Subscribe to Gizbot

ದತ್ತಾಂಶ ಶೇಖರಣೆಯಲ್ಲಿ ಬಿಟ್‌ಗೂ ಮತ್ತು ಬೈಟ್‌ಗೂ ವ್ಯತ್ಯಾಸ ಗೊತ್ತಾ? KB, MB, GB, ನಂತರ?!!

Written By:

ಆಧುನಿಕ ಕಾಲದ ಶೇಖರಣಾ ವ್ಯವಸ್ಥೆಯೆಂದೇ ಗುರುತಿಸಿಕೊಂಡಿರುವ ದತ್ತಾಂಶದ ಶೇಖರಣೆ ಅಳತೆಯನ್ನು ಇಂದು ಕಿಲೋಬೈಟ್(KB), ಮೆಗಾಬೈಟ್ (MG) ಗಿಗಾಬೈಟ್ (GB) ಹೀಗೆ ಕರೆಯುವುದು ನಮಗೆಲ್ಲಾ ಗೊತ್ತೇ ಇರುತ್ತದೆ.!! ಆದರೆ, ಅದಕ್ಕಿಂತಲೂ ಹೆಚ್ಚಿನ ಶೇಖರಣೆಗೆ ಏನೆಂದು ಕರೆಯುತ್ತಾರೆ ಎಂಬುದು ನಿಮಗೆ ಗೊತ್ತೇ?

ಹೌದು, ನಾವು ಪ್ರತಿದಿನ ಕೇಳುವ ಹಾಗೂ ಬಳಸುವ ಕಿಲೋಬೈಟ್(KB), ಮೆಗಾಬೈಟ್ (MB) ಗಿಗಾಬೈಟ್ (GB)ಗಿಂತಲೂ ಕೋಟಿಪಟ್ಟು ಹೆಚ್ಚು ಲೆಕ್ಕ ಹಾಕುವ ಅಳತೆಗಳು ಈಗಾಗಲೇ ಚಾಲ್ತಿಯಲ್ಲಿದೆ ಎಂದರೆ ನೀವು ನಂಬಲೇಬೇಕು.!! ಹಾಗಾದರೆ, ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಿಕ್ಕದು ಎಂದರೆ 'ಬಿಟ್' ನಂತರದ್ದು ಬೈಟ್​!!

ಚಿಕ್ಕದು ಎಂದರೆ 'ಬಿಟ್' ನಂತರದ್ದು ಬೈಟ್​!!

ಒಂದು ಚಿಕ್ಕ ದತ್ತಾಂಶ ಶೇಖರಣಾ ಪ್ರಮಾಣವನ್ನು 'ಬಿಟ್' ಎಂದು ಕರೆಯುತ್ತಾರೆ.! ಒಟ್ಟು 8 ಬಿಟ್‌ಗಳನ್ನು ಸೇರಿಸಿ 1 ಬೈಟ್ ಎಂದು ಕರೆಯುತ್ತಾರೆ.!! 1024 ಬೈಟ್= 1 ಕಿಲೋಬೈಟ್ ಆದರೆ, 1024 ಕಿಲೋಬೈಟ್= ಮೆಗಾಬೈಟ್ ಆಗುತ್ತದೆ. 1024 ಮೆಗಾಬೈಟ್= 1 ಗಿಗಾಬೈಟ್ ಆಗುತ್ತದೆ.

ಸದ್ಯ ಪರಿಚಿತ ಅತಿದೊಡ್ಡ ಏಕಮಾನ ಟೆರಾಬೈಟ್!!

ಸದ್ಯ ಪರಿಚಿತ ಅತಿದೊಡ್ಡ ಏಕಮಾನ ಟೆರಾಬೈಟ್!!

ಕಿಲೋಬೈಟ್(KB), ಮೆಗಾಬೈಟ್ (MG) ಗಿಗಾಬೈಟ್ (GB) ಇಗಾಗಲೇ ಬಳಕೆಯಲ್ಲಿವೆ. ಇವುಗಳಿಗೆ ಮತ್ತೊಂದು ಸೇರ್ಪಡೆ ಟೆರಾಬೈಟ್ ಎನ್ನುವುದು. ಒಂದು ಲಕ್ಷ ಕೋಟಿ ಬೈಟ್​ಗಳಿಗೆ ಒಂದು ಟೆರಾ ಬೈಟ್ ಆಗುತ್ತದೆ. ಇದು ಹಾರ್ಡ್‌ಡಿಸ್ಕ್‌ಗಳಲ್ಲಿ ಬಳಕೆಯಾಗುತ್ತಿದೆ.!!.

ಟೆರಾಬೈಟ್​ಗಿಂತ ದೊಡ್ಡ ಏಕಮಾನ?

ಟೆರಾಬೈಟ್​ಗಿಂತ ದೊಡ್ಡ ಏಕಮಾನ?

ನಾವು ನೀವು ಬಳಸದೇ ಗೂಗಲ್, ಯಾಹೂ ಅಂತಹ ದೊಡ್ಡ ದೊಡ್ಡ ಕಂಪೆನಿಗಳು ಬಳಸುವ ಅಳತೆ ಪೆಟಾಬೈಟ್ಗಳಲ್ಲಿರುತ್ತವೆ. ಒಂದು ಸಾವಿರ ಟೆರಾಬೈಟ್ ಸೇರಿದಾಗ ಒಂದು ಪೆಟಾಬೈಟ್ ಆಗುತ್ತದೆ. ಇದರ ನಂತರ ಎಕ್ಸಾಬೈಟ್ ಬರುತ್ತದೆ. ಇದು ಪೆಟಾಬೈಟ್ ಸಾವಿರ ಪಟ್ಟು ಹೆಚ್ಚಿದ್ದು ವಿಶ್ವದ ಸತ್ತಾಂಶವನ್ನು ಲೆಕ್ಕಹಾಕಬಹುದಾಗಿದೆ.!!

ಇದಕ್ಕಿಂತ ಹೆಚ್ಚಿವೆ...ಆದ್ರೆ ಹೇಳೋಕೆ ಕಷ್ಟ.!!

ಇದಕ್ಕಿಂತ ಹೆಚ್ಚಿವೆ...ಆದ್ರೆ ಹೇಳೋಕೆ ಕಷ್ಟ.!!

ಟೆರಾಬೈಟ್, ಪೆಟಾಬೈಟ್ ಗಳಿಗಿಂತ ಹೆಚ್ಚು ಅಳತೆ ಮಾನಗಳಿದ್ದರೂ ಅವುಗಳ ಬಳಕೆ ಈಗಲೇ ಆಗುತ್ತಿಲ್ಲ. ಪೆಟಾಬೈಟ್ ನಂತರ ಜೆಟ್ಟಾಬೈಟ್ಬರುತ್ತದೆ. ಸಾವಿರ ಜೆಟ್ಟಾಬೈಟ್​ಗಳನ್ನು ಒಂದು ಯಾಟ್ಟಾಬೈಟ್ ಎಂದು ಗುರುತಿಸುತ್ತಾರೆ. ಪ್ರಪಂಚದಲ್ಲಿರುವ ಅಷ್ಟೂ ದತ್ತಾಂಶದ ಪ್ರಮಾಣಕ್ಕಿಂತ ಈ ಏಕಮಾನದಲ್ಲಿ ಹೆಚ್ಚಿದೆ.!!

ಓದಿರಿ:ಅತಿ ಹೆಚ್ಚು ವೇಗದ ಡೇಟಾ ನೀಡುವ ದೇಶ ಯಾವುದು?..ಭಾರತಕ್ಕೆ ಎಷ್ಟನೇ ಸ್ಥಾನ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Kilobyte (KB) - 1000 bytes/the equivalent of 2 or 3 paragraphs of text.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot