ಸ್ಮಾರ್ಟ್‌ಪೋನಿಂದಲೇ ಪಾನ್‌ಕಾರ್ಡ್‌ ಪಡೆಯಲು ಸಾಧ್ಯ..! ಇದಕ್ಕೆಂದೆ ಸಿದ್ಧವಾಗಿ ಆಪ್‌..!

ಪ್ಯಾನ್‌ಕಾರ್ಡ್‌ ಅನ್ನು ಸರಳವಾಗಿ ನಿಮ್ಮ ಕೈಗೆ ನೀಡಲು ನಿಮ್ಮ ಬಳಿ ಇರುವ ಸ್ಮಾರ್ಟ್‌ಪೋನಿಂದಲೇ ಪಡೆಯುವ ಹೊಸ ಪ್ರಯತ್ನ.

|
ದೇಶದಲ್ಲಿ ಆರಂಭವಾಗಿರುವ ಡಿಜಿಟಲ್ ಕ್ರಾಂತಿಗೆ ಕೇಂದ್ರ ಸರಕಾರವೇ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು, ಅವಶ್ಯಕ ಸೇವೆಗಳನ್ನು ಪಡೆಯಲು ಬೇಕಾದ ಪ್ಯಾನ್‌ಕಾರ್ಡ್‌ ಅನ್ನು ಸರಳವಾಗಿ ನಿಮ್ಮ ಕೈಗೆ ನೀಡಲು ನಿಮ್ಮ ಬಳಿ ಇರುವ ಸ್ಮಾರ್ಟ್‌ಪೋನಿಂದಲೇ ಪ್ಯಾನ್‌ನಂಬರ್ ದೊರೆಯುವಂತೆ ಮಾಡುವ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಸ್ಮಾರ್ಟ್‌ಪೋನಿಂದಲೇ ಪಾನ್‌ಕಾರ್ಡ್‌ ಪಡೆಯಲು ಸಾಧ್ಯ..! ಇದಕ್ಕೆಂದೆ ಸಿದ್ಧವಾಗಿ ಆಪ್


ದೇಶದಲ್ಲಿ ತ್ವರಿತವಾಗಿ ಪಾನ್‌ಕಾರ್ಡ್ ವಿತರಿಸುವ ಸಲುವಾಗಿ ಆಧಾರ್ ಇ-ಕೆವೈಸಿಯನ್ನು ಬಳಸಿಕೊಂಡು ಪಾನ್‌ಕಾರ್ಡ್‌ ನೀಡುವ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದ ಆದಾಯ ತೆರಿಗೆ ಇಲಾಖೆ, ಸದ್ಯ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮೊಬೈಲ್‌ನಲ್ಲೇ ಪಾನ್‌ಕಾರ್ಡ್‌ ಪಡೆಯುವ ವ್ಯವಸ್ಥೆಯನ್ನು ಜಾರಿ ಮಾಡಲು ಚಿಂತನೆ ನಡೆಸಿದೆ.

ಪ್ಯಾನ್‌ಗಾಗಿ ಹೊಸ ಆಪ್‌:

ಪ್ಯಾನ್‌ಗಾಗಿ ಹೊಸ ಆಪ್‌:

ಪ್ಯಾನ್‌ ಕಾರ್ಡ್‌ ಪಡೆಯುವ ಸಲುವಾಗಿ ಸ್ಮಾರ್ಟ್‌ಪೋನುಗಳಲ್ಲಿ ಉಪಯೋಗಿಸಲು ಆಪ್‌ವೊಂದನ್ನು ಅಭಿವೃದ್ಧಿ ಪಡೆಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಈ ಆಪ್‌ನಲ್ಲಿ ಪಾನ್‌ಕಾರ್ಡ್‌ ಪಡೆಯಲು ಬಹುದಾಗಿದೆ ಮತ್ತು ಅಲ್ಲಿಂದಲೇ ತೆರಿಗೆಯನ್ನು ಪಾವತಿ ಸಹ ಮಾಡಬಹುದಾಗಿದೆ. ಈಗಾಗಲೇ ಆಪ್ ಅಭಿವೃದ್ಧಿಯ ಹಂತದಲ್ಲಿದೆ.

ಆಧಾರ್ ಮೂಲಕ ಪ್ಯಾನ್‌ಕಾರ್ಡ್‌:

ಆಧಾರ್ ಮೂಲಕ ಪ್ಯಾನ್‌ಕಾರ್ಡ್‌:

ಆದಾಯ ತೆರಿಗೆ ಇಲಾಖೆಯೂ ಆಧಾರ್ ಇ-ಕೆವೈಸಿಯನ್ನು ಬಳಸಿಕೊಂಡು ಪಾನ್‌ಕಾರ್ಡ್‌ ನೀಡುವ ಹೊಸದೊಂದು ಪ್ರಯತ್ನ ಮಾಡುತ್ತಿದ್ದು, ಇದರಿಂದ ತೆರಿಗೆ ಪ್ಯಾಪ್ತಿಗೆ ಹೆಚ್ಚಿನ ಜನರನ್ನು ಸೇರಿಸಲು ಸಹಾಯಕಾರಿಯಾಗಲಿದೆ.

25 ಕೋಟಿ ಪ್ಯಾನ್‌ಕಾರ್ಡ್‌:

25 ಕೋಟಿ ಪ್ಯಾನ್‌ಕಾರ್ಡ್‌:

ಸದ್ಯ ದೇಶದಲ್ಲಿ 25 ಕೋಟಿ ಮಂದಿ ಪ್ಯಾನ್‌ಕಾರ್ಡ್‌ ಹೊಂದಿದ್ದು, ಪ್ರತಿ ವರ್ಷ ಸುಮಾರು 2.5 ಕೋಟಿ ಮಂದಿ ಹೊಸದಾಗಿ ಪಾನ್‌ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸುತ್ತಾರೆ. ಈ ಹಿನ್ನಲೆಯಲ್ಲಿ ಇದನ್ನು ಸರಳಿಕೃತಗೊಳಿಸಲು ಮುಂದಾಗಿದೆ.

50 ಸಾವಿರಕ್ಕಿಂತ ಹೆಚ್ಚಿನ ವ್ಯವಹಾರಕ್ಕೆ ಪಾನ್ ಕಡ್ಡಾಯ:

50 ಸಾವಿರಕ್ಕಿಂತ ಹೆಚ್ಚಿನ ವ್ಯವಹಾರಕ್ಕೆ ಪಾನ್ ಕಡ್ಡಾಯ:

ಸದ್ಯ ಸರಕಾರವೂ 50,000ರೂ ಗಳಿಗಿಂತ ಹೆಚ್ಚಿನ ನಗದದನ್ನು ಪಡೆಯಲು ಪಾನ್‌ ಕಡ್ಡಾಯಗೊಳಿಸಿದ್ದು, ಇದಲ್ಲದೇ 2ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಖರೀದಿಗೂ ಪಾನ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ಈ ಹಿನ್ನಲೆಯಲ್ಲಿ ನಿಮ್ಮ ಪಾನ್‌ಕಾರ್ಡ್‌ ಪಡೆಯಲು ಮುಂದಾಗಿ.

Best Mobiles in India

Read more about:
English summary
In step with government's digital India drive, the Income Tax department is developing an app that will soon allow assessees to pay taxes or apply for PAN using smartphones.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X