ಫೇಸ್‌ಬುಕ್‌ 'ಮಾರ್ಕೆಟ್ ಪ್ಲೇಸ್' ಹಣಗಳಿಕೆಗೆ ಬೆಸ್ಟ್ ಪ್ಲೇಸ್ ಏಕೆ?!

! ಫೇಸ್‌ಬುಕ್ 'ಮಾರ್ಕೆಟ್ ಪ್ಲೇಸ್' ಅನ್ನು ಈಗಾಗಲೇ ಸಾಕಷ್ಟು ಮಂದಿ ಸದುಪಯೋಗವನ್ನೂ ಮಾಡಿಕೊಳ್ಳುತ್ತಿದ್ದು, ಕೇವಲ ಮನರಂಜನೆ, ಸುದ್ದಿಗಾಗಿ ಮಾತ್ರವಲ್ಲದೇ ವ್ಯಾಪಾರದ ಭಾಗವಾಗಿ ಫೇಸ್‌ಬುಕ್ ಅನ್ನು ನೋಡಲಾಗುತ್ತಿದೆ.!!

|

ಫೇಸ್‌ಬುಕ್‌ ಎಂಬ ಸಾಮಾಜಿಕ ಜಾಲತಾಣ ನಮ್ಮ ಸಮಯ ಕೊಲ್ಲಲು ಮಾತ್ರ ಇದೆ ಎನ್ನುವವರಿಗೆ ಫೇಸ್‌ಬುಕ್ 'ಮಾರ್ಕೆಟ್ ಪ್ಲೇಸ್' ತಕ್ಕ ಪ್ರತ್ಯುತ್ತರ ನೀಡಿದೆ.! ಫೇಸ್‌ಬುಕ್ 'ಮಾರ್ಕೆಟ್ ಪ್ಲೇಸ್' ಅನ್ನು ಈಗಾಗಲೇ ಸಾಕಷ್ಟು ಮಂದಿ ಸದುಪಯೋಗವನ್ನೂ ಮಾಡಿಕೊಳ್ಳುತ್ತಿದ್ದು, ಕೇವಲ ಮನರಂಜನೆ, ಸುದ್ದಿಗಾಗಿ ಮಾತ್ರವಲ್ಲದೇ ವ್ಯಾಪಾರದ ಭಾಗವಾಗಿ ಫೇಸ್‌ಬುಕ್ ಅನ್ನು ನೋಡಲಾಗುತ್ತಿದೆ.!!

ಫೇಸ್‌ಬುಕ್‌ 'ಮಾರ್ಕೆಟ್ ಪ್ಲೇಸ್' ಹಣಗಳಿಕೆಗೆ ಬೆಸ್ಟ್ ಪ್ಲೇಸ್ ಏಕೆ?!

ನಮ್ಮಲ್ಲಿರುವ ವಸ್ತುಗಳನ್ನು ಕುಳಿತಲ್ಲೇ ಫೇಸ್‌ಬುಕ್‌ ಮೂಲಕವೇ ಮಾರುವಂತಹ ಮತ್ತು ನಮಗೆ ಬೇಕಾದುದನ್ನು ಬೇರೆಲ್ಲೂ ಹೋಗದೆ ಫೇಸ್‌ಬುಕ್‌ ಮಿತ್ರರ ಮೂಲಕ ಖರೀದಿಸುವಂತಹ ಹೊಸ ಆಯ್ಕೆಯೂ ಇದೀಗ ವೈರೆಲ್ ಆಗಿದ್ದು, ಹಾಗಾದರೆ ಫೇಸ್‌ಬುಕ್ 'ಮಾರ್ಕೆಟ್ ಪ್ಲೇಸ್' ಹೇಗಿದೆ? ಇದರಿಂದ ಗ್ರಾಹಕರಿಗೆ ಏನೆಲ್ಲಾ ಲಾಭ? ಭವಿಷ್ಯದಲ್ಲಿ ಇದು ಹೇಗೆ ಸಹಾಯಕಾರಿ ಎಂಬೆಲ್ಲಾ ಅಂಶಗಳನ್ನು ಇಂದಿನ ಲೇಖನದಲ್ಲಿ ಚರ್ಚಿಸೋಣ.!!

ಫೇಸ್‌ಬುಕ್ 'ಮಾರ್ಕೆಟ್ ಪ್ಲೇಸ್'!!

ಫೇಸ್‌ಬುಕ್ 'ಮಾರ್ಕೆಟ್ ಪ್ಲೇಸ್'!!

ಮೊದಲೇ ಹೇಳಿದಂತೆ ನಮ್ಮಲ್ಲಿರುವವ ವಸ್ತುಗಳನ್ನು ನಮ್ಮ ಫೇಸ್‌ಬುಕ್ ಗೆಳೆಯರಿಗೆ ಮಾರುವ ಅಥವಾ ಅವರ ವಸ್ತುಗಳನ್ನು ಫೇಸ್‌ಬುಕ್ ಮೂಲಕ ಸಂಪರ್ಕಿಸಿ ಖರೀದಿಸುವ ಒಂದು ವೇದಿಕೆಗೆ 'ಮಾರ್ಕೆಟ್ ಪ್ಲೇಸ್' ಎಂದು ಹೆಸರಿಡಲಾಗಿದೆ. ಈ ಸೇವೆ ಬಹುತೇಕ ಒಎಲ್‌ಎಕ್ಸ್ ಮತ್ತು ಕ್ವಿಕ್ಕರ್ ಸೇವೆಗಳಂತೆಯೇ ಲಭ್ಯವಿದೆ.!!

ಗ್ರಾಹಕರ ಮಾರ್ಕೆಟ್!!

ಗ್ರಾಹಕರ ಮಾರ್ಕೆಟ್!!

ಒಎಲ್‌ಎಕ್ಸ್, ಇ-ಬೇ, ಕ್ವಿಕರ್, ಕ್ಯಾಶಿಫೈ, ಅಮೆಜಾನ್‌ ಮುಂತಾದ ತಾಣಗಳಲ್ಲಿ ನಾವು ಸೆಕೆಂಡ್‌ ಹ್ಯಾಂಡ್ ವಸ್ತುಗಳನ್ನು ಖರೀದಿಸುವ ವ್ಯವಸ್ಥೆ ಈಗಾಗಲೇ ಇದ್ದರೆ, ಫೇಸ್‌ಬುಕ್‌ ಕೂಡ ಇದಕ್ಕೆ ವೇದಿಕೆಯನ್ನು ಇದೀಗ ಕ್ಲಿಪಿಸಿದೆ. ಇದರಲ್ಲಿ ಹೊಸ ವಸ್ತುಗಳನ್ನು ಕೂಡ ಮಾರಾಟ ಮಾಡಿ, ಜನರು ತಮ್ಮದೇ ಮಾರ್ಕೆಟ್ ಪ್ಲೇಸ್ ಸ್ಥಾಪಿಸಿಕೊಳ್ಳಬಹುದು.!!

ಬೇರೆ ವೆಬ್‌ ತಾಣಕ್ಕೆ ಹೋಗಬೇಕಿಲ್ಲ!!

ಬೇರೆ ವೆಬ್‌ ತಾಣಕ್ಕೆ ಹೋಗಬೇಕಿಲ್ಲ!!

ಯಾರು ತಮ್ಮಲ್ಲಿರುವ ವಸ್ತುಗಳನ್ನು ಮಾರಾಟ ಮಾಡಲು ಬಯಸಿದರೆ ಫೇಸ್‌ಬುಕ್ ಆಪ್‌ನಲ್ಲಿಯೇ ಇರುವ ಮಾರ್ಕೆಟ್ ಪ್ಲೇಸ್ ಎಂಬ ಟ್ಯಾಬ್‌ ಮೂಲಕ ಕೆಲಸ ಮುಗಿಸಬಹುದು. ಇದಕ್ಕಾಗಿ ಬೇರೆ ವೆಬ್‌ ತಾಣಕ್ಕೆ ಹೋಗಬೇಕಾಗಿಲ್ಲ, ಮತ್ತೊಂದು ಆಪ್‌ ಅಳವಡಿಸಿಕೊಳ್ಳಬೇಕಿಲ್ಲ.! ಫೇಸ್‌ಬುಕ್‌ ಮೂಲಕವೇ ಎಲ್ಲವೂ ಸಾಧ್ಯ.!!

'ಫೇಸ್‌ಬುಕ್‌ ಮಾರ್ಕೆಟ್ ಪ್ಲೇಸ್' ಬಳಸುವುದು ಹೇಗೆ?

'ಫೇಸ್‌ಬುಕ್‌ ಮಾರ್ಕೆಟ್ ಪ್ಲೇಸ್' ಬಳಸುವುದು ಹೇಗೆ?

ಫೇಸ್‌ಬುಕ್ ಲಾಗಿನ್‌ ಆದ ನಂತರ ನಿಮ್ಮ ನ್ಯೂಸ್‌ಫೀಡ್‌ನ ಎಡ ಮೇಲ್ಭಾಗದಲ್ಲಿ 'ಫೇಸ್‌ಬುಕ್‌ ಮಾರ್ಕೆಟ್‌ ಪ್ಲೇಸ್‌' ಎಂದು ಬರೆದಿರುವುದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಕಾರು, ಬೈಕು, ಮೊಬೈಲ್‌ ಫೋನ್‌ ಹೀಗೆ ಫಿಲ್ಟರ್ ಮಾಡಿದರೆ, ನಮ್ಮ ಊರಿನ ಸುತ್ತಮುತ್ತ ಸುಮಾರು 60 ಕಿ.ಮೀ. ವ್ಯಾಪ್ತಿಯಲ್ಲಿರುವ ವಸ್ತುಗಳನ್ನು ಫೇಸ್‌ಬುಕ್‌ ತೋರಿಸುತ್ತದೆ.!!

ಮಾರಾಟ ಮಾಡುವುದು ಹೇಗೆ?

ಮಾರಾಟ ಮಾಡುವುದು ಹೇಗೆ?

ಮಾರ್ಕೆಟ್ ಪ್ಲೇಸ್ ತೆರೆದು 'ವಾಟ್‌ ಆರ್‌ ಯೂ ಲಿಸ್ಟಿಂಗ್' ಎಂಬುದನ್ನು ಕ್ಲಿಕ್‌ ಮಾಡಿ, ನೀವು ಮಾರಾಟ ಮಾಡಬೇಕಿರುವ ವಸ್ತುವಿನ ವಿವರ ನೀಡಿ, ಫೋಟೋ ಕೂ ಅಪ್ಲೋಡ್ ಮಾಡಿ. ಎಲ್ಲ ವಿವರಗಳನ್ನೂ ದಾಖಲಿಸಿ ಪೋಸ್ವ್ ಮಾಡಿದರೆ ಆಯಿತು ನಿಮ್ಮಲ್ಲಿರುವ ವಸ್ತುಗಳನ್ನು ಮಾರಾಟಕ್ಕಿಟ್ಟಂತೆ.!!

ಫೇಸ್‌ಬುಕ್ 'ಮಾರ್ಕೆಟ್ ಪ್ಲೇಸ್' ಡಿಫರೆಂಟ್!!

ಫೇಸ್‌ಬುಕ್ 'ಮಾರ್ಕೆಟ್ ಪ್ಲೇಸ್' ಡಿಫರೆಂಟ್!!

ಒಎಲ್‌ಎಕ್ಸ್, ಕ್ವಿಕರ್‌ ಮುಂತಾದೆಡೆಗಳಲ್ಲೆಲ್ಲ ಸೆಕೆಂಡ್‌ ಹ್ಯಾಂಡ್‌ ವಸ್ತುಗಳ ಖರೀದಿಗಿದ್ದ ಅತಿದೊಡ್ಡ ತೊಂದರೆ ಎಂದರೆ ಅಲ್ಲಿ ವಸ್ತುಗಳ ವಿಶ್ವಾಸಾರ್ಹತೆ. ಆದರೆ, ಫೇಸ್‌ಬುಕ್‌ನಲ್ಲಿ ಪ್ರತಿಯೊಬ್ಬರ ಪರಿಚಯ ಇರುವುದರಿಂದ ವಸ್ತುಗಳ ಮೇಲೆ ನಂಬಿಕೆ ಒಂದಿಷ್ಟು ಹೆಚ್ಚು ಇಡಬಹುದು.!!

How to view all photos, pages, comments and posts you liked on Facebook (KANNADA)
ನಕಲಿ ಅಕೌಂಟ್‌ಗಳ ಬಗ್ಗೆ ಎಚ್ಚರ!!

ನಕಲಿ ಅಕೌಂಟ್‌ಗಳ ಬಗ್ಗೆ ಎಚ್ಚರ!!

ಫೇಸ್‌ಬುಕ್‌ನಲ್ಲಿ ನೀವು ಸಿಕ್ಕಸಿಕ್ಕವರನ್ನು ಗೆಳೆಯರನ್ನಾಗಿ ಮಾಡಿಕೊಂಡಿದ್ದರೆ ಅವುಗಳಲ್ಲಿ ನಕಲಿ ಅಕೌಂಟ್‌ಗಳ ಬಗ್ಗೆ ಎಚ್ಚರವಾಗಿರಬೇಕು. ಫೇಸ್‌ಬುಕ್‌ ತನ್ನ ಮಾರುಕಟ್ಟೆ ತಾಣದಲ್ಲಿ ವಸ್ತುಗಳ ಮಾರಾಟಕ್ಕೆ ಅಷ್ಟೇನೂ ಕಠಿಣವಾದ ನಿಯಮಗಳನ್ನು ರೂಪಿಸಿಲ್ಲ ಎನ್ನಬಹುದಾದ್ದರಿಂದ ಈ ಎಚ್ಚರಿಕೆ ಅಗತ್ಯ.!!

ಬೆಂಗಳೂರಿನಲ್ಲಿ ಮೊದಲ ಫಾಸ್ಟ್‌ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ!!..ಚಾರ್ಜಿಂಗ್ ದರ ಎಷ್ಟು ಗೊತ್ತಾ?ಬೆಂಗಳೂರಿನಲ್ಲಿ ಮೊದಲ ಫಾಸ್ಟ್‌ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ!!..ಚಾರ್ಜಿಂಗ್ ದರ ಎಷ್ಟು ಗೊತ್ತಾ?

Best Mobiles in India

English summary
Facebook is constantly unveiling new ad features. But over the past year or so.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X