ಟ್ವಿಟರ್ ಡಿಎಂಗಳಲ್ಲಿ ವಾಯ್ಸ್‌ ಮೆಸೇಜ್‌ ಅನ್ನು ಕಳುಹಿಸುವುದು ಹೇಗೆ?

|

ಜನಪ್ರಿಯ ಸೊಶೀಯಲ್‌ ಮಿಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ವಿಟರ್‌ ಕೂಡ ಒಂದು. ಜಾಗತಿಕವಾಗಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಟ್ವಿಟರ್‌ ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ.ಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಇನ್ನು ಟ್ವಿಟರ್‌ ಅಪ್ಲಿಕೇಶನ್‌ ಈ ವಾರದ ಆರಂಭದಲ್ಲಿ ಡೈರೆಕ್ಟ್‌ ಮೆಸೇಜ್‌ಗಳಲ್ಲಿ ವಾಯ್ಸ್‌ ಮೆಸೇಜ್‌ಗಳನ್ನು ಪರೀಕ್ಷಿಸಲು ಪ್ರಾರಂಭಿಸುವುದಾಗಿ ಘೋಷಿಸಿತು. ಭಾರತ, ಬ್ರೆಜಿಲ್ ಮತ್ತು ಜಪಾನ್ ಸೇರಿದಂತೆ ಜಾಗತಿಕವಾಗಿ ಮೂರು ದೇಶಗಳಲ್ಲಿ ಈ ಫೀಚರ್ಸ್‌ ಅನ್ನು ಪರೀಕ್ಷಿಸಲಾಗುತ್ತಿದೆ.

ಟ್ವಿಟರ್‌

ಹೌದು, ಟ್ವಿಟರ್‌ DMಗಳಲ್ಲಿ ವಾಯ್ಸ್‌ ಮೆಸೇಜ್‌ ಕಳುಹಿಸುವ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದೆ. ಈ ಫೀಚರ್ಸ್‌ ಅನ್ನು ಪರೀಕ್ಷಿಸಲು ಟ್ವಿಟರ್ ನಿರ್ಧರಿಸಿದ ಮೂರನೇ ದೇಶ ಭಾರತವಾಗಿದೆ. ಇನ್ನು ಈ ಫೀಚರ್ಸ್‌ ಸಾಕಷ್ಟು ಸರಳವಾಗಿದೆ. ಏಕೆಂದರೆ ಇದು ಮೂಲತಃ ಟ್ವಿಟರ್‌ನಲ್ಲಿ ಡಿಎಂಗಳಲ್ಲಿ ವಾಯ್ಸ್‌ ಮೆಸೇಜ್‌ಗಳನ್ನು ಕಳುಹಿಸುತ್ತದೆ. ಫೀಡ್‌ನ ಮೇಲೆ ಹೆಚ್ಚಾಗಿ ಕೇಂದ್ರೀಕೃತವಾಗಿರುವ ಪ್ಲ್ಯಾಟ್‌ಫಾರ್ಮ್‌ಗೆ ಇದು ಇನ್ನೂ ಪ್ರಮುಖವಾಗಿದೆ. ಸದ್ಯ ಈ ಫೀಚರ್ಸ್‌ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಇನ್ನುಳಿದಂತೆ ಟ್ವೀಟರ್‌ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ವಿಟರ್ ಡಿಎಂಗಳಲ್ಲಿ ವಾಯ್ಸ್‌ ಮೆಸೇಜ್‌ ಅನ್ನು ಕಳುಹಿಸುವುದು ಹೇಗೆ?

ಟ್ವಿಟರ್ ಡಿಎಂಗಳಲ್ಲಿ ವಾಯ್ಸ್‌ ಮೆಸೇಜ್‌ ಅನ್ನು ಕಳುಹಿಸುವುದು ಹೇಗೆ?

ಟ್ವಿಟರ್ ತನ್ನ ವಾಯ್ಸ್‌ ಮೆಸೇಜ್‌ ಫೀಚರ್ಸ್‌ ಅನ್ನು ಭಾರತದಲ್ಲಿ ಪ್ರಾಯೋಗಿಕ ಹಂತದಲ್ಲಿ ಪರೀಕ್ಷೆ ಮಾಡುತ್ತಿದೆ. ಇದನ್ನು ಹಂತ ಹಂತವಾಗಿ ಭಾರತದ ಬಳಕೆದಾರರಿಗೆ ತಲುಪಿಸುತ್ತದೆ. ಹಾಗಾದ್ರೆ ಟ್ವಿಟರ್ ಡಿಎಂಗಳಲ್ಲಿ ನೀವು ವಾಯ್ಸ್‌ ಮೆಸೇಜ್‌ ಅನ್ನು ಕಳುಹಿಸುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಹಂತ:1 ಐಒಎಸ್ ಅಥವಾ ಆಂಡ್ರಾಯ್ಡ್‌ನಲ್ಲಿ ಟ್ವಿಟರ್ ಅಪ್ಲಿಕೇಶನ್ ತೆರೆಯಿರಿ.

ಹಂತ:2 ಡಿಎಂಗಳನ್ನು ತೆರೆಯಲು ಕೆಳಗಿನ ಹೊದಿಕೆ ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ:3 ನಿಮ್ಮ ಧ್ವನಿ ಸಂದೇಶವನ್ನು ರೆಕಾರ್ಡ್ ಮಾಡಲು ಪಠ್ಯ ಪಟ್ಟಿಯ ಪಕ್ಕದಲ್ಲಿರುವ ಐಕಾನ್ ಆಯ್ಕೆಮಾಡಿ.

ಹಂತ:4 ನೀವು ಮುಗಿದ ನಂತರ ಸೆಂಡ್‌ ಬಟನ್ ಒತ್ತಿರಿ.

ಆಡಿಯೊ

ಇನ್ನು ನಿಮ್ಮ ಆಡಿಯೊವನ್ನು ಕಳುಹಿಸುವ ಮೊದಲು ನೀವು ಅದನ್ನು ಪ್ಲೇ ಮಾಡಬಹುದು ಮತ್ತು ಕೇಳಬಹುದು. ಟ್ವಿಟ್ಟರ್‌ನಲ್ಲಿ 140 ಸೆಕೆಂಡ್-ಉದ್ದದ ಆಡಿಯೊ ಸಂದೇಶಗಳನ್ನು ಕಳುಹಿಸಲು ಟ್ವಿಟರ್ ನಿಮಗೆ ಅನುಮತಿಸುತ್ತದೆ. ಡಿಎಂಗಳಲ್ಲಿನ ಧ್ವನಿ ಸಂದೇಶಗಳನ್ನು ಟ್ವಿಟರ್‌ನ ಆಂಡ್ರಾಯ್ಡ್ ಅಥವಾ ಐಒಎಸ್ ಅಪ್ಲಿಕೇಶನ್ ಮೂಲಕ ಮಾತ್ರ ಕಳುಹಿಸಬಹುದು ಆದರೆ ಅದನ್ನು ಯಾವುದೇ ಡಿವೈಸ್‌ನಿಂದ ಆಲಿಸಬಹುದು. ಟ್ವಿಟರ್ ಈ ಫೀಚರ್ಸ್‌ ಅನ್ನು ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ಯಾವಾಗ ಲಭ್ಯವಾಗಿಸುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
how to send voice messages in Twitter DMs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X