Subscribe to Gizbot

ಪೇಟಿಎಂ ಪೆಮೆಂಟ್ ಬ್ಯಾಂಕ್ ಡೆಬಿಟ್ ಕಾರ್ಡ್ ಪಡೆಯುವುದು ಹೇಗೆ?

Posted By: Tejaswini P G

ಡಿಮಾನಿಟೈಸೇಶನ್ ಅಥವಾ ನೋಟು ರದ್ಧತಿಯ ನಂತರ ಪೇಟಿಯಂ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಇ-ವಾಲೆಟ್ ಆಗಿ ಹೊರಹೊಮ್ಮಿದೆ. ಕೆಲ ತಿಂಗಳ ಹಿಂದೆ ಪೇಟಿಯಂ ತನ್ನ ನೂತನ ಪೇಯ್ಮೆಂಟ್ಸ್ ಬ್ಯಾಂಕ್ ಅನ್ನು ಲಾಂಚ್ ಮಾಡಿದ್ದು, ಆನ್ಲೈನ್ ವ್ಯವಹಾರಗಳ ಮೇಲೆ ಶೂನ್ಯ ಶುಲ್ಕ, ಕನಿಷ್ಠ ಬ್ಯಾಲೆನ್ಸ್ ಅಗತ್ಯವಿಲ್ಲ, ವರ್ಚ್ಯುವಲ್ ಡೆಬಿಟ್ ಕಾರ್ಡ್ ಮೊದಲಾದ ಸೌಲಭ್ಯಗಳನ್ನು ನೀಡುತ್ತಿದೆ.

ಪೇಟಿಎಂ ಪೆಮೆಂಟ್ ಬ್ಯಾಂಕ್ ಡೆಬಿಟ್ ಕಾರ್ಡ್ ಪಡೆಯುವುದು ಹೇಗೆ?

ಈ ಪೇಟಿಯಂ ಪೇಯ್ಮೆಂಟ್ಸ್ ಬ್ಯಾಂಕ್ ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ತೆರೆಯುವ ಅವಕಾಶ ಮಾಡಿಕೊಡುತ್ತದಲ್ಲದೆ ವರ್ಚ್ಯುವಲ್ ಡೆಬಿಟ್ ಕಾರ್ಡ್ ನೀಡುವ ಮೂಲಕ ಸುಲಭ ಮತ್ತು ವೇಗವಾಗಿ ಪಾವತಿಮಾಡಲು ಅನುವು ಮಾಡಿಕೊಡುತ್ತದೆ.

ಈ ವರ್ಚ್ಯುವಲ್ ಡೆಬಿಟ್ ಕಾರ್ಡ್ ಅನ್ನು ಯಾವುದೇ ಇತರ ಕ್ರೆಡಿಟ್ ಕಾರ್ಡ್ ನಂತೆ ಬಳಸಬಹುದಾಗಿದ್ದು, ಖಾತೆದಾರರ ಹೆಸರು, 16-ಅಂಕಿಯ ಕಾರ್ಡ್ ಸಂಖ್ಯೆ, ಎಕ್ಸ್ಪೈರಿ ದಿನಾಂಕ, ಮತ್ತು CVV ಸಂಖ್ಯೆ ಮೊದಲಾದ ಮಾಹಿತಿ ಹೊಂದಿರುತ್ತದೆ.

ಬಳಕೆದಾರರು ಆನ್ಲೈನ್ ಖರೀದಿಯ ವೇಳೆ ಹಣ ಪಾವತಿಸಲು ಇದನ್ನು ಬಳಸಬಹುದು. ಈಗ ಪೇಟಿಯಂ ತನ್ನ ಬಳಕೆದಾರರಿಗೆ ವಿನಂತಿಯ ಮೇರೆಗೆ ಫಿಸಿಕಲ್ ಡೆಬಿಟ್ ಕಾರ್ಡ್ ಹೊಂದುವ ಅವಕಾಶ ನೀಡುತ್ತಿದೆ. ಪೇಟಿಯಂ ಪೇಯ್ಮೆಂಟ್ಸ್ ಬ್ಯಾಂಕ್ ನ ಫಿಸಿಕಲ್ ಡೆಬಿಟ್ ಕಾರ್ಡ್ ಪಡೆಯಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ

ಹಂತ 1:
ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಪೇಟಿಯಂ ಆಪ್ ತೆರೆದು ಪರದೆಯ ಕೆಳಭಾಗದಲ್ಲಿ ಬಲಬದಿಯಲ್ಲಿರುವ 'ಬ್ಯಾಂಕ್' ಐಕಾನ್ ಮೇಲೆ ಕ್ಲಿಕ್ ಮಾಡಿ

ಹಂತ 2: ಈ ಪುಟದಲ್ಲಿ ನೀವು ವರ್ಚ್ಯುವಲ್ ಡೆಬಿಟ್ ಕಾರ್ಡ್, ಬ್ಯಾಲೆನ್ಸ್, ಉಳಿತಾಯ ಖಾತೆ ವಿವರಗಳು ಮೊದಲಾದ ಆಯ್ಕೆಗಳನ್ನು ನೋಡಬಹುದು. ಕೆಳಗೆ ಸ್ಕ್ರೋಲ್ ಮಾಡುವ ಮೂಲಕ 'ಡೆಬಿಟ್ & ATC ಕಾರ್ಡ್’ ಆಯ್ಕೆ ಪಡೆಯಿರಿ.

ಹಂತ 3: ಆ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನೀವು ನಿಮ್ಮ ವರ್ಚ್ಯುವಲ್ ಡೆಬಿಟ್ ಕಾರ್ಡ್ , ಅದನ್ನು ಬ್ಲಾಕ್ ಮಾಡುವ ಆಯ್ಕೆ ಮತ್ತು ಹೊಸ ಕಾರ್ಡ್ ಗೆ ವಿನಂತಿಸುವ ಆಯ್ಕೆಯನ್ನು ಕಾಣಬಹುದು

ಹಂತ 4: ಈಗ 'ರಿಕ್ವೆಸ್ಟ್ ಕಾರ್ಡ್' ಮೇಲೆ ಕ್ಲಿಕ್ ಮಾಡಿ

ಹಂತ 5: ಈಗ ಅದು ನಿಮ್ಮನ್ನು ಮುಂದಿನ ಪುಟಕ್ಕೆ ಕರೆದೊಯ್ಯುತ್ತದೆ. ಈ ಪುಟದಲ್ಲಿ ನಿಮ್ಮ ಕಾರ್ಡ್ ನ ವಿವರಗಳು ಮತ್ತು ಅದನ್ನು ತಲುಪಿಸಬೇಕಾದ ವಿಳಾಸವನ್ನು ನೀವು ಕಾಣಬಹುದು. ಈ ವಿಳಾಸವನ್ನು ನೀವು ಬದಲಿಸಲು ಬಯಸಿದರೆ 'ಆಡ್ ನ್ಯೂ' ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಡಬಹುದು.

ಹಂತ 6: ನೀವು ನೀಡಿರುವ ಮಾಹಿತಿಯೆಲ್ಲವೂ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ಮೇಲೆ 'ಪ್ರೊಸೀಡ್ ಟು ಪೇ ರೂ 120' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 7: ಈ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ನಿಮ್ಮ ಫಿಸಿಕಲ್ ಡೆಬಿಟ್ ಕಾರ್ಡ್ ಅನ್ನು ಕೆಲ ದಿನಗಳಲ್ಲಿ ನಿಮ್ಮ ಆಯ್ಕೆಯ ವಿಳಾಸಕ್ಕೆ ತಲುಪಿಸಲಾಗಿತ್ತದೆ.

ಹಂತ 8: ಈ ಫಿಸಿಕಲ್ ಡೆಬಿಟ್ ಕಾರ್ಡ್ ಬಳಸಿ ಮುಂಬೈ, ನವ ದೆಹಲಿ, ಬೆಂಗಳೂರು, ಚೆನ್ನೈ, ಕೋಲ್ಕೋತಾ ಮತ್ತು ಹೈದರಾಬಾದ್ ನಂತಹ ಮೆಟ್ರೋ ನಗರಗಳಲ್ಲಿ, ಯಾವುದೇ ಬ್ಯಾಂಕ್ ನ ಎಟಿಎಮ್ ಗಳಲ್ಲಿ ನೀವು ಹಣ ಪಡೆಯಬಹುದಾಗಿದೆ. ಈ ಡೆಬಿಟ್ ಕಾರ್ಡ್ ಬಳಸಿ ಮಾಡುವ ಮೊದಲ ಮೂರು ವಿತ್ಡ್ರಾವಲ್ ಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ನಂತರದ ವಿತ್ಡ್ರಾವಲ್ ಗಳಿಗೆ ಪ್ರತಿ ವಿತ್ಡ್ರಾವಲ್ಗೆ ರೂ 20 ರಂತೆ ಮತ್ತು ಮಿನಿ ಸ್ಟೇಟ್ಮೆಂಟ್, ಬ್ಯಾಲೆನ್ಸ್ ಚೆಕ್, ಪಿನ್ ಚೇಂಜ್ ಮೊದಲಾದ ಟ್ರ್ಯಾನ್ಸ್ಯಾಕ್ಷನ್ ಗಳಿಗೆ ಪ್ರತಿ ಟ್ರ್ಯಾನ್ಸ್ಯಾಕ್ಷನ್ ಗೆ ರೂ 5 ರಂತೆ ಶುಲ್ಕ ವಿಧಿಸಲಾಗುವುದು.

ವಾಟ್ಸ್‌ಆಪ್ ಕುರಿತ ಆಚ್ವರಿ ಮಾಹಿತಿ ಬಿಚ್ಚಿಟ್ಟ ಫೇಸ್‌ಬುಕ್ CEO..!

English summary
Paytm has launched Payments bank with zero charges on online transactions, no minimum balance requirement and free virtual debit card. Here's how you can get a physical debit card
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot