ಗೂಗಲ್ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಪ್ರಮಾಣೀಕರಿಸಿದೆಯೇ?.ಚೆಕ್ ಮಾಡುವುದು ಹೀಗೆ!!

Written By:

ಗೂಗಲ್ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತದೆ ಎನ್ನುವುದನ್ನು ಒಪ್ಪಬಹುದು. ಏಕೆಂದರೆ, ಪ್ರಪಂಚದೆಲ್ಲೆಡೆ ನಡೆಯುತ್ತಿರುವ ಹ್ಯಾಕಿಂಗ್, ಸೈಬರ್ ಕ್ರೈಮ್ಮತ್ತು ಸ್ಮಾರ್ಟ್‌ಫೋನ್ ಮೂಲಕ ಖಾಸಗಿ ಮಾಹಿತಿ ಕದಿಯುವಿಕೆಯಂತಹ ಸಮಸ್ಯೆಗಳು ಹೆಚ್ಚಾಗಲು ಕಾರಣ ಪ್ರಮಾಣೀಕರಿಸಲ್ಪಡದ ಸ್ಮಾರ್ಟ್‌ಫೋನ್ಗಳು ಎಂದು ಗುರುತಿಸಿ ತಾನೇ ಸ್ಮಾರ್ಟ್‌ಫೋನ್‌ಗಳನ್ನು ಪ್ರಮಾಣಿಕರಿಸುವ ಕೆಲಸ ಮಾಡುತ್ತಿದೆ.!!

ಕಳಪೆ ಸ್ಮಾರ್ಟ್‌ಫೋನ್‌ಗಳಿಂದಾಗಿ ಖಾಸಗಿ ಮಾಹಿತಿಗಳು ಸೋರಿಕೆಯಾಗುತ್ತಿರುವ ಬಹುದೊಡ್ಡ ಅಪಾಯವನ್ನು ಗೂಗಲ್ ಗುರುತಿಸಿದ್ದು, ಹಾಗಾಗಿ, ತನ್ನ ನೂತನ ವೆಬ್‌ಸೈಟ್‌ನಲ್ಲಿ ಸ್ಮಾರ್ಟ್‌ಫೋನ್ ಗುಣಮಟ್ಟದ ಕುರಿತಾದ ಸಂಪೂರ್ಣ ಮಾಹಿತಿಗಳನ್ನು ಹಂಚಿಕೊಳ್ಳಲು ಮುಂದಾಗಿದೆ.!! ಹಾಗಾದರೆ, ಗೂಗಲ್ ಮೂಲಕ ಪ್ರಮಾಣಿಕರಿಸಿದ ಸ್ಮಾರ್ಟ್‌ಫೋನ್‌ಗಳನ್ನು ಗುರುತಿಸುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಹೇಳಿದ್ದೇನು?

ಗೂಗಲ್ ಹೇಳಿದ್ದೇನು?

ಪ್ರಮಾಣೀಕರಿಸಿದ ಆಂಡ್ರಾಯ್ಡ್ ಫೋನ್‌ಗಳನ್ನು ಮಾತ್ರ ಖರೀದಿಸಿ ಬಳಕೆ ಮಾಡಿದರೆ ಮಾತ್ರ ಆಂಡ್ರಾಯ್ಡ್ ಬಳಕೆದಾರರು ತಮ್ಮ ಖಾಸಾಗಿತನವನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ಸೈಬರ್‌ ಕ್ರಿಮಿನಲ್‌ಗಳು ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಮೊಬೈಲ್ ಕಂಪೆನಿಗಳೇ ನಿಮ್ಮ ಮಾಹಿತಿ ಕದಿಯಬಹುದು ಎಂದು ಹೇಳಿದೆ.!!

ಗೂಗಲ್ ಅಧ್ಯಯನ

ಗೂಗಲ್ ಅಧ್ಯಯನ

ವಿಶ್ವಾದ್ಯಂತ ಮೊಬೈಲ್ ತಯಾರಿಕಾ ಸಂಸ್ಥೆಗಳನ್ನು ಅಧ್ಯಯನ ಮಾಡಿರುವ ಗೂಗಲ್, ಮೊಬೈಲ್ ಕಂಪೆನಿ ತಯಾರಿಸಿದ ಸ್ಮಾರ್ಟ್‌ಫೋನ್ ಅನ್ನು ಪ್ರಮಾಣಿಕರಿಸುತ್ತಿದೆ.!! ಮೊಬೈಲ್ ಸಂಸ್ಥೆ ಮತ್ತು ಅದರ ಸರಣಿಯನ್ನು ವೆಬ್ ಸೈಟಿನಲ್ಲಿ ನಮೂದು ಮಾಡುವ ಮೂಲಕ ಆ ಸ್ಮಾರ್ಟ್‌ಫೋನ್ ಪ್ರಮಾಣೀಕರಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಬಹುದು.

ಪ್ರಮಾಣಿಕರಿಸಿದ ಫೋನ್‌ ಗುರುತಿಸುವುದು ಹೇಗೆ?

ಪ್ರಮಾಣಿಕರಿಸಿದ ಫೋನ್‌ ಗುರುತಿಸುವುದು ಹೇಗೆ?

ಗೂಗಲ್ ಪ್ರಮಾಣಿಕರಿಸಿದ ಫೋನ್‌ಗಳ ಮತ್ತು ಆ ಕಂಪೆನಿಯ ಮಾಹಿತಿಗ ದತ್ತಾಂಶವನ್ನುಗೂಗಲ್‌ನ (https://www.android.com/intl/en_in/certified/) ವೆಬ್‌ಸೈಟ್‌ನಲ್ಲಿ ನೋಡಬಹುದು. ವೆಬ್‌ಸೈಟ್ ಗೆ ಭೇಟಿ ನೀಡಿ ಗ್ರಾಹಕರು ಗೂಗಲ್‌ನ ಪ್ರಮಾಣೀಕರಿಸಲ್ಪಟ್ಟ ಮೊಬೈಲ್ ಗಳ ಪಟ್ಟಿಯಲ್ಲಿ ತಮ್ಮ ಫೋನ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು.

ಗೂಗಲ್ ಪ್ಲೇ ಪ್ರೊಟೆಕ್ಟ್ ವ್ಯವಸ್ಥೆ

ಗೂಗಲ್ ಪ್ಲೇ ಪ್ರೊಟೆಕ್ಟ್ ವ್ಯವಸ್ಥೆ

ವಿಶ್ವಾದ್ಯಂತ ಸುಮಾರು 2 ಬಿಲಿಯನ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಪ್ರಮಾಣೀಕರಿಲ್ಪಟ್ಟ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೂ ಗೂಗಲ್ ಸಂಸ್ಥೆ ತನ್ನ ಗೂಗಲ್ ಪ್ಲೇ ಪ್ರೊಟೆಕ್ಟ್ ವ್ಯವಸ್ಥೆಯನ್ನು ನೀಡಿದೆ.

ಗೂಗಲ್ ಪ್ಲೇ ಪ್ರೊಟೆಕ್ಟ್?

ಗೂಗಲ್ ಪ್ಲೇ ಪ್ರೊಟೆಕ್ಟ್?

ಪ್ರತಿನಿತ್ಯ ಗೂಗಲ್ ಸುಮಾರು 50 ಬಿಲಿಯನ್ ಆಪ್ ಗಳನ್ನು ಸ್ಕ್ಯಾನ್ ಮಾಡುತ್ತಿದ್ದು, ಗೂಗಲ್ ಪ್ಲೇ ಪ್ರೊಟೆಕ್ಟ್ ಫೋನ್‌ಗಳಿಗೆ ಮೂಲಭೂತ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಈ ವ್ಯವಸ್ಥೆಯಿಂದಾಗಿ ಮೊಬೈಲ್ ಹ್ಯಾಕಿಂಗ್, ಖಾಸಗಿ ಮಾಹಿತಿ ಕದಿಯುವಿಕೆ ನಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು.

ಓದಿರಿ:ಟೆಲಿಕಾಂಗೆ ಆದ ನಷ್ಟಕ್ಕೆ ಜನರಿಗೂ, ಜಿಯೋಗೂ ಚುಚ್ಚಿದ ಸರ್ಕಾರ!!..ಮೊಬೈಲ್ ಬಿಲ್ ಏರಿಕೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
you can rest assured that your Android .to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot