ಒಂದು ಲಿಂಕ್ ಅನ್ನು ಆಪ್ ಆಗಿ ಫೋನ್‌ನಲ್ಲಿ ಬಳಕೆ ಮಾಡಬಹುದು!!..ಹೇಗೆ ಗೊತ್ತಾ?

ಆಪ್ ಇಲ್ಲದಿರುವುದು ಒಂದು ಸಮಸ್ಯೆಯಾದರೆ ಅಥವಾ ಆಪ್‌ ಡೌನ್‌ಲೋಡ್ ಮಾಡಲು ಮೆಮೊರಿ ಇರುವುದಿಲ್ಲ!!

|

ಇನ್ನೇನಿದ್ದರೂ ಆಪ್‌ಗಳದ್ದೇ ಜಮಾನವಾದರೂ ಸಹ ಆಪ್‌ ಹೊಂದಿಲ್ಲದೇ ಇರುವ ಹಲವು ವೆಬ್‌ಸೈಟ್‌ಗಳು ಇವೆ.! ಅಂತಹ ವೆಬ್‌ಸೈಟ್‌ಗಳಿಗೆ ನಾವು ಪ್ರತಿದಿನ ಭೇಟಿ ಮಾಡುತ್ತಿರಬೇಕಾಗುತ್ತದೆ.!! ಇಲ್ಲಿ ಆಪ್ ಇಲ್ಲದಿರುವುದು ಒಂದು ಸಮಸ್ಯೆಯಾದರೆ ಅಥವಾ ಆಪ್‌ ಡೌನ್‌ಲೋಡ್ ಮಾಡಲು ಮೆಮೊರಿ ಇರುವುದಿಲ್ಲ!!

ಇಂತಹ ಸಮಯದಲ್ಲಿ ಕ್ರೋಮ್ ಮೂಲಕ ಪ್ರತಿದಿನವೂ ಒಂದು ವೆಬ್‌ಸೈಟ್‌ಗೆ ಭೇಟಿ ನೀಡದೆ ಆ ವೆಬ್‌ಸೈಟ್‌ ಹೆಸರನ್ನು ಟೈಪ್‌ ಮಾಡುವ ಬದಲು ಯಾವುದೇ ವೆಬ್‌ಸೈಟ್‌ ಅನ್ನು ಆಪ್‌ನಂತೆ ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು ಮತ್ತು ಮೆಮೊರಿ ಕೂಡ ಉಳಿಸಬಹುದು.!! ಹಾಗಾದರೆ. ವೆಬ್‌ಸೈಟ್‌ ಲಿಂಕ್‌ ಅನ್ನು ಹೋಮ್‌ ಸ್ಕ್ರೀನ್‌ಗೆ ಆಡ್‌ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಕ್ರೋಮ್ ಮೂಲಕ ಸರ್ಚ್ ಮಾಡಿ!!

ಕ್ರೋಮ್ ಮೂಲಕ ಸರ್ಚ್ ಮಾಡಿ!!

ಮೊಬೈಲ್‌ನಲ್ಲಿ ಕ್ರೋಮ್ ಬ್ರೌಸರ್ ತೆರೆದು ನೀವು ಯಾವ ವೆಬ್‌ಸೈಟ್‌ ಅನ್ನು ಹೋಮ್‌ಸ್ಕ್ರೀನ್‌ಗೆ ಆಡ್‌ ಮಾಡಬೇಕೋ ಅದರ ಯುಆರ್‌ಎಲ್‌ ಟೈಪ್‌ ಮಾಡಿ ತೆರೆಯಿರಿ. ಒಮ್ಮೆ ವೆಬ್‌ಸೈಟ್‌ ತೆರೆದ ನಂತರ ನಿಮ್ಮ ಬಲಭಾಗದಲ್ಲಿ ಮೂರುಚುಕ್ಕೆಗಳುಳ್ಳ ಸೆಟ್ಟಿಂಗ್ಸ್ ಆಯ್ಕೆ ಕ್ಲಿಕ್ ಮಾಡಿ.!!

ಲಿಂಕ್ ಸೇವ್ ಮಾಡಿ

ಲಿಂಕ್ ಸೇವ್ ಮಾಡಿ

ಮೂರುಚುಕ್ಕೆಗಳುಳ್ಳ ಸೆಟ್ಟಿಂಗ್ಸ್ ಆಯ್ಕೆ ಕ್ಲಿಕ್ ಮಾಡಿದ ನಂತರ ಹಲವು ಆಯ್ಕೆಗಳು ತೆರೆಯುತ್ತವೆ. ಅಲ್ಲಿ ಕಾಣುವ ಆಯ್ಕೆಗಳಲ್ಲಿ Add to Home screen ಮೇಲೆ ಕ್ಲಿಕ್ಕಿಸಿ. ಈಗ ತೆರೆದುಕೊಳ್ಳುವ ಆಯ್ಕೆಯಲ್ಲಿ ಆ ವೆಬ್‌ಸೈಟ್‌ನ ಹೆಸರು ಹಾಗೂ ವಿವರ ಕಾಣಿಸಿ ಕೊಳ್ಳುತ್ತದೆ. ನಂತರ ಈ ಲಿಂಕ್‌ ಅನ್ನು ಹೋಮ್‌ ಸ್ಕ್ರೀನ್‌ಗೆ ಆಡ್‌ ಮಾಡಲು Add ಮೇಲೆ ಕ್ಲಿಕ್‌ ಮಾಡಿ.!!

ಹೆಸರನ್ನು ನೀವೆ ಇಡಬಹುದು!!

ಹೆಸರನ್ನು ನೀವೆ ಇಡಬಹುದು!!

Add to Home screen ಮೇಲೆ ಕ್ಲಿಕ್ಕಿಸಿದ ನಂತರ ಅಲ್ಲಿ ಕಾಣಿಸಿಕೊಳ್ಳುವ ಹೆಸರಿನಲ್ಲೇ ಉಳಿಸಿಕೊಳ್ಳಬಹುದು ಅಥವಾ ನಿಮಗೆ ಬೇಕಾದ ಹೆಸರಿನಲ್ಲಿ ಆ ಲಿಂಕ್ ಸೇವ್ ಮಾಡಿಕೊಳ್ಳಬಹುದು. ನೀವು ಆಯ್ಕೆ ಮಾಡಿದ ವೆಬ್‌ಸೈಟ್‌ನ ಲಿಂಕ್‌ ಆ ಸೈಟ್‌ನ ಐಕಾನ್‌ ಜತೆಗೆ ನಿಮ್ಮ ಮೊಬೈಲ್‌ನ ಹೋಮ್‌ಸ್ಕ್ರೀನ್‌ನಲ್ಲಿ ಸೇವ್ ಆಗಿರುತ್ತದೆ.

ರಿಮೂವ್ ಮಾಡುವುದು ಸುಲಭ.!!

ರಿಮೂವ್ ಮಾಡುವುದು ಸುಲಭ.!!

ಹೋಮ್‌ಸ್ಕ್ರೀನ್‌ನಲ್ಲಿ ಸೇವ್ ಆದ ಲಿಂಕ್ ಅನ್ನು ರಿಮೂವ್ ಮಾಡಲು ಆ ಲಿಂಕ್‌ ಮೇಲೆ ಲಾಂಗ್‌ ಪ್ರೆಸ್‌ ಮಾಡಿ. ಸ್ಕ್ರೀನ್‌ನ ಮೇಲ್ಭಾಗದಲ್ಲಿ ಕಾಣುವ ರಿಮೂವ್‌ ಕಡೆಗೆ ಎಳೆದರೆ ಸಾಕಾಗುತ್ತದೆ. ಆ ಲಿಂಕ್‌ ನಿಮ್ಮ ಹೋಮ್‌ಸ್ಕ್ರೀನ್‌ನಿಂದ ಅಳಿಸಿ ಹೋಗುತ್ತದೆ.!!

ಮೆಮೊರಿ ಉಳಿಸಬಹುದು.!!

ಮೆಮೊರಿ ಉಳಿಸಬಹುದು.!!

ಹೋಮ್‌ಸ್ಕ್ರೀನ್ನಲ್ಲಿ ಆಪ್‌ ರೀತಿಯಲ್ಲಿಯೇ ಈ ಲಿಂಕ್‌ಗಳನ್ನು ಬಳಕೆ ಮಾಡಬಹುದಾದ್ದರಿಂದ ನಿಮ್ಮ ಮೆಮೊರಿ ಸಾಕಷ್ಟು ಉಳಿತಾಯವಾಗುತ್ತದೆ. ನೂರು ಆಪ್‌ಗಳನ್ನು ಸೇವ್ ಮಾಡಿಕೊಳ್ಳುವ ಮೆಮೊರಿಯಲ್ಲಿ 1000ಕ್ಕಿಂತ ಹೆಚ್ಚು ಲಿಂಕ್‌ಗಳನ್ನು ಈ ರೀತಿ ಸೇವ್ ಮಾಡಿಕೊಳ್ಳಬಹುದು.!!

2 ದಿನಗಳು 'ದೀಪಾವಳಿ ವಿತ್ ಮಿ' ಭಾರಿ ಸೇಲ್!..1 ರೂ.ಗೆ ಗೆಲ್ಲಿ ಶಿಯೋಮಿ ಫೋನ್ಸ್!!2 ದಿನಗಳು 'ದೀಪಾವಳಿ ವಿತ್ ಮಿ' ಭಾರಿ ಸೇಲ್!..1 ರೂ.ಗೆ ಗೆಲ್ಲಿ ಶಿಯೋಮಿ ಫೋನ್ಸ್!!

Best Mobiles in India

English summary
This was a big step for the web as it provided users the ability.to know more visi to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X