Subscribe to Gizbot

ಜಿಯೋ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ವಿಸ್ತರಿಸಿಕೊಳ್ಳುವುದು ಹೇಗೆ...?

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹಲವು ಹೊಸತನಗಳಿಗೆ ಸಾಕ್ಷಿಯಾಗಿದ್ದು, ಇದೇ ಮಾದರಿಯಲ್ಲಿ ಪರಿಯಚಗೊಂಡ ಜಿಯೋ ಪ್ರೈಮ್ ಸೇವೆಯೂ ಇದೇ ತಿಂಗಳ ಆರಂಭದಲ್ಲಿ ಕೊನೆಯಾಗುತಿತ್ತು, ಆದರೆ ಈ ಸೇವೆಯನ್ನು ವಿಸ್ತರಿಸಿರುವ ಜಿಯೋ, ಬಳಕೆದಾರರಿಗೆ ಮತ್ತೆ ಒಂದು ವರ್ಷ ಸೇವೆಯನ್ನು ವಿಸ್ತರಿಸಿತ್ತು. ಈ ಹಿನ್ನಲೆಯಲ್ಲಿ ಪ್ರೈಮ್ ಸದಸ್ಯರು ಮತ್ತೇ ಒಂದು ವರ್ಷಗಳ ಕಾಲ ತಮ್ಮ ಪ್ರೈಮ್ ಸೇವೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ವಿಸ್ತರಿಸಿಕೊಳ್ಳುವುದು ಹೇಗೆ...?

ಇದೇ ಹಿನ್ನಲೆಯಲ್ಲಿ ಜಿಯೋ ಪ್ರೈಮ್ ಸದಸ್ಯರು ಈ ಯೋಜನೆಯ ಲಾಭವನ್ನು ಕ್ಲೈಮ್ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಸಣ್ಣ ಟಾಸ್ಕ್ ವೊಂದನ್ನು ಮಾಡಬೇಕಾಗಿದೆ. ಹೀಗೇ ಮಾಡಿದಲ್ಲಿ ನಿಮ್ಮ ಪ್ರೈಮ್ ಸದಸ್ಯತ್ವವು ಒಂದು ವರ್ಷದ ಅವಧಿಗೆ ವಿಸ್ತರಣೆಗೊಳ್ಳಲಿದೆ. ಇದರಿಂದಾಗಿ ಬಳಕೆದಾರರು ಜಿಯೋ ನೀಡು ಹೆಚ್ಚುವರಿ ಡೇಟಾ ಮತ್ತು ಇತರೇ ಲಾಭಗಳನ್ನು ಪಡೆಯಬಹುದಾಗಿದೆ. ಈ ಹಿನ್ನಲೆಯ ಪ್ರೈಮ್ ಅವಧಿಯನ್ನು ವಿಸ್ತರಿಸಿಕೊಳ್ಳುವ ಸುಲಭ ಮಾರ್ಗದ ಬಗ್ಗೆ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 01:

ಹಂತ 01:

ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಮೈ ಜಿಯೋ ಆಪ್ ಅನ್ನು ತೆರೆಯಿರಿ, ಜಿಯೋ ಆಪ್‌ನಲ್ಲಿಯೇ ನೀವು ಪ್ರೈಮ್ ಸದಸ್ಯತ್ವದ ವಿಸ್ತರಣೆಯನ್ನು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ.

ಹಂತ 02:

ಹಂತ 02:

ಮೈ ಜಿಯೋ ಆಪ್ ತೆರೆಯುತ್ತಿದ್ದಂತೆ ಮೇಲ್ಬಾಗದಲ್ಲಿ ಜಿಯೋ ಪ್ರೈಮ್ ಬ್ಯಾನರ್ ಅನ್ನು ಕಾಣಬಹುದಾಗಿದ್ದು, ಅದರ ಮೇಲೆ ಕ್ಲಿಕ್ ಮಾಡಿ. get now ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 03:

ಹಂತ 03:

ನಂತರದಲ್ಲಿ proceed ಎನ್ನುವ ಆಯ್ಕೆಯೊಂದು ಕಾಣಿಸಿಕೊಳ್ಳಲಿದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ರೈಮ್ ಸದಸ್ಯತ್ವವು ವಿಸ್ತರಣೆಗೊಳ್ಳಲಿದ್ದು, ಒಂದು ವರ್ಷ ಉಚಿತವಾಗಿ ಈ ಲಾಭವನ್ನು ಪಡೆಯಬಹುದಾಗಿದೆ.

ಪ್ರೈಮ್ ಸದಸ್ಯತ್ವ:

ಪ್ರೈಮ್ ಸದಸ್ಯತ್ವ:

ಜಿಯೋ ಲಾಂಚ್ ಮಾಡುವ ಪ್ರತಿ ಪ್ಲಾನ್‌ಗಳು ಜಿಯೋ ಪ್ರೈಮ್ ಸದಸ್ಯರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆಡಿಯದಿದ್ದರೇ ಜಿಯೋ ಪ್ಲಾನ್‌ ಗಳ ಲಾಭದಲ್ಲಿ ಶೇ.50% ಕಡಿಮೆ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Jio Prime extended for one more year for free: How to claim in MyJio app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot