ಪವರ್ ಬಟನ್ ಕೆಲಸ ಮಾಡುತ್ತಿಲ್ಲವೇ? ಹಾಗಾದ್ರೆ ಸ್ಮಾರ್ಟ್ ಫೋನ್ ಬಳಸುವುದು ಹೇಗೆ?

By Gizbot Bureau
|

ಕೆಲವು ಸಂದರ್ಬಗಳಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಪವರ ಬಟನ್ ಬಳಸುವುದು ಕಷ್ಟವಾಗಿ ಬಿಡುತ್ತದೆ. ಎಷ್ಟು ಮಾಡಿದ್ರೂ ಅದು ಕೆಲಸವೇ ಮಾಡುವುದಿಲ್ಲ. ಇದಕ್ಕೆ ಅಂತಿಮ ಪರಿಹಾರವೆಂದರೆ ಪವರ್ ಬಟನ್ ನ್ನು ಪುನಃ ಫಿಕ್ಸ್ ಮಾಡಿಸುವುದು ಆದರೆ ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಿರುವಾಗ ಸದ್ಯಕ್ಕೆ ಪವರ್ ಬಟನ್ ಇಲ್ಲದೆಯೇ ಹೇಗೆ ಸ್ಮಾರ್ಟ್ ಫೋನ್ ನ್ನು ಬಳಕೆ ಮಾಡುವುದು? ಸ್ಮಾರ್ಟ್ ಫೋನ್ ಸ್ಕ್ರೀನ್ ನ್ನು ಎಬ್ಬಿಸುವುದು ಹೇಗೆ? ಈ ಪ್ರಶ್ನೆ ನಿಮಗೆ ಆಶ್ಚರ್ಯ ಅನ್ನಿಸುತ್ತಿರಬಹುದು. ಆದರೆ ಇದಕ್ಕೂ ಕೆಲವು ಪರಿಹಾರಗಳಿವೆ. ಅಂತಹ ಕೆಲವು ಪರಿಹಾರಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ವಿಧಾನ 1: ಫಿಂಗರ್ ಪ್ರಿಂಟ್ ಸ್ಕ್ಯಾನರ್ ಬಳಸಿ

ವಿಧಾನ 1: ಫಿಂಗರ್ ಪ್ರಿಂಟ್ ಸ್ಕ್ಯಾನರ್ ಬಳಸಿ

ಹೆಚ್ಚಿನ ಸ್ಮಾರ್ಟ್ ಫೋನ್ ಗಳು ಇದೀಗ ಆಕ್ಟಿವ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ಹೊಂದಿರುತ್ತದೆ. ಇವು ಸ್ಮಾರ್ಟ್ ಫೋನಿನ ಡಿಸ್ಪ್ಲೇ ಆಫ್ ಆದ ನಂತರವೂ ಆಕ್ಟೀವ್ ಆಗಿರುತ್ತವೆ.ಒಂದು ವೇಳೆ ನೀವು ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ಕಾನ್ಫಿಗರ್ ಮಾಡಿದ್ದಲ್ಲಿ ಖಂಡಿತ ಡಿವೈಸ್ ನ್ನು ಅನ್ ಲಾಕ್ ಮಾಡುವುದಕ್ಕೆ ಇದನ್ನು ಬಳಕೆ ಮಾಡಬಹುದು.

ವಿಧಾನ 2: ಗೆಷ್ಚರ್ ಆಧಾರಿತ ಫೀಚರ್ ಬಳಸಿ

ವಿಧಾನ 2: ಗೆಷ್ಚರ್ ಆಧಾರಿತ ಫೀಚರ್ ಬಳಸಿ

ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಕೆಲವು ವೇಕ್ ಅಪ್ ಗೆಷ್ಚರ್ ಗಳು ಇರುತ್ತವೆ ಉದಾಹರಣೆಗೆ ಡಬಲ್ ಟ್ಯಾಪ್ ಟು ವೇಕ್, ಸ್ವೈಪ್ ಟು ವೇಕ್, ಲಿಫ್ಟ್ ಟು ವೇಕ್ ಇತ್ಯಾದಿ. ಸ್ಮಾರ್ಟ್ ಫೋನಿನ ಸೆಟ್ಟಿಂಗ್ ಮೆನುವಿನಲ್ಲಿ ಈ ಫೀಚರ್ ನ್ನು ಆನ್ ಮಾಡಿ ಮತ್ತು ಇದನ್ನು ಸ್ಮಾರ್ಟ್ ಫೋನ್ ಸ್ಕ್ರೀನ್ ನ್ನು ಎಬ್ಬಿಸಲು ಬಳಕೆ ಮಾಡಿ.

ವಿಧಾನ 3: ಥರ್ಡ್ ಪಾರ್ಟಿ ಆಪ್ ಗಳ ಬಳಕೆ

ವಿಧಾನ 3: ಥರ್ಡ್ ಪಾರ್ಟಿ ಆಪ್ ಗಳ ಬಳಕೆ

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ಆಪ್ ಗಳು ಇದಕ್ಕಾಗಿ ಲಭ್ಯವಿದೆ ಉದಾಹರಣೆಗೆ ಪವರ್ ಬಟನ್ ಟು ವಾಲ್ಯೂಮ್ ಬಟನ್ ಇತ್ಯಾದಿ.ಇವುಗಳ ಬಳಕೆದಾರರಿಗೆ ಸ್ಮಾರ್ಟ್ ಫೋನಿನ ಪವರ್ ಬಟನ್ನಿನಿಂದ ಹಿಡಿದು ವಾಲ್ಯೂಮ್ ಬಟನ್ ವರೆಗೆ ಎಲ್ಲಾ ಬಟನ್ ಗಳ ಫಂಕ್ಷನಾಲಿಟಿಯನ್ನು ರಿವ್ಯಾಂಪ್ ಮಾಡುವುದಕ್ಕೆ ಅವಕಾಶ ನೀಡುತ್ತವೆ. ಗ್ರಾವಿಟಿ ಸ್ಕ್ರೀನ್, ಪ್ರಾಕ್ಸಿಮಿಟಿ ಆಕ್ಷನ್ ಮತ್ತು ಇತ್ಯಾದಿ ಹಲವು ಆಪ್ ಗಳು ಇದೇ ರೀತಿಯ ಕೆಲಸವನ್ನು ನಿರ್ವಹಿಸುತ್ತವೆ.

ವಿಧಾನ 4: ಮತ್ತೆ ಮತ್ತೆ ಯತ್ನಿಸುವ ವಿಧಾನ

ವಿಧಾನ 4: ಮತ್ತೆ ಮತ್ತೆ ಯತ್ನಿಸುವ ವಿಧಾನ

ಕೆಲವು ಸ್ಮಾರ್ಟ್ ಫೋನ್ ಗಳು ಚಾರ್ಜಿಂಗ್ ನೋಟಿಫಿಕೇಷನ್ ಕಾಣಲು ಆರಂಭಿಸಿದ ನೇಲೆ ಆನ್ ಆಗುತ್ತವೆ. ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಅಲಾರಾಂ ಸೆಟ್ ಮಾಡಿ ಇಟ್ಟಿರುವುದರಿಂದಾಗಿ ಆನ್ ಆಗುತ್ತವೆ. ಯಾವಾಗ ಫೋನ್ ಆಫ್ ಆಗಿರುತ್ತವೆಯೇ ಆಲಾರಾಂ ಸಮಯವಾದಾಗ ತನ್ನಿಂದ ತಾನೇ ಆನ್ ಆಗುವ ಸ್ಮಾರ್ಟ್ ಫೋನ್ ಗಳೂ ಕೂಡ ಇವೆ. ಯಾವುದಕ್ಕೂ ನೀವು ಪುನಃ ಪುನಃ ಮರಳಿ ಯತ್ನವ ಮಾಡು ಎಂಬಂತೆ ಪ್ರಯತ್ನಿಸುವುದು ಸೂಕ್ತ.

ಒಂದು ವೇಳೆ ಮೇಲಿನ ಯಾವುದೇ ವಿಧಾನವೂ ಪರಿಹಾರ ನೀಡದೇ ಇದ್ದಲ್ಲಿ ಕೂಡಲೇ ಅಧಿಕೃತ ಸೇವಾ ಕೇಂದ್ರದಲ್ಲಿ ಪವರ್ ಬಟನ್ ನ್ನು ಫಿಕ್ಸ್ ಮಾಡಿಸಿಕೊಳ್ಳುವುದು ಒಳ್ಳೆಯದು.

Best Mobiles in India

English summary
Power button not working, here’s how to use your smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X