Subscribe to Gizbot

ನಿಮ್ಮ ಫೋನ್‌ನಲ್ಲಿ ವಾಲ್ಯೂಮ್ ಬಟನ್‌ನಿಂದ ಫೋಟೋ ತೆಗೆಯಬಲ್ಲಿರಾ?

Posted By:

ನಮ್ಮ ಬಳಿ ಇರುವ ಐಫೋನ್ ಅನ್ನು ನಾವು ಎಲ್ಲಿಗೆ ಬೇಕಾದರೂ ಕೊಂಡೊಯ್ಯುತ್ತೇವೆ. ಐಫೋನ್ ಕ್ಯಾಮೆರಾ ಎಂಬುದು ಒಂದು ಅದ್ಭುತವಾಗಿದ್ದು ಹೆಚ್ಚಿನ ವೃತ್ತಿಪರ ಫೋಟೋಗ್ರಾಫರ್‌ಗಳು, ಕಲಾವಿದರು ಮತ್ತು ಪ್ರತಿಯೊಬ್ಬರೂ ಐಫೋನ್ ಕ್ಯಾಮೆರಾವನ್ನೇ ನೆಚ್ಚಿಕೊಳ್ಳುತ್ತಾರೆ ಮತ್ತು ಮೆಚ್ಚಿಕೊಳ್ಳುತ್ತಾರೆ ಕೂಡ.

ಓದಿರಿ: ಫೋನ್ ಫೋಟೋಗ್ರಫಿಯ ಅದ್ಭುತ ಕೈಚಳಕ

ನಿಮ್ಮ ಅತ್ಯದ್ಭುತ ಐಫೋನ್ ಕ್ಯಾಮೆರಾವನ್ನು ಬಳಸಿಕೊಂಡು ನೀವು ಹೆಚ್ಚು ಸೊಗಸಾದ ಫೋಟೋಗಳನ್ನು ಕ್ಲಿಕ್ಕಿಸಬಹುದಾಗಿದೆ. ಈ ಕ್ಲಿಕ್ ಅನ್ನು ಇನ್ನಷ್ಟು ಪೂರ್ಣಗೊಳಿಸಲೆಂದೇ ನಿಮ್ಮ ಕ್ಯಾಮೆರಾ ಕಲೆಯನ್ನು ಸೊಗಸಾಗಿಸುವ ಕೆಲವೊಂದು ಸಲಹೆಗಳ ಮೂಲಕ ನಾವು ಬಂದಿದ್ದು ಈ ಸಲಹೆಗಳು ನಿಮ್ಮ ಫೋಟೋ ತೆಗೆಯುವಿಕೆಯನ್ನು ಪರಿಪೂರ್ಣಗೊಳಿಸಲಿರುವವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಾಟ್‌

ಉತ್ತಮ ಶಾಟ್‌ಗಾಗಿ

ಗ್ರಿಡ್ ಬಳಸಿ ಉತ್ತಮ ಶಾಟ್ ತೆಗೆಯಿರಿ. ಸೆಟ್ಟಿಂಗ್ಸ್ > ಫೋಟೋಗಳು ಮತ್ತು ಕ್ಯಾಮೆರಾ ಮತ್ತು ಗ್ರಿಡ್‌ಗೆ ಬದಲಾಯಿಸಿ.

ಇಯರ್ ಫೋನ್

ಇಯರ್ ಫೋನ್ ಬಳಕೆ

ಆಪಲ್‌ನ ಇಯರ್ ಫೋನ್‌ಗಳನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ವಾಲ್ಯೂಮ್ ಬಟನ್‌ಗಳನ್ನು ಬಳಸಿ ಫೋಟೋ ತೆಗೆಯುವುದು ಇಲ್ಲವೇ ವೀಡಿಯೊ ರೆಕಾರ್ಡಿಂಗ್ ಅನ್ನು ನಿಮಗೆ ಮಾಡಬಹುದಾಗಿದೆ.

ವಾಲ್ಯೂಮ್ ಬಟನ್‌

ವಾಲ್ಯೂಮ್ ಬಟನ್‌ಗಳ ಕಮಾಲು

ಫೋನ್‌ನ ಬದಿಯಲ್ಲಿರುವ ವಾಲ್ಯೂಮ್ ಬಟನ್‌ಗಳನ್ನು ಬಳಸಿ ನೈಜ ಪಾಯಿಂಟ್ ಅಂತೆಯೇ ಶಾಟ್‌ಗಳನ್ನು ನಿಮಗೆ ತೆಗೆಯಬಹುದಾಗಿದೆ.

ಬ್ರೈಟ್‌ನೆಸ್

ಶಾಟ್ ಬ್ರೈಟ್‌ನೆಸ್

ಫೋಕಸ್ ಮೇಲೆ ತಟ್ಟಿರಿ, ಸ್ಲೈಡರ್ ಅನ್ನು ಮೇಲೆ ಕೆಳಗೆ ಮಾಡಿಕೊಂಡು ನಿಮ್ಮ ಶಾಟ್‌ನ ಬ್ರೈಟ್‌ನೆಸ್ ಹೆಚ್ಚಾಗುತ್ತದೆ.

ಲಾಕ್ ಮಾಡಲು

ಎಕ್ಸ್‌ಪೋಶರ್ ಲಾಕ್ ಮಾಡಲು

ಕೆಳಕ್ಕೆ ಹೋಲ್ಡ್ ಮಾಡಿ ಒತ್ತುವುದರಿಂದ ಎಕ್ಸ್‌ಪೋಶರ್ ಅನ್ನು ಲಾಕ್ ಮಾಡಬಹುದು ಇದರಿಂದ ಮುಂದಿನ ಬಾರಿ ನೀವು ಹೊಂದಿಸಬೇಕಾಗಿಲ್ಲ.

ಬರ್ಸ್ಟ್ ಮೋಡ್

ಬರ್ಸ್ಟ್ ಮೋಡ್ ಸಕ್ರಿಯಗೊಳಿಸಲು

ಪರದೆಯಲ್ಲಿರುವ ಶಟರ್ ಬಟನ್ ಅನ್ನು ಒತ್ತಿಹಿಡಿಯಿರಿ ಇದು ಬರ್ಸ್ಟ್ ಮೋಡ್ ಅನ್ನು ಸಕ್ರಿಯಗೊಳಿಸುತ್ತದೆ, ಇದು ಸೆಕೆಂಡಿಗೆ 10 ಫೋಟೋಗಳನ್ನು ತೆಗೆಯುತ್ತದೆ.

ಫ್ಲ್ಯಾಶ್ ಬಳಕೆ

ಫ್ಲ್ಯಾಶ್ ಬಳಕೆ ಮಾಡದಿದ್ದಲ್ಲಿ

ನಿಮ್ಮ ಐಫೋನ್‌ನಲ್ಲಿ ಫ್ಲ್ಯಾಶ್ ಅನ್ನು ಬಳಸದಿದ್ದಲ್ಲಿ ಇನ್ನಷ್ಟು ಉತ್ತಮ ಫೋಟೋಗಳನ್ನು ತೆಗೆಯಬಹುದಾಗಿದೆ. ಬೇರೆ ಬೇರೆ ಲೈಟ್ ಸೋರ್ಸ್‌ಗಳನ್ನು ಬಳಸಲು ಆರಂಭಿಸಿ.

ಆಟೊ ಎಚ್‌ಡಿಆರ್

ಆಟೊ ಎಚ್‌ಡಿಆರ್ ಆನ್ ಮಾಡಿ

ನೀವು ಆಟೊ ಎಚ್‌ಡಿ ಆರ್ ಆನ್ ಮಾಡಿದಾಗ ಬೇರೆ ಬೇರೆ ಎಕ್ಸ್‌ಪೋಶರ್‌ಗಳಲ್ಲಿ ಇದು ಮೂರು ಫೋಟೋಗಳನ್ನು ತೆಗೆಯಬಲ್ಲುದು.

ಟೈಮರ್

ಟೈಮರ್ ಸೆಟ್ ಮಾಡಿ

ನೀವು ಟೈಮರ್ ಸೆಟ್ ಮಾಡಿದಾಗ ಕ್ಲಾಕ್ ಐಕಾನ್ ಮೇಲೆ ತಟ್ಟುವುದು ನಿಮ್ಮನ್ನೂ ಸೇರಿಸಿ ಫೋಟೋ ತೆಗೆಯಬಲ್ಲುದು.

ಫೋನ್ ಅನ್‌ಲಾಕ್

ಫೋನ್ ಅನ್‌ಲಾಕ್ ಮಾಡದೇ ಫೋಟೋ ತೆಗೆಯಿರಿ

ನಿಮ್ಮ ಲಾಕ್ ಸ್ಕ್ರೀನ್‌ನ ಬಲಮೂಲೆಯಲ್ಲಿರುವ ಕ್ಯಾಮೆರಾ ಸ್ವೈಪ್ ಮಾಡುವ ಮೂಲಕ ಫೋನ್ ಅನ್‌ಲಾಕ್ ಮಾಡದೆಯೇ ತ್ವರಿತವಾಗಿ ಫೋಟೋ ತೆಗೆಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We take our iPhones everywhere with us, which is why the iPhone has become the camera of choice for professionals photographers, artists, and everyone in between. From tips that help you enhance the quality of your images to tricks that enable you to take photos faster.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot