ನಿಮ್ಮ ಪಿಸಿಗೆ ವೈರಸ್ ಅಟ್ಯಾಕ್ ಆಗಿದೆಯಾ ಎಂಬುದನ್ನು ಪರೀಕ್ಷಿಸುವುದು ಹೇಗೆ?

By Gizbot Bureau
|

ಕಂಪ್ಯೂಟರ್ ವೈರಸ್ ಗಳು ಮತ್ತು ಮಾಲ್ವೇರ್ ಗಳು ಪಿಸಿಗೆ ಉಂಟಾಗುವ ಹೊಸ ಭೀತಿಯೇನಲ್ಲ. ಆಗಾಗ ಮಾಲ್ವೇರ್ ಗಳು ಅಥವಾ ವೈರಸ್ ಗಳು ಪಿಸಿಗೆ ಹರಡುವುದು ಮತ್ತು ಬಳಕೆದಾರರ ಡಾಟಾ ಮತ್ತು ಮಾಹಿತಿಗಳನ್ನು ಕದಿಯುವುದಕ್ಕೆ ಪ್ರಯತ್ನಿಸುವುದು ಸರ್ವೇಸಾಮಾನ್ಯವಾಗಿ ಎಲ್ಲಾ ಕಂಪ್ಯೂಟರ್ ಡಿವೈಸ್ ಗಳಲ್ಲೂ ಕೂಡ ನಡೆಯುತ್ತಲೇ ಇರುತ್ತದೆ. ಆದರೆ ಮಾಲ್ವೇರ್ ಗಳು ಅಥವಾ ವೈರಸ್ ಗಳು ನಿಮ್ಮ ಕಂಪ್ಯೂಟರ್ ಗೆ ಅಟ್ಯಾಕ್ ಮಾಡಿದೆಯಾ ಎಂಬುದನ್ನು ಪರೀಕ್ಷಿಸುವುದು ಹೇಗೆ ಎಂಬ ಬಗ್ಗೆ ನಿಮಗೆ ತಿಳಿದಿದೆಯಾ? ನಿಮ್ಮ ಪಿಸಿ/ಲ್ಯಾಪ್ ಟಾಪ್ ನಲ್ಲಿ ವೈರಸ್ ನ ಸೋಂಕು ತಗುಲಿದೆಯಾ ಎಂಬ ಬಗ್ಗೆ ಖಾತ್ರಿ ಮಾಡಿಕೊಳ್ಳುವುದು ಹೇಗೆ?

ವೈರಸ್ ನಿಂದ ನಿಮ್ಮ ಕಂಪ್ಯೂಟರ್ ಪರಿಣಾಮಕ್ಕೆ ಒಳಗಾಗಿದೆಯೇ ಎಂಬುದನ್ನು ಪರೀಕ್ಷಿಸುವುದು ಹೇಗೆ?

ವೈರಸ್ ನಿಂದ ನಿಮ್ಮ ಕಂಪ್ಯೂಟರ್ ಪರಿಣಾಮಕ್ಕೆ ಒಳಗಾಗಿದೆಯೇ ಎಂಬುದನ್ನು ಪರೀಕ್ಷಿಸುವುದು ಹೇಗೆ?

ಸಾಮಾನ್ಯ ಪ್ರದರ್ಶನಕ್ಕಿಂತ ನಿಮ್ಮ ಕಂಪ್ಯೂಟರ್ ಮತ್ತಷ್ಟು ನಿಧಾನವಾಗಿ ಕೆಲಸ ಮಾಡುತ್ತಿದೆಯಾ ಎಂಬುದನ್ನು ಮೊದಲಿಗೆ ಚೆಕ್ ಮಾಡಿ. ಇದು ನಿಮ್ಮ ಕಂಪ್ಯೂಟರ್ ನಲ್ಲಿ ಪ್ರೊಸೆಸ್ ಆಗುವ ರಿಸೋರ್ಸ್ ಗಳ ಕೋಡ್ ಗಳು ಮಾಲ್ವೇರ್ ಗಳ ಫಲಿತಾಂಶದಿಂದ ಈ ರೀತಿ ಆಗಿರುವ ಸಾಧ್ಯತೆ ಇರುತ್ತದೆ.ನಿಮ್ಮ ಕಂಪ್ಯೂಟರ್ ನ ರಿಸೋರ್ಸ್ ಗಳು ಹೆವಿ ಅಪ್ಲಿಕೇಷನ್ ಗಳನ್ನು ರನ್ ಮಾಡುತ್ತಿಲ್ಲವಾದರೆ ನಿಮ್ಮ ಕಂಪ್ಯೂಟರ್ ಅಪ್ಲಿಕೇಷನ್ ಅಥವಾ ಪ್ರೋಗ್ರಾಮ್ ನ್ನು ಲೋಡ್ ಮಾಡುವುದಕ್ಕೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದ್ದರೆ ವೈರಸ್ ನಿಂದ ನಿಮ್ಮ ಕಂಪ್ಯೂಟರ್ ಅಟ್ಯಾಕ್ ಆಗಿರುವ ಸಾಧ್ಯತೆ ಇರುತ್ತದೆ.

ಫೈಲ್ ಕರಪ್ಟ್ ಆಗುವಿಕೆ:

ಫೈಲ್ ಕರಪ್ಟ್ ಆಗುವಿಕೆ:

ಮತ್ತೊಂದು ನೀವು ಗಮನಿಸಬಹುದಾದ ಲಕ್ಷಣವೆಂದರೆ ನಿಮ್ಮ ಸಿಸ್ಟಮ್ ನಲ್ಲಿ ಬಿಓಡಿ( ಬ್ಲೂ ಸ್ಕ್ರೀನ್ ಆಫ್ ಡೆತ್) ಕಾಣಿಸುವುದು. ಪ್ರೋಗ್ರಾಮ್ ನ್ನು ರನ್ ಮಾಡಲು ನೀವು ಯಾವಾಗ ಬಯಸುತ್ತೀರೋ ಆಗ ಫೈಲ್ ಕರಪ್ಟ್ ಆಗಿದೆ ಎಂದು ಸಿಸ್ಟಮ್ ನಲ್ಲಿ ಪದೇ ಪದೇ ತೋರಿಸುವುದು ಕೂಡ ಮಾಲ್ವೇರ್ ಗಳ ಪರಿಣಾಮಕ್ಕೆ ನಿಮ್ಮ ಕಂಪ್ಯೂಟರ್ ಒಳಗಾಗಿದೆ ಎಂಬುದರ ಸೂಚನೆಯಾಗಿರುತ್ತದೆ.

ರ್ಯಾಡಮ್ ಶಾರ್ಟ್ ಕಟ್ ಗಳು:

ರ್ಯಾಡಮ್ ಶಾರ್ಟ್ ಕಟ್ ಗಳು:

ರ್ಯಾಡಮ್ ಆಗಿ ಕೆಲವು ಶಾರ್ಟ್ ಕಟ್ ಗಳು ಫೋಲ್ಡರ್ ನ ಒಳಗಡೆ ಸೃಷ್ಟಿಯಾಗುವುದು ಕೂಡ ವೈರಸ್ ಗಳ ದಾಳಿಗೆ ನಿಮ್ಮ ಕಂಪ್ಯೂಟರ್ ಒಳಗಾಗಿದೆ ಎಂಬುದರ ಸೂಚನೆಯಾಗಿರುತ್ತದೆ. ರ್ಯಾಡಂ ಮೆಸೇಜ್ ಗಳು ಡ್ರೈವ್ ಲಾಕ್ ಆಗಿದೆ ಎಂದು ತೋರಿಸುವುದು ಅಥವಾ ಕನೆಕ್ಟ್ ಆಗಿರುವ ಪ್ರಿಂಟರ್ ಸರಿಯಾಗಿ ಪ್ರತಿಕ್ರಿಯೆ ಮಾಡದೇ ಇರುವುದು ಇತ್ಯಾದಿಗಳು ಕೂಡ ವೈರಸ್ ಗಳ ಅಟ್ಯಾಕ್ ನ್ನು ಸೂಚಿಸುತ್ತದೆ.

ವೈರಸ್ ಗಳನ್ನು ರಿಮೂವ್ ಮಾಡುವುದು:

ವೈರಸ್ ಗಳನ್ನು ರಿಮೂವ್ ಮಾಡುವುದು:

ಕೆಲವು ಬೇಸಿಕ್ ಮಾಹಿತಿಗಳು ಕೂಡ ನಿಮ್ಮ ಕಂಪ್ಯೂಟರ್ ಎಫೆಕ್ಟ್ ಆಗಿದೆಯೇ ಇಲ್ಲವೇ ಎಂಬುದನ್ನು ಸೂಚಿಸುತ್ತದೆ. ಅಪ್ ಡೇಟ್ ಆಗಿರುವ ಡಾಟಾಬೇಸ್ ಜೊತೆಗೆ ಆಂಟಿ ವೈರಸ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ ನಿಮ್ಮ ಸಿಸ್ಟಮ್ ಗೆ ಅಟ್ಯಾಕ್ ಮಾಡಿರುವ ವೈರಸ್ ಗಳನ್ನು ರಿಮೂವ್ ಮಾಡಿಕೊಳ್ಳಬಹುದು.

Most Read Articles
Best Mobiles in India

Read more about:
English summary
PC Not Working Properly? It Might Be Affected By A Virus. Follow These Steps To Confirm The Same.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X