ಪ್ರಪಂಚದಲ್ಲಿಯೇ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ ಯಾವುದು ಗೊತ್ತೇ!!

Written By:

ಪ್ರಪಂಚದಲ್ಲಿಯೇ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ ಯಾವುದು? ಅಂದ್ರೆ ಉತ್ತರಿಸಲು ಈ ಹಿಂದೆ ಮ್ಯಾಕ್‌ಬುಕ್‌ ಏರ್‌ ಮತ್ತು ಮ್ಯಾಕ್‌ಬುಕ್‌ ಪ್ರೊ ಎಂದು ಉತ್ತರಿಸುತ್ತಿದ್ದರು. ಆದರೆ ಈಗ ಪ್ರಪಂಚದಲ್ಲಿಯೇ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ ಅನ್ನು ಎಚ್‌ಪಿ (HP) ಕಂಪನಿ ಅನಾವರಣಗೊಳಿಸಿದೆ. ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ ಯಾವುದು, ಅದರ ಬೆಲೆ ಎಷ್ಟು, ಎಂಬಿತ್ಯಾದಿ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌

ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌

ತೆಳುವಾದ ಲ್ಯಾಪ್‌ಟಾಪ್‌

'HP Spectre 13' ಎಂಬ ಹೆಸರಿನ ಲ್ಯಾಪ್‌ಟಾಪ್‌ ಪ್ರಪಂಚದಲ್ಲಿಯೇ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ ಆಗಿದ್ದು, ಇದು ಕೇವಲ 10.4 mm ತೆಳುವಾಗಿದೆ. ಇದರ ತೂಕ ಕೇವಲ 1.1 ಕೆಜಿ.
ಚಿತ್ರ ಕೃಪೆ:HP

'HP Spectre 13'

'HP Spectre 13'

'HP Spectre 13'

ಗ್ಲೋಬಲ್‌ ಪ್ರಿಂಟಿಂಗ್‌ ಮತ್ತು ವಯಕ್ತಿಕ ಕಂಪ್ಯೂಟರ್‌ ಕಂಪನಿ "ಎಚ್‌ಪಿ"ಯೂ ಗುರುವಾರ (ಏಪ್ರಿಲ್‌ 7)ರಂದು 'HP Spectre 13' ವಿಶ್ವದ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಇದು ಆರನೇ ತಲೆಮಾರಿನ ಇಂಟೆಲ್‌ ಕೋರ್ i5 ಮತ್ತು i7 ಪ್ರೊಸೆಸರ್ಸ್‌ ಹೊಂದಿದೆ.

ಭಾರತದಲ್ಲಿ ಖರೀದಿಗೆ ಯಾವಾಗ

ಭಾರತದಲ್ಲಿ ಖರೀದಿಗೆ ಯಾವಾಗ

ಭಾರತದಲ್ಲಿ ಖರೀದಿಗೆ ಯಾವಾಗ

ಭಾರತದಲ್ಲಿ 'HP Spectre 13' ತೆಳುವಾದ ಲ್ಯಾಪ್‌ಟಾಪ್ ಈ ವರ್ಷದ(2016) ಜೂನ್‌ ಮಧ್ಯಭಾಗದಿಂದ ಖರೀದಿಗೆ ದೊರೆಯಲಿದೆ. ಬೆಲೆ $1,249 (83,033 ರೂಪಾಯಿ).

'HP Spectre 13'

'HP Spectre 13'

'HP Spectre 13'

ಅಂದಹಾಗೆ ಡಿವೈಸ್‌ ಸಂಪೂರ್ಣ HD 13.3 ಇಂಚಿನ ಡಯಾಗೋನಲ್‌ ಎಡ್ಜ್‌ ಟು ಎಡ್ಜ್‌ ಡಿಸ್‌ಪ್ಲೇ ಹೊಂದಿದೆ. ಬೆಳಕಿನ ವೇಗ PCIe ಸಾಲಿಡ್‌ ಸ್ಟೇಟ್‌ ಡ್ರೈವ್‌ (SSD) ಹೊಂದಿದೆ. ವಿಶೇಷ ಅಂದ್ರೆ ಶೇಖರಣಾ ಸಾಮರ್ಥ್ಯ 512GB ವರೆಗೂ ಇದೆ.

ಬ್ಯಾಟರಿ

ಬ್ಯಾಟರಿ

ಬ್ಯಾಟರಿ

'HP Spectre 13' ವಿಶ್ವದಲ್ಲೇ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ನ ಬ್ಯಾಟರಿ ವಿನೂತನ ಹೈಬ್ರಿಡ್‌ ಬ್ಯಾಟರಿ ಆಗಿದ್ದು, ಎರಡು ತೆಳುವಾದ ತುಣುಕುಗಳನ್ನು ಹೊಂದಿದೆ. ಎರಡು ಬ್ಯಾಟರಿ ತುಣುಕುಗಳು ಸಹ ತಲ 9-30 ಗಂಟೆ ಸಮಯ ಪವರ್ ನೀಡುತ್ತವೆ.

ಪ್ರಪಂಚದಲ್ಲಿಯೇ ಮೊದಲ ಅತ್ಯಂತ ತೆಳುವಾದ ಲ್ಯಾಪ್‌ಟಾಪ್

ಪ್ರಪಂಚದಲ್ಲಿಯೇ ಮೊದಲ ಅತ್ಯಂತ ತೆಳುವಾದ ಲ್ಯಾಪ್‌ಟಾಪ್

ಪ್ರಪಂಚದಲ್ಲಿಯೇ ಮೊದಲ ಅತ್ಯಂತ ತೆಳುವಾದ ಲ್ಯಾಪ್‌ಟಾಪ್

" 'HP Spectre 13', ಇತರೆ ಎಲ್ಲಾ ಲ್ಯಾಪ್‌ಟಾಪ್‌ಗಳಿಗಿಂತಲೂ ಮಾರುಕಟ್ಟೆಯಲ್ಲಿ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ ಆಗಿದ್ದು, ಫೀಚರ್‌ನಲ್ಲಿ ಯಾವುದೇ ರೀತಿಯ ರಾಜಿ ಇಲ್ಲಾ" ಎಂದು HP ಏಷಿಯಾ ಪೆಸಿಫಿಕ್‌ ಮತ್ತು ಜಪಾನ್'ನ ವಯಕ್ತಿಕ ವ್ಯವಹಾರ ವ್ಯವಸ್ಥೆಯ ಉಪಾಧ್ಯಕ್ಷರಾದ "ಅನ್ನೆಲೀಸಿ ಒಲ್ಸನ್" ಹೇಳಿದ್ದಾರೆ.

ಕಾರ್ಬನ್‌ ಫೈಬರ್‌ ತಳ

ಕಾರ್ಬನ್‌ ಫೈಬರ್‌ ತಳ

ಕಾರ್ಬನ್‌ ಫೈಬರ್‌ ತಳ

'HP Spectre 13', ಸುಂದರವಾದ HD ಡಿಸ್‌ಪ್ಲೇ ಮತ್ತು ಇಂಟೆಲ್‌ ಕೋರ್‌ 'ಐ' ಪ್ರೊಸೆಸರ್ಸ್‌ ಹೊಂದಿದೆ. ಬ್ಯಾಂಗ್‌ ಮತ್ತು ಓಲುಫ್ಸೆನ್‌ ಸ್ಟೀರಿಯೋ ಧ್ವನಿ ಮತ್ತು ತೆಳುವಾದ ವಿನ್ಯಾಸ ಹೊಂದಿದೆ. 'HP' ಯ ನುರಿತ ಇಂಜಿನಿಯರುಗಳು ಈ ಲ್ಯಾಪ್‌ಟಾಪ್‌ ವ್ಯವಸ್ಥೆಗೊಳಿಸಿದ್ದು, ಕಾರ್ಬನ್‌ ಫೈಬರ್‌ ತಳಪಾಯ ಹೊಂದಿದೆ. ಹಾಗೂ ತೂಕ ಕೇವಲ 1.1 ಕೆಜಿ ಇದೆ.

ವಿಶೇಷತೆ ಏನು?

ವಿಶೇಷತೆ ಏನು?

ವಿಶೇಷತೆ ಏನು?

ಸಂಪೂರ್ಣ HD IPS ಕಾರ್ನಿಂಗ್‌ ಗೊರಿಲ್ಲಾ ಡಿಸ್‌ಪ್ಲೇ ಹೊಂದಿದ್ದು, ವೀಕ್ಷಣೆಯಲ್ಲಿ ಅದ್ಭುತವಾದ ಅನುಭವ ನೀಡಲಿದೆ. ಫೋಟೋ ಎಡಿಟಿಂಗ್‌, ಸಿನಿಮಾ ವೀಕ್ಷಣೆಯಲ್ಲಿ ಉತ್ತಮವಾದ ವೀಕ್ಷಣೆ ಅನುಭವ ನೀಡಲಿದೆ.

ಯಾವಾಗಲು ತಂಪಾಗಿರುವ ತೆಳು ಲ್ಯಾಪ್‌ಟಾಪ್‌

ಯಾವಾಗಲು ತಂಪಾಗಿರುವ ತೆಳು ಲ್ಯಾಪ್‌ಟಾಪ್‌

ಯಾವಾಗಲು ತಂಪಾಗಿರುವ ತೆಳು ಲ್ಯಾಪ್‌ಟಾಪ್‌

ಇಂಟೆಲ್‌ ಹೈಪರ್‌ಬೇರಿಕ್‌ ಕೂಲಿಂಗ್‌ ವ್ಯವಸ್ಥೆ ಇರುವುದರಿಂದ ತೆಳು ಲ್ಯಾಪ್‌ಟಾಪ್‌ ಮಷಿನ್‌ ಯಾವಾಗಲು ತಂಪಾಗಿರಲು ಸಹಾಯವಾಗಿದೆ. ಹಾಗೂ ಅಧಿಕ ಪವರ್‌ ಉಳ್ಳ ಪ್ರೊಸೆಸರ್ಸ್‌ ಡಿವೈಸ್‌ ತಂಪಾಗಿರಲು ಸಹಾಯಕವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
HP Spectre, World Record For Being The Thinnest Laptop. Available in India mid-June. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot