ಆಂಡ್ರಾಯ್ಡ್ ಓರಿಯೋವನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಬಳಸುವುದು ಹೇಗೆ ಗೊತ್ತಾ?

|

ನಿಮ್ಮ ಕಂಪ್ಯೂಟರ್ ಅನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ರೀತಿಯಲ್ಲಿ ಕಾರ್ಯನಿರ್ವಹಿಸುವಂತಿದ್ದರೆ ಹೇಗಿರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ಹಾಗಾದರೆ, ಇನ್ಮುಂದೆ ಚಿಂತೆ ಬಿಡಿ ನಿಮ್ಮ ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ 8.0 ( ಆಂಡ್ರಾಯ್ಡ್ ಓರಿಯೋ) ಅನ್ನು ಇನ್‌ಸ್ಟಾಲ್ ಮಾಡಿಕೊಂಡು ಆಂಡ್ರಾಯ್ಡ್ ಫೋನಿನಂತೆ ಬಳಸಬಹುದಾದ ಯೋಜನೆ ಸಿದ್ದವಾಗಿದೆ.

ಹೌದು, ಗೂಗಲ್ ಆಂಡ್ರಾಯ್ಡ್ ಓರಿಯೋವನ್ನು ಕಂಪ್ಯೂಟರ್‌ನಲ್ಲಿ ಬಳಸುವಂತೆ ತೆರೆದ ಯೋಜನೆಯೊಂದನ್ನು ಖಾಸಾಗಿ ಡೆವಲಪರ್‌ಗಳು ರೂಪಿಸಿದ್ದಾರೆ. ಬಹುತೇಕ ಎಲ್ಲಾ ಕಂಪ್ಯೂಟರ್‌ ಗಳಲ್ಲಿಯೂ ಓರಿಯೋ ಆಪರೇಟಿಂಗ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳಬಹುದಾದ ಆಂಡ್ರಾಯ್ಡ್-ಎಕ್ಸ್ 86 ಎಂಬ ಪ್ರಾಜೆಕ್ಟ್ ಅಭಿವೃದ್ದಿಯಾಗಿರುವುದು ಬಳಕೆದಾರರಿಗೆ ಖುಷಿ ತಂದಿದೆ.

ಆಂಡ್ರಾಯ್ಡ್ ಓರಿಯೋವನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಬಳಸುವುದು ಹೇಗೆ ಗೊತ್ತಾ?

ಆಂಡ್ರಾಯ್ಡ್-ಎಕ್ಸ್ 86 ಡೆಸ್ಕ್‌ಟಾಪ್ ಪ್ರಾಜೆಕ್ಟ್ ನಿಮ್ಮ ಕಂಪ್ಯೂಟರ್ ಅನ್ನು ಸಂಪೂರ್ಣವಾಗಿ ಆಂಡ್ರಾಯ್ಡ್ ರೀತಿಯಲ್ಲಿಯೇ ಕಾರ್ಯನಿರ್ವಹಿಸುವಂತೆ ಮಾಡಲಿರುವುದು ಇರ ಪ್ರಮುಖ ವಿಶೇಷತೆಯಾಗಿದ್ದು,ಹಾಗಾದರೆ, ಏನಿದು ಆಂಡ್ರಾಯ್ಡ್-ಎಕ್ಸ್ 86 ಪ್ರಾಜೆಕ್ಟ್? ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ 8.0 ಒಎಸ್ ಎನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಿರಿ.

ಆಂಡ್ರಾಯ್ಡ್-ಎಕ್ಸ್ 86 ಪ್ರಾಜೆಕ್ಟ್?

ಆಂಡ್ರಾಯ್ಡ್-ಎಕ್ಸ್ 86 ಪ್ರಾಜೆಕ್ಟ್?

ಎಎಮ್‌ಡಿ ಮತ್ತು ಇಂಟೆಲ್ ಪ್ರೊಸೆಸರ್ ಅನ್ನು ಹೊಂದಿರುವ ಯಾವುದೇ ಕಂಪ್ಯೂಟರ್‌ಗಳಲ್ಲಿ ಆಂಡ್ರಾಯ್ಡ್ ಓರಿಯೋ ಅನ್ನು ಬಳಸಲು ಸಾಧ್ಯವಾಗುವಂತೆ ರೂಪಿಸಲಾಗಿರುವ ಒಂದು ಪ್ರಾಜೆಕ್ಟ್ ಅನ್ನು ಆಂಡ್ರಾಯ್ಡ್-ಎಕ್ಸ್ 86 ಪ್ರಾಜೆಕ್ಟ್ ಎಂದು ಕರೆಯಲಾಗಿದೆ. ಈ ಪ್ರಾಜೆಕ್ಟ್ ಸಹಾಯದಿಂದ ನಿಮ್ಮ ಕಂಪ್ಯೂಟರ್ ಅನ್ನು ಆಂಡ್ರಾಯ್ಡ್ ರೀತಿ ಕಾರ್ಯನಿರ್ವಹಿಸುವಂತೆ ಮಾಡಬಹುದಾಗಿದೆ.

ಆಂಡ್ರಾಯ್ಡ್-ಎಕ್ಸ್ 86 ಇನ್‌ಸ್ಟಾಲ್ ಹೇಗೆ?

ಆಂಡ್ರಾಯ್ಡ್-ಎಕ್ಸ್ 86 ಇನ್‌ಸ್ಟಾಲ್ ಹೇಗೆ?

http://www.android-x86.org ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ನೀವು ನಿಮ್ಮ ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಓರಿಯೋವನ್ನು ಇನ್‌ಸ್ಟಾಲ್ ಮಾಡಬಹುದಾಗಿದೆ. http://www.android-x86.org ತೆರದ ತಕ್ಷಣವೇ https://osdn.net/rel/android-x86/Release%208.1 ಎಂಬ ಲಿಂಕ್ ನಿಮಗೆ ಕಾಣಿಸುತ್ತದೆ. ಈ ಲಿಂಕ್ ಕ್ಲಿಕ್ ಮಾಡಿ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಬಹುದಾಗಿದೆ.

ಆಂಡ್ರಾಯ್ಡ್-ಎಕ್ಸ್ 86 ಏಕೆ ಬೆಸ್ಟ್?

ಆಂಡ್ರಾಯ್ಡ್-ಎಕ್ಸ್ 86 ಏಕೆ ಬೆಸ್ಟ್?

ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಬಳಸುವುದು ಒಂದು ರೀತಿಯಲ್ಲಿ ಕ್ರೇಜ್ ಹುಟ್ಟಿಸುವ ಸಂಗತಿಯಾಗಿದೆ. ಆದರೆ, ಇದಕ್ಕಿಮತಲೂ ಹೆಚ್ಚಿನದಾಗಿ ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಆಪ್‌ಗಳನ್ನು ಉಪಯೋಗಿಸುವ ಅವಕಾಶ ನಿಮಗೆ ಸಿಗಲಿದೆ. ಆಂಡ್ರಾಯ್ಡ್‌ನಲ್ಲಿರುವ ಹೆಚ್ಚಿನ ಫೀಚರ್ಸ್‌ಗಳು ನಿಮ್ಮ ಕಂಪ್ಯೂಟರ್ ಬಳಕೆಯನ್ನು ರೋಮಾಂಚನಗೊಳಿಸಲಿದೆ.

ಆಂಡ್ರಾಯ್ಡ್-ಎಕ್ಸ್ 86 ಅನ್ಇನ್‌ಸ್ಟಾಲ್ ಹೇಗೆ?

ಆಂಡ್ರಾಯ್ಡ್-ಎಕ್ಸ್ 86 ಅನ್ಇನ್‌ಸ್ಟಾಲ್ ಹೇಗೆ?

ನಿಮ್ಮ ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಓರಿಯೋವನ್ನು ಇನ್‌ಸ್ಟಾಲ್ ಮಾಡಿದ ನಂತರ, ನಿಮಗೆ ಈ ಫೀಚರ್ ಬೇಡ ಎಂದಾದಲ್ಲಿ ಅದನ್ನು ಅನ್ಇನ್‌ಸ್ಟಾಲ್ ಮಾಡಬಹುದಾಗಿದೆ. http://www.android-x86.org ವೆಬ್‌ಸೈಟ್‌ನಲ್ಲಿಯೇ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿರುವುದು ನಿಮಗೆ ಸಹಾಯಕವಾಗಲಿದೆ.

ಸಂಪೂರ್ಣ ಉಚಿತ!

ಸಂಪೂರ್ಣ ಉಚಿತ!

ಆಂಡ್ರಾಯ್ಡ್-ಎಕ್ಸ್ 86 ಸಾಫ್ಟ್‌ವೇರ್ ಅನ್ನು ಪಡೆಯಬಹುದಾಗಿದೆ. ಓಪನ್ ಸೋರ್ಸ್ ತಂತ್ರಜ್ಞಾನವಾದರೂ ಯಾವುದೇ ಜಾಹಿರಾತು ಇಲ್ಲದೆ ಕಾರ್ಯನಿರ್ವಹಿಸುತ್ತದೆ. ಬಳಕೆದಾರರಿಗೆ ಈ ಯೋಜನೆ ಇಷ್ಟವಾದರೆ ಮಾತ್ರ 9 ಡಾಲರ್‌ಗಳನ್ನು ನೀಡಲು ಈ ಪ್ರಾಜೆಕ್ಟ್ ನಿಮ್ಮನ್ನು ಕೇಳಿಕೊಂಡಿದೆ. ಆದರೆ, ಅದು ನಿಮ್ಮಿಷ್ಟ!!

Best Mobiles in India

English summary
The first release candidate is now available for download. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X