ಜಿಯೋ 'ಗಿಗಾ ಫೈಬರ್': ಮೊದಲ ಮೂರು ತಿಂಗಳು ಉಚಿತ ಸೇವೆ ಪಡೆಯುವುದು ಹೇಗೆ.?

|

ಭಾರತೀಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯಲು ಮುಂದಾಗಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಈಗಾಗಲೇ ಗಿಗಾ ಫೈಬರ್ ಸೇವೆಗೆ ಚಾಲನೆಯನ್ನು ನೀಡಿದೆ. ಅಲ್ಲದೇ ಆಗಸ್ಟ್ 15 ರಿಂದ ಗಿಗಾ ಫೈಬರ್ ಸೇವೆಯನ್ನು ಪಡೆದುಕೊಳ್ಳಲು ನೋಂದಣಿಯನ್ನು ಆರಂಭಿಸಿದೆ. ಈ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ಜಿಯೋ ಗಿಗಾ ಫೈಬರ್ ಪ್ರೀವ್ಯೂ ಆಫರ್ ಕುರಿತ ಮಾಹಿತಿಯೂ ಲೀಕ್ ಆಗಿದ್ದು, ಖಚಿತ ಮೂಲಗಳು ಪ್ರಕಾರ ಮೊದಲ ಮೂರು ತಿಂಗಳು ಬಳಕೆದಾರರಿಗೆ ಉಚಿತ ಸೇವೆಯನ್ನು ಜಿಯೋ ನೀಡಲಿದೆ ಎನ್ನಲಾಗಿದೆ.

ಈ ಹಿಂದೆ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆ ಹುಟ್ಟಿಹಾಕಿದ ಜಿಯೋವನ್ನು ಆರಂಭಿಸಿದ ಸಂದರ್ಭದಲ್ಲಿಯೂ ಬಳಕೆದಾರರಿಗೆ ಮೊದಲ ಮೂರು ತಿಂಗಳು ಉಚಿತ ಸೇವೆಯನ್ನು ನೀಡಿತ್ತು. ಇದರಿಂದಾಗಿ ಜಿಯೋ ಬಳಕೆದಾರರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಸದ್ಯ ಇದೇ ಮಾದರಿಯನ್ನು ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿಯೂ ಅಳವಡಿಸಲು ಮುಂದಾಗಿದ್ದು, ಮೊದಲ ಮೂರು ತಿಂಗಳ ಉಚಿತ ಸೇವೆಯೊಂದಿಗೆ ಪ್ರತಿ ತಿಂಗಳು 100 GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ತ್ವರೆ ಮಾಡಲಿದೆ.

100 GB:

100 GB:

ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆದುಕೊಳ್ಳುವವರಿಗೆ ಪ್ರತಿ ತಿಂಗಳು 100 GB ಡೇಟಾವನ್ನು ಉಚಿತವಾಗಿ ನೀಡುವುದಾಗಿ ಜಿಯೋ ತಿಳಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಬೇರೆ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆದುಕೊಳ್ಳುತ್ತಿರುವವರನ್ನು ಆಕರ್ಷಿಸಲು ಈ ಹೊಸ ಮಾದರಿಯ ಉಚಿತ ಆಫರ್ ಅನ್ನು ನೀಡುತ್ತಿದೆ.

100 Mbps:

100 Mbps:

ಇದಲ್ಲದೆ ಜಿಯೋ ಗಿಗಾ ಫೈಬರ್ ಪ್ರೀವ್ಯೂ ಆಫರ್ ನಲ್ಲಿ ಬಳಕೆದಾರರಿಗೆ ದೊರೆಯುತ್ತಿರುವ ಉಚಿತ ಡೇಟಾ ಉತ್ತಮ ಗುಣಮಟ್ಟದಾಗಿದೆ, ಬೇರೆ ಬ್ರಾಡ್ ಬ್ಯಾಂಡ್ ಸೇವೆಗಳು ದುಡ್ಡು ಪಡೆದು ನೀಡುತ್ತಿರುವ ವೇಗಕ್ಕಿಂತಲೂ ಅಧಿಕವಾಗಿ 100 Mbps ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಗಿಗಾ ಫೈಬರ್ ನೀಡಲಿದೆ ಎನ್ನಲಾಗಿದೆ.

ಟಾಪ್ ಅಪ್ ಇದೆ:

ಟಾಪ್ ಅಪ್ ಇದೆ:

ಇದಲ್ಲದೇ ಜಿಯೋ ಗಿಗಾ ಫೈಬರ್ ಪ್ರೀವ್ಯೂ ಆಫರ್ ನಲ್ಲಿ ದೊರೆಯುವ 100 GB ಡೇಟಾ ಬಳಕೆಗೆ ಸಾಲುವುದಿಲ್ಲ ಎನ್ನುವುದಾದರೆ ಬಳಕೆದಾರರಿಗೆ ಹೆಚ್ಚಿನ ಡೇಟಾವನ್ನು ನೀಡಲು ಜಿಯೋ.ಕಾಮ್ ಮತ್ತು ಮೈ ಜಿಯೋ ಆಪ್‌ನಲ್ಲಿ ಅವಕಾಶವನ್ನು ಮಾಡಿಕೊಡಲಾಗಿದೆ. 40 GB ಟಾಪ್ ಆಪ್ ಆಫರ್ ಗಳನ್ನು ನೀಡುತ್ತಿದೆ.

1100 ಸಿಟಿಗಳಲ್ಲಿ ಸೇವೆ:

1100 ಸಿಟಿಗಳಲ್ಲಿ ಸೇವೆ:

ಜಿಯೋ ಗಿಗಾ ಫೈಬರ್ ಸೇವೆಯೂ ಒಟ್ಟು 1100 ಸಿಟಿಗಳಲ್ಲಿ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಈಗಾಗಲೇ ನೋಂದಣಿಯೂ ಶುರುವಾಗಿದ್ದು, ಯಾವ ನಗರಗಳಲ್ಲಿ ಹೆಚ್ಚಿನ ಪ್ರಮಾಣದ ನೋಂದಣಿಯನ್ನು ಮಾಡಿಕೊಳ್ಳುವರೂ ಅಲ್ಲಿ ಮೊದಲಿಗೆ ಸೇವೆಯೂ ಆರಂಭವಾಗಲಿದೆ ಎನ್ನಲಾಗಿದೆ. ನಿಮ್ಮ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿಯಾದರೆ ನಿಮ್ಮಲ್ಲಿಯೇ ಮೊದಲ ಸೇವೆ ಶುರುವಾಗಲಿದೆ.

ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ..?

ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ..?

ಮೊದಲಿಗೆ ನೀವು ಜಿಯೋ ಗಿಗಾ ಫೈಬರ್ ಮಾಡಿಕೊಳ್ಳಲು ಜಿಯೋ ಅಧಿಕೃತ ವೆಬ್‌ಸೆಟ್‌ಗೆ ಹೋಗಬೇಕಾಗಿದೆ. ನಂತರದಲ್ಲಿ ಅಲ್ಲಿರುವ ಜಿಯೋ ಗಿಗಾ ಫೈಬರ್ ಪೇಜ್ ಅನ್ನು ಓಪನ್ ಮಾಡಬೇಕಾಗಿದೆ

ಹಂತ 02:

ಹಂತ 02:

ನಂತರದಲ್ಲಿ ನೀವು ನಿಮ್ಮ ಆಡ್ರಸ್ ಅನ್ನು ಎಂಟ್ರಿ ಮಾಡಬೇಕಾಗಿದೆ. ಮೊದಲೇ ನಿಮ್ಮ ಆಕೌಂಟ್‌ ನಿಂದಾಗಿ ಆಡ್ರಸ್ ಅಲ್ಲಿಯೇ ಇರಲಿದೆ. ಇದಾದ ನಂತರದಲ್ಲಿ ಸಬಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 03:

ಹಂತ 03:

ಮುಂದಿನ ಪೇಜ್‌ನಲ್ಲಿ ನಿಮ್ಮ ಹೆಸರು ಮತ್ತು ಫೋನ್ ನಂಬರ್ ಅನ್ನು ಎಂಟ್ರಿ ಮಾಡಬೇಕಾಗಿದೆ. ಇದಾದ ನಂತರದಲ್ಲಿ OTP ಜನರೇಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿದೆ. ಇದಾದ ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್‌ಗೆ OTPಯೊಂದು ಬರಲಿದೆ.

ಹಂತ 04:

ಹಂತ 04:

ಇದಾದ ನಂತರದಲ್ಲಿ ನೀವು ನಿಮ್ಮ ಫೋನಿನಲ್ಲಿ ಬಂದಿರುವ OTPಯನ್ನು ಎಂಟ್ರಿ ಮಾಡಬೇಕಾಗಿದೆ. ಇದಾದ ನಂತರದಲ್ಲಿ ಮತ್ತೆ ನೀವು ಸಬಿಟ್ ಬಟನ್ ಅನ್ನು ಒತ್ತಬೇಕಾಗಿದೆ. ಹೀಗೆ ಮಾಡಿದಲ್ಲಿ ನೀವು ಜಿಯೋ ಗಿಗಾ ಫೈಬರ್ ಖರೀದಿಸಲು ನೋಂದಣಿ ಮಾಡಿಕೊಂಡಂತಾಗಲಿದೆ.

Best Mobiles in India

English summary
‘Jio GigaFiber Preview Offer’ will give 100GB free data for first 3 months. to kmow more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X