ಸ್ಮಾರ್ಟ್‌ಫೋನ್ ಬ್ಯಾಟರಿ ಆರೋಗ್ಯಕ್ಕಾಗಿ ಟಾಪ್ ಟಿಪ್ಸ್

Written By:

ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಬ್ಯಾಟರಿಯನ್ನು ದೀರ್ಘವಾಗಿರಿಸುವುದು ಹೇಗೆ? ಅಪ್ಲಿಕೇಶನ್‌ಗಳನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳದೆಯೇ ನಿಮ್ಮ ಫೋನ್ ಅನ್ನು ನೀವು ಯಾವ ರೀತಿ ಉಪಚರಿಸುತ್ತೀರಿ ಎಂಬುದರ ಕಡೆಗೆ ಗಮನ ನೀಡೋಣ. ನಿಮ್ಮ ಫೋನ್ ಅನ್ನು ನೀವು ಯಾವ ಬಗೆಯಲ್ಲಿ ಚಾರ್ಜ್ ಮಾಡುತ್ತೀರಿ ಈ ಮೊದಲಾದ ಅಂಶಗಳು ಫೋನ್ ಬ್ಯಾಟರಿಯನ್ನು ದೀರ್ಘಗೊಳಿಸುವುದಕ್ಕೆ ಸಹಾಯ ಮಾಡುತ್ತದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಫೋನ್ ಬ್ಯಾಟರಿಯನ್ನು ಕೊನೆಯವರೆಗೆ ಕಾದಿರಿಸುವ ಸೂಪರ್ ಸಲಹೆಗಳೊಂದಿಗೆ ನಾವು ಬಂದಿದ್ದು ಫೋನ್ ಚಾರ್ಜ್ ಹೇಗೆ ಮಾಡಬೇಕು ಮತ್ತು ಫೋನ್ ಅನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಸಲಹೆಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಪ್ಲಿಕೇಶನ್ ಬಳಸಿ ಆದರೆ ಅವುಗಳಿಗೆ ನಿಮ್ಮ ಸಹಾಯ ಬೇಕು

ಅಪ್ಲಿಕೇಶನ್ ಬಳಸಿ ಆದರೆ ಅವುಗಳಿಗೆ ನಿಮ್ಮ ಸಹಾಯ ಬೇಕು

#1

ನಿಮ್ಮ ಫೋನ್ ಅನ್ನು ದಿನವಿಡೀ ನೀವು ಹೇಗೆ ನೋಡಿಕೊಳ್ಳುತ್ತೀರಿ ಎಂಬ ಅಂಶ ಮುಖ್ಯವಾಗಿದೆ. ಫೋನ್ ಅನ್ನು ನೀವು ಯಾವಾಗ ಚಾರ್ಜ್ ಮಾಡುತ್ತೀರಿ ಮತ್ತು ಯಾವಾಗ ಚಾರ್ಜ್ ಮಾಡದೇ ಹಾಗೆಯೇ ಇಡುತ್ತೀರಿ ಎಂಬುದು ಇಲ್ಲಿ ಪರಿಗಣಿಸಲ್ಪಡುತ್ತದೆ.

ಹೊಸ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಚಾರ್ಜ್ ಮಾಡುವ ಬಗೆ

ಹೊಸ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಚಾರ್ಜ್ ಮಾಡುವ ಬಗೆ

#2

ಹೊಸ ಫೋನ್ ಅನ್ನು ಕೊಂಡ ತಕ್ಷಣ ನೀವು ಅದನ್ನು ಚಾರ್ಜ್ ಮಾಡಬೇಕು. ತಯಾರಕರ ಸೂಚನೆಗಳಿಗನುಸಾರವಾಗಿ ನಿಮ್ಮ ಫೋನ್‌ನ ಕಾಳಜಿಯನ್ನು ನೀವು ಮಾಡಿಕೊಳ್ಳಬೇಕು. ಚಾರ್ಜ್ ಮುಗಿದ ಒಡನೆ ಆಗಾಗ್ಗೆ ಚಾರ್ಜ್ ಮಾಡುವ ಖಯಾಲಿಯನ್ನು ಇಟ್ಟುಕೊಳ್ಳಬೇಡಿ. ಲೊ ಬ್ಯಾಟರಿ ಐಕಾನ್ ಬಂದ ನಂತರವೇ ಫೋನ್ ಚಾರ್ಜ್ ಮಾಡುವುದು ಉತ್ತಮ.

ಲಿಯಾನ್ ಬ್ಯಾಟರಿಗಳು

ಲಿಯಾನ್ ಬ್ಯಾಟರಿಗಳು

#3

ಲಿಯಾನ್ ಬ್ಯಾಟರಿಗಳನ್ನು ಇಂದಿನ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಬಳಸಲಾಗುತ್ತದೆ. ಹೆಚ್ಚು ಉಷ್ಟಾಂಷತೆಯಲ್ಲೂ ಇದು ತ್ವರಿತವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ರಹಸ್ಯವನ್ನು ಇದು ಹೊಂದಿದೆ. ಆದರೆ ಹೆಚ್ಚಿನ ಒತ್ತಡಕ್ಕೆ ಒಳಗಾಗಿ ಚಾರ್ಜಿಂಗ್ ಸಾಮರ್ಥ್ಯವನ್ನು ಇದು ಬೇಗನೇ ಕಳೆದುಕೊಳ್ಳುತ್ತದೆ. ಆದ್ದರಿಂದ ದಿನದ ಒಂದು ಹೊತ್ತು ಮಾತ್ರ ಪೂರ್ಣ ಪ್ರಮಾಣದಲ್ಲಿ ಇಂತಹ ಬ್ಯಾಟರಿಗಳನ್ನು ಚಾರ್ಜ್ ಮಾಡಿ.

ಲಿಪೊ ಬ್ಯಾಟರಿಗಳು

ಲಿಪೊ ಬ್ಯಾಟರಿಗಳು

#4

ಐಫೋನ್ 6 ಮತ್ತು ಎಚ್‌ಟಿಸಿ ಒನ್ ಲಿಪೊ ಬ್ಯಾಟರಿಗಳನ್ನು ಬಳಸಿಕೊಳ್ಳುತ್ತಿವೆ. ಲಿಯಾನ್ ಬ್ಯಾಟರಿಗಳಿಗೆ ಅನ್ವಯಿಸುವ ಅದೇ ನಿಯಮಗಳು ಲಿಪೊ ಬ್ಯಾಟರಿಗಳಿಗೂ ಅನ್ವಯಿಸುತ್ತದೆ.

ನಿಕಲ್ ಕ್ಯಾಡಿಮಮ್ ಬ್ಯಾಟರಿಗಳು

ನಿಕಲ್ ಕ್ಯಾಡಿಮಮ್ ಬ್ಯಾಟರಿಗಳು

#5

ನೀವು ಹೆಚ್ಚು ಹಳೆಯ ಡಿವೈಸ್‌ಗಳನ್ನು ಬಳಸುತ್ತಿರುವವರು ಎಂದಾದಲ್ಲಿ ನಿಕಲ್ ಕ್ಯಾಡಿಯಮ್ ಬ್ಯಾಟರಿಗಳು ಈ ಡಿವೈಸ್‌ಗಳಲ್ಲಿರುತ್ತದೆ. 500 ರೀಚಾರ್ಜ್‌ಗಳ ಶಕ್ತಿಯನ್ನು ಈ ಬ್ಯಾಟರಿಗಳು ಪಡೆದುಕೊಂಡಿರುತ್ತವೆ. ಇಂತಹ ಬ್ಯಾಟರಿಯಿರುವ ಡಿವೈಸ್‌ಗಳನ್ನು ಡಿಸ್‌ಚಾರ್ಜ್ ಮಾಡಬೇಕು. ಅಂತೆಯೇ ಕಡಿಮೆ ಶಕ್ತಿಯನ್ನು ತಮ್ಮಲ್ಲಿ ಉಳಿಸಿಕೊಳ್ಳುತ್ತವೆ.

ಚಾರ್ಜರ್‌ಗಳು ಮತ್ತು ಸಂಗ್ರಹಣೆಗಳು

ಚಾರ್ಜರ್‌ಗಳು ಮತ್ತು ಸಂಗ್ರಹಣೆಗಳು

#6

ನಿಮ್ಮ ಡಿವೈಸ್‌ಗೆ ಹೊಂದುವ ಚಾರ್ಜರ್‌ಗಳನ್ನೇ ಆಯ್ಕೆಮಾಡಿ. ಇದು ಸೆಲ್‌ನ ಜೀವನವನ್ನು ದೀರ್ಘವಾಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಕಡಿಮೆ ಬೆಲೆಯ ಚಾರ್ಜರ್ ಖರೀದಿಸಿ ದುಬಾರಿ ಬೆಲೆಯ ಡಿವೈಸ್‌ಗಳನ್ನು ಹಾಳು ಮಾಡಿಕೊಳ್ಳಬೇಡಿ.

ಫೋನ್ ಅನ್ನು ಬಿಸಿಯಾಗಿರುವ ಸ್ಥಳದಲ್ಲಿ ಇರಿಸಬೇಡಿ

ಫೋನ್ ಅನ್ನು ಬಿಸಿಯಾಗಿರುವ ಸ್ಥಳದಲ್ಲಿ ಇರಿಸಬೇಡಿ

#7

ನಿಮ್ಮ ಫೋನ್ ಅನ್ನು ಆದಷ್ಟು ತಂಪು ಸ್ಥಳದಲ್ಲಿ ಇರಿಸಿಕೊಳ್ಳಿ. ಹೆಚ್ಚು ಗೇಮ್ ಆಡುವುದರಿಂದ ಕೂಡ ಫೋನ್ ಬಿಸಿಯಾಗುತ್ತದೆ. ಪ್ರೊಸೆಸರ್ ಹೆಚ್ಚು ಸಮಯ ಕಾರ್ಯನಿರ್ವಹಿಸುವುದರಿಂದ ಕೂಡ ಫೋನ್ ಬಿಸಿಯಾಗುತ್ತದೆ.

ಭೇಟಿ ನೀಡಿ

ಭೇಟಿ ನೀಡಿ

ಫೇಸ್‌ಬುಕ್ ಪುಟ

ನಮ್ಮ ಗಿಜ್‌ಬಾಟ್.ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you tips on how to keep your android battery healthy with these suggestion..It is really a nice idea to protect your phone from easy tips.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot