Subscribe to Gizbot

ಗೂಗಲ್ ಅನ್ನು ಕಂಟ್ರೋಲ್ ಮಾಡುವ ಶಕ್ತಿ ನಿಮಗಿದೆ!!..ಆದರೆ,ಕಂಟ್ರೋಲ್ ಏಕೆ ಮಾಡಬೇಕು!?

Written By:

ಬಹುತೇಕ ಎಲ್ಲಾ ಮೊಬೈಲ್‌ ತಯಾರಿಕಾ ಕಂಪೆನಿಗಳು ಹಾಗೂ ಆಪ್‌ ಅಭಿವೃದ್ಧಿಪಡಿಸುವ ಕಂಪೆನಿಗಳು ತಮ್ಮ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಬಳಕೆದಾರರ ಮಾಹಿತಿ ಸಂಗ್ರಹಿಸುತ್ತವೆ. ಹಾಗಾಗಿ, ಅವುಗಳು ಕಲೆಹಾಕುವ ಬಳಕೆದಾರರ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆಯನ್ನೂ ನಾವು ಅಲ್ಲಗಳೆಯುವಂತಿಲ್ಲ.!!

ಆದರೆ, ಹೆಸರಾಂತ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್ ಮಾತ್ರ ಆಂಡ್ರಾಯ್ಡ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಸಂಗ್ರಹಿಸಿದರೂ ಇಲ್ಲಿಯವರೆಗೂ ತನ್ನ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ.! ಆದರೂ ಜಾಹಿರಾತು ಮತ್ತು ಇನ್ನಿತರ ವಿಷಯಗಳಿಗೆ ಗೂಗಲ್‌ ಬಳಕೆದಾರರ ಮಾಹಿತಿ ಸಂಗ್ರಹಿಸುವುದನ್ನು ಬಳಕೆದಾರರು ನಿಯಂತ್ರಿಸುವ ಸಮಯ ಬರುತ್ತದೆ.!!

ಇನ್ನು ಎಲ್ಲಾ ಸಂದರ್ಭದಲ್ಲಿ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸಿದರೆ ಗೂಗಲ್‌ನಿಂದ ಕೆಲವು ಉತ್ತಮ ಸೇವೆಗಳನ್ನು ಪಡೆಯಲು ಆಗದಿರಬಹುದು.!! ಹಾಗಾಗಿ, ಎಚ್ಚರಿಕೆಯಿಂದ ನೀವು ನಿಮ್ಮ ಖಾಸಾಗಿ ಮಾಹಿತಿಯನ್ನು ಗೂಗಲ್‌ ಪಡೆಯದ ಹಾಗೆ ನಿರ್ಭಂದಿಸುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖಾಸಗಿತನದ ನೀತಿ!!

ಖಾಸಗಿತನದ ನೀತಿ!!

ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಗೂಗಲ್‌ ಸೇರಿದಂತೆ ಹಲವು ತಂತ್ರಜ್ಞಾನ ಕಂಪೆನಿಗಳು ಬಳಕೆದಾರರ ಮಾಹಿತಿ ಸಂಗ್ರಹದ ಬಗ್ಗೆ ಖಾಸಗಿತನದ ನೀತಿಯಲ್ಲಿ (privacy policy) ತಿಳಿಸಿರುತ್ತವೆ. ಬಳಕೆದಾರರು ತಮ್ಮ ಮಾಹಿತಿಯನ್ನು ಸೇವಾ ಸಂಸ್ಥೆಗಳ ಜತೆಗೆ ಹಂಚಿಕೊಳ್ಳಬಹುದು ಅಥವಾ ಹಂಚಿಕೊಳ್ಳದೆಯೂ ಇರಬಹುದು.

ಜಾಹೀರಾತು ನಿಯಂತ್ರಣಕ್ಕೆ

ಜಾಹೀರಾತು ನಿಯಂತ್ರಣಕ್ಕೆ

ನಿಮಗೆ ಗೊತ್ತಿದಿಯೋ ಅಥವಾ ನಿಲ್ಲವೊ ಪ್ರತಿಯೊಂದೂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಸಹ ಒಂದು ಜಾಹೀರಾತು ಸಂಖ್ಯೆಯನ್ನು (Advertising ID) ಹೊಂದಿರುತ್ತದೆ. ಇದು ಬಳಕೆದಾರರ ಮನೋಭಾವ ಹಾಗೂ ಅವರ ಇಷ್ಟಾನಿಷ್ಟಗಳನ್ನು ಗೂಗಲ್‌ಗೆ ದೊರೆಯುವಂತೆ ಮಾಡುತ್ತದೆ. ಹಾಗಾಗಿ, ಬಳಕೆದಾರರು ಜಾಹೀರಾತು ನಿಯಂತ್ರಿಸಲು ಡಿವೈಸ್‌ನ Settingsಗೆ ಹೋಗಿ Google ಮೇಲೆ ಕ್ಲಿಕ್ ಮಾಡಿ. ಬಳಿಕ Ads ಮೇಲೆ ಕ್ಲಿಕ್ಕಿಸಿ. ಇಲ್ಲಿ ನೀವು ಜಾಹೀರಾತು ನಿಯಂತ್ರಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಇಂಟರ್‌ನೆಟ್‌ನಲ್ಲಿ ಹುಡುಕಾಟದ್ದು.!!

ಇಂಟರ್‌ನೆಟ್‌ನಲ್ಲಿ ಹುಡುಕಾಟದ್ದು.!!

ಗೂಗಲ್ ಎಂದರೆ ಇಂಟರ್‌ನೆಟ್ ಎನ್ನುವಹಾಗೆ ಇಂದು ಜಗತ್ತು ಬದಲಾಗಿದೆ.!! ಗೂಗಲ್‌ನಲ್ಲಿ ಏನೇ ಹುಡುಕಾಡಿದರೂ ಕೂಡ ಗೂಗಲ್‌ನ My Activity pageನಲ್ಲಿ ಅವು ಸೇವ್ ಆಗಿರುತ್ತದೆ.ಹಾಗಾಗಿ, ಗೂಗಲ್‌ಗೆ ಹೋಗಿ My Activity ಕ್ಲಿಕ್ ಮಾಡಿ Activity Controls ಆಯ್ಕೆ ಮಾಡಿಕೊಳ್ಳಿ. ಇಲ್ಲಿ ನಿಮ್ಮ ಅಂತರ್ಜಾಲ ಚಟುವಟಿಕೆಗಳನ್ನು ನಿಯಂತ್ರಿಸಬಹುದು.!!

ಲೊಕೇಷನ್ ಟ್ರಾಕ್ .!!

ಲೊಕೇಷನ್ ಟ್ರಾಕ್ .!!

ಗೂಗಲ್‌ ಮ್ಯಾಪ್, ಗೂಗಲ್‌ ಅಸಿಸ್ಟನ್ಸ್ ಮತ್ತು ಇನ್ನಿತರ ಸೇವೆಗಳಿಗಾಗಿ ಗೂಗಲ್‌ ನೀವಿರುವ ಸ್ಥಳವನ್ನು ಟ್ರ್ಯಾಕ್ ಮಾಡುತ್ತದೆ. ಈ ಮಾಹಿತಿ ಗೂಗಲ್‌ಗೆ ಗೊತ್ತಾಗಬಾರದು ಎಂದರೆ ನಿಮ್ಮ ಡಿವೈಸ್‌ನ Settingsಗೆ ಹೋಗಿ ಅಲ್ಲಿ ಕಾಣುವ Google ಮೇಲೆ ಕ್ಲಿಕ್ ಮಾಡಿ. ಬಳಿಕ Location ಮೇಲೆ ಕ್ಲಿಕ್ ಮಾಡಿ. ಇಲ್ಲಿ Location ಅನ್ನು Off ಮಾಡಿದರೆ ನಿಮ್ಮನ್ನು ಟ್ರ್ಯಾಕ್ ಮಾಡಲು ಆಗುವುದಿಲ್ಲ.!!

ನೀವು ಹುಡುಕಿದ್ದನ್ನು ಮರೆಮಾಚಲು!!

ನೀವು ಹುಡುಕಿದ್ದನ್ನು ಮರೆಮಾಚಲು!!

ನಿಮ್ಮ ಬ್ರೌಸಿಂಗ್ ಇತಿಹಾಸವನ್ನು (browser history) ಅಳಿಸುವ ಮೂಲಕವೂ ನಿಮ್ಮ ಅಂತರ್ಜಾಲ ಚಟುವಟಿಕೆಗಳ ಮಾಹಿತಿಯನ್ನು ಅಳಿಸಬಹುದು. ಇದಕ್ಕಾಗಿ ನಿಮ್ಮ ಬ್ರೌಸರ್‌ ಆಯ್ಕೆಗಳಿಗೆ ಹೋಗಿ Clear Browsing history ಒತ್ತಿ. ಈಗ ನೀವು ಬ್ರೌಸ್ ಮಾಡಿದ ಮಾಹಿತಿ ಎಲ್ಲವೂ ಅಳಿಸಿಹೋಗುತ್ತದೆ. ಇದು ಕೂಡ ನಿಮ್ಮ ಖಾಸಾಗಿ ಮಾಹಿತಿಯೇ ಆಗಿರುತ್ತದೆ.!!

ಓದಿರಿ:ಎಲ್ಲಾ ಫೋನ್‌ಗಳಲ್ಲಿಯೂ 'ಗೂಗಲ್' ಇರಲು ಕಾರಣವೇನು?..ಗೊತ್ತಾದ್ರೆ ಶಾಕ್ ಆಗ್ತೀರಾ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Turns out that each time you say something to the Google Now search box. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot