ಬರೇ 10 ನಿಮಿಷದಲ್ಲಿ ಲ್ಯಾಪ್‌ಟಾಪ್ ಓವರ್‌ಹೀಟ್‌ ಸಮಸ್ಯೆ ಪರಿಹರಿಸಿ

Written By:

ಲ್ಯಾಪ್‌ಟಾಪ್‌ನಲ್ಲಿ ಸಾಕಷ್ಟು ಕ್ರಾಂತಿಗಳು ನಡೆಯುತ್ತಲೇ ಇವೆ. ಕಾರ್ಯಕ್ಷಮತೆಯ ಮೇಲೆ ಇದು ತೀವ್ರತರವಾದ ಪರಿಣಾಮವನ್ನು ಬೀರುತ್ತಿದೆ. ಪ್ರೊಸೆಸರ್ ಮಲ್ಟಿಪ್ಲೈ ಆಗುತ್ತಿದೆ, ಕೇಸ್‌ಗಳು ಸ್ಲಿಮ್ ಆಗುತ್ತಿವೆ, ಗ್ರಾಫಿಕ್ಸ್ ಕಾರ್ಡ್ಸ್ ಇನ್ನಷ್ಟು ಉತ್ತಮಗೊಂಡು ಸ್ಕ್ರೀನ್‌ಗಳು ಹೆಚ್ಚು ರೆಸಲ್ಯೂಶನ್‌ನೊಂದಿಗೆ ಬಂದಿವೆ. ಆದರೆ ಲ್ಯಾಪ್‌ಟಾಪ್ ಓವರ್ ಹೀಟಿಂಗ್ ಸಮಸ್ಯೆ ಇನ್ನೂ ಬಗೆಹರಿಯದ ಸಮಸ್ಯೆಯಾಗಿಯೇ ಕಂಡುಬಂದಿದೆ.

ಓದಿರಿ: ಪ್ರಪಂಚದಲ್ಲಿಯೇ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ ಯಾವುದು ಗೊತ್ತೇ!!

ಲ್ಯಾಪ್‌ಟಾಪ್ ಬಿಸಿಯಾಗುವುದು ಹಾರ್ಡ್‌ವೇರ್‌ಗೆ ಧಕ್ಕೆಯನ್ನುಂಟು ಮಾಡುವುದರ ಜೊತೆಗೆ ಅದರ ಹಾನಿಗೆ ಕಾರಣವಾಗುತ್ತದೆ. ಹಾಗಿದ್ದರೆ ಈ ಓವರ್ ಹೀಟಿಂಗ್ ಸಮಸ್ಯೆಯನ್ನು ಪರಿಹರಿಸುವುದು ಹೇಗೆ ಎಂಬುದನ್ನು ಕುರಿತು ಇಂದಿನ ಲೇಖನದಲ್ಲಿ ನಾವು ಮಾಹಿತಿ ನೀಡುತ್ತಿದ್ದು ಇದನ್ನು ನೀವು ಅರಿತುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಲ್ಯಾಪ್‌ಟಾಪ್ ಓವರ್ ಹೀಟ್ ಆಗುವುದರ ಬಗ್ಗೆ ತಿಳಿದುಕೊಳ್ಳಿ

ನಿಮ್ಮ ಲ್ಯಾಪ್‌ಟಾಪ್ ಓವರ್ ಹೀಟ್ ಆಗುವುದರ ಬಗ್ಗೆ ತಿಳಿದುಕೊಳ್ಳಿ

#1

ಎಲ್ಲಾ ಸಮಯವೂ ನಿಮ್ಮ ಫ್ಯಾನ್ ಗರಿಷ್ಟ ವೇಗದಲ್ಲಿ ಚಾಲನೆಯಾಗುತ್ತಿದೆ ಎಂದಾದಲ್ಲಿ ನಿಮ್ಮ ನೋಟ್ ಬುಕ್ ಬಿಸಿಯಾಗುತ್ತಿದೆ ಎಂದರ್ಥ. ಹೀಟ್‌ನ ಒತ್ತಡವನ್ನು ಕಡಿಮೆ ಮಾಡಲು ಸಿಪಿಯು ಕ್ಲಾಕ್ ಸ್ಪೀಡ್ ಅನ್ನು ತಗ್ಗಿಸಬಹುದು. ಹಾರ್ಡ್‌ವೇರ್‌ಗೆ ಹಾನಿಯುಂಟಾಗುವುದನ್ನು ತಪ್ಪಿಸಲು ಸಾಫ್ಟ್‌ವೇರ್ ಒಮ್ಮೊಮ್ಮೆ ಸಡನ್ ಶಟ್ ಡೌನ್ ಅನ್ನು ಮಾಡುತ್ತದೆ.

ನಿಮ್ಮ ಲ್ಯಾಪ್‌ಟಾಪ್ ಓವರ್ ಹೀಟ್ ಏಕಾಗುತ್ತಿದೆ?

ನಿಮ್ಮ ಲ್ಯಾಪ್‌ಟಾಪ್ ಓವರ್ ಹೀಟ್ ಏಕಾಗುತ್ತಿದೆ?

#2

ಸಾಕಷ್ಟು ತಂಪಿನ ಅಭಾವದಿಂದಾಗಿ ಓವರ್ ಹೀಟ್ ಸಂಭವಿಸುತ್ತದೆ. ಗ್ರಿಲ್‌ಗಳ ನಡುವೆ ಧೂಳು ಅವಿತುಕೊಂಡಲ್ಲಿ ವೆಂಟ್ಸ್ ಮತ್ತು ಎಕ್ಸಾಸ್ಟ್ ಪೋರ್ಟ್‌ಗಳಲ್ಲಿ ಕೂಡ ಧೂಳು ಇರುವುದರಿಂದ ಹೀಗಾಗುತ್ತದೆ. ಪ್ರೊಸೆಸರ್ ಮತ್ತು ಹೀಟ್ ಸಿಂಕ್ ನಡುವೆ ಕ್ಲಾಕ್ ಅಪ್ ಆದ ಫ್ಯಾನ್ ಮತ್ತು ಡೀಜನರೇಟ್ ಆಗಿರುವ ಥರ್ಮಲ್ ಗ್ರೀಸ್‌ನಿಂದ ಕೂಡ ಇದು ಸಂಭವಿಸುತ್ತದೆ.

ಕೂಲಿಂಗ್ ಸಿಸ್ಟಮ್ ಅನ್ನು ಭದ್ರಪಡಿಸಿ

ಕೂಲಿಂಗ್ ಸಿಸ್ಟಮ್ ಅನ್ನು ಭದ್ರಪಡಿಸಿ

ಹಾಗಿದ್ದರೆ ಇದಕ್ಕೆ ಪರಿಹಾರ ಕ್ರಮಗಳನ್ನು ನಾವಿಲ್ಲಿ ನೀಡುತ್ತಿದ್ದು ಇಲ್ಲಿ ನೋಡಿ

ನಿಮ್ಮ ಲ್ಯಾಪ್‌ಟಾಪ್ ಓವರ್ ಹೀಟ್ ಆಗುತ್ತಿದ್ದಾಗ ಕೂಲಿಂಗ್ ಫ್ಯಾನ್ ಧೂಳು ಮತ್ತು ಕೊಳೆಯನ್ನು ಸ್ವಚ್ಛಮಾಡಿ. ಕಂಪ್ಯೂಟರ್ ಅನ್ನು ಶಟ್‌ಡೌನ್ ಮಾಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿ, ಧೂಳು ನಿವಾರಣೆಗೆ ಮುನ್ನ ಪವರ್ ಸ್ಟ್ರಿಪ್ ಅನ್ನು ತೆಗೆಯಿರಿ.

ಆಲ್ಕೊಹಾಲ್ ಮುಳುಗಿಸಿರುವ ಹತ್ತಿಉಂಡೆ

ಆಲ್ಕೊಹಾಲ್ ಮುಳುಗಿಸಿರುವ ಹತ್ತಿಉಂಡೆ

#4

ಆಲ್ಕೊಹಾಲ್ ಮುಳುಗಿಸಿರುವ ಹತ್ತಿಉಂಡೆಯಿಂದ ಕೂಲಿಂಗ್ ಫ್ಯಾನ್ ಅನ್ನು ಸ್ವಚ್ಛಗೊಳಿಸಿ. ಆಲ್ಕೊಹಾಲ್ ಸಂಪೂರ್ಣವಾಗಿ ಹೀರಿಕೊಂಡ ನಂತರ ಲ್ಯಾಪ್‌ಟಾಪ್ ಅನ್ನು ಪವರ್ ಸೋರ್ಸ್‌ಗೆ ಮರುಸಂಪರ್ಕಪಡಿಸಿ. ಫ್ಯಾನ್‌ನಿಂದ ಧೂಳು ಮತ್ತು ಕೊಳೆಯನ್ನು ನಿವಾರಿಸಲು ವಾಕ್ಯೂಮ್ ಕ್ಲೀನರ್ ಅನ್ನು ಬಳಸಿ.

ಲ್ಯಾಪ್‌ಟಾಪ್‌ನ ಭಾಗವನ್ನು ಸ್ವಚ್ಛಮಾಡಿ

ಲ್ಯಾಪ್‌ಟಾಪ್‌ನ ಭಾಗವನ್ನು ಸ್ವಚ್ಛಮಾಡಿ

#5

ಎಕ್ಸಾಸ್ಟ್ ಪೋರ್ಟ್ ಮತ್ತು ಲ್ಯಾಪ್‌ಟಾಪ್‌ನ ಭಾಗವನ್ನು ಸ್ವಚ್ಛಮಾಡಿ. ಇಲ್ಲಿ ಸಣ್ಣ ಗ್ರಿಲ್‌ಗಳಿದ್ದು ಫ್ಯಾನ್‌ನ ತಿರುಗುವಿಕೆ ಇದು ತೊಡಕನ್ನುಂಟು ಮಾಡುತ್ತದೆ. ಈ ಗ್ರಿಲ್‌ಗಳನ್ನು ಸ್ವಚ್ಛಮಾಡಲು ನೀವು ಕ್ಯಾನ್ಡ್ ಏರ್ ಅನ್ನು ಬಳಸಬಹುದಾಗಿದೆ. ಥರ್ಮಲ್ ಗ್ರೀಸ್ ಅನ್ನು ಪ್ರೊಸೆಸರ್ ಮತ್ತು ಹೀಟ್ ಸಿಂಕ್ ನಡುವೆ ಹಚ್ಚಿ. ತಯಾರಕರನ್ನು ಭೇಟಿ ಮಾಡಿದ ನಂತರ ಅಥವಾ ತಂತ್ರಜ್ಞರ ಸಹಾಯದೊಂದಿಗೆ ಹೀಗೆ ಮಾಡಿ.

ಸಮತಟ್ಟಾದ ಮತ್ತು ಗಟ್ಟಿಯಾದ ಮೇಲ್ಮೈ ಮೇಲೆ ಲ್ಯಾಪ್‌ಟಾಪ್ ಬಳಸಿ

ಸಮತಟ್ಟಾದ ಮತ್ತು ಗಟ್ಟಿಯಾದ ಮೇಲ್ಮೈ ಮೇಲೆ ಲ್ಯಾಪ್‌ಟಾಪ್ ಬಳಸಿ

#6

ನೀವು ಲ್ಯಾಪ್‌ಟಾಪ್ ಅನ್ನು ತಲೆದಿಂಬು, ಹಾಸಿಗೆ ಅಥವಾ ತೊಡೆಯ ಮೇಲೆ ಇರಿಸುವುದರಿಂದ ಗಾಳಿಯ ಹರಿವಿಗೆ ತೊಡಕು ಉಂಟಾಗುತ್ತದೆ ಮತ್ತು ಕೂಲಿಂಗ್ ಸಾಕಷ್ಟು ನಡೆಯುವುದಿಲ್ಲ. ಇದು ಓವರ್ ಹೀಟ್‌ಗೆ ಕಾರಣವಾಗುತ್ತದೆ ಮತ್ತು ಮೇಲ್ಮೈ ಬಿಸಿಯಾಗುತ್ತದೆ. ಅದಕ್ಕಾಗಿ ಲ್ಯಾಪ್‌ಟಾಪ್ ಅನ್ನು ಸಮತಟ್ಟಾದ ಹಾಗೂ ಗಟ್ಟಿಮುಟ್ಟಾದ ಮೇಲ್ಮೈ ಮೇಲೆ ಇರಿಸಿಕೊಂಡು ಬಳಸಿ.

ಲ್ಯಾಪ್‌ಟಾಪ್ ಕೂಲರ್ ಖರೀದಿಸಿ

ಲ್ಯಾಪ್‌ಟಾಪ್ ಕೂಲರ್ ಖರೀದಿಸಿ

#7

ಲ್ಯಾಪ್‌ಟಾಪ್ ಕೂಲರ್ ಹೆಚ್ಚುವರಿ ಕೂಲಿಂಗ್ ಅನ್ನು ಒದಗಿಸುತ್ತದೆ. ತಪ್ಪಾದ ಕೂಲರ್ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಗಾಳಿಯ ಹರಿವನ್ನು ನೀವು ಅರ್ಥಮಾಡಿಕೊಳ್ಳಬೇಕಾಗುತ್ತದೆ ನಂತರವಷ್ಟೇ ಕೂಲರ್ ಖರೀದಿಸಿ. ಲ್ಯಾಪ್‌ಟಾಪ್ ಅಡಿಯಲ್ಲಿರುವ ಕೂಲರ್ ಗಾಳಿಯನ್ನು ಹೊರಹಾಕುತ್ತದೆ ಮತ್ತು ಓವರ್ ಹೀಟಿಂಗ್ ಸಮಸ್ಯೆಯನ್ನು ದೂರಮಾಡುತ್ತದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here, we will see how you can prevent the overheating issue that will extend the lifespan of your laptop.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot