ಸ್ಮಾರ್ಟ್ ಫೋನಿನ ವೈಫೈಯನ್ನು ಅನೇಕ ಡಿವೈಸ್ ಗಳಿಗೆ ಬಳಸುವುದು ಹೇಗೆ?

By GizBot Bureau
|

ನಿಮ್ಮ ಹೆಂಡತಿಯ ಮೊಬೈಲಿಗೆ ಸುಮ್ಮನೆ ಹೆಚ್ಚುವರಿ ರಿಚಾರ್ಜ್ ಮಾಡುವ ಬದಲು ನಿಮ್ಮ ಸ್ಮಾರ್ಟ್ ಫೋನಿನ ವೈಫೈಯನ್ನೇ ನೀಡಬೇಕು ಎಂದು ಬಯಸುತ್ತಿದ್ದೀರಾ ಅಥವಾ ನಿಮ್ಮ ಮನೆಗೆ ಯಾರೋ ಅತಿಥಿಗಳು ಬಂದಿದ್ದಾರೆ ಅವರಿಗೆ ಯಾವುದೋ ಕೆಲಸಕ್ಕೆ ಇಂಟರ್ನೆಟ್ ಬೇಕಾಗಿದೆ. ನಿಮ್ಮ ಸ್ಮಾರ್ಟ್ ಫೋನ್ ವೈಫೈ ಕನೆಕ್ಷನ್ ಕೊಡಬೇಕು ಎಂದು ಅಂದುಕೊಂಡಿದ್ದರೆ ಹೇಗೆ ಮಾಡುವುದು..? ಹೀಗೆ ವೈಫೈ ಕನೆಕ್ಷನ್ ನ್ನು ಇನ್ನೊಬ್ಬರಿಗೆ ನೀಡಬೇಕು ಎಂದು ಬಯಸುವುದಕ್ಕೆ ಹಲವಾರು ಕಾರಣಗಳಿರಬಹುದು.. ಹೌದು, ಮನೆಮಂದಿಯೆಲ್ಲ ಒಂದೇ ವೈಫೈ ಕನೆಕ್ಷನ್ ನಿಂದ ಎಲ್ಲರೂ ತಮ್ಮ ತಮ್ಮ ಡಿವೈಸ್ ನಲ್ಲಿ ಇಂಟರ್ನೆಟ್ ಬಳಸುವಂತೆ ಮಾಡಬಹುದು. ಹೇಗೆ ಅಂತೀರಾ.. ಇದು ಬಹಳ ಸುಲಭ ಮತ್ತು ಸರಳ.

ಸ್ಮಾರ್ಟ್ ಫೋನಿನ ವೈಫೈಯನ್ನು ಅನೇಕ ಡಿವೈಸ್ ಗಳಿಗೆ ಬಳಸುವುದು ಹೇಗೆ?

ನಿಮ್ಮ ಡಾಟಾ ಕನೆಕ್ಷನ್ ನ್ನು ಹೀಗೆ ಮಾಡಬೇಕು ಎಂದಾದರೆ ಕೇವಲ ಹಾಟ್ ಸ್ಪಾಟ್ ಆನ್ ಮಾಡಿದರೆ ಸಾಕಾಗುತ್ತೆ. ಅದೇ ರೀತಿ ವೈಫೈ ಕನೆಕ್ಷನ್ ನ್ನು ನಿಮ್ಮ ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಇನ್ನಷ್ಟು ಫೋನ್ ಗಳಿಗೆ ಅಥವಾ ಟ್ಯಾಬ್ಲೆಟ್ಸ್ ಗಳಿಗೆ ಕನೆಕ್ಟ್ ಮಾಡಬಹುದು. ಆದರೆ ಮೂಲ ವೈಫೈ ಫೋನಿಗಿಂತ ಇತರೆ ಡಿವೈಸ್ ಗಳಲ್ಲಿ ವೈಫೈ ಸ್ಪೀಡ್ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಅಥವಾ ಅನೇಕ ಡಿವೈಸ್ ಗಳಿಗೆ ಒಂದೇ ವೈಫೈ ಕನೆಕ್ಟ್ ಆಗಿದ್ದರೆ ಎಲ್ಲರೂ ಒಂದೇ ಸ್ಪೀಡ್ ನಲ್ಲಿ ಅಂತರ್ಜಾಲದ ವ್ಯವಸ್ಥೆ ಪಡೆಯಲು ಆಗದೇ ಇರಬಹುದು. ಆದರೆ ಅಂತರ್ಜಾಲವೇ ಇಲ್ಲದ ಸ್ಥಿತಿಗಿಂತ ಇದು ಎಷ್ಟೋ ಬೆಟರ್ ಅಲ್ವಾ?

A) ಇತರೆ ಫೋನ್ ಗಳಿಗೆ ಸ್ಮಾರ್ಟ್ ಫೋನ್ ವೈಫೈ ಕನೆಕ್ಟ್ ಮಾಡೋದು ಹೇಗೆ?

ನೀವು ವೈಫೈಯನ್ನು ಇತರೆ ಫೋನ್ ಗಳಿಗೆ ಕನೆಕ್ಟ್ ಮಾಡಬೇಕು ಎಂದಾದರೆ, ನಿಮ್ಮ ಪ್ರೈಮರಿ ಡಿವೈಸ್ ನಲ್ಲಿ ಈ ಕೆಳಗಿನ ಸೆಟ್ಟಿಂಗ್ಸ್ ಮಾಡಬೇಕಾಗುತ್ತದೆ.

1. ಮೊದಲಿಗೆ ನಿಮ್ಮ ಫೋನನ್ನು ವೈಫೈ ನೆಟ್ವರ್ಕ್ ಗೆ ಕನೆಕ್ಟ್ ಮಾಡಬೇಕು

2. ಇದಾದ ನಂತರ ನೀವು ಒಳ ಪ್ರವೇಶಿಸಿ, ಕೆಲವು ಸಂಗತಿಗಳನ್ನು ಮಾಡಿಫೈ ಮಾಡಲು ನಿಮ್ಮ ಫೋನಿನ ಸೆಟ್ಟಿಂಗ್ಸ್ ನಲ್ಲಿ ಅವಕಾಶವಿರುತ್ತೆ. ಆ ಮೂಲಕ ಬ್ಲೂಟೂತ್ ಬಳಸಿ ನಿಮ್ಮ ವೈಫೈ ಕನೆಕ್ಷನ್ನ ನ್ನು ಇತರೆ ಡಿವೈಸ್ ಗಳಿಗೆ ಕನೆಕ್ಟ್ ಮಾಡಬಹುದು.

3. ನಂತರ ನಿಮ್ಮ ಬ್ಲೂ ಟೂತ್ ಕನೆಕ್ಷನ್ ನ್ನು ಆನ್ ಮಾಡಿ. ವೈಫೈ ಇರುವ ಫೋನ್ ಮತ್ತು ಯಾವ ಫೋನಿಗೆ ನೀವು ಕನೆಕ್ಟ್ ಮಾಡಬೇಕು ಎಂದು ಬಯಸಿದ್ದೀರೋ ಎರಡೂ ಫೋನಿನಲ್ಲೂ ಬ್ಲೂಟೂತ್ ಆನ್ ಆಗಿರಬೇಕು

4. ನಂತರ ನೆಟ್ ವರ್ಕ್ ಎಂಡ್ ಇಂಟರ್ ನೆಟ್ ಗೆ ತೆರಳಿ

5. ಹಾಟ್ ಸ್ಪಾಟ್ ಎಂಡ್ ಥ್ರೆಟನಿಂಗ್ ನ್ನು ಆಕ್ಸಿಸ್ ಮಾಡಿ

6. ಬ್ಲೂ ಟೂತ್ ಥ್ರೆಟನಿಂಗ್ ಆಯ್ಕೆಯನ್ನು ಆನ್ ಮಾಡಿ.

ಹೀಗೆ ಮಾಡುವುದರಿಂದ ಇನ್ನೊಂದು ಫೋನಿಗೆ ವೈಫೈ ಕನೆಕ್ಷನ್ ಸಾಧ್ಯವಾಗುತ್ತೆ ಇದೇ ರೀತಿ, ಒಂದೇ ಸಮಯದಲ್ಲಿ ಇನ್ನೊಂದು ಲ್ಯಾಪ್ ಟಾಪ್ ಇಲ್ಲವೇ ಪಿಸಿ ಗೆ ಕನೆಕ್ಟ್ ಮಾಡಬಹುದು. ವಿವಿಧ ಡಿವೈಸ್ ಗಳಿಗೆ ಏಕಕಾಲದಲ್ಲಿ ವೈಫೈ ಕನೆಕ್ಷನ್ ಕೊಡಲು ಸಾಧ್ಯವಿದೆ.

B) ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಗಳಿಗೆ ಕನೆಕ್ಟ್ ಮಾಡುವುದು ಹೇಗೆ?

ನೀವು ನಿಮ್ಮ ಪಿಸಿ ಗೆ ಕನೆಕ್ಟ್ ಮಾಡಬೇಕು ಎಂದಾದರೆ, ಬ್ಲೂಟೂತ್ ಡಾಂಗಲ್ ನ್ನು ಮೊದಲು ಸೆಲೆಕ್ಟ್ ಮಾಡಿಕೊಳ್ಳಬೇಕು.ಆದರೆ ಲ್ಯಾಪ್ ಟಾಪ್ ಆಗಿದ್ದರೆ,ಇದು ಅಂತಹ ದೊಡ್ಡ ಸಮಸ್ಯೆಯೇನಲ್ಲ.

1. ನಿಮ್ಮ ಪಿಸಿಯ ಅಥವಾ ಲ್ಯಾಪ್ ಟಾಪ್ ನ ಸೆಟ್ಟಿಂಗ್ಸ್ ಆಯ್ಕೆಗೆ ತೆರಳಿ

2. ಡಿವೈಸಸ್ ಮತ್ತು ಪ್ರಿಂಟರ್ಸ್ ನ್ನು ಆಕ್ಸಿಸ್ ಮಾಡಿ

3. ನಿಮ್ಮ ಫೋನನ್ನು ಪ್ರತಿನಿಧಿಸುವ ಐಕಾನ್ ಗೆ ತೆರಳಿ ಮತ್ತು ಅಲ್ಲಿ ರೈಟ್ ಕ್ಲಿಕ್ ಮಾಡಿ

4. ಕನೆಕ್ಟ್ ನ್ನು ಸೆಲೆಕ್ಟ್ ಮಾಡಿ ಮತ್ತು ಆಕ್ಸಿಸ್ ಪಾಯಿಂಟ್ ನ್ನು ಡ್ರಾಪ್ ಡೌನ್ ಮೆನುವಿನಿಂದ ಆಯ್ಕೆ ಮಾಡಿ.

ಒಟ್ಟಿನಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚು ಜನರು ಅಂತರ್ಜಾಲ ಸೇವೆ ಪಡೆಯಲು ಇದು ನೆರವಾಗುತ್ತೆ. ಟ್ರೈ ಮಾಡಿ ನೋಡಿ ಮತ್ತು ನಿಮ್ಮ ಅಭಿಪ್ರಾಯ ತಿಳಿಸಿ.

ಟ್ವಿಟ್ಟರ್‌, ಫೇಸ್‍ಬುಕ್ ಇನ್‍ಸ್ಟಾಗ್ರಾಂಗಳಿಂದ ದೂರವಿರುವ ಸೆಲೆಬ್ರಿಟಿಗಳು ಇವರು!!..ಕಾರಣ ಏನು?ಟ್ವಿಟ್ಟರ್‌, ಫೇಸ್‍ಬುಕ್ ಇನ್‍ಸ್ಟಾಗ್ರಾಂಗಳಿಂದ ದೂರವಿರುವ ಸೆಲೆಬ್ರಿಟಿಗಳು ಇವರು!!..ಕಾರಣ ಏನು?

Best Mobiles in India

English summary
The steps to take in order to share your Wi-Fi connection with multiple devices making use of the Bluetooth in your phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X