ಗೂಗಲ್‌ನ ಈ ಕೀ ವರ್ಡ್‌ ಸರ್ಚ್ ಮಾಡಿ ನೋಡಿ, ನಿಮ್ಮ ತಲೆ ಗಿರ್ ಅನ್ನುತ್ತೆ!

|

ಪ್ರಸ್ತುತ ಏನೇ ಮಾಹಿತಿ ಬೇಕಿದ್ದರೂ ಮೊದಲು ನೆನಪಿಗೆ ಬರುವುದೇ ಗೂಗಲ್. ಗೂಗಲ್ ಸರ್ಚ್‌ನಲ್ಲಿ ಬಳಕೆದಾರರು ಬೇಕಾದ ಪ್ರಶ್ನೆ ಕೇಳಿದರೇ ತಕ್ಷಣಕ್ಕೆ ಫಲಿತಾಂಶಗಳ ಪಟ್ಟಿಯನ್ನೆ ಒದಗಿಸಿ ಬಿಡುತ್ತದೆ. ಗೂಗಲ್ ಸರ್ಚ್ ಆಯ್ಕೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಅಳವಡಿಸಿದ್ದು, ಮಾಹಿತಿ ಹುಡುಕಾಟವನ್ನು ಮತ್ತಷ್ಟು ಸುಲಭವಾಗಿಸಿದೆ. ಸದ್ಯ ಗೂಗಲ್ ಅಸಿಸ್ಟಂಟ್ ವಾಯಿಸ್ ಸರ್ಚ್ ಸೌಲಭ್ಯವು ಬಳಕೆದಾರರನ್ನು ಸೆಳೆದಿದೆ. ಇವುಗಳೊಂದಿಗೆ ಗೂಗಲ್‌ ಕೆಲವು ಕ್ರೇಜಿ ಸರ್ಚ್ ವಿಧಾನಗಳನ್ನು ಹೊಂದಿದ್ದು, ಗೂಗಲ್‌ ಪ್ರಿಯರು ಅವುಗಳ ಬಗ್ಗೆ ಒಮ್ಮೆ ತಿಳಿಯಲೇಬೇಕು.

ಗೂಗಲ್ ಅಪ್‌ಡೇಟ್

ಹೌದು, ವಿಶ್ವ ಟೆಕ್ ದೈತ್ಯ ಗೂಗಲ್ ಹಲವು ಅಪ್‌ಡೇಟ್ ಆವೃತ್ತಿಗಳನ್ನು ಕಂಡಿದೆ. ಪ್ರತಿ ಅಪ್‌ಡೇಟ್‌ನಲ್ಲಿಯೂ ವಿಶೇಷ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಲೆ ಬಂದಿದೆ. ಆದ್ರೆ ಕೆಲವು ಕ್ರೇಜಿ ಮತ್ತು ಕುತೂಹಲಕಾರಿ ಸರ್ಚ್ ಲುಕ್‌ನಲ್ಲಿ ಗೂಗಲ್ ಡ್ಯೂಡಲ್ ಕಾಣಿಸುತ್ತದೆ. ಹಾಗೆಯೆ ಗೂಗಲ್ ಕೆಲವು ಮಾಹಿತಿಗಳ ಸರ್ಚ್ ಫಲಿತಾಂಶದಲ್ಲಿ ಬಳಕೆದಾರರಿಗೆ ಮ್ಯಾಜಿಕ್ ಅನಿಸುವಂತಹ ಚಟುವಟಿಕೆಗಳನ್ನು ಪ್ರದರ್ಶಿಸುತ್ತದೆ. ಆ ರೀತಿಯ ಗೂಗಲ್‌ ಸರ್ಚ್‌ನ ಕ್ರೇಜಿ ಲುಕ್‌ನ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ.

ಸರ್ಚ್ ಕೀ ವರ್ಡ್‌- Do a Barrel Roll

ಸರ್ಚ್ ಕೀ ವರ್ಡ್‌- Do a Barrel Roll

ಗೂಗಲ್‌ ಸರ್ಚ್‌ನಲ್ಲಿ Do a Barrel Roll ಕೀ ವರ್ಡ್‌ ಟೈಪ್‌ ಮಾಡಿ ಸರ್ಚ್ ಮಾಡಿದರೇ ಖಂಡಿತಾ ನಿಮ್ಮ ಕಣ್ಣುಗಳ ಮುಂದೆ ಮ್ಯಾಜಿಕ್ ನಡೆಯಲಿದೆ. ಏಕೆಂದರೇ ಈ ಕೀ ವರ್ಡ್‌ ಸರ್ಚ್ ಮಾಡಿದಾಗ ಕಾಣಿಸುವ ಫಲಿತಾಂಶದಲ್ಲಿ Do a Barrel Roll ಫಲಿತಾಂಶ ತೆರೆಯಿರಿ ಆಗ ಫಲಿತಾಂಶದ ಪುಟ ಗಿರಗಿರನೆ ತಿರುಗಿ ಬಿಡುತ್ತದೆ. ಹಾಗೆಯೇ ಎರಡು ಬಾರಿ, ಹತ್ತು ಬಾರಿ, ಇಪ್ಪತ್ತು ಬಾರಿ, ನೂರು ಬಾರಿ ಹಾಗೂ ಸಾವಿರ ಬಾರಿ ತಿರುಗುವ ಆಯ್ಕೆ ಸಹ ಕಾಣಿಸುತ್ತದೆ.

ಸರ್ಚ್ ಕೀ ವರ್ಡ್‌- zerg rush

ಸರ್ಚ್ ಕೀ ವರ್ಡ್‌- zerg rush

ಗೂಗಲ್‌ ಸರ್ಚ್‌ನಲ್ಲಿ zerg rush ಕೀ ವರ್ಡ್‌ ಅನ್ನು ಟೈಪ್ ಮಾಡಿ, ಬಂದಿರುವ ಸರ್ಚ್ ಫಲಿತಾಂಶಗಳೆಲ್ಲವು ಹಾಗೆಯೇ ಕ್ರಮೇಣ ಮಾಯವಾಗುತ್ತಾ ಹೋಗುತ್ತವೆ. zerg rush ಎನ್ನುವುದು ಒಂದು ಆಕ್ರಮಣ ತಂತ್ರವಾಗಿದ್ದು, ದೊಡ್ಡ ಪಡೆಯೊಂದಿಗೆ ಅಥವಾ ಗ್ಯಾಂಗ್‌ನೊಂದಿಗೆ ಆಕ್ರಮಣ ಮಾಡುವುದಾಗಿದೆ. ಅದೇ ರೀತಿ zerg rush ಸರ್ಚ್ ಮಾಡಿದಾಗ ಫಲಿತಾಂಶ ಪುಟದಲ್ಲಿ ಯೆಲ್ಲೊ ರಿಂಗ್‌ಗಳು ಫಲಿತಾಂಶವನ್ನು ಮಾಯ ಮಾಡುತ್ತವೆ/ನಾಶ ಮಾಡುತ್ತವೆ.

ಸರ್ಚ್ ಕೀ ವರ್ಡ್‌- Google Zipper

ಸರ್ಚ್ ಕೀ ವರ್ಡ್‌- Google Zipper

ಬಳಕೆದಾರರು ಗೂಗಲ್‌ ಸರ್ಚ್‌ನಲ್ಲಿ Google Zipper ಕೀ ವರ್ಡ್ ಸರ್ಚ್ ಮಾಡಿದರೇ ಗೂಗಲ್ ಡ್ಯೂಡಲ್‌ ಪೇಜ್‌ನ ಮಧ್ಯದಲ್ಲಿ ಜಿಪ್/Zipper ಕಾಣಿಸುತ್ತದೆ. ಬಳಕೆಅದರರು ಜಿಪ್/Zipper ಸರಿಸಬಹುದು. ಅಂದಹಾಗೆ Zipper ಅನ್ನು ಶೋಧಿಸ ಗಿಡಿಯಾನ್ ಸಂಡ್‌ಬ್ಯಾಕ್ (Gideon Sundback) ಅವರ 132 ಹುಟ್ಟಹಬ್ಬದ ನೆನಪಿಗಾಗಿ 2012ರಲ್ಲಿ ಈ ವಿಶೇಷ ಸರ್ಚ್ ವಿಧಾನ ರೂಪಿಸಿತ್ತು.

ಸರ್ಚ್ ಕೀ ವರ್ಡ್- Google Mirror

ಸರ್ಚ್ ಕೀ ವರ್ಡ್- Google Mirror

ಗೂಗಲ್‌ನ ಇನ್ನೊಂದು ಆಕರ್ಷಕ ಸರ್ಚ್ ಪೇಜ್ ಅಂದರೇ ಅದು ಗೂಗಲ್ ಮೀರರ್-Google Mirror. ಬಳಕೆದಾರರು Google Mirror ಎಂಬ ಕೀ ವರ್ಡ್‌ ಸರ್ಚ್ ಮಾಡಿದರೇ ಕನ್ನಡಿಯ ಬಿಂಬದಂತೆ 'ಗೂಗಲ ಡ್ಯೂಡಲ್' ಕಾಣಿಸುತ್ತದೆ. ಹಾಗೆಯೇ ಸರ್ಚ್ ಮಾಹಿತಿಗಳು ಸಹ ಕನ್ನಡಿ ಬಿಂಬದಲ್ಲಿ/ ಉಲ್ಟಾ ಕಾಣಿಸುತ್ತವೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ.

ಸರ್ಚ್ ಕೀ ವರ್ಡ್‌- Google Underwater

ಸರ್ಚ್ ಕೀ ವರ್ಡ್‌- Google Underwater

ಗೂಗಲ್‌ನಲ್ಲಿ Google Underwater ಕೀ ವರ್ಡ್‌ ಸರ್ಚ್ ಮಾಡಿದರೇ, ನಿಮಗೆ ನೀರಿನಲ್ಲಿ ಗೂಗಲ್ ಸರ್ಚ್ ಬಾಕ್ಸ್‌ ಕಾಣಿಸುತ್ತದೆ. ಹಾಗೂ ಗೂಗಲ್ ಡ್ಯೂಡಲ್ ನೊಂದಿಗೆ ಮೀನುಗಳು ಸಹ ಕಾಣಿಸುತ್ತವೆ.

ಸರ್ಚ್ ಕೀ ವರ್ಡ್- Google Zero Gravity

ಸರ್ಚ್ ಕೀ ವರ್ಡ್- Google Zero Gravity

ಗೂಗಲ್‌ನಲ್ಲಿ Google Zero Gravity ಎಂದು ಸರ್ಚ್ ಮಾಡಿದರೇ ಕಾಣಿಸುವ ಗೂಗಲ್ ಡ್ಯೂಡಲ್ ತಕ್ಷಣಕ್ಕೆ ಕೆಳಗ ಬಿದ್ದಂತೆ ಕಾಣುತ್ತದೆ. ಏಕೆಂದರೇ ನೀವು ಸರ್ಚ್ ಮಾಡಿರುವ ಕೀ ವರ್ಡ್ ಜೀರೊ ಗ್ರ್ಯಾವಿಟಿ ಅಲ್ಲವೇ.

Most Read Articles
Best Mobiles in India

English summary
Google is the No1 search engine that provides us quality and accurate search results within seconds.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more