ಅಮೇಜಾನ್ ನಲ್ಲಿ ರಿಯಲ್ ಮಿ ಯು1 ಗೆ 1,500 ರೂ ರಿಯಾಯಿತಿ

|

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ರಿಯಲ್ ಮಿ ಫೆಸ್ಟೀವ್ ಸೀಸನ್ ಆಫರ್ ನ್ನು ಪ್ರಕಟಿಸಿದ್ದು ತನ್ನ ಇತ್ತೀಚೆಗೆ ಬಿಡುಗಡೆಗೊಂಡಿರುವ ಫೋನ್ ರಿಯಲ್ ಮಿ ಯು1 ಗೆ ಆಫರ್ ಬೆಲೆಯನ್ನು ನೀಡುತ್ತಿದೆ. ಈ ವಾರದಲ್ಲಿ ಮಾಡಿದ ಟ್ವೀಟ್ ವೊಂದರಲ್ಲಿ ಕಂಪೆನಿಯು 1,500 ರುಪಾಯಿ ಇನ್ಸ್ಟೆಂಟ್ ರಿಯಾಯಿತಿ ದರದಲ್ಲಿ ರಿಯಲ್ ಮಿ ಯು1 ನ್ನು ಗ್ರಾಹಕರು ಖರೀದಿಸಬಹುದು ಎಂದು ತಿಳಿಸಿತ್ತು.

ಅಮೇಜಾನ್ ನಲ್ಲಿ ಲಭ್ಯ:

ಅಮೇಜಾನ್ ನಲ್ಲಿ ಲಭ್ಯ:

ಡಿಸೆಂಬರ್ 21 ರಿಂದ ಜನವರಿ 2 ರ ವರೆಗೆ ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಇಎಂಐ ಟ್ರಾನ್ಸ್ಯಾಕ್ಷನ್ ಮಾಡಿದರೆ ಈ ಆಫರ್ ಲಭ್ಯವಾಗುತ್ತದೆ. ಅಮೇಜಾನ್ ಇಂಡಿಯಾ ವೆಬ್ ಸೈಟ್ ನಲ್ಲಿ ಈ ಸ್ಮಾರ್ಟ್ ಫೋನ್ ಗಳು ಖರೀದಿಗೆ ಲಭ್ಯವಿದೆ.

ಮೂರು ವೇರಿಯಂಟ್ ನ ಫೋನ್:

ಮೂರು ವೇರಿಯಂಟ್ ನ ಫೋನ್:

ಈ ವರ್ಷದ ನವೆಂಬರ್ ನಲ್ಲಿ ಈ ಫೋನ್ ನ್ನು ಬಿಡುಗಡೆಗೊಳಿಸಲಾಯಿತು. ಎರಡು ವಿಭಿನ್ನ ವೇರಿಯಂಟ್ ನಲ್ಲಿ ಈ ಫೋನ್ ಗಳು ಲಭ್ಯವಿದೆ. 3GB RAM + 32GB ROM ಮತ್ತು 4GB RAM + 64GB ROM. ಇದರ ಬೆಲೆ ಕ್ರಮವಾಗಿ Rs 11,999 ಮತ್ತು Rs 14,499.

3GB RAM ನ ಮಾಡೆಲ್ ಈಗಾಗಲೇ ಓಪನ್ ಸೇಲ್ ನಲ್ಲಿ ಲಭ್ಯವಾಗತೊಡಗಿದೆ. ಇನ್ನು 4GB RAM ನ ಫೋನ್ ನ್ನು ಇದುವರೆಗೂ ಕೇವಲ ಫ್ಲ್ಯಾಶ್ ಸೇಲ್ ನಲ್ಲಿ ಮಾತ್ರವೇ ಖರೀದಿಸಲು ಸಾಧ್ಯವಾಗುತ್ತದೆ.

ರಿಯಲ್ ಮಿ ಯು1 ವೈಶಿಷ್ಟ್ಯತೆಗಳು :

ರಿಯಲ್ ಮಿ ಯು1 ವೈಶಿಷ್ಟ್ಯತೆಗಳು :

ರಿಯಲ್ ಮಿ ಯು1 6.3-ಇಂಚಿನ FHD+ ಸ್ಕ್ರೀನ್ ಜೊತೆಗೆ 2340 x 1080 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ ಮತ್ತು 19.5:9 ಅನುಪಾತವನ್ನು ಹೊಂದಿದೆ. ಡಿಸ್ಪ್ಲೇಯಲ್ಲಿ ಡ್ಯೂಡ್ರಾಪ್ ನಾಚ್ ಇದೆ ಮತ್ತು ಇದು 2.5ಡಿ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ನ್ನು ಹೊಂದಿದೆ.

ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm AI ಪ್ರೊಸೆಸರ್ ನ್ನು ಇದು ಹೊಂದಿದೆ. ರಿಯಲ್ ಮಿ ಯು 1 ವಿಶ್ವದ ಮೊದಲ Helio P70 ಪ್ರೊಸೆಸರ್ ನ್ನು ಹೊಂದಿರುವ ಫೋನ್ ಆಗಿದೆ. ಇದರಲ್ಲಿ 3GB/4GB RAM ಜೊತಗೆ 32GB ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ. ಇದನ್ನು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ.

ಆಂಡ್ರಾಯ್ಡ್ ಓರಿಯೋ 8.1 ನಲ್ಲಿ ಡಿವೈಸ್ ರನ್ ಆಗುತ್ತದೆ. ಕ್ಯಾಮರಾ ವಿಭಾಗದ ಬಗ್ಗೆ ಹೇಳುವುದಾದರೆ 25-ಮೆಗಾಪಿಕ್ಸಲ್ ನ ಸೋನಿ IMX576 ಸೆನ್ಸರ್ ಸೆಲ್ಫೀ ಕ್ಯಾಮರಾ ಮುಂಭಾಗದಲ್ಲಿದೆ. ಇನ್ನು ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಇದ್ದು 13-ಮೆಗಾಪಿಕ್ಸಲ್ ಮತ್ತು 2-ಮೆಗಾ ಪಿಕ್ಸಲ್ ಕ್ಯಾಮರಾವಿದೆ.

ರಿಯಲ್ ಮಿ ಯು1 ನಲ್ಲಿ ಸೆಕ್ಯುರಿಟಿ ಫೀಚರ್ ಗಳು ಲಭ್ಯವಿದ್ದು ಎಐ ಫೇಸ್ ಅನ್ ಲಾಕ್ ಮತ್ತು ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ರೀಡರ್ ಕೂಡ ಇದೆ. 3500mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಇದು ಕ್ವಿಕ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಮೂರು ಬಣ್ಣಗಳ ಆಯ್ಕೆಯಲ್ಲಿ ಈ ಫೋನ್ ಲಭ್ಯವಾಗುತ್ತದೆ- ಏಂಬಿಯಂಟ್ ಬ್ಲಾಕ್(ಕಪ್ಪು),ಬ್ರೇವ್ ಬ್ಲೂ( ನೀಲಿ), ಫೆರ್ರಿ ಗೋಲ್ಡ್ ( ಚಿನ್ನದ ವರ್ಣ).

Most Read Articles
Best Mobiles in India

Read more about:
English summary
Realme U1 available at up to Rs 1,500 discount on Amazon, here’s how to avail it

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X