10 ಟಿಪ್ಸ್ ಬಳಸಿ ಫೋನ್ ಬ್ಯಾಟರಿ ವೃದ್ಧಿಸಿ

By Shwetha
|

ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚು ರೆಸಲ್ಯೂಶನ್ ಡಿಸ್‌ಪ್ಲೇ, ಪವರ್ ಫುಲ್ ಪ್ರೊಸೆಸರ್ ಮತ್ತು ಮಲ್ಟಿ ಟಾಸ್ಕ್ ನಿರ್ವಹಿಸುವ ಸಾಮರ್ಥ್ಯಗಳೊಂದಿಗೆ ಬಂದಿದೆ.

ದುರಾದೃಷ್ಟವಶಾತ್ ಈ ಎಲ್ಲಾ ಹೊಸ ಫೀಚರ್‌ಗಳು ಮತ್ತು ಹೊಸ ಕಾರ್ಯಗಳು ಗರಿಷ್ಟ ಬ್ಯಾಟರಿ ಬಳಕೆಯನ್ನು ಮಾಡಿಕೊಳ್ಳುತ್ತಿವೆ. ನಮ್ಮ ದಿನನಿತ್ಯದ ಆವಶ್ಯಕತೆಗಳಿಗಾಗಿ ಫೋನ್ ಅನ್ನು ಬಳಸುವಾಗ ಬ್ಯಾಟರಿ ಮುಗಿಯುವುದೂ ಅದರ ಋಣಾತ್ಮಕ ಅಂಶಗಳಲ್ಲಿ ಒಂದಾಗಿದೆ. ನಮಗೆ ಅಗತ್ಯವಿದ್ದಾಗ ಫೋನ್ ಬ್ಯಾಟರಿ ಮುಗಿದು ಬಳಕೆಗೂ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ನಿಮಗೆ ಆಗಾಗ್ಗೆ ಫೋನ್ ಚಾರ್ಜ್ ಮಾಡುವುದು ಕಷ್ಟಕರ ಎಂದೆನಿಸಿದ್ದು ಈ ಸಮಸ್ಯೆಯನ್ನು ನಿವಾರಿಸುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದೇವೆ. ಈ ಟಿಪ್ಸ್ ಮತ್ತು ಟ್ರಿಕ್ಸ್‌ಗಳು ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಜೀವನವನ್ನು ಹೆಚ್ಚಿಸುತ್ತವೆ. ಹಾಗಿದ್ದರೆ ಕೆಳಗಿನ ಸ್ಲೈಡರ್ ಗಮನಿಸಿ

ನಿಮ್ಮ ಡಿವೈಸ್ ಅನ್ನು ತಂಪಾಗಿರಿಸಿ

ನಿಮ್ಮ ಡಿವೈಸ್ ಅನ್ನು ತಂಪಾಗಿರಿಸಿ

ಹೊಸ ಅಧ್ಯಯನಗಳ ಪ್ರಕಾರ, ಫೋನ್ ಬ್ಯಾಟರಿಯನ್ನು ಹೆಚ್ಚು ತಾಪಮಾನಗಳಿಗೆ ಪ್ರದರ್ಶಿಸುವುದು ಬ್ಯಾಟರಿ ಜೀವಿತವನ್ನು ಕೊನೆಗೊಳಿಸುತ್ತದೆ. ಡಿವೈಸ್ ಅನ್ನು ತಂಪು ಸ್ಥಳದಲ್ಲಿ ಇರಿಸುವುದು ಡಿವೈಸ್ ಅನ್ನು ದೀರ್ಘಕಾಲ ಬಾಳಿಸುತ್ತದೆ.

ಜಾಹೀರಾತು ಬೆಂಬಲಿತ ಅಪ್ಲಿಕೇಶನ್ ತ್ಯಜಿಸಿ

ಜಾಹೀರಾತು ಬೆಂಬಲಿತ ಅಪ್ಲಿಕೇಶನ್ ತ್ಯಜಿಸಿ

ಉಚಿತ ಅಥವಾ ಜಾಹೀರಾತು ಬೆಂಬಲಿತ ಅಪ್ಲಿಕೇಶನ್‌ಗಳು ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಡ್ರೈ ಮಾಡುತ್ತದೆ ಅಂತೆಯೇ ಈ ಜಾಹೀರಾತುಗಳು ಹೆಚ್ಚು ಬ್ಯಾಟರಿ ಶಕ್ತಿಯನ್ನು ಮುಗಿಸುತ್ತವೆ.

ಲೊಕೇಶನ್ ಟ್ರ್ಯಾಕರ್ ಆಫ್ ಮಾಡಿ

ಲೊಕೇಶನ್ ಟ್ರ್ಯಾಕರ್ ಆಫ್ ಮಾಡಿ

ಫೇಸ್‌ಬುಕ್‌ನಂತಹ ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಬೇಗ ಮುಗಿಸುತ್ತವೆ ಏಕೆಂದರೆ ಅವು ಬಳಕೆದಾರನ ಸ್ಥಾನವನ್ನು ಜಿಪಿಎಸ್ ಬಳಸಿ ಟ್ರ್ಯಾಕ್ ಮಾಡುತ್ತವೆ. ಲೊಕೇಶನ್ ಟ್ರ್ಯಾಕರ್ ಅನ್ನು ಆಫ್ ಮಾಡಿ ನಂತರ ಡಿವೈಸ್ ಸೆಟ್ಟಿಂಗ್ಸ್ > ಲೊಕೇಶನ್ ಇಲ್ಲಿ ಲೊಕೇಶನ್ ಟ್ರ್ಯಾಕರ್ ಅನ್ನು ಆಫ್ ಮಾಡಿ.

ಡಿಸ್‌ಪ್ಲೇ ಬ್ರೈಟ್‌ನೆಸ್ ಕಡಿಮೆ ಮಾಡಿ

ಡಿಸ್‌ಪ್ಲೇ ಬ್ರೈಟ್‌ನೆಸ್ ಕಡಿಮೆ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಹೆಚ್ಚು ಬ್ಯಾಟರಿಯನ್ನು ಮುಗಿಸುತ್ತದೆ. ನೀವು ಬ್ಯಾಟರಿ ಜೀವನವನ್ನು ವಿಸ್ತರಿಸಬೇಕು ಎಂದಾದಲ್ಲಿ, ಡಿಸ್‌ಪ್ಲೇ ಬ್ರೈಟ್‌ನೆಸ್ ಅನ್ನು ಕಡಿಮೆ ಮಾಡಿ.

ವೈಫೈ ಬಳಸಿ ಚಾರ್ಜ್‌ನಲ್ಲಿರುವಾಗ ಅಪ್ಲಿಕೇಶನ್ ಅಪ್‌ಡೇಟ್ ಮಾಡಿ

ವೈಫೈ ಬಳಸಿ ಚಾರ್ಜ್‌ನಲ್ಲಿರುವಾಗ ಅಪ್ಲಿಕೇಶನ್ ಅಪ್‌ಡೇಟ್ ಮಾಡಿ

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುತ್ತಿರುವಾಗಲೇ ವೈಫೈ ಬಳಸಿ ಅಪ್ಲಿಕೇಶನ್ ಅಪ್‌ಡೇಟ್ ಮಾಡಿ.

ಕಡಿಮೆ ಪವರ್ ಮೋಡ್ ಆನ್ ಮಾಡಿ

ಕಡಿಮೆ ಪವರ್ ಮೋಡ್ ಆನ್ ಮಾಡಿ

ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಬ್ಯಾಟರಿ ಸೇವರ್ ಮೋಡ್‌ನೊಂದಿಗೆ ಬಂದಿರುವುದಿಲ್ಲ ಆದರೆ ನೀವು ಆಂಡ್ರಾಯ್ಡ್ 5.0 ಅಥವಾ ನಂತರದ ಆವೃತ್ತಿಯನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ನೀವು ಲೋ ಪವರ್ ಮೋಡ್ ಅನ್ನು ಆನ್ ಮಾಡಿಕೊಳ್ಳಬಹುದು. ಇದು ಸ್ವಯಂಚಾಲಿತವಾಗಿ ಹಿನ್ನಲೆ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸುತ್ತದೆ.

ಅಧಿಕ ಬ್ಯಾಟರಿ ಶಕ್ತಿ

ಅಧಿಕ ಬ್ಯಾಟರಿ ಶಕ್ತಿ

ನೆಟ್‌ವರ್ಕ್ ಹುಡುಕಾಟದಲ್ಲಿ ಸ್ಮಾರ್ಟ್‌ಫೋನ್ ಅಧಿಕ ಬ್ಯಾಟರಿ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಆದ್ದರಿಂದ ನೀವು ಕಡಿಮೆ ದರ್ಜೆಯ ಸಿಗ್ನಲ್ ಅನ್ನು ಹೊಂದಿರುವಂತಹ ಸಂದರ್ಭದಲ್ಲಿ ಏರ್‌ಪ್ಲೇನ್ ಮೋಡ್‌ಗೆ ನಿಮ್ಮನ್ನು ಬದಲಾಯಿಸಿಕೊಳ್ಳಬಹುದು.

ಉತ್ತಮ ಬ್ಯಾಟರಿ ಜೀವಿತ

ಉತ್ತಮ ಬ್ಯಾಟರಿ ಜೀವಿತ

ವೈಫೈ, ಬ್ಲ್ಯೂಟೂತ್, ಜಿಪಿಎಸ್ ಮತ್ತು ಎನ್‌ಎಫ್‌ಸಿಯನ್ನು ಬಳಕೆಯಲ್ಲಿಲ್ಲದ ಸಂದರ್ಭದಲ್ಲಿ ಆಫ್ ಮಾಡಿ. ಇದು ಕೂಡ ಉತ್ತಮ ಬ್ಯಾಟರಿ ಜೀವಿತವನ್ನು ನೀಡುವಲ್ಲಿ ಸಹಕಾರಿಯಾಗಿದೆ.

ಕ್ಲೀನ್ ಮಾಸ್ಟರ್

ಕ್ಲೀನ್ ಮಾಸ್ಟರ್

ಕ್ಲೀನ್ ಮಾಸ್ಟರ್, ಜೂಸ್ ಡಿಫೆಂಡರ್ ಮತ್ತು ಸಾಕಷ್ಟು ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳನ್ನು ಒದಗಿಸುತ್ತಿವೆ. ಇವುಗಳು ಕೂಡ ಬ್ಯಾಟರಿ ಉಳಿಸುವಲ್ಲಿ ನಿಮಗೆ ಸಹಕಾರಿಯಾಗಲಿದೆ.

ಬ್ಯಾಟರಿ ಮುಗಿಸುವ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ

ಬ್ಯಾಟರಿ ಮುಗಿಸುವ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ

ಗೇಮ್ಸ್, ವೀಡಿಯೊಗಳು ಮತ್ತು ಬ್ಯಾಟರಿ ಮುಗಿಸುವ ಇತರ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ. ಇದರಿಂದ ಕೂಡ ಹೆಚ್ಚು ಬ್ಯಾಟರಿಯನ್ನು ನಿಮಗೆ ಉಳಿಸಿಕೊಳ್ಳಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಉದ್ಯೋಗಕ್ಕಾಗಿ ಫ್ಲಿಪ್‌ಕಾರ್ಟ್‌ನಲ್ಲಿ ತನ್ನನ್ನೇ ಮಾರಿಕೊಂಡ ವಿದ್ಯಾರ್ಥಿ </a><br /><a href=ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಪತ್ತೆಹಚ್ಚುವುದು ಹೇಗೆ?
ಮೊಬೈಲ್‌ನಲ್ಲಿ "ಹೆಲ್ತ್ ಆಪ್‌" ಬಳಸುತ್ತಿದ್ದೀರಾ? ಎಚ್ಚರ!!
ಹಣ್ಣಿನಿಂದ ಫೋನ್ ಚಾರ್ಜರ್ ಟ್ರೈ ಮಾಡಿದ್ದೀರಾ? " title="ಉದ್ಯೋಗಕ್ಕಾಗಿ ಫ್ಲಿಪ್‌ಕಾರ್ಟ್‌ನಲ್ಲಿ ತನ್ನನ್ನೇ ಮಾರಿಕೊಂಡ ವಿದ್ಯಾರ್ಥಿ
ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಪತ್ತೆಹಚ್ಚುವುದು ಹೇಗೆ?
ಮೊಬೈಲ್‌ನಲ್ಲಿ "ಹೆಲ್ತ್ ಆಪ್‌" ಬಳಸುತ್ತಿದ್ದೀರಾ? ಎಚ್ಚರ!!
ಹಣ್ಣಿನಿಂದ ಫೋನ್ ಚಾರ್ಜರ್ ಟ್ರೈ ಮಾಡಿದ್ದೀರಾ? " loading="lazy" width="100" height="56" />ಉದ್ಯೋಗಕ್ಕಾಗಿ ಫ್ಲಿಪ್‌ಕಾರ್ಟ್‌ನಲ್ಲಿ ತನ್ನನ್ನೇ ಮಾರಿಕೊಂಡ ವಿದ್ಯಾರ್ಥಿ
ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಪತ್ತೆಹಚ್ಚುವುದು ಹೇಗೆ?
ಮೊಬೈಲ್‌ನಲ್ಲಿ "ಹೆಲ್ತ್ ಆಪ್‌" ಬಳಸುತ್ತಿದ್ದೀರಾ? ಎಚ್ಚರ!!
ಹಣ್ಣಿನಿಂದ ಫೋನ್ ಚಾರ್ಜರ್ ಟ್ರೈ ಮಾಡಿದ್ದೀರಾ?

Best Mobiles in India

English summary
we have came up with some simple yet useful tips and tricks to increase your smartphone battery life. Have a look at the slider below to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X