ಗೂಗಲ್ ಹೇಳಿದ ಈ ಒಂದು ಕೆಲಸ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುವುದಿಲ್ಲ!!

  |

  ಇದ್ದಕ್ಕಿದ್ದಂತೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ನಿಷ್ಕ್ರೀಯವಾಗುವ ಅಥವಾ ಹ್ಯಾಂಗ್ ಆಗುವ ದೂರುಗಳು ಗೂಗಲ್ ಕಂಪೆನಿಗೆ ಯಾವಾಗಲೂ ಬರುತ್ತಿದ್ದವು. ಈ ಕುರಿತು ಸಂಶೋಧನೆ ನಡೆಸಿದ ಗೂಗಲ್‌ಗೆ ಕಂಡಿದ್ದು, ಒಂದು ವಿಚಿತ್ರ ಸಮಸ್ಯೆ.! ಅದೇನೆಂದರೆ, ಭಾರತೀಯರು ಸೇರಿ ವಿಶ್ವದೆಲ್ಲೇಡೆ ಹೆಚ್ಚು ಬಳಕೆಯಾಗುತ್ತಿರುವ ಸಾಮೂಹಿಕ ಮೆಸೇಂಜಿಂಗ್ ವ್ಯವಸ್ಥೆ.!

  ಹೌದು, ಗುಡ್‌ಮಾರ್ನಿಂಗ್, ಗುಡ್‌ನೈಟ್ ಮೆಸೇಜ್‌ಗಳನ್ನು ಪ್ರತಿದಿನವೂ ಚಾಚುತಪ್ಪದೆ ಕಳುಹಿಸುವ ಹಾಗೂ ಪಡೆಯದುಕೊಳ್ಳುವವರಿಂದಾಗಿ ಇಡೀ ಆಂಡ್ರಾಯ್ಡ್ ಫೋನ್‌ಗಳೇ ಹ್ಯಾಂಗ್ ಆಗುವ ತೊಂದರೆಯನ್ನು ಎದುರಿಸುತ್ತಿವೆ. ವಿಶ್ವದಲ್ಲಿ ಭಾರತೀಯರೇ ಹೆಚ್ಚು ಸಾಮೂಹಿಕ ಮೆಸೇಂಜಿಂಗ್ ವ್ಯವಸ್ಥೆಯ ಅಡಿಯಲ್ಲಿ ಬಂದಿದ್ದಾರೆ ಎಂದು ಗೂಗಲ್ ಕಂಪೆನಿ ಸ್ಪಷ್ಟಪಡಿಸಿದೆ.

  ಗೂಗಲ್ ಹೇಳಿದ ಈ ಒಂದು ಕೆಲಸ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುವುದಿಲ್ಲ

  ಒಬ್ಬರಿಗೆ ಬಂದ ಮೆಸೇಜ್‌ಗಳನ್ನು ಮತ್ತೊಬ್ಬರಿಗೆ ಕಳುಹಿಸುವ ವಿಧಾನಕ್ಕೆ ಗೂಗಲ್ ಸುಸ್ತು ಹೊಡೆದು ಗುಡ್‌ಮಾರ್ನಿಂಗ್ ಮೆಸೇಜ್‌ ಕಳುಹಿಸದಂತೆ ಭಾರತೀಯರಿಗೆ ಹೇಳಿದೆ. ಜೊತೆಗೆ ಈ ತೊಂದರೆಯನ್ನು ಪರಿಹರಿಸಲು ಆಪ್ ಅನ್ನು ಸಹ ಬಿಡುಗಡೆ ಮಾಡಿದೆ. ಹಾಗಾದರೆ ಆ ಆಪ್ ಯಾವುದು? ಇದಕ್ಕೆ ಇನ್ನಿತರ ಪರಿಹಾರಗಳೇನು? ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸರಾಸರಿ 50 ಮೆಸೇಜ್‌ಗಳು!

  ವಾಟ್ಸ್‌ಆಪ್, ಫೇಸ್‌ಬುಕ್ ಮೆಸೇಂಜರ್‌ಗಳ ಮೂಲಕಒಬ್ಬ ವ್ಯಕ್ತಿ ದಿನಕ್ಕೆ 50 ಜನಕ್ಕಾದರೂ ಟೆಕ್ಸ್ಟ್, ಇಮೇಜ್ ಹಾಗೂ ವಿಡಿಯೋ ಸಂದೇಂಶಗಳನ್ನು ವಿನಿಮಯ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ .ಹಾಗಾಗಿಯೇ, ಬಹುತೇಕ ಭಾರತೀಯರ ಸ್ಮಾರ್ಟ್‌ಫೋನ್ ಮೆಮೊರಿ ಸಮಸ್ಯೆ ಎದುರಿಸುತ್ತಿದೆ ಎಂದು ಗೂಗಲ್ ಹೇಳಿದೆ.!

  ಸರ್ವರ್‌ಗಳಿಗೆ ಪೀಕಲಾಟ!

  ಕೋಟ್ಯಾಂತರ ಜನರು ಒಮ್ಮೆಲೆ ವಾಟ್ಸ್ಆಪ್ ಫೇಸ್‌ಬುಕ್ ಹಾಗೂ ಇನ್ನಿತರ ಸೇವೆಗಳನ್ನ್ನು ಬಳಸುತ್ತಿರುವುದರಿಂದ ಅವುಗಳ ಮೂಲ ಸರ್ವರ್‌ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಹೊಸ ವರ್ಷದ ದಿನದಂದು ಭಾರತೀಯರು ವಿನಿಮಯ ಮಾಡಿದ 200 ಕೋಟಿಗೂ ಹೆಚ್ಚು ಮೆಸೇಜ್‌ಗೆ ವಾಟ್ಸ್ಆಪ್ ಸರ್ವರ್ ನಿಷ್ಕ್ರೀಯವಾಗಿದ್ದನ್ನು ಇಲ್ಲಿ ನೋಡಬಹುದು.

  ಫೋನ್ ಹ್ಯಾಂಗ್ ಆಗಲು ನೇರಕಾರಣ!

  ವಾಟ್ಸ್ಆಪ್, ಫೇಸ್‌ಬುಕ್ ಹಾಗೂ ಇನ್ನಿತರ ಮಾಧ್ಯಮಗಳಿಂದ ಮೊಬೈಲ್ ಒಳಗೆ ತಲುಪುವ ಟೆಕ್ಸ್ಟ್, ಇಮೇಜ್ ಹಾಗೂ ವಿಡಿಯೋ ಸಂದೇಂಶಗಳು ಸ್ಮಾರ್ಟ್‌ಫೋನ್ ಹ್ಯಾಂಗ್ ಆಗಲು ನೇರಕಾರಣವಾಗಿದೆ. ಮೊಬೈಲ್ ಮೆಮೊರಿಯನ್ನು ಆಕ್ರಮಿಸಿಕೊಳ್ಳುವ ಇವು ಮೊಬೈಲ್ ಕಾರ್ಯನಿರ್ವಹಣೆಯನ್ನು ಹಾಳುಮಾಡುತ್ತಿವೆ.

  ಪರಿಹಾರಕ್ಕಾಗಿ ಹೊಸ ಆಪ್!

  ಸಾಮೂಹಿಕ ಮೆಸೇಂಜಿಂಗ್ ತೊಂದರೆಯಿಂದ ಉಂಟಾಗುತ್ತಿದ್ದ ಅನಾನುಕೂಲ ನಿಭಾಯಿಸಲು ಗೂಗಲ್ ಹೊಸದೊಂದು ಆಪ್ ಪರಿಚಯಿಸಿದೆ. "ಫೈಲ್ಸ್ ಗೋ" ಎಂಬ ಹೊಸ ಆಪ್ ಇದಕ್ಕಾಗಿ ಬಿಡುಗಡೆಯಾಗಿದ್ದು, ಒಂದೇ ರೀತಿಯ ಹಲವು ಫೈಲ್‌ಗಳನ್ನು ಹುಡುಕಿ ಡಿಲೀಟ್ ಮಾಡಲು ಹೇಳುತ್ತದೆ.!

  ನಾವು ಮಾಡಬೇಕಿರುವುದು ಏನು?

  ಸ್ಮಾರ್ಟ್‌ಫೋನಿನಲ್ಲಿ ಆಂತರಿಕ ಮೆಮೊರಿ ಹೆಚ್ಚು ಖಾಲಿ ಇದ್ದರೆ ಮಾತ್ರ ಆ ಫೋನ್ ಕಾರ್ಯನಿರ್ವಹಣೆ ಚೆನ್ನಾಗಿರುತ್ತದೆ. ಹಾಗಾಗಿ, ಫೈಲ್ಸ್ ಗೋ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳದಿದ್ದರೂ ಸಹ ದಿನವೂ ಫೋನ್ ಆಂತರಿಕ ಮೆಮೊರಿ ಖಾಲಿ ಉಳಿಯುವಂತೆ ಟೆಕ್ಸ್ಟ್, ಇಮೇಜ್ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡುತ್ತಿರಿ.

  ನೀವು ತಿಳಿದೇಯಿಲ್ಲದ ಬೆರಗಾಗಿಸುವ ಫೇಸ್‌ಬುಕ್ ಮಾಹಿತಿಗಳಿವು!!..ತಿಳಿದರೆ ಶಾಕ್ ಖಂಡಿತ!!

  ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್‌ಬುಕ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಸಂಬಂಧ, ಮನರಂಜನೆ, ಸುದ್ದಿ, ವ್ಯಾಪಾರ ಹೀಗೆ ನಾನಾ ಚಟುವಟಿಗೆಗಳನ್ನು ಒದಗಿಸುವ ಮೂಲಕ ಸಾಮಾಜಿಕ ಜಾಲತಾಣದ ಸಾದ್ಯತೆಗಳನ್ನು ಹಿಗ್ಗಸಿದ ಫೇಸ್‌ಬುಕ್ ಎಂಬ ಮಾಂತ್ರಿಕ ಆಪ್ ಇಂದು ಜಗತ್ತಿನ ಮೂಲೆ ಮೂಲೆಯಲ್ಲಿ ಕೋಟಿ ಕೋಟಿ ಮಂದಿಯನ್ನು ತಲುಪಿದೆ.!
  ಮಾರ್ಕ್ ಜುಕರ್‌ಬರ್ಗ್ ಹಾಗೂ ಆತನ ಜೊತೆ ಕಲಿಯುತ್ತಿದ್ದ ಎಡುವರ್ಡೊ ಸವೆರನ್, ಆಂಡ್ರೊ ಮೆಕಲಮ್, ಡಸ್ಟಿನ್ ಮಾಸ್ಕೋವಿಟ್ಜ್ ಮತ್ತು ಕ್ರಿಸ್ ಹೀವ್ಸ್ ಗೆಳೆಯರು ಸೇರಿ 2004 ನೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಕಟ್ಟಿದ ಸಾಮಾಜಿಕ ಜಾಲತಾಣ ಇಂದು ಪ್ರತಿತಿಂಗಳು 200 ಕೋಟಿಗೂ ಹೆಚ್ಚು ಬಳಕೆದಾರ ಖಾತೆಗಳನ್ನು ಹೊಂದಿದೆ ಎಂದರೆ ಆಶ್ಚರ್ಯವಾಗಲೇಬೇಕು.!!

  ಇಡೀ ಪ್ರಪಂಚದಲ್ಲಿಯೇ ಭಾರತೀಯರಿಂದಲೇ ಹೆಚ್ಚು ಬಳಸಲ್ಪಡುತ್ತಿರುವ ಫೇಸ್‌ಬುಕ್ ಭಾರತದಲ್ಲಿಯೇ 25 ಕೋಟಿ ಬಳಕೆದಾರರನ್ನು ಹೊಂದಿದೆ. ಇನ್ನು ಫೇಸ್‌ಬುಕ್ ಜನ್ಮಸ್ಥಳ ಅಮೆರಿಕಾ ದೇಶವು 24 ಕೋಟಿ ಬಳಕೆದಾರರಿಂದ ಎರಡನೇ ಸ್ಥಾನದಲ್ಲಿದೆ.! ಹಾಗಾಗಿ, ಇಂದಿನ ಲೇಖನದಲ್ಲಿ ಬೆರಗಾಗಿಸುವ ಕೆಲವು ಫೇಸ್‌ಬುಕ್ ಬಗೆಗಿನ ಮಾಹಿತಿಗಳನ್ನು ತಿಳಿಯೋಣ.!!

  ಯೂಟ್ಯೂಬ್ ಹಿಂದಿಕ್ಕಿದೆ ಫೇಸ್‌ಬುಕ್!!

  ಸಾಮಾಜಿಕ ಜಾಲತಾಣ ಫೆಸ್‌ಬುಕ್ ಯೂಟ್ಯೂಬ್ ಬಳಕೆದಾರರಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. 2017ರ ಕೊನೆಯಲ್ಲಿ ಫೇಸ್‌ಬುಕ್ ಹೊರತಂದಿರುವ ಮಾಹಿತಿ ಪ್ರಕಾರ ಒಂದು ತಿಂಗಳಲ್ಲಿ 2.1 ಬಿಲಿಯನ್ ಅಂದರೆ 200 ಕೋಟಿಗೂ ಹೆಚ್ಚು ಬಳಕೆದಾರರು ಚಟುವಟಿಕೆಯಿಂದ ಇರುತ್ತಾರಂತೆ.!!

  ಬಳಕೆದಾರರು ಯಾರು?!

  ನಿಮಗೆ ಗೊತ್ತಾ?. ಒಂದು ಸೆಕೆಂಡ್‌ಗೆ 5 ಹೊಸ ಫೇಸ್‌ಬುಕ್ ಖಾತೆಗಳು ಹುಟ್ಟುತ್ತವಂತೆ.! ನಿಮಗೆ ಆಶ್ಚರ್ಯವಾದರೂ ಆಗಬಹುದು ಏಕೆಂದರೆ ಫೇಸ್‌ಬುಕ್‌ನ ಒಟ್ಟು ಬಳಕೆದಾರರಲ್ಲಿ 53% ಹೆಂಗಸರಿದ್ದರೆ 47% ಗಂಡಸರಿದ್ದಾರೆ ಎಂದು ಜುಲೈ 2017 ರಲ್ಲಿ ಫೇಸ್‌ಬುಕ್ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ.!!

  ಫೇಸ್‌ಬುಕ್‌ನಲ್ಲಿದೆ ಯುವಪಡೆ.!!

  ಪೇಸ್‌ಬುಕ್‌ನ ಒಟ್ಟು ಬಳಕೆದಾರರಲ್ಲಿ 25 ರಿಂದ 34ರ ವಯಸ್ಸಿನವರದ್ದೇ ದೊಡ್ಡ ಪಾಲಿದೆ. ಸುಮಾರು 30% ನಷ್ಟು ಬಳಕೆದಾರರು 25 ರಿಂದ 34 ವಯಸ್ಸಿನವರಾಗಿದ್ದಾರೆ. ಅದನ್ನು ಬಿಟ್ಟರೆ 18 ರಿಂದ 24 ರ ವಯಸ್ಸಿನವರದ್ದು ಎರಡನೇ ದೊಡ್ಡ ಗುಂಪಾಗಿದೆ. ಅಂದರೆ ಫೇಸ್ಬುಕ್ಕಿನದ್ದು ಯುವ ಬಳಕೆದಾರರ ಪಡೆಯಿಂದ ತುಂಬಿದೆ!

  How to Send Message to Multiple Contacts on WhatsApp - GIZBOT KANNADA
  10ಕೋಟಿ ಫೇಕ್ ಅಕೌಂಟ್!!

  10ಕೋಟಿ ಫೇಕ್ ಅಕೌಂಟ್!!

  ಇನ್ನೊಂದು ತಿಳಿಯಬೇಕಾದ ಮಾಹಿತಿ ಎಂದರೆ ಇರುವ 200 ಕೋಟಿಗೂ ಹೆಚ್ಚಿನ ಫೇಸ್‌ಬುಕ್ ಬಳಕೆದಾರರಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಫೇಕ್ ಅಕೌಂಟ್‌ಗಳಿವೆಯಂತೆ. ತಮ್ಮ ಗುರುತನ್ನು ಮರೆಮಾಚಿ ಫೇಸ್‌ಬುಕ್ ಬಳಸುವುದಕ್ಕಾಗಿ, ಪ್ರಚಾರದ ಉದ್ದೇಶಕ್ಕಾಗಿ ಹೀಗೆ ಹಲವು ಕಾರಣಗಳಿಂದಾಗಿ ಇರುವ ಖಾತೆಗಳನ್ನು ತೆಗೆದುಹಾಕುವುದಿಲ್ಲ ಎಂದು ಫೇಸ್‌ಬುಕ್ ತಿಳಿಸಿದೆ.!

  ಯಾವ ಹೊತ್ತಿನಲ್ಲಿ ದಟ್ಟಣೆ ಹೆಚ್ಚಿದೆ?

  ಸೋಮವಾರದಿಂದ ಶುಕ್ರವಾರದ ತನಕ ಹಗಲು 1 ಗಂಟೆಯಿಂದ 4 ಗಂಟೆಯವರೆಗೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಹೆಚ್ಚಿರಲಿದೆ. ಬೆಳಗ್ಗೆ 9 ಗಂಟೆಗೆ ಬಳಕೆಯ ದಟ್ಟಣೆಯು ಹೆಚ್ಚುತ್ತಾ ಹೋಗಿ 1 ಗಂಟೆಯ ಹೊತ್ತಿಗೆ ದಟ್ಟಣೆಯು ತುದಿಯನ್ನು ಮುಟ್ಟುತ್ತದೆಯಂತೆ. ಇನ್ನು ಶನಿವಾರ ಹಾಗೂ ರವಿವಾರದಂದು ಬೆಳಗ್ಗೆ 8 ಗಂಟೆಯ ಒಳಗೆ ಹಾಗೂ ಸಂಜೆ 8 ಗಂಟೆಯ ಮೇಲೆ ಹೆಚ್ಚು ಬಳಕೆದಾರರಿತ್ತಾರಂತೆ.!!

  ಎಷ್ಟು ಹೊತ್ತು ಬಳಕೆ?

  ಫೇಸ್‌ಬಕ್ ಬಳಕೆದಾರರು ಒಮ್ಮೆ ಆಪ್ ಒಳಹೊಕ್ಕತೆ ಅದನ್ನು ಬಳಸುವ ಸರಾಸರಿ ಹೊತ್ತು 20 ನಿಮಿಷಗಳಂತೆ. ಬಳಕೆದಾರರ ಸರಾಸರಿ ಗೆಳೆಯರ ಎಣಿಕೆ 155 ಇದೆಯಂತೆ. ಇವೆಲ್ಲವಕ್ಕಿಂತ 18-34 ವಯಸ್ಸಿನ ಬಳಕೆದಾರರಲ್ಲಿ ಶೇ 50% ಮಂದಿ ಬೆಳಗ್ಗೆ ಎದ್ದ ಕೂಡಲೆ ಮೊದಲು ನೋಡುವುದು ಫೇಸ್‌ಬುಕ್ ಅನ್ನೇ ಎಂದರೆ ನೀವು ನಂಬಲೇಬೇಕು.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Android phone hanging problems occurs due to several reasons so if. These unwanted data will be stored in your phone memory. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more