ನೀವು ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿರುವ ಎಲ್ಲಾ ಫೋಟೋಗಳನ್ನು ನೋಡುವುದು ಹೇಗೆ?

By Tejaswini P G
|
How to view all photos, pages, comments and posts you liked on Facebook (KANNADA)

ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ತನ್ನ ಸಾಮಾಜಿಕ ಜಾಲತಾಣವನ್ನು ನಮಗೆ ಆಕರ್ಷಕವಾಗಿಸುವ ಪ್ರಯತ್ನದಲ್ಲಿ ಹಲವಾರು ಅಪ್ಡೇಟ್ಗಳನ್ನು ನೀಡುತ್ತಲೇ ಇದೆ. ನಾವು ಕೂಡ ಇಲ್ಲಿಯವರೆಗೆ ಫೇಸ್ಬುಕ್ ನಲ್ಲಿ ಸಾಕಷ್ಟು ಫೋಟೋ, ಅಪ್ಡೇಟ್, ವೆಬ್ಪೇಜ್ ಇತ್ಯಾದಿಗಳನ್ನು ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದೇವೆ.

ನೀವು ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿರುವ ಎಲ್ಲಾ ಫೋಟೋಗಳನ್ನು ನೋಡುವುದು ಹೇಗೆ?

ಇತರರು ಶೇರ್ ಮಾಡಿರುವ ಸಾವಿರಾರು ಪೋಸ್ಟ್ಗಳನ್ನು ಕೂಡ ನಾವು ಲೈಕ್ ಮಾಡಿದ್ದೇವೆ. ನೀವು ಈವರೆಗೆ ಯಾವೆಲ್ಲಾ ಫೋಟೋಗಳನ್ನು ಲೈಕ್ ಮಾಡಿದ್ದೀರೆಂದು ತಿಳಿಯ ಬಯಸಿದರೆ ಆಕ್ಟಿವಿಟಿ ಲಾಗ್ ನ ಸಹಾಯ ಪಡೆಯಬಹುದಾಗಿದೆ. ಡೆಸ್ಕ್ಟಾಪ್ ಅಥವಾ ಮೊಬೈಲ್ ಎರಡರಲ್ಲೂ ಇದನ್ನು ತಿಳಿಯುವ ವಿಧಾನವನ್ನು ಈ ಲೇಖನದಲ್ಲಿ ಸಂಪಾದಿಸಿದ್ದೇವೆ.

ಸ್ಮಾರ್ಟ್ಫೋನ್ (ಆಂಡ್ರಾಯ್ಡ್/ಐಓಎಸ್) ನಲ್ಲಿ ತಿಳಿಯುವ ವಿಧಾನ

ಸ್ಮಾರ್ಟ್ಫೋನ್ (ಆಂಡ್ರಾಯ್ಡ್/ಐಓಎಸ್) ನಲ್ಲಿ ತಿಳಿಯುವ ವಿಧಾನ

ಹಂತ 1: ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಫೇಸ್ಬುಕ್ ಆಪ್ ತೆರೆಯಿರಿ. ಒಂದು ವೇಳೆ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಫೇಸ್ಬುಕ್ ಇಲ್ಲದಿದ್ದಲ್ಲಿ ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್ ನಿಂದ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ

ಹಂತ 2: ಈಗ ಪರದೆಯ ಒಂದು ಮೂಲೆಯಲ್ಲಿರುವ 3-ಗೆರೆಯ ಮೆನು ಬಟನ್ ಮೇಲೆ ಕ್ಲಿಕ್ ಮಾಡಿ, ಮೆನುವಿನ ಮೇಲ್ಬಾಗದಲ್ಲಿರುವ ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿ

ಹಂತ 3: ನಿಮ್ಮ ಡಿಸ್ಪ್ಲೇ ಚಿತ್ರದ ಕೆಳ ಭಾಗದಲ್ಲಿರುವ ಆಕ್ಟಿವಿಟಿ ಲಾಗ್ ಬಟನ್ ಕ್ಲಿಕ್ ಮಾಡಿ. ಇದನ್ನು ಕ್ಲಿಕ್ ಮಾಡಿದಾಗ ನಿಮ್ಮ ಪರದೆಯ ಮೇಲೆ ನೀವು ಈವರೆಗೆ ಫೇಸ್ಬುಕ್ ನಲ್ಲಿ ಮಾಡಿದ ಎಲ್ಲಾ ಚಟುವಟಿಕೆಗಳನ್ನು ತಿಂಗಳು ಹಾಗೂ ವರ್ಷಗಳೊಂದಿಗೆ ಪಟ್ಟಿಮಾಡಲಾಗುತ್ತದೆ.

ಹಂತ 4: ಇದರ ಮೇಲೆ ಕ್ಲಿಕ್ ಮಾಡಿದಾಗ ನಿರ್ದಿಷ್ಟ ದಿನಾಂಕದ ಶ್ರೇಣಿಯಲ್ಲಿ ನೀವು ನಡೆಸಿದ ಫೇಸ್ಬುಕ್ ಚಟುವಟಿಕೆಗಳ ಲಾಗ್ ಅನ್ನು ನೀವು ಕಾಣಬಹುದಾಗಿದೆ.

ಹಂತ 5: ನಾವೀಗ "ಲೈಕ್" ಗಳನ್ನು ಹುಡುಕುತ್ತಿರುವ ಕಾರಣ ಪರದೆಯ ಮೇಲ್ಭಾಗದಲ್ಲಿರುವ ಫಿಲ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ 'ಲೈಕ್ಸ್' ಮೇಲೆ ಕ್ಲಿಕ್ ಮಾಡಿ.

ಹಂತ 6:

ಹಂತ 6:

ಈಗ ಮತ್ತೆ ಮುಖ್ಯ ಆಕ್ಟಿವಿಟಿ ಲಾಗ್ ಸ್ಕ್ರೀನ್ ನಲ್ಲಿ ದಿನಾಂಕವನ್ನು ಆಯ್ಕೆ ಮಾಡುವ ಮೂಲಕ ಆ ಸಮಯದಲ್ಲಿ ನೀವು ಲೈಕ್ ಮಾಡಿದ ಎಲ್ಲವನ್ನೂ ನೋಡಬಹುದಾಗಿದೆ.

ಹಂತ 7: ನೀವು ಏನನ್ನಾದರೂ ಅನ್ಲೈಕ್ ಮಾಡಲಿಚ್ಛಿಸಿದರೆ, ಆ ನಿರ್ದಿಷ್ಟ ಚಟುವಟಿಕೆಯ ಬಲಭಾಗದಲ್ಲಿರುವ ಡೌನ್ ಆರೋ ಮೇಲೆ ಕ್ಲಿಕ್ ಮಾಡಿ ಅನ್ಲೈಕ್ ಮೇಲೆ ಕ್ಲಿಕ್ ಮಾಡಿ.

ಭಾರತದಲ್ಲಿ ಬಿಡುಗಡೆಯಾಗುವ ಶಿಯೋಮಿಯ ಮೊದಲ 'ಆಂಡ್ರಾಯ್ಡ್ ಟಿವಿ' ಹೇಗಿದೆ?..ಬೆಲೆ ಎಷ್ಟು!?ಭಾರತದಲ್ಲಿ ಬಿಡುಗಡೆಯಾಗುವ ಶಿಯೋಮಿಯ ಮೊದಲ 'ಆಂಡ್ರಾಯ್ಡ್ ಟಿವಿ' ಹೇಗಿದೆ?..ಬೆಲೆ ಎಷ್ಟು!?

ಡೆಸ್ಕ್ಟಾಪ್ ನಲ್ಲಿ ತಿಳಿಯುವ ವಿಧಾನ

ಡೆಸ್ಕ್ಟಾಪ್ ನಲ್ಲಿ ತಿಳಿಯುವ ವಿಧಾನ

ಹಂತ 1: ಫೇಸ್ಬುಕ್ ಗೆ ಹೋಗಿ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ.

ಹಂತ 2: ನಿಮ್ಮ ಪ್ರೊಫೈಲ್ ನಲ್ಲಿ ವ್ಯೂ ಆಕ್ಟಿವಿಟಿ ಲಾಗ್ ಬಟನ್ ಕ್ಲಿಕ್ ಮಾಡಿ.

ಹಂತ 3: ಲೈಕ್ ಗಳನ್ನು ಫಿಲ್ಟರ್ ಮಾಡಲು ಪರದೆಯ ಎಡಭಾಗದಲ್ಲಿರುವ ಲೈಕ್ಸ್ ಬಟನ್ ಕ್ಲಿಕ್ ಮಾಡಿ

ಹಂತ 4: ಈಗ ನೀವು ಇಲ್ಲಿಯವರೆಗೆ ಲೈಕ್ ಮಾಡಿರುವ ಎಲ್ಲಾ ಪೋಸ್ಟ್ ಗಳನ್ನು ನೋಡಬಹುದಾಗಿದೆ. ಏನನ್ನಾದರು ಅನ್ಲೈಕ್ ಮಾಡಬಯಸಿದರೆ ಅಲ್ಲಿರುವ 'ಎಡಿಟ್' ಬಟನ್ ಮೇಲೆ ಕ್ಲಿಕ್ ಮಾಡಿ ಪೋಸ್ಟ್ ಅನ್ನು ಅನ್ಲೈಕ್ ಮಾಡಿ

Best Mobiles in India

English summary
These days, Facebook is rolling out a wave of updates that to keep the platform relevant to us. We've all uploaded tons of photos, updates, web pages, and other online items on Facebook. Today, we have listed out the ways you can do it on both mobile and desktops.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X