ಇನ್ಮುಂದೆ ನಿಮ್ಮ ಫೇಸ್‌ಬುಕ್ ಪೋಸ್ಟ್‌ಗೆ ಬಂದಿರುವ ಲೈಕ್‌ಗಳನ್ನು ಹೈಡ್ ಮಾಡಿ!

|

ಜಗತ್ತಿನ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಅದರಂತೆ, ನೀವು ಹಾಕುವ ಪೋಸ್ಟ್‌ಗೆ ಯಾರೆಲ್ಲಾ ಲೈಕ್‌ ಮಾಡಿದ್ದಾರೆ ಎನ್ನುವ ಮಾಹಿತಿ ನಿಮ್ಮ ಸ್ನೇಹಿತರಿಗೆ ಸಿಗದೇ ಇರುವಂತೆ ಫೇಸ್‌ಬುಕ್‌ ಮಾಡುತ್ತಿದೆ. ಹೌದು, ಇದೀಗ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಆದಂತಹ ಲೈಕ್‌ಗಳು ಬಳಕೆದಾರರ ಪ್ರತಿಕ್ರಿಯೆಗಳು, ವೀಕ್ಷಣೆಗಳು ಮತ್ತು ಲೈಕ್‌ಗಳ ಸಂಖ್ಯೆ ಇನ್ಮುಂದೆ ಪೋಸ್ಟ್‌ ಮಾಡಿದವರಿಗೆ ಮಾತ್ರ ಗೋಚರಿಸುತ್ತದೆ. ಪ್ರಾಯೋಗಿಕವಾಗಿ ಇದನ್ನು ಮೊದಲು ಆಸ್ಟ್ರೇಲಿಯಾದಲ್ಲಿ ಪ್ರಾರಂಭಿಸಲಾಗಿದೆ.

ಪೋಸ್ಟ್‌ಗೆ ಎಷ್ಟು ಲೈಕ್‌ ಬಂದಿದೆ

ಸ್ನೇಹಿತರಿಗೆ ಲೈಕ್ ಮಾಹಿತಿ ಹೈಡ್‌ ಆಗುವಂತಹ ವ್ಯವಸ್ಥೆಯನ್ನು ಫೇಸ್‌ಬುಕ್‌ ರೂಪಿಸಿದ್ದು,ಟೈಮ್‌ಲೈನ್‌ ಮತ್ತು ನ್ಯೂಸ್‌ ಫೀಡ್‌ಗಳಲ್ಲಿ ಇದನ್ನು ಸಕ್ರಿಯಗೊಳಿಸಲಾಗಿದೆ. ಕೇವಲ ಅಲ್ಲಿಗಷ್ಟೇ ಸೀಮಿತವಾಗಲಿದೆಯೇ ಅಥವಾ ಎಲ್ಲೆಡೆಯೂ ಜಾರಿಗೆ ಬರಲಿದೆಯೇ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಫೇಸ್‌ಬುಕ್‌ ಹೇಳಿದೆ. ನಿಮ್ಮ ಪೋಸ್ಟ್‌ಗೆ ಎಷ್ಟು ಲೈಕ್‌ ಬಂದಿದೆ ಎನ್ನುವುದನ್ನು ನಿಮ್ಮ ಸ್ನೇಹಿತರು ನೋಡುವುದಕ್ಕಿಂತಲೂ ನೀವು ಏನನ್ನು ಶೇರ್‌ ಮಾಡಿದ್ದೀರಿ ಎನ್ನುವುದರ ಕಡೆಗೆ ಗಮನ ಹರಿಸುವಂತೆ ಮಾಡುವುದು ಇದರ ಉದ್ದೇಶ ಎಂದು ಫೇಸ್‌ಬುಕ್ ತಿಳಿಸಿದೆ.

ಯಾರು ಪೋಸ್ಟ್‌ ಹಾಕುತ್ತಾರೊ ಅವರಿಗೆ

ಫೇಸ್‌ಬುಕ್‌ನ ಹೊಸ ಪ್ರಯೋಗದಿಂದ ಬಳಕೆದಾರರ ಅನುಭವದಲ್ಲಿ ಯಾವ ರೀತಿಯ ಬದಲಾವಣೆ ಆಗುತ್ತದೆ ಎನ್ನುವುದನ್ನು ಸಂಗ್ರಹಿಸಲಾಗುವುದು ಎಂದು ಫೇಸ್‌ಬುಕ್‌ ವಕ್ತಾರ ತಿಳಿಸಿದ್ದಾರೆ. ಯಾರು ಪೋಸ್ಟ್‌ ಹಾಕುತ್ತಾರೊ ಅವರಿಗೆ ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಎಷ್ಟು ಲೈಕ್‌ ಬಂದಿದೆ, ಯಾರೆಲ್ಲಾ ಲೈಕ್‌ ಮಾಡಿದ್ದಾರೆ ಎನ್ನುವುದೆಲ್ಲವೂ ನೋಡಬಹದು. ಆದರೆ, ಸ್ನೇಹಿತರು ಮತ್ತು ಫಾಲೊ ಮಾಡುವವರು ಕಂಮೆಂಟ್‌ಗಳನ್ನು ಮಾತ್ರವೇ ನೋಡಬಹುದಾಗಿದೆ ಎಂದು ತನ್ನ ಹೊಸ ಅಪ್‌ಡೇಟ್ ಬಗ್ಗೆ ಫೇಸ್‌ಬುಕ್ ಸಂಸ್ಥೆ ಮಾಹಿತಿ ನೀಡಿದೆ.

ಕಡಿಮೆ ಲೈಕ್‌ ಬಂದಿದೆ

ಈ ಬದಲಾವಣೆಯಿಂದ ಬಳಕೆದಾರರ ಅನುಭವ ಸುಧಾರಣೆಯಾಗುತ್ತದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಗುತ್ತದೆ. ಫೇಸ್‌ಬುಕ್‌ನಲ್ಲಿ ಕಡಿಮೆ ಲೈಕ್‌ ಬಂದಿದೆ ಎಂದಾಕ್ಷಣ ತಲೆಕೆಡಿಸಿಕೊಳ್ಳುವ, ಖಿನ್ನತೆಗೆ ಒಳಗಾಗುವ ವರ್ಗವೂ ಇದೆ. ಇದನ್ನು ತಪ್ಪಿಸಲೂ ಲೈಕ್‌ ಹೈಡ್ ಆಯ್ಕೆ ಪ್ರಯೋಜನಕಾರಿಯಾಗಬಹುದು .ಸದ್ಯ ಸೀಮಿತ ಪರೀಕ್ಷೆಯನ್ನು ನಡೆಸುತ್ತಿದ್ದೇವೆ, ಅಲ್ಲಿ ಪ್ರತಿಕ್ರಿಯೆ, ವಿಡಿಯೋ ವೀಕ್ಷಣೆಯನ್ನು ಫೇಸ್‌ಬುಕ್‌ನಾದ್ಯಂತ ಖಾಸಗಿಯಾಗಿ ಎಣಿಕೆ ಮಾಡಲಾಗುತ್ತದೆ ಎಂದು ಫೇಸ್‌ಬುಕ್ ವಕ್ತಾರರು ಹೇಳಿದ್ದಾರೆ.

ಲೈಕ್‌ಗಳನ್ನು ಮರೆಮಾಚಬಹುದು

ಫೇಸ್‌ಬುಕ್ ತನ್ನ ಒಡೆತನದ ಫೋಟೋ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಈ ವಿಧಾನವನ್ನು ಮೊದಲು ಪರೀಕ್ಷಿಸಿತ್ತು. ನಂತರ ಈ ಪ್ರಯತ್ನವನ್ನು ಫೇಸ್‌ಬುಕ್‌ನಲ್ಲಿಯೂ ಮುಂದುವರೆಸಿ ಲೈಕ್‌ಗಳನ್ನು ಮರೆಮಾಚಬಹುದು ಎಂ‌ಬ ನಿರ್ಧಾರಕ್ಕೆ ಮಾರ್ಕ್‌ ಜುಕರ್‌ಬರ್ಗ್ ನೇತೃತ್ವದ ಕಂಪನಿ ಬಂದಿದೆ. ಇನ್‌ಸ್ಟಾಗ್ರಾಂ ಮೇಲೆ ಮಾಡಿದ ಪ್ರಯೋಗ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಎಷ್ಟು ಲೈಕ್‌ ಪಡೆಯುತ್ತದೆ ಎಂಬ ಒತ್ತಡವನ್ನು ತೆಗೆದುಹಾಕುತ್ತದೆ ಎಂದು ಫೇಸ್‌ಬುಕ್‌ ಹೇಳಿದ್ದು, ಆರಂಭಿಕ ಪರೀಕ್ಷಾ ಫಲಿತಾಂಶಗಳಿಗಾಗಿ ಉತ್ಸುಕವಾಗಿದ್ದೇವೆ ಎಂದಿದೆ.

Best Mobiles in India

English summary
If you post something on Facebook, you may not want it to be visible to all of your friends on the platform. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X