Subscribe to Gizbot

ಯೂಟ್ಯೂಬ್ ವಿಡಿಯೋ ಶಾರ್ಟ್‌ಕಟ್‌ ಬಟನ್ಸ್ ಬಗ್ಗೆ ತಿಳಿಯಿರಿ.!!

Written By:

ಯೂಟ್ಯೂಬ್‌ನಲ್ಲಿ ವಿಡಿಯೋ ನೋಡುವವರ ಸಂಖ್ಯೆ ಬಹಳಷ್ಟು ಹೆಚ್ಚಿದೆ ಎನ್ನಬಹುದು.! ಆದರೆ, ಯೂಟ್ಯೂಬ್ ವಿಡಿಯೋ ನೋಡುವಾಗ ಕೆಲವೊಂದು ಶಾರ್ಟ್‌ಕಟ್‌ಗಳ ಬಗ್ಗೆ ತಿಳಿಯದಿದ್ದರೆ ಅಷ್ಟೇನು ಚೆನ್ನಾಗಿರೊಲ್ಲಾ. ಹಾಗಾಗಿ, ಕೀಬೋರ್ಡ್‌ನಲ್ಲಿನ ಕೆಲವೊಂದು ಬಟನ್ಸ್ ಮೂಲಕ ಸುಲಭವಾಗಿ ಯೂಟ್ಯೂಬ್ ವಿಡಿಯೋ ನೋಡುವ ಅನುಭವ ಪಡೆಯಬಹುದು.!!

ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿನ ಕೀಬೋರ್ಡ್ ಸಹಾಯದಿಂದ ಯೂಟ್ಯೂಬ್ ಕಂಟ್ರೋಲ್‌ ಮಾಡಲು ಸಹಾಯಕವಾಗುವ ಕೆಲವು ಉತ್ತಮ ಶಾರ್ಟ್‌ಕಟ್‌ಗಳ ಬಗ್ಗೆ ನಾವು ತಿಳಿಸುತ್ತಿದ್ದೇವೆ. ಅವುಗಳನ್ನು ಬಳಕೆ ಮಾಡುವುದನ್ನು ಕಲಿತು ಯೂಟ್ಯೂಬ್ ವಿಡಿಯೋಸ್ ಎಂಜಾಯ್ ಮಾಡಿ. ಅವುಗಳು ಯಾವುವು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೂಟ್ಯೂಬ್ ವಿಡಿಯೋ ಫಾರ್ವರ್ಡ್‌!!

ಯೂಟ್ಯೂಬ್ ವಿಡಿಯೋ ಫಾರ್ವರ್ಡ್‌!!

ಕೀ ಬೋರ್ಡ್‌ನಲ್ಲಿನ 1 -9 ರವರೆಗೆ ಬಟನ್ ಪ್ರೆಸ್‌ ಮಾಡುವ ಮೂಲಕ ಯೂಟ್ಯೂಬ್ ವಿಡಿಯೋಗಳನ್ನು ನಿಮಗೆ ಬೇಕಾದ ಸ್ಪೀಡ್‌ನಲ್ಲಿ ಫಾಸ್ಟ್‌ ಫಾರ್ವರ್ಡ್‌ ಮಾಡಬಹುದು. 1 ಪ್ರೆಸ್‌ ಮಾಡಿದರೆ ವಿಡಿಯೋ 10 ಶೇಕಡಾ, 4 ಮತ್ತು 9 ಪ್ರೆಸ್‌ ಮಾಡಿದರೆ 90 ಶೇಕಡಾದಷ್ಟು ವಿಡಿಯೋ ಫಾರ್ವರ್ಡ್‌ ಆಗುತ್ತದೆ.

M ಕ್ಲಿಕ್ ಮಾಡಿ ಸೌಂಡ್ ಮ್ಯೂಟ್ ಮಾಡಿ!!

M ಕ್ಲಿಕ್ ಮಾಡಿ ಸೌಂಡ್ ಮ್ಯೂಟ್ ಮಾಡಿ!!

ಯೂಟ್ಯೂಬ್ ವಿಡಿಯೋ ನೋಡುವಾಗ ಸಡನ್ ಆಗಿ ನೀವು ವಾಲ್ಯೂಮ್ ಮ್ಯೂಟ್ ಮಾಡಬೇಕಾದರೆ m ಕ್ಲಿಕ್ ಮಾಡಿದರೆ ಸಾಕು ಸೌಂಡ್ ಮ್ಯೂಟ್ ಮಾಡಬಹುದು.!!

10 ಸೆಕೆಂಡ್ ಕ್ಲಿಕ್ :

10 ಸೆಕೆಂಡ್ ಕ್ಲಿಕ್ :

ಯೂಟ್ಯೂಬ್ ವಿಡಿಯೋ ನೋಡುವ ಸಮಯದಲ್ಲಿ ಯಾವುದಾದರೂ ದೃಶ್ಯ ಮಿಸ್ ಮಾಡಿಕೊಂಡರೆ 10 ಸೆಕೆಂಡ್‌ ಫಾರ್ವರ್ಡ್‌ ಮಾಡಲು L, 10 ಸೆಕೆಂಡ್‌ ಬ್ಯಾಕ್‌ ಮಾಡಲು J ಬಟನ್‌ ಪ್ರೆಸ್‌ ಮಾಡಿದರೆ ಸಾಕು.!!

ಮೊದಲಿನ ವಿಡಿಯೋ ನೋಡಲು.?

ಮೊದಲಿನ ವಿಡಿಯೋ ನೋಡಲು.?

ನೀವು ಒಂದು ವಿಡಿಯೋ ನೋಡಿದ ನಂತರ ಬೇರೆ ವಿಡಿಯೋ ನೋಡುತ್ತಿದ್ದರೆ ಶಿಫ್ಟ್+ಪಿ ಒತ್ತಿದರೆ ಸಾಕು ನೀವು ನೋಡಿದ ಮೊದಲಿನ ವಿಡಿಯೋ ನೋಡಬಹುದು!!

ಎಸ್ಕೇಪ್‌ ಬಟನ್ ಬಳಕೆ ಮುಖ್ಯ.!!

ಎಸ್ಕೇಪ್‌ ಬಟನ್ ಬಳಕೆ ಮುಖ್ಯ.!!

ಯೂಟ್ಯೂಬ್ ವಿಡಿಯೋ ನೋಡುವ ಸಮಯದಲ್ಲಿ ಎಸ್ಕೇಪ್‌ ಬಟನ್ ಪ್ರೆಸ್‌ ಮಾಡಿದರೆ ಫುಲ್‌ ಸ್ಕ್ರೀನ್ ಆಗುತ್ತದೆ. ಮತ್ತು ಚಿಕ್ಕ ಸ್ಕ್ರೀನ್ಗಾಗಿ ಮತ್ತೆ ಅದೆ ಬಟನ್ ಪ್ರೆಸ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Many people today spend most of their time on YouTube. to know more vist to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot