ಫೇಸ್‌ಬುಕ್‌, ವಾಟ್ಸ್ಆಪ್ ಬಳಸುವವರೆಲ್ಲರೂ ಮಾಡಲೇಬೇಕಾದ ಕೆಲಸ ಇದು!!

|

ಸಾಮಾಜಿಕ ಜಾಲತಾಣಗಳ ಒಳಬರುವ ಮುನ್ನ ನಮ್ಮ ಖಾಸಾಗಿ ಮಾಹಿತಿಗಳು ಎಷ್ಟು ಮುಖ್ಯ ಎಂಬುದನ್ನು ಪ್ರತಿಯೋರ್ವರು ತಿಳಿದಿರಬೇಕು. ಹೊಸ ಸ್ಮಾರ್ಟ್‌ಫೋನ್ ಖರೀದಿಸಿ ಫೇಸ್‌ಬುಕ್, ವಾಟ್ಸ್ಆಪ್ ಸೇರಗಿದಂತೆ ಹತ್ತು ಹಲವು ಆಪ್‌ಗಳನ್ನು ಡೌನ್‌ಲೋಡ್ ಮಾಡುವವರು ಅವುಗಳ ಪೂರ್ವಪರ ಮಾಹಿತಿ ಇಲ್ಲದೇ ಖಾತೆ ತೆರೆದುಬಿಡುತ್ತಾರೆ. ಹಾಗಂತ ಅವುಗಳಲ್ಲಿ ಖಾತೆ ತೆರೆಯುವುದು ತಪ್ಪೆಂದು ನಾನು ಹೇಳುತ್ತಿಲ್ಲ. ಬದಲಾಗಿ ನೀವು ಖಾತೆ ತೆರೆಯುವಾಗ ಅವುಗಳಲ್ಲಿ ನಿಮ್ಮ ಖಾಸಾಗಿ ಮಾಹಿತಿ ರಕ್ಷಣೆ ಹೇಗಿರಬೇಕು ಎಂಬುದನ್ನು ನಾನು ತಿಳಿಸುತ್ತಿದ್ದೇನೆ.

ಈಗಾಗಲೇ ಹಲವು ಅಧ್ಯಯನಗಳು ಹೇಳಿರುವಂತೆ, ಹೊಸದಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರು ತಮ್ಮ ಇಮೇಲ್‌, ಮನೆ ಅಥವಾ ಊರಿನ ವಿಳಾಸ, ಮೊಬೈಲ್‌ ಸಂಖ್ಯೆಗಳನ್ನು ಎಲ್ಲರಿಗೂ ತಿಳಿಯುವಂತೆ ಇಡುತ್ತಾರೆ. ಇದರಿಂದ ಆಗಬಹುದಾದ ಅನಾಹುತಗಳನ್ನು ಅವರು ಊಹಿಸಿರುವುದಿಲ್ಲ. ಇದು ಅವರಿಗೆ ತಿಳಿಯುವ ವೇಳೆಗೆ ಅನಾಹುತಗಳು ಜರುಗಬಹುದು ಎಂದು ಹೇಳಿವೆ. ಹಾಗಾಗಿ, ನಾವು ಸಾಮಾಜಿಕ ಜಾಲತಾಣಗಳ ಒಳಹೊಕ್ಕುವ ಮುನ್ನವೇ ನಮ್ಮ ಪ್ರೈವೆಸಿ ಸುರಕ್ಷತೆ ಎಂಬ ಮೊದಲ ಪಾಠವನ್ನು ತಿಳಿದರೆ ಒಳ್ಳೆಯದು.

ಫೇಸ್‌ಬುಕ್‌, ವಾಟ್ಸ್ಆಪ್ ಬಳಸುವವರೆಲ್ಲರೂ ಮಾಡಲೇಬೇಕಾದ ಕೆಲಸ ಇದು!!

ಸಾಮಾಜಿಕ ಜಾಲತಾಣಗಳು ಯಾವಾಗಲೂ ಪಬ್ಲಿಕ್ ಆಗಿರುವುದರಿಂದ ನೀವು ಆದಷ್ಟು ಖಾಸಾಗಿಯಾಗಿ ಅವುಗಳನ್ನು ಬಳಸಬೇಕು. ಉದಾಹರಣೆಗೆ ಫೇಸ್‌ಬುಕ್‌ ಹೊಸ ಖಾತೆ ತೆರೆ ಯುವ ವೇಳೆ ಮೊಬೈಲ್‌ ಸಂಖ್ಯೆ ನೀಡಿದರೆ, ಬಳಿಕ ಅದನ್ನು "ಓನ್ಲಿ ಮೀ' ಆಯ್ಕೆಗೆ ಬದಲಾಯಿಸಿಕೊಳ್ಳಿ. ಇದ ರಿಂದ ಅಪರಿಚಿತರಿಂದ ಕಿರಿಕಿರಿಯನ್ನು ತಡೆಯಬಹುದು. ಜೊತೆಗೆ ನಿಮ್ಮ ಪೇಸ್‌ಬುಕ್ ಪ್ರೊಫೈಲ್ ಚಿತ್ರ ಯಾರಿಗೆ (ಫ್ರೆಂಡ್ಸ್ ಅಥವಾ ಸಂಬಂಧಿಕರು ಮಾತ್ರ)ಯಾರಿಗೆ ಕಾಣಬೇಕು ಎಂಬುದನ್ನೂ ಸಹ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ರೀತಿಯ ಕೆಲ ಮಾಹಿತಿಗಳು ಇಲ್ಲಿವೆ.

ಫೇಸ್‌ಬುಕ್‌ ಖಾತೆ

ಫೇಸ್‌ಬುಕ್‌ ಖಾತೆ

ನೀವು ಫೇಸ್‌ಬುಕ್ ಖಾತೆ ತೆರೆಯುವಾಗಲೇ ಕೆಲವು ಚೌಕಟ್ಟು ರೂಪಿಸಿಕೊಳ್ಳಬೇಕು. ಪಬ್ಲಿಕ್‌, ಫ್ರೆಂಡ್ಸ್, ಫ್ರೆಂಡ್ಸ್ ಆಫ್ ಫ್ರೆಂಡ್ಸ್, ಓನ್ಲಿ ಮಿ ಮೊದಲಾದ ಆಯ್ಕೆಗಳನ್ನು ಫೇಸ್‌ ಬುಕ್‌ ತನ್ನ ಬಳಕೆದಾರರಿಗೆ ಒದಗಿಸಿದೆ. ಫೇಸ್‌ಬುಕ್ ಸೆಟ್ಟಿಂಗ್ಸ್ ತೆರೆದು ಜನರಲ್ ಎಂಬ ಆಯ್ಕೆಯಲ್ಲಿ ಇದನ್ನು ನೀವು ಕಾಣಬಹುದು.ಚಿತ್ರಗಳನ್ನು ಹಂಚಿ ಕೊಳ್ಳುವುದಾದರೆ "ಪೋಸ್ಟ್‌' ಮೇಲೆ ಕಾಣುವ ಮೂರು ಚುಕ್ಕಿಗಳನ್ನು ಆಯ್ಕೆ ಮಾಡಿ, "ಎಡಿಟ್ ಪ್ರೈವೆಸಿ' ಮೇಲೆ ಟ್ಯಾಪ್ ಮಾಡಿನಿಮ್ಮ ಚಿತ್ರ ಯಾರಿಗೆ ಕಾಣಬೇಕು ಎಂಬುದನ್ನೂ ಆಯ್ಕೆ ಮಾಡಿಕೊಳ್ಳಿ.

ವಾಟ್ಸ್‌ಆಪ್ ಖಾತೆ

ವಾಟ್ಸ್‌ಆಪ್ ಖಾತೆ

ವಾಟ್ಸ್‌ಆಪ್ ಖಾತೆ ತೆರೆದಾಗ ನಿಮ್ಮ ಪ್ರೊಫೈಲ್‌ ಪಿಕ್ಚರ್ ನಿಮ್ಮಲ್ಲಿರುವ ಸಂಪರ್ಕ ಸಂಖ್ಯೆಗಳಿಗೆ ಮಾತ್ರ ಕಾಣಿಸುವಂತಹ ಆಯ್ಕೆ ಇದೆ. ಸೆಟ್ಟಿಂಗ್ಸ್ - ಅಕೌಂಟ್- ಪ್ರೈವೆಸಿ ಇಲ್ಲಿ ನೀವು ಕೊನೆಯ ಬಾರಿ ವಾಟ್ಸ್‌ಆಪ್ ಬಳಸಿದ ಸಮಯ ಯಾರಿಗೆಲ್ಲ ಕಾಣಬೇಕು ಎಂಬುದನ್ನೂ ಸಹ ನೀವೇ ನಿರ್ಧರಿಸಬಹುದಾಗಿದೆ. ಅಲ್ಲಿ ಎವರಿಒನ್, ಮೈ ಕಾಂಟ್ಯಾಕ್ಟ್ ಮತ್ತು ನೋಬಡಿ ಎಂಬ ಆಯ್ಕೆ ಗಳಿವೆ. ನೀವು ಅಪ್‌ಡೇಟ್‌ ಮಾಡುವ ಸ್ಟೇಟಸ್‌ ಯಾರಿಗೆ ಕಾಣಬೇಕು ಎಂಬುದನ್ನೂ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ನ್ಯರಿಂದ ನೀವು ಸೇಫ್ ಆಗಿ ಇರಬಹುದು.

ಟ್ವಿಟರ್ ಖಾತೆ

ಟ್ವಿಟರ್ ಖಾತೆ

ಫೇಸ್‌ಬುಕ್, ವಾಟ್ಸ್ಆಪ್‌ನಷ್ಟು ಜನಪ್ರಿಯವಲ್ಲದಿದ್ದರೂ ಟ್ವಿಟ್ಟರ್ ಖಾತೆಯನ್ನು ತೆರೆಯುವ ಭಾರತೀಯರ ಸಂಖ್ಯೆ ಕಡಿಮೆ ಏನಿಲ್ಲ. ಹಾಗಾಗಿ, ನೀವು ಟ್ವಿಟ್ಟರ್ ಖಾತೆ ತೆರೆಯುವಾಗ ನಿಮ್ಮ ಖಾತೆಯನ್ನು ನಿಮಗೆ ಬೇಕಾದಂತೆ ಸೆಟ್ಟಿಂಗ್ ಮಾಡಿಕೊಳ್ಳಿ. ನಿಮ್ಮ ಖಾತೆ ಪಬ್ಲಿಕ್‌ ಆಗಿದ್ದರೆ ಎಲ್ಲರೂ ಫಾಲೋ ರಿಕ್ವೆಸ್ಟ್ ಕಳುಹಿಸಬಹುದು. ಆದರೆ, ನಿಮ್ಮ ಅನುಮತಿ ಪಡೆದು ಫಾಲೋ ಮಾಡಬೇಕಾದರೆ ಸೆಟ್ಟಿಂಗ್ ಅಂಡ್ ಪ್ರೈವೆಸಿ ಕ್ಲಿಕ್‌ ಮಾಡಿ. ನಂತರ ಪ್ರೈವೆಸಿ ಅಂಡ್ ಸೇಫ್ಟಿಯಲ್ಲಿ ಪ್ರೊಟೆಕ್ಟ್ ಯುವರ್ ಟ್ವಿಟ್ಟರ್‌ನಲ್ಲಿ ಇದನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ಇನ್‌ಸ್ಟಾಗ್ರಾಮ್ ಖಾತೆ

ಇನ್‌ಸ್ಟಾಗ್ರಾಮ್ ಖಾತೆ

ಫೇಸ್‌ಬುಕ್ ಮೂಲಕ ನೇರವಾಗಿ ಲಾಗಿನ್ ಆಗಬಹುದಾದ ಇನ್‌ಸ್ಟಾಗ್ರಾಮ್ನಲ್ಲಿ ನೀವು ಖಾತೆ ತೆರೆಯುವಾಗ ಫೇಸ್‌ಬುಕ್ ಖಾತೆ ಬಗ್ಗೆ ಎಚ್ಚರ ಇದ್ದರೆ ಸಾಕು. ಆದರೆ, ಇಲ್ಲೂ ನಾವು ಹೆಚ್ಚು ಎಚ್ಚರ ವಹಿಸುವ ಅಗತ್ಯ ಇದೆ. ನಿಮ್ಮ ಇನ್‌ಸ್ಟಾಗ್ರಾಮ್ ಖಾತೆ ಪ್ರೈವೇಟ್‌ ಅಥವಾ ಪಬ್ಲಿಕ್‌ ಆಗಿರಬೇಕೇ ಎಂಬುದನ್ನು ನೀವಿಲ್ಲಿ ನಿರ್ಧರಿಸಬಹುದು. ಸೆಟ್ಟಿಂಗ್ಸ್ ತೆರೆದು ಪ್ರೈವೆಸಿ ಅಂಡ್ ಸೆಕ್ಯುರಿಟಿ ಆಯ್ಕೆ ಮಾಡಿದರೆ ನಿಮ್ಮ ಖಾತೆಪಬ್ಲಿಕ್‌ ಆಗಿರಬೇಕೇ ಎಂಬುದನ್ನು ನಿರ್ಧರಿಸಬಹುದು. ನೀವು ಅನುಮತಿ ಕೊಟ್ಟಿದ್ದರೆ ಮಾತ್ರ ಅಪರಿಚಿತರು ಸಂದೇಶ ಕಳುಹಿಸಲು ಸಾಧ್ಯ.

ಸುಲಭ ಪಾಸ್‌ವರ್ಡ್‌

ಸುಲಭ ಪಾಸ್‌ವರ್ಡ್‌

ಈ ಮೇಲಿನ ಜಾಲತಾಣಗಳು ಹೆಚ್ಚು ಜನಪ್ರಿಯವಾಗಿರುವುದರಿಂದ ಇವುಗಳ ಬಗ್ಗೆ ಸ್ವಲ್ಪ ಹೆಚ್ಚಿನ ಸುರಕ್ಷಾ ವಿಷಯಗಳನ್ನು ತಿಳಿಸಿದ್ದೇನೆ. ಆದರೆ, ಇದಕ್ಕಿಂತಲೂ ಸುರಕ್ಷತ ಕ್ರಮ ಎಂದರೆ ಸುರಕ್ಷತ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳುವುದು. ಕೆಲವರು ಹೊಸ ಖಾತೆ ತೆರೆಯುವ ಧಾವಂತದಲ್ಲಿ ಸುಲಭವಾದ ಪಾಸ್‌ವರ್ಡ್‌ಗಳ ಮೊರೆ ಹೊಗುವುದು ಅತ್ಯಂತ ಅಪಾಯಕಾರಿ. ಹಾಗಾಗಿ,. ನಿಮ್ಮ ಪ್ರತಿ ಖಾತೆಗೂ ಪ್ರತ್ಯೇಕ ಪಾಸ್‌ವರ್ಡ್‌ ನೀಡಲು ಮರೆಯದಿರಿ. ನೆನಪಿನಲ್ಲಿಟ್ಟುಕೊಳ್ಳಲು ಸುಲಭ ಎಂದು 123456 ರೀತಿಯ ಪಾಸ್‌ವರ್ಡ್‌ ಬಳಸಲೇಬೇಡಿ.

Best Mobiles in India

English summary
Protect Yourself on Social Networks. Simple Ways to Protect Your Privacy on Social Networks .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X