TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ನಿಮ್ಮ ಸ್ಮಾರ್ಟ್‌ಪೋನ್ ಹೋಮ್ ಸ್ಕ್ರೀನ್ ಐಕಾನ್ ಹೆಸರು ಬದಲಿಸುವ ಟ್ರಿಕ್ಸ್ ಗೊತ್ತಾ?
ಮೊದಲೆಲ್ಲಾ ಸ್ಟಾರ್ಟ್ ಪೋನ್ ಹೋಮ್ ಸ್ಕ್ರೀನ್ ಐಕಾನ್ ಗಳ ನೇಮ್ ಚೇಂಜ್ ಮಾಡಿಕೊಳ್ಳುವ ಯಾವುದೇ ಅವಕಾಶಗಳಿರಲಿಲ್ಲ. ಆದರೆ, ಈಗ ಅದು ಸಾಧ್ಯ. ನೀವು ನಿಮ್ಮಗಿಷ್ಟವಾದ ಹೆಸರುಗಳನ್ನು ನೀವು ಬಳಸುವ ಐಕಾನ್ ಗಳಿಗೆ ನೀಡಬಹುದು. ಆ ಕುರಿತಾದ ಕೆಲ ಟ್ರಿಕ್ ಗಳನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ.
ನಿಮಗೆಲ್ಲಾ ಗೊತ್ತಿರಬಹುದು. ಯಾವುದಾದರೂ ಹೊಸ ಆಪ್ ಗಳನ್ನ ಇನ್ ಸ್ಟಾಲ್ ಮಾಡಿದಾಗ ಅದು ಒಂದು ಹೆಸರಿನೊಂದಿಗೆ ನಿಮ್ಮ ಸ್ಮಾರ್ಟ್ ಪೋನ್ ಗಳಲ್ಲಿ ಕ್ರಿಯೇಟ್ ಆಗ್ತಾ ಇತ್ತು. ಆಂಡ್ರಾಯ್ಡ ಸಿಸ್ಮಮ್ ಆ ಆಪ್ ಐಕಾನ್ ಗಳ ಹೆಸರು ಬದಲಿಸಿಕೊಳ್ಳುವ ಯಾವುದೇ ಅವಕಾಶಗಳನ್ನು ನೀಡಿರಲಿಲ್ಲ. ಆದರೆ ಅದು ಈಗ ಬಹಳ ಸುಲಭವಾಗಿ ಸಾಧ್ಯವಿದೆ.
ನೀವು ನಿಮ್ಮ ಇಷ್ಟದ ಹೆಸರನ್ನು ಐಕಾನ್ ಗಳಲ್ಲಿ ಸುಲಭ ವಿಧಾನಗಳಲ್ಲಿ ನೀಡುವ ಕುರಿತು ಇಲ್ಲಿ ತಿಳಿಸಿಕೊಡಲಾಗಿದೆ. ನೀವು ನಿಮ್ಮ ಆಪ್ ಗಳ ಹೆಸರನ್ನು ಎಡಿಟ್ ಮಾಡುವ ಆಪ್ಷನ್ ನಿಮ್ಮ ಆಂಡ್ರಾಯ್ಡ್‌ಗಳಲ್ಲಿ ಅನುಮತಿಸಲಾಗಿದ್ದು, ಆ ಕುರಿತು ವಿವರಿಸಿದ ಸಂಪೂರ್ಣ ಮಾರ್ಗದರ್ಶಿಯನ್ನು ಒಮ್ಮೆ ನೋಡೋಣ ಬನ್ನಿ. ಈ ಬಗ್ಗೆ ತಿಳಿಯಲು ಮುಂದೆ ಓದಿರಿ.
ಸ್ಕ್ರೀನ್ ನಲ್ಲಿ ಐಕಾನ್ ನೇಮ್ ಬದಲಿಸುವುದು ಹೇಗೆ?
ನಿಮ್ಮ ಸ್ಟಾರ್ಟ್ ಪೋನ್ ಹೋಮ್ ಸ್ಕ್ರೀನ್ ಐಕಾನ್ ಗಳ ನೇಮ್ ಬದಲಿಸಲು ಕೆಲವು ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬೇಕಷ್ಟೇ. ಅದನ್ನ ಈ ಕೆಳಗೆ ತಿಳಿಸಲಾಗಿದೆ. ಮುಂದುವರೆಯಲು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ. ಆಂಡ್ರಾಯ್ಡ್ ಹೋಮ್ ಸ್ಕ್ರೀನ್ ಐಕಾನ್ ಗಳ ನೇಮ್ ಬದಲಿಸುವ ಪ್ರಮುಖ ಹಂತಗಳು ಹೀಗಿವೆ.
ಐಕಾನ್ ನೇಮ್ ಬದಲಿಸುವುದು. ಹಂತ 1
ಮೊದಲನೆಯದಾಗಿ ಕ್ವಿಕ್ ಶಾರ್ಟ್ ಕಟ್ ಮೇಕರ್ ಎನ್ನುವ ಆಪ್ ಅನ್ನು ನಿಮ್ಮ ಸ್ಮಾರ್ಟ್ ಪೋನ್ ನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಿ.ಇನ್ ಸ್ಟಾಲ್ ಮಾಡಿಕೊಂಡ ನಂತರ, ಆಪ್ ಲಾಂಚ್ ಮಾಡಿ. ಆಗ ನಿಮ್ಮ ಸ್ಮಾರ್ಟ್ ಪೋನ್ ನಲ್ಲಿ ಇನ್ ಸ್ಟಾಲ್ ಆಗಿರುವ ಎಲ್ಲ ಆಪ್ ಗಳ ಪಟ್ಟಿ ಕಾಣಿಸುತ್ತದೆ.
ಐಕಾನ್ ನೇಮ್ ಬದಲಿಸುವುದು. ಹಂತ 2
ನಂತರ ನೀವು ಯಾವ ಆಪ್ ನೇಮ್ ಬದಲಿಸಬೇಕೋ ಆ ಆಪ್ ನ ಮೇಲೆ ಕ್ಲಿಕ್ ಮಾಡಿ. ಆ ಆಪ್ ನ ಕುರಿತಾದ ಎಲ್ಲ ಮಾಹಿತಿಗಳು ಕಾಣಿಸುತ್ತದೆ. ಅಲ್ಲೇ ನೀವು ಚೇಂಜ್ ದ ಲೇಬಲ್ ಅನ್ನುವ ಆಪ್ಷನ್ ನ್ನು ಕಾಣುತ್ತೀರಿ. ಅಲ್ಲಿ ನೀವು ನಿಮ್ಮ ಆಪ್ ಗೆ ಸೆಟ್ ಮಾಡಬೇಕಾದ ಹೆಸರನ್ನು ಫಿಲ್ ಮಾಡಿ. ಅದಾದ ಮೇಲೆ ಓಕೆ ಎನ್ನುವ ಕಡೆ ಸಿಂಪಲ್ ಆಗಿ ಕ್ಲಿಕ್ ಮಾಡಿ.
ಐಕಾನ್ ನೇಮ್ ಬದಲಿಸುವುದು. ಹಂತ 3
ನೀವೀಗ ಶಾರ್ಟ್ ಕಟ್ ಆಪ್ ಕ್ರಿಯೇಟ್ ಮಾಡಲು ಕ್ರಿಯೇಟ್ ಅನ್ನುವ ಆಪ್ಷನ್ ಅನ್ನು ಕಾಣುತ್ತೀರಿ. ಅಷ್ಟೇ.ನಿಮ್ಮ ಹೋಮ್ ಸ್ಕ್ರೀನ್ ನಲ್ಲಿ ನಿಮ್ಮ ಇಷ್ಟದ ಹೆಸರಿನ ಆಪ್ ಅನ್ನು ಹೊಂದಿದ್ದೀರಿ. ಅದನ್ನೊಮ್ಮೆ ನೋಡಿ. ಇನ್ನು ಲಾಂಚರ್‌ಗಳನ್ನು ಬಳಸಿ ಕೂಡ ಸ್ಕ್ರೀನ್ ಐಕಾನ್ ಗಳ ಹೆಸರನ್ನು ಚೇಂಜ್ ಮಾಡುವುದು ಹೇಗೆ ಎಂಬುದನ್ನು ಸಹ ಈ ಕೆಳಗೆ ನೀಡಲಾಗಿದೆ.
ನೋವಾ ಲಾಂಚರ್
ನೋವಾ ಲಾಂಚರ್ ಎಂಬುದು ಹೆಚ್ಚು ಜನರು ಬಳಸುತ್ತಿರುವ ಲಾಂಚರ್. ಇದು ಹೆಚ್ಚು ವೈವಿಧ್ಯಮಯ ಫೀಚರ್ ಗಳನ್ನು ಹೊಂದಿದೆ. ಅಲ್ಲದೇ ಐಕಾನ್ ಗಳಿಗೆ ಗ್ರಾಹಕರು ತಮಗಿಷ್ಟ ಬಂದಂತೆ ಹೆಸರನ್ನು ನೀಡಬಹುದಾದ ಆಪ್ಷನ್ ಅನ್ನು ಈ ಲಾಂಚರ್ ಹೊಂದಿದೆ. ಬನ್ನಿ ಅದನ್ನು ಹೇಗೆ ಬಳಸುವುದು ನೋಡೋಣ.
ನೋವಾ ಲಾಂಚರ್ ಎಂಬುದು ಹೆಚ್ಚು ಜನರು ಬಳಸುತ್ತಿರುವ ಲಾಂಚರ್. ಇದು ಹೆಚ್ಚು ವೈವಿಧ್ಯಮಯ ಫೀಚರ್ ಗಳನ್ನು ಹೊಂದಿದೆ. ಅಲ್ಲದೇ ಐಕಾನ್ ಗಳಿಗೆ ಗ್ರಾಹಕರು ತಮಗಿಷ್ಟ ಬಂದಂತೆ ಹೆಸರನ್ನು ನೀಡಬಹುದಾದ ಆಪ್ಷನ್ ಅನ್ನು ಈ ಲಾಂಚರ್ ಹೊಂದಿದೆ. ಬನ್ನಿ ಅದನ್ನು ಹೇಗೆ ಬಳಸುವುದು ನೋಡೋಣ.
ನೋವಾ ಲಾಂಚರ್ ಹಂತ 1
ಮೊದಲನೆಯದಾಗಿ ನಿಮ್ಮ ಸ್ಟಾರ್ಟ್ ಪೋನ್ ನಲ್ಲಿ ಈ ಲಾಂಚರ್ ಆಪ್ ಡೌನ್ ಲೋಡ್ ಮಾಡಿ. ನಂತರ ನಿಮಗೆ ಸೆಲೆಕ್ಟ್ ಬ್ಯಾಕಪ್ ಎನ್ನುವ ಆಪ್ಷನ್ ನ ಸ್ಕ್ರೀನ್ ಕಾಣಿಸುತ್ತದೆ. ನೀವು ಮುಂದುವರೆಯಲು ಕೆಳಗಿರುವ ನೆಕ್ಸ್ಟ್ ಎನ್ನುವ ಕಡೆ ಕ್ಲಿಕ್ ಮಾಡಿ. ನಂತರ ನಿಮಗೆ ಥೀಮ್ ಸೆಟ್ ಮಾಡಿಕೊಳ್ಳುವ ಅವಕಾಶ ನೀಡಿ ಲೈಟ್ ಅಥವಾ ಡಾರ್ಕ್ ಥೀಮ್ ಆಪ್ಷನ್ ನೀಡಲಾಗುತ್ತದೆ.
ನೋವಾ ಲಾಂಚರ್ ಹಂತ 2
ಡಿ ಲೈಟ್ ಅಥವಾ ಡಾರ್ಕ್ ಥೀಮ್ ಆಪ್ಷನ್ ಕಾಣಿಸಿದ ನಂತರ ಅದರಲ್ಲಿ ನಿಮಗಿಷ್ಟವಾದದ್ದನ್ನು ಸೆಲೆಕ್ಟ್ ಮಾಡಿ ಮುಂದುವರೆಯಿರಿ.ಈಗ ಡ್ರಾಯರ್ ಸ್ಟೈಲ್ ಯಾವುದು ಬೇಕು ಎಂದು ಕೇಳಲಾಗುತ್ತದೆ. ನಿಮಗಿಷ್ಟವಾದದ್ದನ್ನು ಸೆಲೆಕ್ಟ್ ಮಾಡಿ ಮುಂದುವರೆಯಿರಿ.ಈಗ ನಿಮ್ಮ ಸ್ಟಾರ್ಟ್ ಪೋನ್ ನಲ್ಲಿ ನೋವಾ ಲಾಂಚರ್ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತದೆ.
ಐಕಾನ್ ನೇಮ್ ಬದಲಾಯಿಸಿ!
ನಿಮ್ಮ ಸ್ಟಾರ್ಟ್ ಪೋನ್ ನ ಹೋಮ್ ಸ್ಟ್ರೀನ್ ಗೆ ತೆರಳಿ, ಯಾವ ಆಪ್ ಐಕಾನ್ ನೇಮ್ ಬದಲಿಸಬೇಕೋ ಆ ಆಪ್ ನ ಮೇಲೆ ಲಾಂಗ್ ಪ್ರೆಸ್ ಮಾಡಿ. ಆಗ ನೀವು ಎಡಿಟ್, ರಿಮೂವ್, ಆಪ್ ಇನ್ ಪೋ ಎನ್ನುವ ಆಪ್ಷನ್ ಗಳನ್ನು ಕಾಣುತ್ತೀರಿ. ಮುಂದುವರೆಯಲು ಎಡಿಟ್ ಮೇಲೆ ಕ್ಲಿಕ್ ಮಾಡಿ. ಈಗ ನೀವು ಆರಿಸಿದ ಐಕಾನ್ ನೇಮ್ ಬದಲಿಸಲು ಅನುಮತಿ ನೀಡುತ್ತದೆ. ಆಗ ನಿಮಗಿಷ್ಟವಾದ ನೇಮ್ ಬದಲಾಯಿಸಿಕೊಳ್ಳಿ.