ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಟೈಮ್‌ಲೈನ್‌ ನೋಡುವುದು ಹೇಗೆ..?

By GizBot Bureau
|

ಗೂಗಲ್ ಮ್ಯಾಪ್ ನಿಜಕ್ಕು ಒಂದು ಬೆಸ್ಟ್ ಆಪ್. ನೀವು ಓಡಾಡಬೇಕು ಎಂದುಕೊಳ್ಳುವ ಸ್ಥಳವನ್ನೂ ಹುಡುಕಬಹುದು ಮತ್ತು ನೀವು ಓಡಾಡಿರುವ ಸ್ಥಳದ ಟ್ರ್ಯಾಕ್ ರೆಕಾರ್ಡ್ ಕೂಡ ಗೂಗಲ್ ಮ್ಯಾಪ್ ನಲ್ಲಿ ಲಭ್ಯವಿರುತ್ತದೆ.

2015 ರಲ್ಲಿ ನಿಮ್ಮ ಓಡಾಟದ ಹಿಸ್ಟರಿಯನ್ನು ಕೂಡ ಸೇವ್ ಮಾಡಿ ಇರುವ ವೈಶಿಷ್ಟ್ಯವು ಗೂಗಲ್ ಮ್ಯಾಪ್ ಗೆ ಸೇರಿಕೊಂಡಿತು ಅಷ್ಟೇ ಅಲ್ಲ ಗೂಗಲ್ ಮ್ಯಾಪ್ ನೀವು ನಿರ್ಧಿಷ್ಟ ಸ್ಥಳವೊಂದರಲ್ಲಿ ತೆಗೆದ ಎಲ್ಲಾ ಚಿತ್ರಗಳನ್ನು ಕೊಲ್ಯಾಟ್ ಮಾಡುವುದನ್ನೂ ಮಾಡುತ್ತದೆ. ಆ ಮೂಲಕ ನಿಮ್ಮ ಓಡಾಟದ ಎಲ್ಲಾ ಟ್ರ್ಯಾಕ್ ನ್ನು ಕೂಡ ಇಟ್ಟಿರುತ್ತದೆ.

ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಟೈಮ್‌ಲೈನ್‌ ನೋಡುವುದು ಹೇಗೆ..?

ನಿರ್ದಿಷ್ಟ ಸ್ಥಳದಲ್ಲಿ ನೀವು ತೆಗೆದುಕೊಂಡ ಎಲ್ಲಾ ಚಿತ್ರಗಳನ್ನು ನೋಡಲು ಬಯಸಿದರೆ ಅಥವಾ ನಿಮ್ಮ ಸಾಪ್ತಾಹಿಕ ಅಥವಾ ಮಾಸಿಕ ಚಟುವಟಿಕೆಯ ಒಂದು ಹೈಲೈಟ್ ಪಡೆಯಲು ನೀವು ಪ್ರಯತ್ನಿಸುತ್ತಿದ್ದರೆ ಖಂಡಿತವಾಗಿಯೂ ಗೂಗಲ್ ಮ್ಯಾಪ್ ನಿಮಗೆ ಸಹಾಯ ಮಾಡುತ್ತದೆ.

ಆದರೆ ಒಂದು ವೇಳೆ ಹೀಗೆ ಗೂಗಲ್ ಮ್ಯಾಪ್ ನೀವು ಓಡಾಡಿದ ಸ್ಥಳವನ್ನು ಟ್ರ್ಯಾಕ್ ಮಾಡುವುದು ನಿಮಗೆ ಇಷ್ಟವಿಲ್ಲದಿದ್ದರೆ ಅದನ್ನು ನಿಷ್ಕ್ರಿಯಗೊಳಿಸಿ ಕೂಡ ಇಡಬಹುದು. ಅದು ಹೇಗೆ ಎಂಬೆಲ್ಲಾ ವಿಚಾರವೂ ಈ ಲೇಖನದಲ್ಲಿದೆ. ಮುಂದೆ ಓದಿ.

• ಗೂಗಲ್ ಮ್ಯಾಪ್ ನಲ್ಲಿ ನೀವು ತಿರುಗಾಡಿದ ಸ್ಥಳವನ್ನು ನೋಡುವುದು ಹೇಗೆ?

• ಸ್ಥಳದ ಟ್ರ್ಯಾಕಿಂಗ್ ನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

• ಗೂಗಲ್ ಮ್ಯಾಪ್ ನಲ್ಲಿ ನೀವು ತಿರುಗಾಡಿದ ಸ್ಥಳವನ್ನು ನೋಡುವುದು ಹೇಗೆ?

ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಟೈಮ್‌ಲೈನ್‌ ನೋಡುವುದು ಹೇಗೆ..?

1. ಗೂಗಲ್ ಮ್ಯಾಪ್ ನ್ನು ಲಾಂಚ್ ಮಾಡಿ

2. ಹೆಚ್ಚಿನ ಬಟನ್ ಗಳನ್ನು ಟ್ಯಾಪ್ ಮಾಡಿ( ಮೂರು ಲಂಬವಾಗಿರುವ ಚುಕ್ಕಿಗಳು) ಅದು ಸ್ಕ್ರೀನಿನ ಎಡ ಮೂಲೆಯಲ್ಲಿ ಇರುತ್ತದೆ.

3. ನಿಮ್ಮ ಟೈಮ್ ಲೈನ್ ನ್ನು ಟ್ಯಾಪ್ ಮಾಡಿ

4. ದಿನವನ್ನು ವೀಕ್ಷಿಸಲು ಕ್ಯಾಲೆಂಡರ್ ಐಕಾನ್ ನ್ನು ಟ್ಯಾಪ್ ಮಾಡಿ.

5. ತಿಂಗಳನ್ನು ಸ್ವಿಚ್ ಮಾಡಲು ಎಡ ಅಥವಾ ಬಲಕ್ಕೆ ಸ್ವೈಪ್ ಮಾಡಿ

6. ನಿಮ್ಮ ಲೋಕೇಷನ್ ಹಿಸ್ಟರಿಯನ್ನು ವೀಕ್ಷಿಸಲು ಡೇಟ್ ನ್ನು ಟ್ಯಾಪ್ ಮಾಡಿ. ನೀವು ಓಡಾಡಿದ ಸ್ಥಳದ ಎಲ್ಲಾ ಮಾಹಿತಿ ಮತ್ತು ಒಟ್ಟು ಸಮಯ ,ಎಷ್ಟು ದೂರ ಕ್ರಮಿಸಿದ್ದೀರಿ ಎಂಬೆಲ್ಲ ಮಾಹಿತಿಯೂ ಬರಲಿದೆ.

• ಸ್ಥಳದ ಟ್ರ್ಯಾಕಿಂಗ್ ನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಒಂದು ವೇಳೆ ಹಿಂದಿನ ದಿನಗಳಲ್ಲಿ ನೀವು ಎಷ್ಟು ಸಮಯ ಟ್ರಾವೆಲ್ ಮಾಡಿದ್ದೀರಿ ಎಂಬುದನ್ನು ತಿಳಿಯಲು ಟೈಮ್ ಲೈನ್ ಅನ್ನುವುದು ಒಂದು ಪ್ರಯೋಜನಕಾರಿ ವೈಶಿಷ್ಟ್ಯವಾಗಿದೆ.ಆದರೆ ಇದು ಪ್ರತಿಕ್ಷಣವನ್ನೂ ಟ್ರ್ಯಾಕ್ ಮಾಡುತ್ತದೆ.ಕೆಲವರಿಗೆ ನಮ್ಮ ಓಡಾಟ ವಯಕ್ತಿಕ ಎಂದು ಅನ್ನಿಸುತ್ತಿರಬಹುದು. ಅಂತಹ ಸಂದರ್ಬದಲ್ಲಿ ನೀವು ಗೂಗಲ್ ಮ್ಯಾಪ್ ನಲ್ಲಿ ಲೊಕೇಷನ್ ಟ್ರ್ಯಾಕಿಂಗ್ ನ್ನು ಆಫ್ ಮಾಡಿ ಇಡಬಹುದು. ಅದು ಹೇಗೆ ಎಂಬುದನ್ನು ಕೆಳಗಿನ ಹಂತಗಳಲ್ಲಿ ವಿವರಿಸಲಾಗಿದೆ.

1. ಹೆಚ್ಚಿನ ಬಟನ್ ಗಳನ್ನು ಟ್ಯಾಪ್ ಮಾಡಿ( ಮೂರು ಲಂಬವಾಗಿರುವ ಚುಕ್ಕಿಗಳು) ಅದು ಸ್ಕ್ರೀನಿನ ಎಡ ಮೂಲೆಯಲ್ಲಿ ಇರುತ್ತದೆ.

2. ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಿ

3. ಪರ್ಸನಲ್ ಕಟೆಂಟ್ ನ್ನು ಟ್ಯಾಪ್ ಮಾಡಿ

4. ಲೋಕೇಷನ್ ಸೆಟ್ಟಿಂಗ್ಸ್ ನಲ್ಲಿರುವ ಲೋಕೇಷನ್ ಹಿಸ್ಟರಿ ಆನ್ ಆಗಿರುವುದನ್ನು ಟ್ಯಾಪ್ ಮಾಡಿ.

5. ನೀವು ಸ್ಥಳ ಟ್ರ್ಯಾಕಿಂಗ್ ಅನ್ನು ನಿಷ್ಕ್ರಿಯಗೊಳಿಸಲು ಬಯಸುವ ಪ್ರತಿಯೊಂದು ಸಾಧನಕ್ಕೂ ಮುಂದಿನ ಸ್ವಿಚ್ ಅನ್ನು ಟ್ಯಾಪ್ ಮಾಡಿ.

ನಿಮ್ಮ ಅಕೌಂಟನ್ನು ಸಂಪೂರ್ಣವಾಗಿ ಟ್ರ್ಯಾಕ್ ಆಗದಂತೆ ಕೂಡ ಸೆಟ್ ಮಾಡಬಹುದು. ಅದನ್ನು ಮಾಡಲು ಲೋಕೇಷನ್ ಹಿಸ್ಟರಿಯನ್ನು ಟಾಗಲ್ ಮಾಡಿ ಆಫ್ ಮಾಡಿ ಮತ್ತು ಡೈಲಾಗ್ ಬಾಕ್ಸ್ ಗಳಲ್ಲಿ ಓಕೆ ಒತ್ತಿ.

ಈ ವಿವರಗಳು ನೀವು ಟ್ರಾಫಿಕ್ ನಲ್ಲಿ ಎಷ್ಟು ಸಮಯ ಕಳೆದಿದ್ದೀರಿ ಮತ್ತು ಎಷ್ಟು ಸಮಯ ಟ್ರಾವೆಲಿಂಗ್ ಗಾಗಿ ವ್ಯಯಿಸಿದ್ದೀರಿ ಎಂಬ ಸಂಪೂರ್ಣ ವಿವರವನ್ನು ನೀಡುತ್ತದೆ.ಈ ಮಾಹಿತಿಯು ಗೂಗಲ್ ಮ್ಯಾಪ್ ನಿಂದ ಲಭ್ಯವಾಗುವುದು ನಿಮಗೆ ಇಷ್ಟವಿದೆಯೇ ಅಥವಾ ಇಲ್ಲವೇ? ನಿಮ್ಮ ವಯಕ್ತಿಕ ವಿಚಾರ ಎಂದು ಅನ್ನಿಸುತ್ತದೆಯೇ? ಕಮೆಂಟ್ ಮಾಡಿ ತಿಳಿಸಿ.

Best Mobiles in India

English summary
How to view your location history in Google Maps. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X