ಟಚ್ ಕೆಲಸ ಮಾಡುತ್ತಿಲ್ಲ ಎಂದರೆ ಸ್ಮಾರ್ಟ್‌ಫೋನ್‌ ಹಾಳಾಗಿದೆ ಎಂದಲ್ಲ!..ಕಾರಣ ಇಲ್ಲಿವೆ?!

ಮೊಬೈಲ್ ಸ್ಕ್ರೀನ್ ಒಮ್ಮೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು. ಮೊಬೈಲ್ ಉಪಯೋಗಿಸುವಾಗಲೇ ಒಮ್ಮೊಮ್ಮೆ ಸ್ಮಾರ್ಟ್‌ಫೋನ್‌ಗಳ ಸ್ಕ್ರೀನ್‌ಗಳು ಜಪ್ಪಯ್ಯ ಎಂದರೂ ಮುಟ್ಟಿದರೂ, ತಟ್ಟಿದರೂ ಪ್ರತಿಸ್ಪಂದಿಸುವುದೇ ಇಲ್ಲ.!

|

ಫುಲ್‌ಟಚ್ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳ ಆರಂಭಿಕ ಹಂತದಿಂದ ಇಲ್ಲಿಯವರೆಗೂ ಎದುರಾಗುತ್ತಿರುವ ತೊಂದರೆ ಎಂದರೆ ಮೊಬೈಲ್ ಸ್ಕ್ರೀನ್ ಒಮ್ಮೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು. ಮೊಬೈಲ್ ಉಪಯೋಗಿಸುವಾಗಲೇ ಒಮ್ಮೊಮ್ಮೆ ಸ್ಮಾರ್ಟ್‌ಫೋನ್‌ಗಳ ಸ್ಕ್ರೀನ್‌ಗಳು ಜಪ್ಪಯ್ಯ ಎಂದರೂ ಮುಟ್ಟಿದರೂ, ತಟ್ಟಿದರೂ ಪ್ರತಿಸ್ಪಂದಿಸುವುದೇ ಇಲ್ಲ.!

ಇಂತಹ ಪರಿಸ್ಥಿತಿಗಳು ಎದುರಾಗಲು ಹಲವು ಕಾರಣಗಳಿರುತ್ತದೆ. ಆದರೆ, ಎಷ್ಟೋ ಜನ ಖರೀದಿಸಿದ ಫೋನ್ ಹಾಳಾಯಿತು ಎಂದು ಮೊಬೈಲ್ ರಿಪೇರಿ ಅಂಗಡಿಗಳಿಗೆ ತೆರಳುತ್ತಾರೆ. ಆದರೆ, ನಿಮಗೆ ಗೊತ್ತಾ? ಬೆರಳ ಸ್ಪರ್ಶಕ್ಕೆ ಫೋನ್ ಸ್ಪಂದಿಸದಿದ್ದರೆ ಅಥವಾ ಮುಟ್ಟಿದರೆ ಯದ್ವಾತದ್ವ ಕೆಲಸ ಮಾಡುತ್ತದೆ ಎಂದಾದರೆ ನಿಮ್ಮ ಮೊಬೈಲ್ ಹಾಳಾಗಿದೆ ಎಂದಲ್ಲ.!

ಟಚ್ ಕೆಲಸ ಮಾಡುತ್ತಿಲ್ಲ ಎಂದರೆ ಸ್ಮಾರ್ಟ್‌ಫೋನ್‌ ಹಾಳಾಗಿದೆ ಎಂದಲ್ಲ!

ಹೌದು, ಬೆರಳ ಸ್ಪರ್ಶಕ್ಕೆ ಫೋನ್ ಸ್ಪಂದಿಸದಿದ್ದರೆ ಫೋನ್ ತಜ್ಞರಲ್ಲಿಗೆ ಒಯ್ಯುವ ಮುನ್ನ ಕೆಲವು ಸಲಹೆಗಳನ್ನು ಅನುಸರಿಸಿ ನೋಡಿದರೆ, ಸಾಕಷ್ಟು ಹಣ ಉಳಿತಾಯ ಮಾಡಬಹುದು. ಯಾವುದೇ ಟಚ್ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳಿಗೂ ನಾವು ಇಂದು ಹೇಳುವ ಸಲಹೆಗಳು ನಿಮ್ಮ ನೆರವಿಗೆ ಬರಬಹುದು. ಏಕೆಂದರೆ, ಇದೇನೂ ರಾಕೆಟ್ ಸೈನ್ಸ್ ಅಲ್ಲ.!!

ದಪ್ಪನೆಯ ಸ್ಕ್ರೀನ್ ಗಾರ್ಡ್ ಬೇಡ!!

ದಪ್ಪನೆಯ ಸ್ಕ್ರೀನ್ ಗಾರ್ಡ್ ಬೇಡ!!

ಟಚ್‌ಸ್ಕ್ರೀನ್ ಒಡೆದುಹೋಗುತ್ತವೆ ಎಂಬ ಭಯದಿಂದ ಮೊಬೈಲ್ ಕೆಳಗೆ ಬಿದ್ದರೂ ಸ್ಕ್ರೀನ್‌ಗೆ ಹಾನಿಯಾಗದಂತೆ ಕೆಲವರು ಸ್ಕ್ರೀನ್ ಗಾರ್ಡ್ ಅಥವಾ ಟೆಂಪರ್ಡ್ ಗ್ಲಾಸ್ ಅಂಟಿಸಿರುತ್ತಾರೆ. ಇದು ಉತ್ತಮ ಗುಣಮಟ್ಟದ್ದಾಗಿದ್ದರೆ ಸಮಸ್ಯೆಯಾಗುವುದಿಲ್ಲ. ಆದರೆ, ಕಡಿಮೆ ಗುಣಮಟ್ಟದ ದಪ್ಪನೆಯ ಕಳಪೆ ಸ್ಕ್ರೀನ್ ಗಾರ್ಡ್ ಆದರೆ ಮೊಬೈಲ್ ಟಚ್ ಸರಿಯಾದ ಕಾರ್ಯನಿರ್ವಹಿಸುವುದಿಲ್ಲ.

ಕಂಪನಿಯ ಚಾರ್ಜರ್!!

ಕಂಪನಿಯ ಚಾರ್ಜರ್!!

ಸ್ಮಾರ್ಟ್‌ಫೋನ್ ಜೊತೆಗೆ ನೀಡಿದ ಅಥವಾ ಗುಣಮಟ್ಟದ ಚಾರ್ಜರ್ ಬಳಸಿದರೆ ನಿಮ್ಮ ಮೊಬೈಲ್ ಸ್ಕ್ರೀನ್ ಸೇಫ್.! ತೀರಾ ಕಳಪೆ ಗುಣಮಟ್ಟದ ಚಾರ್ಜರ್ ಬಳಸಿದರೆ ಸ್ಕ್ರೀನ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಹಾಗಾಗಿ, ಆಯಾ ಮೊಬೈಲ್ ಜತೆಗೆ ಬಂದಿರುವ ಮತ್ತು ಆಯಾ ಕಂಪನಿಯ ಚಾರ್ಜಿಂಗ್ ಅಡಾಪ್ಟರ್‌ಗಳನ್ನೇ ಬಳಸಿ.

ಸ್ಟೋರೇಜ್ ನೋಡಿಕೊಳ್ಳಿ!!

ಸ್ಟೋರೇಜ್ ನೋಡಿಕೊಳ್ಳಿ!!

ಕೆಲವೊಮ್ಮೆ ನಿಮ್ಮ ಸ್ಮಾರ್ಟ್‌ಫೋನಿನ ಆಂತರಿಕ ಸ್ಟೋರೇಜ್ ಹೆಚ್ಚಾಗಿದ್ದರೆ ಮತ್ತು ನಿಮ್ಮ ಫೋನಿನಲ್ಲಿ ಹೊಸ ಫೈಲುಗಳಿಗೆ ಜಾಗ ಇಲ್ಲದೇ ಹೋದಾಗಲೂ ಟಚ್ ಸ್ಕ್ರೀನ್ ಕೆಲಸ ಮಾಡುವುದಿಲ್ಲ. ಹಾಗಾಗಿ, ಫೋನ್‌ನಲ್ಲಿರುವ ಫೋಟೋ, ವೀಡಿಯೋ, ಆಡಿಯೋ ಮತ್ತಿತರ ಫೈಲುಗಳಲ್ಲಿ ಬೇಡವಾಗಿರುವುದನ್ನು ಡಿಲೀಟ್ ಮಾಡುವುದು ಅಥವಾ ವರ್ಗಾವಣೆ ಮಾಡುವುದು ಒಳ್ಳೆಯದು.

ಸ್ಕ್ರೀನ್, ಬೆರಳು ಸ್ವಚ್ಛವಾಗಿರಲಿ!!

ಸ್ಕ್ರೀನ್, ಬೆರಳು ಸ್ವಚ್ಛವಾಗಿರಲಿ!!

ಟಚ್ ಸ್ಕ್ರೀನ್ ಕೆಲಸ ಮಾಡದೇ ಇರಲು ಸಾಮಾನ್ಯ ಕಾರಣವೆಂದರೆ ಸ್ವಚ್ಛತೆಯ ಕೊರತೆ. ಕೈಯಲ್ಲಿ ಅಥವಾ ಸ್ಕ್ರೀನ್ ಮೇಲೆ ಎಣ್ಣೆಯ, ನೀರಿನ ಅಂಶಗಳಿದ್ದರೆ ಟಚ್ ಸ್ಕ್ರೀನ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಹಾಗಾಗಿ, ಸ್ವಲ್ಪ ತೇವಾಂಶವಿರುವ ಮೆದುವಾದ ಹತ್ತಿಬಟ್ಟೆಯಿಂದ ಸ್ಕ್ರೀನ್ ಗಾಜಿನ ಮೇಲೆ ಚೆನ್ನಾಗಿ ಒರೆಸಿದರೆ ನಿಮ್ಮ ಟಚ್ ಸ್ಕ್ರೀನ್ ಸರಿಯಾಗಿ ಕೆಲಸ ಮಾಡುತ್ತದೆ.

How to read deleted WhatsApp messages - GIZBOT KANNADA
ಫ್ಯಾಕ್ಟರಿ ಡೇಟಾ ರೀಸೆಟ್!!

ಫ್ಯಾಕ್ಟರಿ ಡೇಟಾ ರೀಸೆಟ್!!

ಈ ಮೇಲಿನ ಯಾವುದೇ ಕಾರಣಗಳಿಂದ ನಿಮ್ಮ ಫೋನ್ ಟಚ್ ಕೆಲಸ ಮಾಡದಿದ್ದರೆ, ಮೊಬೈಲಿನ ತಂತ್ರಾಂಶ ಸ್ವಲ್ಪ ಹದಗೆಟ್ಟಿದೆ ಎಂದರ್ಥ. ಹಾಗಾಗಿ, ಆಂಡ್ರಾಯ್ಡ್ ಫೋನ್ ಬಳಕೆದಾರರು, ಪವರ್ ಬಟನ್ ಹಾಗೂ ವಾಲ್ಯೂಮ್ ಡೌನ್ ಬಟನ್‌ಗಳನ್ನು ಏಕಕಾಲದಲ್ಲಿ ಒತ್ತಿ ಹತ್ತು ಹದಿನೈದು ನಂತರ ಕಂಪೆನಿ ಲೋಗೋ ಬರುವವರೆಗೂ ಒತ್ತಿ ಬಿಟ್ಟುಬಿಡಿ. ಫೋನ್ ರೀಸ್ಟಾರ್ಟ್ ಆಗುತ್ತದೆ.

Best Mobiles in India

English summary
If your touch screen doesn't experience any physical damage but suddenly stops respond to your touch, this may be caused by software issues. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X