ಐಫೋನ್, ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಗೂಗಲ್ ಅಸಿಸ್ಟೆಂಟ್ ಬಳಸುವುದು ಹೇಗೆ ಗೊತ್ತಾ?

By GizBot Bureau
|

ಒಂದು ಕಾಲ ಇತ್ತು ಯಾವುದೋ ಮಿಷಿನ್ ಕೆಲಸ ಮಾಡಬೇಕು ಅಂದರೆ ಅದೆಷ್ಟೋ ಸ್ವಿಚ್ ಗಳಿರುತ್ತಿದ್ದವು. ಅದನ್ನು ಆಫ್/ಆನ್ ಮಾಡಬೇಕಿತ್ತು. ಡಿವೈಸ್ ನ ಗಾತ್ರ ಕೂಡ ದೊಡ್ಡದಾಗಿರುತ್ತಿತ್ತು. ಆದರೆ ಈಗ ಹಾಗಲ್ಲ, ಡಿವೈಸ್ ಗಳು ಕೇವಲ ನಮ್ಮ ಧ್ವನಿಯ ಮೂಲಕವೇ ಕೆಲಸ ಮಾಡುವಂತ ತಂತ್ರಗಾರಿಕೆಗಳು ಬಳಸಲ್ಪಡುತ್ತಿದೆ. ನಾವು ಯಾವುದರ ಬಗ್ಗೆ ಹೇಳುತ್ತಿದ್ದೇವೆ ಗೊತ್ತಾಗಿಲ್ವಾ? ಈ ಲೇಖನದ ಮುಂದಿನ ಭಾಗವನ್ನು ಓದಿ. ನಿಮಗೇ ಅರ್ಥವಾಗುತ್ತೆ.

ಐಫೋನ್, ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಗೂಗಲ್ ಅಸಿಸ್ಟೆಂಟ್ ಬಳಸುವುದು ಹೇಗೆ ಗೊತ್ತಾ?

2016 ರಲ್ಲಿ ಗೂಗಲ್ “ವಾಸ್ತವ ಸಹಾಯಕ” ಅಂದರೆ ಧ್ವನಿಯ ಮೂಲಕವೇ ಡಿವೈಸ್ ಗಳನ್ನು ಬಳಕೆ ಮಾಡುವ ತಂತ್ರಜ್ಞಾನವನ್ನು ಬಿಡುಗಡೆಗೊಳಿಸಿತು ಮತ್ತು ಇದನ್ನು ಗೂಗಲ್ ಅಸಿಸ್ಟೆಂಟ್ ಎಂದು ಕರೆಯಲಾಗಿದೆ. ನಿಜ ಹೇಳಬೇಕು ಎಂದರೆ ಗೂಗಲ್ ಮಾತ್ರವಲ್ಲ ಆಪಲ್, ಮೈಕ್ರೋಸಾಫ್ಟ್ ಮತ್ತು ಅಮೇಜಾನ್ ಕೂಡ ಈ ಸೇವೆಯನ್ನು ಬಿಡುಗಡೆಗೊಳಿಸಿದೆ ಮತ್ತು ಕ್ರಮವಾಗಿ ಸಿರಿ, ಕೊರ್ಟಾನಾ, ಅಲೆಕ್ಸಾ ಎಂದು ಅದನ್ನು ಕರೆಯಲಾಗುತ್ತೆ.

IoT ಡಿವೈಸ್‌ಗಳಲ್ಲಿಯೂ ಬಳಕೆ

IoT ಡಿವೈಸ್‌ಗಳಲ್ಲಿಯೂ ಬಳಕೆ

ಇತ್ತೀಚೆಗಿನ ವರ್ಷಗಳಲ್ಲಿ ಗೂಗಲ್ ಅಸಿಸ್ಟೆಂಟ್ ನ್ನು ಗೂಗಲ್ ಸಂಸ್ಥೆ ಬಹಳ ವಯಕ್ತಿಕಗೊಳಿಸಿದೆ ಮತ್ತು ಬಳಕೆದಾರರ ಬಹಳಷ್ಟು ಕೆಲಸಗಳನ್ನು ಸುಲಭಗೊಳಿಸುವಂತ ತಂತ್ರಗಾರಿಕೆಯನ್ನು ಹೊಂದಿದೆ. ಗೂಗಲ್ ಅಸಿಸ್ಟೆಂಟ್ ಕೇವಲ ಆಂಡ್ರಾಯ್ಡ್ ಮತ್ತು ಐಓಎಸ್ ಡಿವೈಸ್ ಗಳಲ್ಲಿ ಮಾತ್ರವಲ್ಲ ಬದಲಾಗಿ IoT ಡಿವೈಸ್ ಗಳಾದ ಸ್ಮಾರ್ಟ್ ಟಿವಿಗಳು, ರೆಫ್ರಿಜರೇಟರ್ ಗಳು ಮತ್ತು ಸ್ಮಾರ್ಟ್ ಸ್ಪೀಕರ್ ಗಳಲ್ಲೂ ಕೂಡ ಬಳಕೆ ಮಾಡಬಹುದು.

ದೈನಂದಿನ ಕೆಲಸಗಳಿಗೆ ನೆರವು

ದೈನಂದಿನ ಕೆಲಸಗಳಿಗೆ ನೆರವು

ಗೂಗಲ್ ಅಸಿಸ್ಟೆಂಟ್ ಈಗ ಯಾವ ಮಟ್ಟಕ್ಕೆ ಬಳಕೆದಾರರಿಗೆ ಸಹಾಯಕವಾಗಿದೆ ಎಂದರೆ ಕೇವಲ ಧ್ವನಿಯ ಸೂಚನೆಯಿಂದಲೇ ಲೈಟ್ ಆಫ್/ಆನ್ ಮಾಡುವುದು, ವೈಫೈ ಆಫ್/ಆನ್ ಮಾಡುವುದು ಹೀಗೆ ಹಲವಾರು ದೈನಂದಿನ ಕೆಲಸಗಳನ್ನು ಮಾಡಲು ನೆರವು ನೀಡುತ್ತದೆ. ಒಂದು ವೇಳೆ ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಅಸಿಸ್ಟೆಂಟ್ ನ ಬಳಕೆ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ನಿಮಗೆ ಸಂಪೂರ್ಣ ವಿವರ.

ಗೂಗಲ್ ಅಸಿಸ್ಟೆಂಟ್ ನ್ನು ಡೌನ್ ಲೋಡ್ ಮಾಡುವುದು ಮತ್ತು ಇನ್ ಸ್ಟಾಲ್ ಮಾಡುವುದು ಹೇಗೆ?

ಗೂಗಲ್ ಅಸಿಸ್ಟೆಂಟ್ ನ್ನು ಡೌನ್ ಲೋಡ್ ಮಾಡುವುದು ಮತ್ತು ಇನ್ ಸ್ಟಾಲ್ ಮಾಡುವುದು ಹೇಗೆ?

ಈಗಿನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಗೂಗಲ್ ಅಸಿಸ್ಟೆಂಟ್ ಗಳು ಮೊದಲೇ ಇನ್ ಸ್ಟಾಲ್ ಆಗಿ ಬರುತ್ತದೆ ಆದರೆ ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ಅದು ಇಲ್ಲದೆ ಇದ್ದರೆ, ಈ ಕೆಳಗಿನ ಸರಳ ವಿಧಾನಗಳನ್ನು ಅನುಸರಿಸಿ ಗೂಗಲ್ ಪ್ಲೇ ಸ್ಟೋರ್ ಮುಖಾಂತರ ನೀವು ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಆಪಲ್ ಐಫೋನ್/ಐಪ್ಯಾಡ್ ಬಳಕೆದಾರರು ತಮ್ಮ ಆಪ್ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬೇಕು.

ಗೂಗಲ್ ಅಸಿಸ್ಟೆಂಟ್ ನ್ನು ಸೆಟ್ ಅಪ್ ಮಾಡುವುದು ಹೇಗೆ?

ಗೂಗಲ್ ಅಸಿಸ್ಟೆಂಟ್ ನ್ನು ಸೆಟ್ ಅಪ್ ಮಾಡುವುದು ಹೇಗೆ?

ಗೂಗಲ್ ಅಸಿಸ್ಟೆಂಟ್ ನ್ನು ಸೆಟ್ ಮಾಡುವುದು ತುಂಬಾ ಸರಳವಾದ ಕೆಲಸ. ಅದಕ್ಕಾಗಿ ಈ ಕೆಳಗೆ ತಿಳಿಸಲಾಗಿರುವ ಸರಳ ವಿಧಾನಗಳನ್ನು ಅನುಸರಿಸಿ.

ಆಂಡ್ರಾಯ್ಡ್ ಬಳಕೆದಾರು :

ಆಂಡ್ರಾಯ್ಡ್ ಬಳಕೆದಾರು :

1. ಹೋಮ್ ಬಟನ್ ನ್ನು ಒತ್ತಿ ಮತ್ತು ಹಾಗೆಯೇ ಹಿಡಿದುಕೊಂಡಿರಿ ಆ ಮೂಲಕ ನೀವು ಗೂಗಲ್ ಅಸಿಸ್ಟೆಂಟ್ ನ್ನು ಆಕ್ಟಿವೇಟ್ ಮಾಡಬಹುದು.

2. ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡಿದ್ದೀರಿ ಎಂದು ಖಾತ್ರಿಗೊಳಿಸಿ.

3. ಈಗ ವಾಯ್ಸ್ ಕಮಾಂಡನ್ನು ಆಕ್ಟಿವೇಟ್ ಮಾಡಿ ನಂತರ ಕಂಟಿನ್ಯೂ ನ್ನು ಟ್ಯಾಪ್ ಮಾಡಿ ಮತ್ತು ಮುಂದಿನ ಸ್ಕ್ರೀನ್ ನಲ್ಲಿರುವ ಓಕೆ ಗೂಗಲ್ ಟಾಗಲ್ ನ್ನು ಆನ್ ಮಾಡಿ.

4. ಒಮ್ಮೆ ಮುಗಿದ ನಂತರ, ಗೂಗಲ್ ಅಸಿಸ್ಟೆಂಟ್ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸನ್ನದ್ಧವಾಗಿರುತ್ತದೆ ಮತ್ತು ಇತರೆ ಕಾರ್ಯಗಳನ್ನು ಮಾಡಲು ತಯಾರಾಗಿರುತ್ತದೆ.

ಐಫೋನ್ / ಐಪ್ಯಾಡ್ ಬಳಕೆದಾರರು :

ಐಫೋನ್ / ಐಪ್ಯಾಡ್ ಬಳಕೆದಾರರು :

1. ಗೂಗಲ್ ಅಸಿಸ್ಟೆಂಟ್ ಆಪ್ ನ್ನು ತೆರೆಯಿರಿ .

2. ಆಪ್ ನಲ್ಲಿರುವ ಸೂಚನೆಗಳನ್ನು ಅನುಸರಿಸಿ

3. ಓಕೆ ಗೂಗಲ್ ಪತ್ತೆದಾರಿಕೆ ಆಯ್ಕೆಯನ್ನು ಟರ್ನ್ ಆನ್ ಮಾಡಿ.

4. ಆಪ್ ನಿಮಗೆ ಓಕೆ ಗೂಗಲ್ ಮತ್ತು ಹಾಯ್ ಗೂಗಲ್ ಕಮಾಂಡನ್ನು ನಾಲ್ಕು ಬಾರಿ ಹೇಳಲು ಹೇಳುತ್ತದೆ.

4. ಒಮ್ಮೆ ನೀವು ಮೇಲಿನ ಹಂತವನ್ನು ಮುಗಿಸಿದ ನಂತರ ಓಕೆ ಗೂಗಲ್ ಕಮಾಂಡನ್ನು ಗೂಗಲ್ ಅಸಿಸ್ಟೆಂಟ್ ಆಕ್ಟಿವೇಟ್ ಮಾಡಲು ನೀವು ಬಳಕೆ ಮಾಡಬಹುದು.

ಧ್ವನಿ ಹೊಂದಾಣಿಕೆಯನ್ನು ಹೇಗೆ ಸಂಯೋಜನೆ ಮಾಡುವುದು?

ಧ್ವನಿ ಹೊಂದಾಣಿಕೆಯನ್ನು ಹೇಗೆ ಸಂಯೋಜನೆ ಮಾಡುವುದು?

ಸುಖಾಸುಮ್ಮನೆ ಆಪ್ ತೆರೆದುಕೊಳ್ಳುವುದನ್ನು ತಪ್ಪಿಸಲು ನೀವು ನಿಮ್ಮ ಧ್ವನಿಯನ್ನು ಹೊಂದಾಣಿಕೆ ಮಾಡಿ ಸಂಯೋಜನೆ ಮಾಡಬಹುದು.ಈ ವೈಶಿಷ್ಟ್ಯತೆಯಿಂದಾಗಿ ಗೂಗಲ್ ನಿಮ್ಮ ಧ್ವನಿಯನ್ನು ಮಾತ್ರ ಗುರುತಿಸುತ್ತದೆ ಮತ್ತು ಆಪ್ ನ್ನು ಟ್ರಿಗರ್ ಮಾಡುತ್ತದೆ.ಧ್ವನಿ ಸಂಯೋಜನೆಯನ್ನು ಸೆಟ್ ಮಾಡಲು ಈ ಕೆಳಗೆ ಹೇಳಲಾಗಿರುವ ಹಂತಗಳನ್ನು ಅನುಸರಿಸಿ.

1. ಗೂಗಲ್ ಆಪ್ ನ್ನು ತೆರೆಯಿರಿ ಮತ್ತು ಅದರಲ್ಲಿ ಅದರ ಕೆಳಗಿನ ಬಲ ಮೂಲೆಯಲ್ಲಿರುವ ಮೂರು ಸಮತಲ ಬಾರ್ ಗಳನ್ನು ಟ್ಯಾಪ್ ಮಾಡಿ.

2. ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಿ ಮತ್ತು ಗೂಗಲ್ ಅಸಿಸ್ಟೆಂಟ್ ನ ಸೆಕ್ಷನ್ ನಲ್ಲಿ ಸೆಟ್ಟಿಂಗ್ಸ್ ಆಯ್ಕೆಯನ್ನು ಮತ್ತೆ ಟ್ಯಾಪ್ ಮಾಡಿ.

3.ಫೋನ್ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಓಕೆ ಗೂಗಲ್ ಡಿಟೆಕ್ಷನ್ ನ್ನು ಆನ್ ಮಾಡಿ.

4. ಇದಾದ ನಂತರ, ಆಪ್ ನಿಮಗೆ ಓಕೆ ಗೂಗಲ್ ಮತ್ತು ಹಾಯ್ ಗೂಗಲ್ ಕಮಾಂಡನ್ನು ನಾಲ್ಕು ಬಾರಿ ಬಳಕೆ ಮಾಡಲು ಹೇಳುತ್ತದೆ.

5. ಒಮ್ಮೆ ಹೇಳಿ ಮುಗಿಸದ ನಂತರ 'Done' ನ್ನು ಒತ್ತಿ ಮತ್ತು ನಿಮ್ಮ ಧ್ವನಿಯನ್ನು ಸೇವ್ ಮಾಡಿ.

6. ಅಷ್ಟೇ ಅಲ್ಲ, ವಾಯ್ಸ್ ಮ್ಯಾಚ್ ಆಯ್ಕೆಯನ್ನು ಟರ್ನ್ ಆನ್ ಮಾಡಿ ಆ ಮೂಲಕ ಗೂಗಲ್ ಅಸಿಸ್ಟೆಂಟ್ ನಿಮ್ಮ ಫೋನನ್ನು ನಿಮ್ಮ ವಾಯ್ಸ್ ಮೂಲಕವೇ ಆನ್ ಮಾಡುತ್ತದೆ.

Best Mobiles in India

English summary
How to use Google Assistant on your iPhone and Android smartphone.To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X