Subscribe to Gizbot

ಮೊಬೈಲ್‌ನಲ್ಲಿ ಇಂಟರ್‌ನೆಟ್ ಇಲ್ಲದೆಯೂ ಬ್ಯಾಂಕ್ ಹಣ ವರ್ಗಾವಣೆ ಸಾಧ್ಯ!! ಹೇಗೆ ಗೊತ್ತಾ?

Written By:

ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನದ ಬದವಾವಣೆ ಆಗುತ್ತಲೇ ಇದೆ. ಇದರ ಜೊತೆಗೆ ತಂತ್ರಜ್ಞಾನದ ಬಳಕೆ ಕೂಡ ಸರಳವಾಗಿದೆ.! ಇದೀಗ ಬ್ಯಾಂಕಿಂಗ್ ತಂತ್ರಜ್ಞಾನದಲ್ಲಿ ಹೊಸ ಸೌಲಭ್ಯ ಲಭ್ಯವಿದ್ದು, ಅಂತರ್ಜಾಲ ಸಂಪರ್ಕದ ಅಗತ್ಯವಿಲ್ಲದೆ ಸಾಮಾನ್ಯ ಮೊಬೈಲುಗಳಲ್ಲೂ ಬ್ಯಾಂಕಿಂಗ್ ಸೇವೆ ಬಳಸಬಹುದಾಗಿದೆ.!!

ಹೌದು, ಈ ಸೌಲಭ್ಯ ಭಾರತ ಸರ್ಕಾರದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೇರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ದಿಂದ ರೂಪಿತವಾಗಿದ್ದು, 'ನ್ಯಾಷನಲ್ ಯೂನಿಫೈಡ್ ಯುಎಸ್ಎಸ್ಡಿ ಪ್ಲಾಟ್ಫಾಮ್ರ್ (ಎನ್ಯುುಯುಪಿ) ಎಂಬ ಈ ವ್ಯವಸ್ಥೆಯನ್ನು ಹಲವಾರು ಪ್ರಮುಖ ಬ್ಯಾಂಕುಗಳ ಗ್ರಾಹಕರು ಉಚಿತವಾಗಿ ಬಳಸಬಹುದಾಗಿದೆ.!! ಹಾಗಾದರೆ, ಇಂಟರ್‌ನೆಟ್‌ ಇಲ್ಲದೇ ಬ್ಯಾಂಕಿಂಗ್ ಸೇವೆ ಪಡೆಯುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎನ್ಯುುಯುಪಿ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆ ಹೇಗೆ?

ಎನ್ಯುುಯುಪಿ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆ ಹೇಗೆ?

ನಾವು ಮೊಬೈಲಿನ ಬ್ಯಾಲೆನ್ಸ್ ತಿಳಿದುಕೊಳ್ಳಲು *123 ಸಂಖ್ಯೆಗಳನ್ನು ಬಳಸುತ್ತೇವಲ್ಲ, ಅಲ್ಲಿ ಬಳಕೆಯಾಗುವ ವ್ಯವಸ್ಥೆಯನ್ನೇ ಎನ್ಯುುಯುಪಿ ಸಹ ಹೊಂದಿದೆ. ಈ ಮೂಲಕವೇ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸಲೂ ಇದೇ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.

ಎನ್ಯುುಯುಪಿ ಬಳಸಲು *99 ಎಂದು ಡಯಲ್ ಮಾಡಿ.!!

ಎನ್ಯುುಯುಪಿ ಬಳಸಲು *99 ಎಂದು ಡಯಲ್ ಮಾಡಿ.!!

ಅಂತರ್ಜಾಲದ ಬಳಕೆ ಇಲ್ಲದೆ ಬ್ಯಾಂಕಿಂಗ್ ಸೇವೆ ಪಡೆಯಲು *99 ಎಂದು ಡಯಲ್ ಮಾಡಿ. ನಂತರ ನಿಮ್ಮ ಬ್ಯಾಂಕನ್ನು ಆರಿಸಿಕೊಂಡ ನಂತರ ಖಾತೆಯಲ್ಲಿರುವ ಮೊತ್ತ ಎಷ್ಟೆಂದು ತಿಳಿದುಕೊಳ್ಳುವುದು, ಹಿಂದಿನ ವಹಿವಾಟಿನ ಮಾಹಿತಿ (ಮಿನಿ ಸ್ಟೇಟ್ವೆುಂಟ್) ಪಡೆದುಕೊಳ್ಳುವುದು, ಬೇರೊಬ್ಬರ ಖಾತೆಗೆ ಹಣ ವರ್ಗಾಯಿಸುವುದೆಲ್ಲ ಸಾಧ್ಯವಾಗುತ್ತದೆ.

ಮೊಬೈಲ್ ಸಂಖ್ಯೆ ಬ್ಯಾಂಕಿನಲ್ಲಿ ನೋಂದಾಯಿತವಾಗಿರಬೇಕು!!

ಮೊಬೈಲ್ ಸಂಖ್ಯೆ ಬ್ಯಾಂಕಿನಲ್ಲಿ ನೋಂದಾಯಿತವಾಗಿರಬೇಕು!!

ಅಂತರ್ಜಾಲದ ಬಳಕೆ ಇಲ್ಲದೆ ಬ್ಯಾಂಕಿಂಗ್ ಸೇವೆ ಪಡೆಯುವುದಕ್ಕು ಮುನ್ನ ನಿಮ್ಮ ಮೊಬೈಲ್ ಸಂಖ್ಯೆ ಬ್ಯಾಂಕಿನಲ್ಲಿ ನೋಂದಾಯಿತವಾಗಿರಬೇಕಾದ್ದು ಕಡ್ಡಾಯ. ಇನ್ನು *99*99 ಆಯ್ಕೆಯ ಮೂಲಕ ನಮ್ಮ ಖಾತೆಗೆ ಆಧಾರ್ ಜೋಡಣೆಯ ಕುರಿತು ತಿಳಿದುಕೊಳ್ಳಬಹುದು.!!

ಕನ್ನಡದಲ್ಲೂ ಈ ಸೇವೆ!!

ಕನ್ನಡದಲ್ಲೂ ಈ ಸೇವೆ!!

*99*26 ಡಯಲ್ ಮಾಡುವ ಮೂಲಕ ಕನ್ನಡದಲ್ಲೂ ಈ ಸೇವೆ ಪಡೆದುಕೊಳ್ಳಬಹುದಾಗಿದ್ದು, ಈ ಕುರಿತ ಹೆಚ್ಚಿನ ಮಾಹಿತಿಯನ್ನು ನಿಮ್ಮ ಬ್ಯಾಂಕಿನ ಗ್ರಾಹಕ ಸೇವೆ ಅಥವಾ ಎನ್ಪಿಸಿಐ ಜಾಲತಾಣದಲ್ಲಿ (tinyurl.com/NUUP-FAQ) ಪಡೆಯಬಹುದು.!!

ಓದಿರಿ:ಆಧಾರ್, ಪಾನ್‌ಕಾರ್ಡ್ ಲಿಂಕ್ ಮಾಡಲು ಒಂದು ಮೆಸೇಜ್ ಸಾಕು..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Understand how you can transfer money using a feature phone without internet.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot