Subscribe to Gizbot

ಮೊಬೈಲ್ ಕ್ಲೋನಿಂಗ್ ಆನ್‌ಲೈನ್ ಮೋಸಕ್ಕೆ ಭಾರತ ಬೆಚ್ಚಿಬಿದ್ದಿರುವುದೇಕೆ?..ಅದಕ್ಕೆ ಪರಿಹಾರವಿದೆಯಾ?

Written By:

ನಿಮ್ಮ ಎಟಿಎಂ (ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್) ನಿಮ್ಮ ಜೇಬಿನಲ್ಲಿಯೇ ಭದ್ರವಾಗಿರುತ್ತದೆ. ಆನ್‌ಲೈನ್ ಬ್ಯಾಂಕಿಂಗ್ ಪಾಸ್‌ವರ್ಡ್ ಎಲ್ಲವನ್ನೂ ಇತರರಿಗೆ ತಿಳಿಯದಂತೆ ಎಲ್ಲಾ ಸುರಕ್ಷತೆಗಳಿಂದ ನೀವು ಕಾಪಾಡಿಕೊಂಡಿರುತ್ತೀರಾ. ಆದರೆ, ನಿಮ್ಮ ಬ್ಯಾಂಕ್ ಖಾತೆಯಿಂದ ಸಾವಿರಾರು ರೂಪಾಯಿ ಹಣವನ್ನು ವಿತ್‌ಡ್ರಾ ಮಾಡಲಾಗಿರುವ ಬಗ್ಗೆ ನಿಮಗೆ ಮೆಸೇಜ್ ಬರುತ್ತದೆ.!

ಹೌದು, ಇಂತಹದೊಂದು ಶಾಕಿಂಗ್ ಮೋಸದ ಜಾಲ ಆನ್‌ಲೈನ್ ಪ್ರಪಂಚದಲ್ಲಿ ತಲೆಎತ್ತಿದೆ.! ಎರಡು ದಿನಗಳ ಹಿಂದಷ್ಟೆ ನಡೆದ ಒಂದು ವಾಸ್ತವ ಘಟನೆಯಿಂದ ಹಣವನ್ನು ದೋಚಿರುವ ಸುದ್ದಿ ವೈರಲ್ ಆಗಿದೆ. ಬ್ಯಾಂಕಿಂಗ್ ಬಳಕೆಯ ವಿಚಾರದಲ್ಲಿ ಗ್ರಾಹಕನ ಒಂದೇ ಒಂದು ತಪ್ಪು ಇಲ್ಲದಿದ್ದರೂ ಹಣವನ್ನು ಕಳೆದುಕೊಂಡಿರುವ ಘಟನೆ ಎಲ್ಲರಿಗೂ ಎಚ್ಚರಿಕೆಯ ಪಾಠವಾಗಿದೆ.

ಮೊಬೈಲ್ ಕ್ಲೋನಿಂಗ್ ಆನ್‌ಲೈನ್ ಮೋಸಕ್ಕೆ ಭಾರತ ಬೆಚ್ಚಿಬಿದ್ದಿರುವುದೇಕೆ?

ಎಷ್ಟೇ ಸುರಕ್ಷತೆ ವಹಿಸಿದರೂ ನಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಖಾಲಿಯಾಗಿದ್ದು ಹೇಗೆ? ಎಟಿಎಂ ಕಾರ್ಡ್ ನಮ್ಮಲ್ಲೇ ಇದ್ದರೂ ಹಣ ಹೋಯಿತು ಎಂದು ಎಲ್ಲರೂ ಅಚ್ಚರಿ ಪಡುತ್ತಿದ್ದಾರೆ.! ಹಾಗಾದರೆ, ಏನಿದು ಹೊಸ ಆನ್‌ಲೈನ್ ವಂಚನೆ ಪ್ರಕರಣ? ನಮ್ಮ ತಪ್ಪಿಲ್ಲದಿದ್ದರೂ ಬ್ಯಾಂಕ್ ಖಾತೆಯಿಂದ ಹಣ ಲೂಟಿಯಾಗಿದ್ದು ಹೇಗೆ? ಇದಕ್ಕೆ ಪರಿಹಾರಗಳೇನು ಎಂಬುದನ್ನು ಮುಂದೆ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾರ್ಡ್ ಸ್ಕಿಮ್ಮಿಂಗ್!?

ಕಾರ್ಡ್ ಸ್ಕಿಮ್ಮಿಂಗ್!?

ಎಟಿಎಂ ಯಂತ್ರಗಳಲ್ಲಿ ಕಾರ್ಡ್ ತೂರಿಸುವ ಸ್ಲಾಟ್‌ನೊಳಗೆ ಬರಿಗಣ್ಣಿಗೆ ಕಾಣದಷ್ಟು ಪುಟ್ಟದಾದ ಸ್ಕಿಮ್ಮರ್ ಸಾಧನವನ್ನು ಇರಿಸಲಾಗುತ್ತದೆ. ಎಟಿಎಂ ಕಾರ್ಡ್‌ಗಳಲ್ಲಿ ಇರುವ ಕಪ್ಪನೆಯ ಅಯಸ್ಕಾಂತೀಯ ಪಟ್ಟಿಯಲ್ಲಿ ಸೇರಿರುವ ನಿಮ್ಮ ಬ್ಯಾಂಕಿನ ಖಾತೆ, ಕಾರ್ಡ್ ಸಂಖ್ಯೆ ಮತ್ತಿತರ ವಿವರಗಳೆಲ್ಲವನ್ನು ಸ್ಕಿಮ್ಮರ್ ಸಾಧನ ಸಂಗ್ರಹಿಸುತ್ತದೆ.

ಪಿಒಎಸ್ ಸ್ಕಿಮ್ಮಿಂಗ್?

ಪಿಒಎಸ್ ಸ್ಕಿಮ್ಮಿಂಗ್?

ಕಾರ್ಡ್ ಸ್ಕಿಮ್ಮಿಂಗ್ ಕಥೆ ಅದಾದರೆ ಪಿಒಎಸ್ ಸ್ಕಿಮ್ಮಿಂಗ್ ಮತ್ತೊಂದು ಕಥೆಯಾಗಿದೆ. ಪೆಟ್ರೋಲ್ ಬಂಕ್, ಮಾಲ್‌ಗಳಲ್ಲಿ ಕಾರ್ಡ್ ಸ್ವೈಪ್ ಮಾಡಲು ಇರುವ ಪಿಒಎಸ್ (ಪಾಯಿಂಟ್ ಆಫ್ ಸೇಲ್ಸ್) ಯಂತ್ರಗಳಲ್ಲಿ ಮಾಹಿತಿಯನ್ನು ನಕಲು ಮಾಡುವುದೇ ಕ್ಲೋನಿಂಗ್ ತಂತ್ರಜ್ಞಾನ. ಕಾರ್ಡುಗಳ ತದ್ರೂಪಿ ನಕಲು ಸೃಷ್ಟಿಸಿ ಹಣ ವಿತ್‌ಡ್ರಾ ಮಾಡುತ್ತಾರೆ. ಪಿಒಎಸ್‌ಗಳಲ್ಲಿ ಕಾರ್ಡ್ ಬಳಸಿದಾಗ ಒಟಿಪಿ ಕೂಡ ಅಗತ್ಯ ಇಲ್ಲದಿರುವುದರಿಂದ ಸುಲಭವಾಗಿ ಹಣ ದೋಚಬಹುದಾಗಿದೆ.

ಮೊಬೈಲ್ ಕ್ಲೋನಿಂಗ್!!

ಮೊಬೈಲ್ ಕ್ಲೋನಿಂಗ್!!

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ನೀವು ನಿರ್ವಹಿಸುವ ಎಲ್ಲಾ ಕಾರ್ಯಗಳನ್ನು ಮತ್ತೊಂದು ಸ್ಮಾರ್ಟ್‌ಫೋನಿನ ಮೂಲಕ ವೀಕ್ಷಿಸಬಹುದಾದ ತಂತ್ರಜ್ಞಾನವನ್ನು ಮೊಬೈಲ್ ಕ್ಲೋನಿಂಗ್ ಎಂದು ಹೇಳಲಾಗಿದೆ. ಯಾವುದಾದರೂ ಸಾಫ್ಟ್‌ವೇರ್ ಅನ್ನು ನಿಮ್ಮ ಫೋನಿನಲ್ಲಿ ಹರಿಬಿಟ್ಟು ಈ ಕಾರ್ಯ ನಡೆಬಹುದು ಅಥವಾ ನಮ್ಮ ಸಿಮ್ ಅನ್ನೇ ನಕಲಿಸಿ ಅವರು ಹಣ ಕದಿಯಬಹುದು ಎಂಬ ಅನುಮಾನವನ್ನು ಈ ಮೊಬೈಲ್ ಕ್ಲೋನಿಂಗ್ ಹುಟ್ಟಿಹಾಕಿದೆ.

ಹಣ ಕದಿಯಲು ಹೇಗೆ ಸಾಧ್ಯ?

ಹಣ ಕದಿಯಲು ಹೇಗೆ ಸಾಧ್ಯ?

ಸೈಬರ್ ಕಳ್ಳರು ಹಣವನ್ನು ಕದಿಯಲು ಮೇಲಿನ ಮೂರು ಮಾದರಿಗಳನ್ನು ಕೂಡ ಬಳಸಿಕೊಳ್ಳುತ್ತಿದ್ದಾರೆ. ಕಾರ್ಡ್ ಸ್ಕಿಮ್ಮಿಂಗ್, ಪಿಒಎಸ್ ಸ್ಕಿಮ್ಮಿಂಗ್ ಮತ್ತು ಮೊಬೈಲ್ ಕ್ಲೋನಿಂಗ್ ಎಲ್ಲವೂ ಅಪಾಯಕಾರಿ ವಿಧಾನಗಳಾಗಿವೆ. ಆದರೆ, ಮೊದಲೆರಡು ದಾರಿಗಳಲ್ಲಿ ಗ್ರಾಹಕರು ಸ್ವಲ್ಪ ಎಚ್ಚರಿಕೆ ವಹಿಸಿದರೂ ಕೂಡ ಮೊಬೈಲ್ ಕ್ಲೋನಿಂಗ್ ಮಾತ್ರ ಎಲ್ಲರಲ್ಲಿಯೂ ಭಯ ಹುಟ್ಟಿದೆ.

ನಮ್ಮ ಹಣ ರಕ್ಷಿಸುವುದು ಹೇಗೆ?

ನಮ್ಮ ಹಣ ರಕ್ಷಿಸುವುದು ಹೇಗೆ?

  • ಸ್ಮಾರ್ಟ್‌ಫೋನ್ ಮೂಲಕ ವ್ಯವಹಾರ ನಡೆಸುವವರು ನಿಮ್ಮ ಮೊಬೈಲ್‌ನಲ್ಲಿ ಆಯಂಟಿ ವೈರಸ್ ಬಳಸಿ.
  • ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಪಬ್ಲಿಕ್‌ನಲ್ಲಿನ ಉಚಿತ ವೈಫೈ ಬಳಕೆ ಬೇಡಿ.
  • ನಿಮ್ಮ ಸ್ಮಾರ್ಟ್‌ಪೋನ್ ಅನ್ನು 15 ದಿನಗಳಿಗೊಮ್ಮೆ ರೀಸೆಟ್ ಮಾಡಿದರೆ ಉತ್ತಮ.
  • ಪಾಸ್‌ವರ್ಡ್ ಟೈಪ್ ಮಾಡುವಾಗ ಬೇರೆಯವರಿಗೆ ಅಥವಾ ಕ್ಯಾಮೆರಾಕ್ಕೆ ಕಾಣದಂತೆ ಮತ್ತೊಂದು ಕೈ ಅಡ್ಡವಿಟ್ಟುಕೊಳ್ಳಿ.
  • ಎಟಿಎಂ ಪಿನ್ ನಂಬರ್ ನಮೂದಿಸಲು ಇನ್ನೊಬ್ಬರ ಸಹಾಯ ಪಡೆಯುವುದನ್ನು ತಪ್ಪಿಸಿ.
  • ನಿಮ್ಮ ಮೊಬೈಲ್ ಅನ್ನು ಇತರರಿಗೆ ಬಳಸಲು ನೀಡಲೇಬೇಡಿ.
  • ಅನಗತ್ಯ ಹಣ ವಿತ್‌ಡ್ರಾ ಆಗಿರುವುದು ಗಮನಕ್ಕೆ ಬಂದ ತಕ್ಷಣ ಬ್ಯಾಂಕಿಗೆ ತಿಳಿಸಿ.
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Cellular Telecommunications Industry Association (CTIA) estimates that financial losses due tocloning fraud are between $600 million and $900 million in the United Statesto know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot