Subscribe to Gizbot

ನಿಮ್ಮ ಐಫೋನ್ ಮೂಸಿಕ್ ಆಪ್ ನಿಂದ ಆಪಲ್ ಮ್ಯೂಸಿಕ್ ತೆಗೆಯುವುದು ಹೀಗೆ!

Posted By: Tejaswini P G

ಐಓಎಸ್ ಪ್ಲ್ಯಾಟ್ಫಾರ್ಮ್ನಲ್ಲಿ ಸಂಗೀತ ಕೇಳುತ್ತಾ ಆನಂದಿಸುವಲ್ಲಿ ಆಪಲ್ ಮ್ಯೂಸಿಕ್ ಮುಖ್ಯ ಪಾತ್ರ ವಹಿಸುತ್ತದೆ.ಬೇರೆ ಬೇರೆ ಕ್ಯಾಟಲಾಗ್ ಗಳ ಮೂಲಕ ವಿಭಿನ್ನ ಟ್ರ್ಯಾಕ್ಗಳನ್ನು ನೀಡುವ ಆಪಲ್ ಮ್ಯೂಸಿಕ್ ಇಲ್ಲಿಯವರೆಗೆ ನೀಡದಿರುವ ಟ್ರ್ಯಾಕ್ಗಳು ಬಹುವಿರಳ. ಈಗ ಆಪಲ್ ಮ್ಯೂಸಿಕ್ ನಂತಹ ಹಲವು ಸ್ಟ್ರೀಮಿಂಗ್ ಸೇವೆಗಳು ಮ್ಯೂಸಿಕ್ ಜಗತ್ತಿನಲ್ಲಿ ಲಭ್ಯವಿದೆ.

ನಿಮ್ಮ ಐಫೋನ್ ಮೂಸಿಕ್ ಆಪ್ ನಿಂದ ಆಪಲ್ ಮ್ಯೂಸಿಕ್ ತೆಗೆಯುವುದು ಹೀಗೆ!

ಆದರೆ ಆಪಲ್ ಮ್ಯೂಸಿಕ್ ಮೂರು ತಿಂಗಳ ಟ್ರಯಲ್ ಪೀರಿಯಡ್ ಹೊಂದಿದ್ದು, ನಂತರ ಸಂಗೀತ ಆಲಿಸಲು ಪ್ರತೀ ತಿಂಗಳು ಇಂತಿಷ್ಟು ಹಣ ಪಾವತಿಸಿ ಸಬ್ಸ್ಕ್ರೈಬ್ ಮಾಡಿಕೊಳ್ಳಬೇಕಾಗಿದೆ. ನೀವು ಹಣ ಪಾವತಿಸಿ ಆಪಲ್ ಮ್ಯೂಸಿಕ್ ಅನ್ನು ಉಪಯೋಗಿಸಲು ಬಯಸಿದರೆ ಈ ಲೇಖನವನ್ನು ಓದಬೇಕಾಗಿಲ್ಲ.

ಆದರೆ ಆಪಲ್ ಮ್ಯೂಸಿಕ್ ಅನ್ನು ಐಫೋನ್ ನಿಂದ ತೆಗೆಯಬಯಸಿದರೆ ಅದನ್ನು ಸಾಧಿಸುವ ಬಗೆಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಆಪಲ್ ಮ್ಯೂಸಿಕ್ ಅನ್ನು ಸಂಪೂರ್ಣವಾಗಿ ನಿಮ್ಮ ಐಫೋನ್ ನಿಂದ ತಗೆಯಲು ಸಾಧ್ಯವಿಲ್ಲವಾದರೂ ಅದರ ಬಹುತೇಕ ಫೀಚರ್ಗಳನ್ನು ಹೈಡ್ ಮಾಡಬಹುದಾಗಿದೆ. ಈ ವಿಧಾನ ಐಫೋನ್, ಐಪ್ಯಾಡ್ ಟಚ್, ಐಪ್ಯಾಡ್ ಮತ್ತು ಮ್ಯಾಕ್ ಗಳಲ್ಲಿ ಕೆಲಸಮಾಡುತ್ತದೆ.

ಹಂತ 1: ನಿಮ್ಮ ಐಫೋನ್, ಐಪ್ಯಾಡ್ ಟಚ್ ಅಥವಾ ಐಪ್ಯಾಡ್ ನಲ್ಲಿ ಸೆಟ್ಟಿಂಗ್ಸ್ ಆಪ್ ತೆರೆಯಿರಿ.

ಹಂತ 2: ಐಟ್ಯೂನ್ಸ್ ಮೆನು(ಮ್ಯಾಕ್) ನಲ್ಲಿ ಪ್ರಿಫರೆನ್ಸಸ್ ಆಯ್ಕೆ ಮಾಡಿ ಅಥವಾ ಎಡಿಟ್-> ಪ್ರಿಫರೆನ್ಸಸ್ (ಪಿಸಿ) ಆಯ್ಕೆ ಮಾಡಿ

ಹಂತ 3: 'ಜನರಲ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ 'ಶೋ ಆಪಲ್ ಮ್ಯೂಸಿಕ್' ಚೆಕ್ ಬಾಕ್ಸ್ ಆನ್ನು ಅನ್ಚೆಕ್ ಮಾಡಿ

ನೀವು ಐಕ್ಲೌಡ್ ಮ್ಯೂಸಿಕ್ ಲೈಬ್ರರಿಯನ್ನು ಡಿಸೇಬಲ್ ಮಾಡಿದರೆ ನಿಮ್ಮ ಸಾಧನದಿಂದ ಆಫ್ಲೈನ್ ಟ್ರ್ಯಾಕ್ ಮತ್ತು ಆಪಲ್ ಮ್ಯೂಸಿಕ್ ಹಾಡುಗಳು ತೆಗೆಯಲ್ಪಡುತ್ತವೆ. ಆಪಲ್ ಮ್ಯೂಸಿಕ್ ನಿಂದ ಐಕ್ಲೌಡ್ ಮ್ಯೂಸಿಕ್ ಲೈಬ್ರರಿಯನ್ನು ಸ್ವಿಚ್ ಆನ್ ಅಥವಾ ಆಫ್ ಮಾಡಬಹುದಾಗಿದೆ.ಐಕ್ಲೌಡ್ ಮ್ಯೂಸಿಕ್ ಲೈಬ್ರರಿ ಅನ್ನು ಡಿಸೇಬಲ್ ಮಾಡಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ.

ಹಂತ 1: ಸೆಟ್ಟಿಂಗ್ಸ್ ಗೆ ಹೋಗಿ

ಹಂತ 2: ಮ್ಯೂಸಿಕ್ ವಿಭಾಗಕ್ಕೆ ಹೋಗಿ

ಹಂತ 3: ಐಕ್ಲೌಡ್ ಮ್ಯೂಸಿಕ್ ಲೈಬ್ರರಿ ಚೆಕ್ ಬಾಕ್ಸ್ ಅನ್ನು ಆಫ್ ಮಾಡಲು ಅನ್ಚೆಕ್ ಮಾಡಿ

ಮ್ಯಾಕ್ ನಲ್ಲಿ ಇದನ್ನು ಸಾಧಿಸಲು ಪ್ರಿಫರೆನ್ಸಸ್ ಗೆ ಹೋಗಿ 'ಐಕ್ಲೌಡ್ ಮ್ಯೂಸಿಕ್ ಲೈಬ್ರರಿ' ಅನ್ನು ಅನ್ಚೆಕ್ ಮಾಡಬಹುದು.

How to save WhatsApp Status other than taking screenshots!! Kannada

ಮಾರುಕಟ್ಟೆಗೆ ಬರಲಿದೆ ಗ್ಯಾಲೆಕ್ಸಿ ಆನ್ 7 ಪ್ರೈಮ್ ಸ್ಮಾರ್ಟ್ ಫೋನ್..!

English summary
When it comes to enjoying music on the iOS platform, Apple Music plays a big role indeed. Even though it is impossible to get rid of it completely, you can temporarily hide most of Apple Music’s aspects.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot