ ಅನ್ನು ಪೇಸ್ಟ್ ಮಾಡಬಹುದು.

 ಫೈಲ್ಗಳನ್ನು ಡಿಲೀಟ್ ಮಾಡುವುದು

ಫೈಲ್ಗಳನ್ನು ಡಿಲೀಟ್ ಮಾಡುವುದು

ನೀವು ಡಿಲೀಟ್ ಮಾಡಬಯಸುವ ಫೈಲ್ ಅನ್ನು ಆಯ್ಕೆ ಮಾಡಿ ಡಿಲೀಟ್ ಐಕಾನ್ ಒತ್ತುವ ಮೂಲಕ ಡಿಲೀಟ್ ಮಾಡಬಹುದು. ಯಾವುದೇ ಫೈಲ್ ಅನ್ನು ಐಕ್ಲೌಡ್ ನಿಂದ ಡಿಲೀಟ್ ಮಾಡುವ ಮೊದಲು ಅದು ಬೇಡವಾದ ಫೈಲ್ ಎಂದು ಖಚಿತ ಪಡಿಸಿಕೊಳ್ಳಿ. ನೀವು ಒಂದು ಸಾಧನದಲ್ಲಿ ಐಕ್ಲೌಡ್ ನಿಂದ ಫೈಲ್ ಡಿಲೀಟ್ ಮಾಡಿದಿರೆಂದರೆ ಅದು ಇತರ ಸಾಧನಗಳಿಂದಲೂ ಡಿಲೀಟ್ ಆಗುತ್ತದೆ.

ನೀವು ಐಕ್ಲೌಡ್ ನಿಂದ ಡಿಲೀಟ್ ಮಾಡುವ ಫೈಲ್ "ರೀಸೆಂಟ್ಲೀ ಡಿಲೀಟೆಡ್" ಫೋಲ್ಡರ್ ನಲ್ಲಿ 30 ದಿನಗಳ ಕಾಲ ಲಭ್ಯವಿರುತ್ತದೆ. ಡಿಲೀಟ್ ಆದ ಫೈಲ್ ಅನ್ನು ಹಿಂಪಡೆಯಲು ಬಯಸಿದರೆ 30 ದಿನಗಳ ಒಳಗಾಗಿ ಪಡೆಯಬಹುದು.ಅದಕ್ಕಾಗಿ ಹೀಗೆ ಮಾಡಿ.

ಲೊಕೇಶನ್ಸ್> ರೀಸೆಂಟ್ಲೀ ಡಿಲೀಟೆಡ್ ಗೆ ಹೋಗಿ, ನೀವು ಮತ್ತೆ ಪಡೆಯ ಬಯಸುವ ಡಿಲೀಟ್ ಆದ ಫೈಲ್ ಅನ್ನು ಆಯ್ಕೆ ಮಾಡಿ

Best Mobiles in India

Read more about:
English summary
After a long time, Apple has decided to introduce an app to view, manage, and organize your files. Below are some of the way you can use the Files app to your advantage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X