Subscribe to Gizbot

ಟೆಕ್‌ ಕಂಪೆನಿಗಳ ಹೆಸರಿನ ಹಿಂದಿನ ಸತ್ಯ

Posted By:

ನಾವೆಲ್ಲ ಗೂಗಲ್‌,ಮೈಕ್ರೋಸಾಫ್ಟ್‌,ಆಪಲ್‌, ವಿಕೀಪಿಡಿಯಾ, ಸ್ಯಾಮ್‌ಸಂಗ್‌,ನೋಕಿಯಾ,ಉಬುಂಟು ಹೆಸರನ್ನು ಕೇಳಿದ್ದೇವೆ. ಆದರೆ ಈ ಹೆಸರನ್ನು ಯಾಕೆ ಈ ಕಂಪೆನಿಗಳಿಗೆ,ವೆಬ್‌ಸೈಟ್‌ಗಳಿಗೆ ಇರಿಸಿದ್ದಾರೆ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಹೀಗಾಗಿ ಇಲ್ಲಿ ಆ ಕಂಪೆನಿ/ವೆಬ್‌ಸೈಟ್‌ಗಳಿಗೆ ಈ ಹೆಸರು ಹೇಗೆ ಬಂತು ಎಂಬುದನ್ನು ತಿಳಿಸಲಾಗಿದೆ.ಒಂದೊಂದೆ ಪುಟವನ್ನು ನೋಡಿಕೊಂಡು ಈ ಮಾಹಿತಿಯನ್ನು ಓದಿಕೊಂಡು ಹೋಗಿ.

ಲಿಂಕ್‌: ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌:

ಗೂಗಲ್‌:

ಗೂಗಲ್‌ ಸಂಸ್ಥಾಪಕರಾದ ಲಾರಿ ಪೇಜ್‌ ಮತ್ತು ಸರ್ಜಿ ಬ್ರಿನ್‌ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್‌ ಸರ್ಚ್ ಇಂಜಿನ್‌ ಬಗ್ಗೆ ಒಂದು ಪ್ರೋಜೆಕ್ಟ್‌ ಮಾಡುತ್ತಿದ್ದರು. ಅವರ ಪ್ರೋಜೆಕ್ಟ್‌ ಉದ್ದೇಶ ಸರಳ. ಯಾರದ್ರೂ ಕೀ ವರ್ಡ್ ಸರ್ಚ್ ಮಾಡಿದ್ರೆ ಆ ಕೀ ವರ್ಡ್ ಇರುವಂತಹ ಸಿಕ್ಕಾಪಟ್ಟೆ ಸೈಟ್‌ಗಳು ಬರುತ್ತಿತ್ತು.ಹೀಗಾಗಿ ಇದನ್ನು ನಿಯಂತ್ರಿಸಲು ಅವರು ಗೂಗಲ್‌ ನಂಬರ್‌ ತರಲು ಯೋಚಿಸಿದ್ದರು. ಈ ಗೂಗಲ್‌(Googol) ನಂಬರ್‌ ಅಂದ್ರೆ ಒಂದು ಅಂಕೆಯ ಮುಂದೆ ನೂರು ಸೊನ್ನೆಗಳನ್ನು ಹಾಕಿದ್ರೆ ಎಷ್ಟು ಸಂಖ್ಯೆ ಬರುತ್ತದೋ ಅಷ್ಟು ಸೈಟ್‌ಗಳು ಮಾತ್ರ ಪೇಜ್‌ನಲ್ಲಿ ಬರಬೇಕು ಎನ್ನುವುದು ಇವರ ಉದ್ದೇಶವಾಗಿತ್ತು.ಇವರು ಪ್ರೋಜೆಕ್ಟ್‌ ಪೂರ್ಣಗೊಳಿಸಿ ಅದನ್ನು ಪರೀಶಿಲಿದ ಮೌಲ್ಯಮಾಪಕ ಕೊನೆಗೆ ತನ್ನ ಪುಸ್ತಕದಲ್ಲಿ Googol ಪದದ ಬದಲಿಗೆ ತಪ್ಪಾಗಿ Google ಎಂದು ಬರೆದನಂತೆ. ಹೀಗಾಗಿ ಲಾರಿ ಪೇಜ್‌ ಮತ್ತು ಸರ್ಜಿ ಬ್ರಿನ್‌ ಇದೇ ಹೆಸರನ್ನು ಗೂಗಲ್‌ಗೆ ಇಡಲು ನಿರ್ಧರಿಸಿದರು.

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌ ಪದ ಬಂದಿರುವುದು ಎರಡು ಪದಗಳಿಂದ. ಮೈಕ್ರೋ ಕಂಪ್ಯೂಟರ್‌ನಿಂದ ಮೈಕ್ರೋ ಮತ್ತು ಸಾಫ್ಟ್‌ವೇರ್‌ನಿಂದ ಸಾಫ್ಟ್ ಪದ. ಈ ಎರಡು ಪದವನ್ನು ಸೇರಿಸಿ ಕಂಪೆನಿಗೆ ಬಿಲ್‌ಗೇಟ್ಸ್‌ ಮೈಕ್ರೋಸಾಫ್ಟ್‌ ಎಂದು ಹೆಸರಿಟ್ಟಿದ್ದಾರೆ.

ಆಪಲ್‌

ಆಪಲ್‌

ಸ್ಟೀವ್‌ ಜಾಬ್ಸ್‌ ಆಪಲ್‌ ಕಂಪೆನಿ ನಿರ್ಮಿಸುವ ಮೊದಲು ಆಪಲ್‌ ತೋಟದಲ್ಲಿ ಕೆಲಸಗಾರನಾಗಿ ನಿಯೋಜನೆಗೊಂಡಿದ್ದ. ಆಪಲ್‌ ಕಂಪೆನಿ ಆರಂಭಿಸುವ ಮೊದಲು ತನ್ನ ಸ್ನೇಹಿತರಿಗೆ ಕಂಪೆನಿಗೆ ಉತ್ತಮ ಹೆಸರನ್ನು ನೀಡುವಂತೆ ಸೂಚಿಸಿದ್ದ್. ಒಂದು ವೇಳೆ ಸ್ನೇಹಿತರು ಯಾವುದೇ ಹೆಸರನ್ನು ಸೂಚಿಸದಿದ್ದರೆ ಕಂಪೆನಿಗೆ ಆಪಲ್‌ ಹೆಸರನ್ನು ಇಡುವುದಾಗಿ ಹಾಸ್ಯವಾಗಿ ಹೇಳಿದ್ದ.ಸ್ನೇಹಿತರು ಹೆಸರು ಸೂಚಿಸದಿದ್ದರಿಂದ ಕೊನೆಗೆ ಸ್ಟೀವ್‌ ಕಂಪೆನಿ ಅಪಲ್‌ ಕಂಪೆನಿಯಾಗಿ ಬದಲಾಯಿತು.

ಅಡೋಬ್

ಅಡೋಬ್

ಅಡೋಬ್‌ ಮೂಲತ: ನದಿಯ ಹೆಸರು. ಅಡೋಬ್‌ ಸ್ಥಾಪಿಸದವರಲ್ಲಿ ಒಬ್ಬನಾದ ಜಾನ್‌ ನ್ಯಾಕ್‌ನ ಮನೆ ಕ್ಯಾಲಿಫೋರ್ನಿಯದ ಲಾಸ್‌ ಅಟ್ಲಾಸ್‌ ನಗರದಲ್ಲಿತ್ತು. ಇವನ ಮನೆಯ ಹಿಂದುಗಡೆಯೇ ಅಡೋಬ್‌ ನದಿ ಹರಿಯುತ್ತಿದ್ದರಿಂದ ಕಂಪೆನಿಗೆ ಅಡೋಬ್‌ ಎಂದು ಹೆಸರಿಡಲಾಯಿತು.

ವಿಕಿಪೀಡಿಯಾ

ವಿಕಿಪೀಡಿಯಾ

ಹವಾಮಿ ಭಾಷೆಯಲ್ಲಿ ವಿಕಿ(wiki) ಎಂದರೆ ಶೀಘ್ರ ಅಥವಾ ತ್ವರಿತಗತಿ ಎಂದರ್ಥ. ಇಂಗ್ಲೀಷಿನಲ್ಲಿ ಎನ್ಸೈಕ್ಲೊಪೀಡಿಯಾ (Encyclopedia) ಎಂದರೆ ವಿಶ್ವಕೋಶ ಎಂದರ್ಥ. ಇವೆರಡೂ ಶಬ್ದಗಳನ್ನು ಸಂಯೋಜಿಸಿ ವಿಕಿಪೀಡಿಯಾ (wikipedia) ಎಂಬ ಗಣಕೀಕೃತ ವಿಶ್ವಕೋಶೀಯ ಮಾದರಿಯನ್ನು ಅಭಿವೃದ್ಧಿಗೂಳಿಸಲಾಗಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್ ಕೋರಿಯಾದ ಎರಡು ಪದಗಳಾದ ಸ್ಯಾಮ್‌(Sam)ಮತ್ತು ಸಂಗ್‌ (sung) ನಿಂದ ಬಂದಿದೆ. ಸಂಗ್‌ ಪದದ ಅರ್ಥ ನಕ್ಷತ್ರವಾದ್ರೆ ,ಸ್ಯಾಮ್‌ ಪದ ದೊಡ್ಡದು,ಬಹುಸಂಖ್ಯಾತ,ಶಕ್ತಿಶಾಲಿ ಅರ್ಥ ನೀಡುತ್ತದೆ. ಹೀಗಾಗಿ ಈ ಸ್ಯಾಮ್‌ ಮತ್ತು ಸಂಗ್ ಎರಡು ಪದವನ್ನು ಸಂಯೋಜಿದಿ ಕಂಪೆನಿಗೆ ಸ್ಯಾಮ್‌ಸಂಗ್‌ ಎಂದು ಹೆಸರಿಡಲಾಗಿದೆ.

ಉಬುಂಟು

ಉಬುಂಟು

ದಕ್ಷಿಣ ಆಫ್ರಿಕಾದಲ್ಲಿರುವ ಝುಲು ಜನಾಂಗದವರು ಮಾತನಾಡುವ ಝುಲು ಭಾಷೆಯಿಂದ ಉಬುಂಟು ಪದ ಬಂದಿದೆ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಈ ಹಿನ್ನಲೆಯಲ್ಲಿ ಉಬುಂಟು ಓಪನ್ ಸೋರ್ಸ್ ಸಾಫ್ಟ್‌ವೇರ್‌ ಆಗಿದ್ದರಿಂದ ಇದಕ್ಕೆ ಇದೇ ಸರಿಯಾದ ಪದವೆಂದು ತಿಳಿದು ಈ ಉಬುಂಟು ಎಂದು ಹೆಸರಿಡಲಾಗಿದೆ.

ನೋಕಿಯಾ

ನೋಕಿಯಾ

ನೋಕಿಯಾ ಕಂಪೆನಿ ಆರಂಭದಲ್ಲಿ ಮರದ ಮಿಲ್‌ ಮೂಲಕ ಮರದ ಪಿಠೋಪಕರಣಗಳನ್ನು ತಯಾರಿಸುತ್ತಿತ್ತು. ತನ್ನ ಎರಡನೇ ಮಿಲ್‌ನ್ನು ಫಿನ್ಲೆಂಡ್‌ನಲ್ಲಿರುವ ನೋಕಿಯನ್‌ವಿರ್ತಾ(Nokianvirta) ನದಿಯ ಹತ್ತಿರ ನಿರ್ಮಿಸಿರು. ಕೊನೆಗೆ ಈ ನದಿಯ ಸಮೀಪ ನಿರ್ಮಿಸಿದ ಕಾರಣಕ್ಕೆ ಈ ಮಿಲ್‌ಗೆ ನೋಕಿಯಾ ಎಂದು ನಾಮಕರಣವಾಯಿತು.

ಟ್ವೀಟರ್‌

ಟ್ವೀಟರ್‌

ಒಂದು ಸಣ್ಣ ವಿಷಯ ಪಕ್ಷಿಗಳ ಚಿಲಿಪಿಲಿಯಂತೆ ಅದು ದೊಡ್ಡ ಧ್ವನಿಯಾಗಿ ಎಲ್ಲರಿಗೆ ಇಂಟರ್‌ನೆಟ್‌ನಲ್ಲಿ ಕೇಳಿಸಬೇಕು ಎನ್ನುವ ಕಾರಣಕ್ಕಾಗಿ ಟ್ವೀಟರ್‌ಗೆ ಆ ಹೆಸರು ಮತ್ತು ಪಕ್ಷಿಯ ಚಿತ್ರ ಬಂದಿದೆ.

ಅಮೇಜಾನ್‌.ಕಾಂ

ಅಮೇಜಾನ್‌.ಕಾಂ

ಅಮೇಜಾನ್‌.ಕಾಂ ಸ್ಥಾಪಿಸಿದ ಜೆಫ್‌ ಬಿಯಾಸ್‌ ತನ್ನ ಕಂಪೆನಿಗೆ ವಿಶೇಷವಾದ ಹೆಸರನ್ನು ಇಡಬೇಕೆಂದು ಬಯಸಿದ್ದ. ಏನೇನು ಆಲೋಚನೆಗಳನ್ನು ಮಾಡಿ ಕೊನೆಗೆ ಅಮೇರಿಕದ ಪ್ರಸಿದ್ದ ಅಮೇಜಾನ್‌ ನದಿಯ ಹೆಸರು ನೆನಪಿಗೆ ಬಂದಿತಂತೆ. ಹೇಗೂ ಅಮೆರಿಕದಲ್ಲಿ ತನ್ನ ವ್ಯವಹಾರ ನಡೆಯುದರಿಂದ ಜೊತೆಗೆ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಈ ಹೆಸರು ಇರುವುದರಿಂದ ತನ್ನ ಕಂಪೆನಿಗೆ ಅಮೆಜಾನ್‌.ಕಾಂ ಎಂಬ ಹೆಸರನ್ನಿರಿಸಿದ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot