Instagram Reelsನಿಂದ ಹಣ ಗಳಿಸುವುದು ಹೇಗೆ ಗೊತ್ತಾ?

By Gizbot Bureau
|

Instagram ಸಾಮಾಜಿಕ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಇದು ಪ್ರಾರಂಭವಾದ ನಂತರ ಅಪಾರ ಜನಪ್ರಿಯತೆಯನ್ನು ಕಂಡಿದೆ. ಫೇಸ್‌ಬುಕ್ ಒಡೆತನದ ಫೋಟೋ ಹಂಚಿಕೆ ಆಪ್ ಈಗ ಯಾವುದೇ ಬಳಕೆದಾರರಿಗೆ ಯಾವುದೇ ಬಿಸಿನೆಸ್ ಪ್ರಮೊಟ್ ಅಥವಾ ಅವರ ಟ್ಯಾಲೆಂಟ್ ತೊರಿಸುವ ಮೊದಲ ಆಯ್ಕೆಯಾಗಿದೆ. ಅಪ್ಲಿಕೇಶನ್ ಪ್ರಾರಂಭವಾದಾಗಿನಿಂದ ಸಾಕಷ್ಟು ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇನ್‌ಸ್ಟಾಗ್ರಾಮ್ ರೀಲ್ಸ್ ಅವುಗಳಲ್ಲಿ ಒಂದು ಮತ್ತು ಇದನ್ನು ಟಿಕ್‌ಟಾಕ್‌ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆ ಮಾಡಲಾಗಿದೆ.

Instagram Reelsನಿಂದ ಹಣ ಗಳಿಸುವುದು ಹೇಗೆ ಗೊತ್ತಾ?

ಭಾರತದಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸಿದ ನಂತರ, ಇನ್‌ಸ್ಟಾಗ್ರಾಮ್ ರೀಲ್ಸ್ ಬಳಕೆದಾರರಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ. ಈಗಿನಂತೆ, ಇನ್‌ಸ್ಟಾಗ್ರಾಮ್ ನಿಮ್ಮ ರೀಲ್‌ಗಳಿಗೆ ನೇರವಾಗಿ ನಿಮಗೆ ಪೇ ಮಾಡುವುದಿಲ್ಲ ಆದರೆ ರೀಲ್ಸ್ ಮೂಲಕ ಹಣ ಸಂಪಾದಿಸಬಹುದು. ಭಾರತದಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಹಣ ಗಳಿಸುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಇನ್‌ಸ್ಟಾಗ್ರಾಮ್ ರೀಲ್ಸ್ ಎಂದರೇನು?

ಕಳೆದ ವರ್ಷ ಇನ್‌ಸ್ಟಾಗ್ರಾಮ್ ರೀಲ್ಸ್ ಅನ್ನು ಪ್ರಾರಂಭಿಸಲಾಯಿತು, ಆ ಸಮಯದಲ್ಲಿ ಒಬ್ಬರು ಕೇವಲ 15 ಸೆಕೆಂಡುಗಳ ವೀಡಿಯೊವನ್ನು ರೆಕಾರ್ಡ್ ಮಾಡಬಹುದು. ನಂತರ ಈ ಪ್ಲಾಟ್‌ಫಾರ್ಮ್‌ ಸಮಯದ ಮಿತಿಯನ್ನು 30 ಸೆಕೆಂಡುಗಳಿಗೆ ಹೆಚ್ಚಿಸಿತು ಮತ್ತು ಈ ವರ್ಷ ಅದು 60 ಸೆಕೆಂಡುಗಳವರೆಗೆ ಸಮಯದ ಮಿತಿಯನ್ನು ಹೆಚ್ಚಿಸಿತು. ಸಣ್ಣ ವೀಡಿಯೊಗಳನ್ನು ರಚಿಸಲು ಇನ್‌ಸ್ಟಾಗ್ರಾಮ್ ರೀಲ್ಸ್ ನಿಮಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ವೀಡಿಯೊಗಳಿಗೆ ನೀವು ಎಡಿಟಿಂಗ್ ಟೂಲ್ಸಗಳನ್ನ ಸಹ ಬಳಸಬಹುದು.

ಹಂತ 1: ನಿಮ್ಮ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಕ್ಯಾಮರಾ ತೆರೆಯಲು ಬಲಕ್ಕೆ ಸ್ವೈಪ್ ಮಾಡಿ ಮತ್ತು ಈಗ ನೀವು ಸ್ಟೋರಿ, ರೀಲ್ಸ್ ಮತ್ತು ಲೈವ್ ಆಯ್ಕೆಯನ್ನು ನೋಡಬಹುದು. ಈಗ, ರೀಲ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 2: ನೀವು 60 ಸೆಕೆಂಡುಗಳವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು ಅಥವಾ ನಿಮ್ಮ ಗ್ಯಾಲರಿಯಿಂದ ಯಾವುದೇ ವೀಡಿಯೊವನ್ನು ಅಪ್‌ಲೋಡ್ ಮಾಡಬಹುದು.

ಹಂತ 3: ಆಡಿಯೋ, ಸ್ಪಿಡ್, ಇಫೆಕ್ಟ ಮತ್ತು ಮುಂತಾದ ಆಯ್ಕೆಗಳಿವೆ. ನೀವು ಯಾವುದೇ ಮ್ಯುಸಿಕ್ ಆಯ್ಕೆ ಮಾಡಬಹುದು ಮತ್ತು ನಂತರ ವೀಡಿಯೊವನ್ನು ರಚಿಸಬಹುದು. ಇಲ್ಲದಿದ್ದರೆ ನೀವು ನಂತರ ಮ್ಯುಸಿಕ್ ಸೇರಿಸಬಹುದು.

ಹಂತ 4: ಈಗ ನಿಮ್ಮ ವೀಡಿಯೋ ಚೆಕ್ ಮಾಡಿ ಪ್ರಿವಿವ ಆಪಶನ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ರೀಲ್‌ಗಳನ್ನು ಅಪ್‌ಲೋಡ್ ಮಾಡಲು ಮುಂದಿನದನ್ನು ಕ್ಲಿಕ್ ಮಾಡಿ. ನೀವು ಈಗ ಕ್ಯಾಪಶನಗಳನ್ನ ಸೇರಿಸಬಹುದು ಮತ್ತು ಜನರನ್ನು ಟ್ಯಾಗ್ ಮಾಡಬಹುದು. ನೀವು ರೀಲ್‌ಗಳನ್ನು ಪೋಸ್ಟ್ ಮಾಡಲು ಬಯಸದಿದ್ದರೆ, ಅದನ್ನು ಸಹ ಸೇವ್ ಮಾಡಬಹುದು.

ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಎಲ್ಲಿ ನೋಡಬೇಕು?

ರೀಲ್ಸ್ ವೀಡಿಯೋಗಳನ್ನು ನೋಡಲು, ನೀವು ಸರ್ಚ್ ಬಟನ್‌ನ ಮುಂದಿನ ಸ್ಥಳಕ್ಕೆ ಹೋಗಬೇಕು. ಹೆಚ್ಚಿನ ರೀಲ್ಸ್ ವೀಡಿಯೊಗಳನ್ನು ವೀಕ್ಷಿಸಲು ಈಗ ಮೇಲಕ್ಕೆ ಸ್ವೈಪ್ ಮಾಡಿ. ನೀವು ಥರ್ಡ್-ಪಾರ್ಟಿ ಆಪ್ ಮೂಲಕ ರೀಲ್ಸ್ ವೀಡಿಯೊಗಳನ್ನು ಫೋನ್‌ನ ಲೊಕಲ್ ಸೊರೇಜ್ ನಲ್ಲಿ ಡೌನ್‌ಲೋಡ್ ಮಾಡಬಹುದು.

ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಹಣ ಗಳಿಸುವುದು ಹೇಗೆ?

ಮೇಲೆ ಹೇಳಿದಂತೆ, ಇನ್‌ಸ್ಟಾಗ್ರಾಮ್ ನಿಮ್ಮ ರೀಲ್‌ಗೆ ಈಗಿನಂತೆ ಪೇ ಮಾಡುವುದಿಲ್ಲ. ಪೇಡ್ ಪ್ರಮೊಶನ್ ಆದಾಗ ಮಾತ್ರ ನೀವು ಗಳಿಸಬಹುದು. ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಹಣ ಗಳಿಸುವುದು ಹೇಗೆ ಎಂದು ತಿಳಿಯಲು ಈ ಹಂತಗಳನ್ನು ಅನುಸರಿಸಿ.

ಹಂತ 1: ನಿಮ್ಮ ರೀಲ್‌ಗಳಿಗಾಗಿ ಯಾವುದೇ ಪ್ರಮೊಶನ್ ಹಾಡುಗಳನ್ನ ಆಯ್ಕೆ ಮಾಡಿ.

ಹಂತ 2: ಯಾವುದೇ ಬ್ರಾಂಡ್‌ನ ಪ್ರೊಡಕ್ಟಗಳ ರೀಲ್‌ಗಳನ್ನು ರಚಿಸಿ ಅದು ಸೌಂದರ್ಯದ ಪ್ರೊಡಕ್ಟ ಅಥವಾ ಯಾವುದಾದರೂ ಆಗಿರಬಹುದು.

ಹಂತ 3: ನೀವು ಆಹಾರ ಪ್ರಿಯರಾಗಿದ್ದರೆ, ನಿಮ್ಮ ನೆಚ್ಚಿನ ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡಬಹುದು ಮತ್ತು ರೆಸ್ಟೋರೆಂಟ್‌ನಿಂದ ನೀವು ಹಣವನ್ನು ಪಡೆಯುವ ವೀಡಿಯೊವನ್ನು ಮಾಡಬಹುದು.

ಹಂತ 4: ಜೊತೆಗೆ, ಯಾವುದೇ ಪ್ರೊಡಕ್ಟಗಳನ್ನ ರಿವೀವ್ ಮಾಡುವುದರಿಂದ ಹಣ ಗಳಿಸಲು ಸಹ ಸಹಾಯ ಮಾಡಬಹುದು.

ಭವಿಷ್ಯದಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳಿಗೆ ಪಾವತಿಸುವುದೇ?

ಹೌದು, ನಮಗೆ ಈಗಾಗಲೇ ತಿಳಿದಿರುವ ಹಾಗೆ ಇನ್‌ಸ್ಟಾಗ್ರಾಮ್ '' ಬೋನಸ್ '' ಹೆಸರಿನ ಫೀಚರ್‌ನಲ್ಲಿ ಕೆಲಸ ಮಾಡುತ್ತಿದೆ ಅದು ಬಳಕೆದಾರರಿಗೆ ಹೊಸ ರೀಲ್‌ಗಳನ್ನು ಹಂಚಿಕೊಳ್ಳುವಾಗ ಹಣ ಗಳಿಸಲು ಸಹಾಯ ಮಾಡುತ್ತದೆ. ಆದಾಗ್ಯೂ,ಇನ್‌ಸ್ಟಾಗ್ರಾಮ್ ಇದನ್ನು ಇನ್ನೂ ಕನಫರಮ್ ಮಾಡಿಲ್ಲ. ನಾವು ಸುರಕ್ಷಿತವಾಗಿ ಊಹಿಸಬಹುದಾಗಿದೆ, ಮತ್ತು ಸ್ನಾಪ್‌ಚಾಟ್‌ನ ಸ್ಪಾಟ್‌ಲೈಟ್‌ನಂತಹ ಕೆಲವು ಕ್ರ್ಐಟಿರಿಯಾ ಇರಬಹುದು. ತಿಳಿದಿಲ್ಲದವರಿಗೆ, ಅಪ್‌ಲೋಡ್ ಮಾಡಿದ ವೀಡಿಯೊಗಳು ಓರಿಜಿನಲಾಗಿದ್ದಾಗ ಮತ್ತು ಯಾರಿಂದಲೂ ಕಾಪಿ ಮಾಡದಿದ್ದಾಗ ಮತ್ತು ಒಂದು ನಿರ್ದಿಷ್ಟ ಹಂತವನ್ನು ತಲುಪಿದಾಗ ಸ್ನ್ಯಾಪ್‌ಚಾಟ್‌ನ ಸ್ಪಾಟ್‌ಲೈಟ್‌ನಿಂದ ಹಣವನ್ನು ಗಳಿಸಬಹುದು.

Best Mobiles in India

Read more about:
English summary
Instagram is one of the social media platforms which have witnessed immense popularity after its launch. As of now, Instagram doesn't pay you directly for your Reels but you can still earn money through Reels. Here's how to earn money from Instagram Reels in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X