ಐಆರ್‌ಸಿಟಿಸಿ ವೆಬ್‌ಸೈಟ್ ಹ್ಯಾಕ್: ನೀವೇನು ಮಾಡಬೇಕು?
ಐಆರ್‌ಸಿಟಿಸಿ ವೆಬ್‌ಸೈಟ್ ಹ್ಯಾಕ್ ಆಗಿದೆ ಎಂಬ ಸುದ್ದಿ ಈಗ ಹಬ್ಬುತ್ತಿದ್ದು ಸಂಸ್ಥೆಯು ಈ ಮಾತನ್ನು ಸ್ವೀಕರಿಸಲು ಸಿದ್ಧವಿಲ್ಲ ಅಂತೆಯೇ ಇದೊಂದು ಸುಳ್ಳು ಸುದ್ದಿ ಎಂಬುದಾಗಿ ಹೇಳುತ್ತಿದೆ. ಇದೆಲ್ಲಿಯಾದರೂ ಹೌದಾದಲ್ಲಿ ಮಿಲಿಯಗಟ್ಟಲೆ ಬಳಕೆದಾರರ ಮಾಹಿತಿಗಳು ಬಯಲಾಗಲಿವೆ ಅಂತೆಯೇ ಸೈಬರ್ ಮಾರುಕಟ್ಟೆಗಳಲ್ಲಿ ಈ ಮಾಹಿತಿಗಳು ಮಾರಾಟವಾಗುತ್ತಿದೆ ಎಂಬ ಸುದ್ದಿ ಕೂಡ ಹಬ್ಬಿದೆ.
ನೀವು ಎಲ್ಲಿಯಾದರೂ ಈ ಸೈಟ್ ಅನ್ನು ಬಳಸುತ್ತಿರುವವರು ಹೌದಾದಲ್ಲಿ ಈ ಕೆಳಗಿನ ಭದ್ರತೆಗಳನ್ನು ಮಾಡುವ ಮೂಲಕ ಹ್ಯಾಕಿಂಗ್‌ನಿಂದ ತಪ್ಪಿಸಿಕೊಳ್ಳಬಹುದಾಗಿದೆ. ಏನು ಆ ಕ್ರಮಗಳು ಎಂಬುದನ್ನು ಈ ಕೆಳಗೆ ನಾವು ನೀಡುತ್ತಿದ್ದೇವೆ.

#1
ವೆಬ್‌ಸೈಟ್‌ಗೆ ಹೋಗಿ ಲಾಗಿನ್ ಮಾಡಿ. ನೀವು ಒಮ್ಮೆ ಪ್ರವೇಶಗೊಂಡ ನಂತರ, ನಿಮ್ಮ ಪ್ರೊಫೈಲ್ ಸೆಟ್ಟಿಂಗ್‌ಗೆ ಹೋಗುವ ಮೂಲಕ ಪಾಸ್‌ವರ್ಡ್ ಬದಲಾಯಿಸಿ.

#2
ಯಾತ್ರಾ ಅಥವಾ ಮೇಕ್ ಮೈ ಟ್ರಿಪ್‌ನಂತಹ ಅಪ್ಲಿಕೇಶನ್‌ಗಳೊಂದಿಗೆ ನಿಮ್ಮ ಐಆರ್‌ಸಿಟಿಸಿ ಲಾಗಿನ್ ವಿವರಗಳನ್ನು ನೀವು ಸಂಪರ್ಕಪಡಿಸಿದ್ದೀರಿ ಎಂದಾದಲ್ಲಿ ಅದರ ಸಂಪರ್ಕ ಕಡಿತಗೊಳಿಸಿ ಮತ್ತು ಬೇಕಾದಲ್ಲಿ ಹೊಸ ಪಾಸ್‌ವರ್ಡ್ ಬಳಸಿ ಮರುಸಂಪರ್ಕಪಡಿಸಿ.

#3
ನಿಮ್ಮ ಐಆರ್‌ಸಿಟಿ ಪ್ರಿಪೈಡ್ ಕಾರ್ಡ್‌ನಲ್ಲಿ ನೀವು ಹಣವನ್ನು ಹೊಂದಿದ್ದೀರಿ ಎಂದಾದಲ್ಲಿ, ಅದನ್ನು ಮರುಹೊಂದಿಸಿ.

#4
ಯಾವುದೇ ವೆಬ್‌ಸೈಟ್‌ನಲ್ಲಿ ಆದಷ್ಟು ಕಡಿಮೆ ಮಾಹಿತಿಗಳನ್ನು ನೀಡುವುದು ಉತ್ತಮ ಉಪಾಯವಾಗಿದೆ.

#5
ಭಾರತದಲ್ಲಿ ಹೆಚ್ಚಿನ ಸಮಯಗಳಲ್ಲಿ ಇ ಸೈಟ್‌ಗಳಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸುವುದಕ್ಕೆ ಹೆಚ್ಚುವರಿ ಭದ್ರತಾ ಹಂತದ ಅಗತ್ಯವಿದೆ. ಐಆರ್‌ಸಿಟಿಯಂತಹ ಸೈಟ್‌ಗಳಲ್ಲಿ ಕೂಡ ಸೈಬರ್ ಅಪರಾಧಿಗಳು ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದಿಯಬಹುದಾಗಿದೆ, ಆದರೆ ಇದನ್ನು ಬಳಸುವುದು ಅವರಿಗೆ ಸಾಧ್ಯವಾಗುವುದಿಲ್ಲ

#6
ಏಕೆಂದರೆ ಅವರ ಬಳಿ ಒನ್ ಟಮ್ ಪಾಸ್‌ವರ್ಡ್ ಇರುವುದಿಲ್ಲ ಅಥವಾ ಪಾವತಿ ಗೇಟ್‌ವೇ ಸ್ಟೋರ್‌ಗಳಂತಹ ಇತರ ಪಾಸ್‌ವರ್ಡ್‌ಗಳು ಇವರ ಬಳ ಇರುವುದಿಲ್ಲ.

#7
ಈ ಸೈಟ್‌ಗಳಲ್ಲಿ ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದ್ದೀರಿ ಎಂದಾದಲ್ಲಿ ವರ್ಗಾವಣೆಯ ಮೇಲೆ ನಿಮ್ಮ ಕಣ್ಣಿಡಿ. ಅಂತೆಯೇ ಏನಾದರೂ ಸಂದೇಹ ನಿಮಗೆ ಬಂದಿದೆ ಎಂದಾದಲ್ಲಿ ಬ್ಯಾಂಕಿಗೆ ತುರ್ತಾಗಿ ತಿಳಿಸಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








