ಇಂಟರ್‌ನೆಟ್‌ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಿ..! ಹೇಗೆ ಗೊತ್ತಾ..?

By GizBot Bureau
|

ಈಗಿನ ಜಮಾನದಲ್ಲಿ ಯಾವುದೋ ವಿಳಾಸ ಹುಡುಕಿಕೊಂಡು ಹೋಗಬೇಕು ಅಂದ್ರೆ ಗೂಗಲ್ ಮ್ಯಾಪ್ ನಷ್ಟು ಸಹಾಯವನ್ನು ಮನುಷ್ಯರೂ ಮಾಡುವುದಿಲ್ಲ. ಭಾಷೆ ಬರದ ಊರಲ್ಲಂತೂ ಗೂಗಲ್ ಮ್ಯಾಪ್ ನಿಜಕ್ಕೂ ಅತ್ಯುತ್ತಮ ದಾರಿತೋರುಗ. ಹಾಗಾಗಿ ದಾರಿ ತಪ್ಪಿ ಎಲ್ಲಿಗೋ ಹೋಗಿ ಊರೆಲ್ಲ ಸುತ್ತಾಡಿ ತಲುಪಬೇಕಾದ ವಿಳಾಸವನ್ನು ತಲುಪದೇ ಇರುವಂತಹ ಪ್ರಮೇಯ ಈಗ ಉಧ್ಭವವಾಗೋದು ಬಹಳ ಕಡಿಮೆ.

ಬಲಕ್ಕೆ ತಿರುಗಿ, ಎಡಕ್ಕೆ ತಿರುಗಿ, ಇಂತಿಷ್ಟು ದೂರದಲ್ಲಿ ಬಲ ತಿರುವು ಇದೆ, ಎಡ ತಿರುವು ಇದೆ, ನಿಮ್ಮ ವಿಳಾಸಕ್ಕೆ ಹೋಗಲು ನೀವು ಬಲಕ್ಕೆ ಹೋಗಬೇಕು ಅಥವಾ ಎಡಕ್ಕೆ ಹೋಗಬೇಕು ಹೀಗೆ ಪ್ರತಿ ಕ್ಷಣವೂ ದಾರಿಯ ಮಾರ್ಗದರ್ಶನವನ್ನು ನೀಡುತ್ತಾ ಸಾಗುತ್ತದೆ ಗೂಗಲ್ ಮ್ಯಾಪ್.

ಇಂಟರ್‌ನೆಟ್‌ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಿ..! ಹೇಗೆ ಗೊತ್ತಾ..?

ಆದರೆ ಹೀಗೆ ಮ್ಯಾಪ್ ಸರಿಯಾಗಿ ಕೆಲಸ ಮಾಡಬೇಕು ಎಂದರೆ ಇಂಟರ್ನೆಟ್ ಕನೆಕ್ಷನ್ ಸರಿಯಾಗಿ ಇರಬೇಕು. ಆದರೆ ನಮ್ಮ ದೇಶದಲ್ಲಿ ಇಂಟರ್ನೆಂಟ್ ವ್ಯವಸ್ಥೆ ನಿಮಗೆ ಗೊತ್ತೇ ಇದೆ. ಟವರ್ ಕೆಳಗೆ ನಿಂತು ಮೊಬೈಲ್ ಹಿಡ್ಕೊಂಡು ಇದ್ರೂ ನೆಟ್ ವರ್ಕ್ ಸರಿಯಾಗಿ ಇರದೇ ಇರೋ ಪರಿಸ್ಥಿತಿ ಇದೆ. ಹೀಗಿರುವಾಗ ಇಂಟರ್ನೆಟ್ ಸರಿಯಾಗಿ ಕೆಲಸ ಮಾಡುತ್ತಲೇ ಇರಬೇಕು ಎಂದು ನಿರೀಕ್ಷೆ ಮಾಡುವುದು ಬಹಳ ಕಷ್ಟ. ಆದರೆ ಗೂಗಲ್ ಮ್ಯಾಪ್ ಈ ಸಮಸ್ಯೆಗೊಂದು ಪರಿಹಾರ ಕಂಡು ಹಿಡಿದಿದೆ.

ನೀವು ಯಾವುದೇ ಬೇರೆ ಯಾವುದೇ ಪ್ರದೇಶಕ್ಕೆ ಇಲ್ಲವೇ ವಿಳಾಸ ಹುಡುಕಿ ಸಾಗುತ್ತಿರುವಾಗ ಒಂದು ವೇಳೆ ಇಂಟರ್ನೆಟ್ ಕನೆಕ್ಷನ್ ಸರಿಯಾಗಿ ಇಲ್ಲದೇ ಇದ್ದರೂ ಕೂಡ ಗೂಗಲ್ ಮ್ಯಾಪ್ ನಿಮಗೆ ದಾರಿ ತೋರಿಸುತ್ತದೆ. ಹೌದು ಆಫ್ ಲೈನ್ ನಲ್ಲಿ ಗೂಗಲ್ ಮ್ಯಾಪ್ ಬಳಕೆ ಮಾಡುವ ಅವಕಾಶವಿದೆ. ಈ ವೈಶಿಷ್ಟ್ಯವು ನಿಮಗೆ ವಿಳಾಸವನ್ನು ಡೌನ್ ಲೋಡ್ ಮಾಡಿ ಇಟ್ಟುಕೊಳ್ಳಲು ಅವಕಾಶ ನೀಡುತ್ತದೆ. ಮತ್ತು ಆ ಮೂಲಕ ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಇದ್ದಾಗಲೂ ಕೂಡ ನೀವಿದ್ದನ್ನು ಬಳಕೆ ಮಾಡಬಹುದು. ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಬಳಕೆದಾರರೂ ಕೂಡ ಈ ವೈಶಿಷ್ಟ್ಯವನ್ನು ಬಳಕೆ ಮಾಡಬಹುದು.

• ಐಫೋನ್ ಅಥವಾ ಐಪ್ಯಾಡ್ ನಲ್ಲಿ ಮ್ಯಾಪ್ ನ್ನು ಆಫ್ಲ್ ಲೈನ್ ನಲ್ಲಿ ಬಳಕೆ ಮಾಡಲು ಡೌನ್ ಲೋಡ್ ಮಾಡಿಕೊಳ್ಳಿ

ಇಂಟರ್‌ನೆಟ್‌ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಿ..! ಹೇಗೆ ಗೊತ್ತಾ..?

ಹಂತ 1 : ಐಫೋನ್ ಅಥವಾ ಐಪ್ಯಾಡ್ ನಲ್ಲಿ ಗೂಗಲ್ ಮ್ಯಾಪ್ ನ್ನು ತೆರೆಯಿರಿ.

ಹಂತ 2: ನೀವು ಅಂತರ್ಜಾಲದ ಸಂಪರ್ಕ ಹೊಂದಿದ್ದೀರಿ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ ಮತ್ತು ಗೂಗಲ್ ಮ್ಯಾಪ್ ಗೆ ಸೈನ್ ಇನ್ ಆಗಿ.

ಹಂತ 3: ಸ್ಥಳವನ್ನು ಹುಡುಕಾಡಿ.

ಹಂತ 4: ಕೆಳಭಾಗದಲ್ಲಿ, ಹೆಸರು ಅಥವಾ ಸ್ಥಳದ ವಿಳಾಸವನ್ನು ಟ್ಯಾಪ್ ಮಾಡಿ ಮತ್ತು ಟ್ಯಾಪ್ ಮೋರ್ ಅನ್ನು ಕ್ಲಿಕ್ಕಿಸಿ.

ಹಂತ 5: ಡೌನ್ ಲೋಡ್ ಆಫ್ ಲೈನ್ ಮ್ಯಾಪ್ ನ್ನು ಆಯ್ಕೆ ಮಾಡಿ.

• ಆಂಡ್ರಾಯ್ಡ್ ಡಿವೈಸ್ ನಲ್ಲಿ ಮ್ಯಾಪ್ ನ್ನು ಆಫ್ ಲೈನ್ ನಲ್ಲಿ ಬಳಕೆ ಮಾಡಲು ಡೌನ್ ಲೋಡ್ ಮಾಡಿ.

ಇಂಟರ್‌ನೆಟ್‌ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಿ..! ಹೇಗೆ ಗೊತ್ತಾ..?

ಹಂತ 1: ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್ ನಲ್ಲಿ ಗೂಗಲ್ ಮ್ಯಾಪ್ ಆಪ್ ನ್ನು ತೆರೆಯಿರಿ

ಹಂತ 2: ಅಂತರ್ಜಾಲದ ಸಂಪರ್ಕಕ್ಕೆ ನೀವು ಒಳಪಟ್ಟಿದ್ದೀರಿ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ ಮತ್ತು ಗೂಗಲ್ ಮ್ಯಾಪ್ ಆಪ್ ಗೆ ಸೈನ್ ಇನ್ ಆಗಿ.

ಹಂತ 3: ಸ್ಥಳವನ್ನು ಆಯ್ಕೆ ಮಾಡಿ

ಹಂತ 4: ಕೆಳಭಾಗದಲ್ಲಿ , ಹೆಸರು ಅಥವಾ ವಿಳಾಸ ಇರುತ್ತದೆ ಅದನ್ನು ಟ್ಯಾಪ್ ಮಾಡಿ ಮತ್ತು ಡೌನ್ ಲೋಡ್ ಮಾಡಿ. ಒಂದು ವೇಳೆ ನೀವು ರೆಸ್ಟೋರೆಂಟ್ ಗಳನ್ನು ಹುಡುಕುತ್ತಿದ್ದರೆ ಅದನ್ನು ಆಯ್ಕೆ ಮಾಡಿ ಡೌನ್ ಲೋಡ್ ಆಫ್ ಲೈನ್ ಮ್ಯಾಪ್ ನ್ನು ಟ್ಯಾಪ್ ಮಾಡಿ.

ನೀವು ಮ್ಯಾಪ್ ನ್ನು ಡೌನ್ ಮಾಡಿದ ನಂತರ, ನೀವು ಸಹಜವಾಗಿ ಗೂಗಲ್ ಮ್ಯಾಪ್ ಬಳಕೆ ಮಾಡುವಂತೆ ಬಳಕೆ ಮಾಡಿದರೆ ಆಯ್ತು. ನಿಮ್ಮ ಇಂಟರ್ ನೆಟ್ ಕನೆಕ್ಷನ್ ನಿಧಾನಗತಿಯಲ್ಲಿ ಇದ್ದರೆ ಅಥವಾ ಇಲ್ಲದೆ ಇದ್ದರೂ ಕೂಡ ಗೂಗಲ್ ಮ್ಯಾಪ್ ನಲ್ಲಿ ಆಫ್ ಲೈನ್ ಮ್ಯಾಪ್ ನಲ್ಲಿ ಡೌನ್ ಲೋಡ್ ಆಗಿರುವುದು ನಿಮಗೆ ಡೈರೆಕ್ಷನ್ ನ್ನು ತೋರಿಸುತ್ತದೆ. ಹೀಗೆ ನೀವು ತಲುಪಬೇಕಾಗಿರುವ ಸ್ಥಳವನ್ನು ಸುಲಭದಲ್ಲಿ ತಲುಪಬಹುದು.

Best Mobiles in India

English summary
How to use Google Maps offline on Android and Ios. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X