ವಾಟ್ಸಪ್‌ ಅಪ್‌ಡೇಟ್ ಮಾಡಬೇಕೆ?..ಹೀಗೆ ಮಾಡಿ!

|

ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ವಿಶ್ವದ ಜನಪ್ರಿಯ ಮೆಸೆಜಿಂಗ್ ಆಪ್‌ ವಾಟ್ಸಪ್‌ ಹ್ಯಾಕ್‌ ಆಗಿರುವ ಇತ್ತೀಚಿನ ಸುದ್ದಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಕರೆ ಮೂಲಕ ವಾಟ್ಸಪ್ ಹ್ಯಾಕ್ ಮಾಡಿಮಾಡಲಾಗಿದೆ ಎನ್ನಲಾಗುತ್ತಿದೆ. ಈ ಕುರಿತು ವಾಟ್ಸಪ್ ಸಂಸ್ಥೆಯು ಎಷ್ಟು ಬಳಕೆದಾರರ ಖಾತೆಗಳು ಹ್ಯಾಕ್ ಆಗಿದೆ ಎಂಬುದನ್ನು ಪತ್ತೆ ಮಾಡುತ್ತಿದ್ದು, ಹಾಗೆಯೇ ಬಳಕೆದಾರರ ಖಾತೆಗಳು ಹ್ಯಾಕ್‌ ಆಗದಂತೆ ತಡೆಯಲು ಹೊಸ 2.19.134 ಆವೃತ್ತಿ ಬಿಡುಗಡೆ ಮಾಡಿದೆ.

ವಾಟ್ಸಪ್‌ ಅಪ್‌ಡೇಟ್ ಮಾಡಬೇಕೆ?..ಹೀಗೆ ಮಾಡಿ!

ಹೌದು, ವಾಟ್ಸಪ್ ಹ್ಯಾಕ್‌ ಆಗುವುದನ್ನು ತಡೆಯಲು ವಾಟ್ಸಪ್‌ ಹೊಸ 2.19.134 ವರ್ಷನ್‌ ಅನ್ನು ಅಪಡೇಟ್ ಮಾಡಿಕೊಳ್ಳಲು ಬಳಕೆದಾರರಿಗೆ ಸೂಚಿಸಲಾಗಿದ್ದು, ಈಗಾಗಲೇ ಬಹುತೇಕ ಬಳಕೆದಾರರು ತಮ್ಮ ವಾಟ್ಸಪ್ ಅನ್ನು ಅಪ್‌ಡೇಟ್ ಮಾಡಿಕೊಂಡಿದ್ದಾರೆ. ಒಂದು ವೇಳ ನೀವಿನ್ನು ವಾಟ್ಸಪ್‌ ಹೊಸ ವರ್ಷನ್ ಅಪ್‌ಡೇಟ್ ಮಾಡಿಕೊಂಡಿಲ್ಲ ಎಂದಾದರೇ ಈ ಲೇಖನದಲ್ಲಿ ನೀಡಲಾಗಿರುವ ಹಂತಗಳನ್ನು ಅನುಸರಿಸಿ ಅಪ್‌ಡೇಟ್ ಮಾಡಿಕೊಳ್ಳಬಹುದು.

ಓದಿರಿ : ವಾಟ್ಸಪ್‌ ಸೇರಿಕೊಳ್ಳಲಿವೆ ನೀವು ನಿರೀಕ್ಷಿಸುತ್ತಿದ್ದ 5 ಹೊಸ ಫೀಚರ್ಸ್‌! ಓದಿರಿ : ವಾಟ್ಸಪ್‌ ಸೇರಿಕೊಳ್ಳಲಿವೆ ನೀವು ನಿರೀಕ್ಷಿಸುತ್ತಿದ್ದ 5 ಹೊಸ ಫೀಚರ್ಸ್‌!

ಪ್ರತ್ಯೇಕ ವರ್ಷನ್

ಪ್ರತ್ಯೇಕ ವರ್ಷನ್

ಆಂಡ್ರಾಯ್ಡ್‌ ಮತ್ತು ಐಓಎಸ್‌ ಆಪರೇಟಿಂಗ್ ಸಿಸ್ಟಮ್ ಮಾದರಿಯಲ್ಲಿ ಪ್ರತ್ಯೇಕ ವಾಟ್ಸಪ್ ಆಪ್ ಅಪ್‌ಡೇಟ್ ವರ್ಷನ್‌ಗಳನ್ನು ನೀಡಲಾಗಿದೆ. ಆಂಡ್ರಾಯ್ಡ್‌ ಓಎಸ್‌ ಆಧಾರಿತ ಸ್ಮಾರ್ಟ್‌ಫೋನ್‌ಗಳ ವಾಟ್ಸಪ್‌ ಅಪ್‌ಡೇಟ್ ವರ್ಷನ್ 2.19.134 ಆಗಿದೆ. ಮತ್ತು ಐಓಎಸ್‌ ಓಎಸ್‌ ಐಫೋನ್‌ಗಳ ವಾಟ್ಸಪ್ ಅಪ್‌ಡೇಟ್ ವರ್ಷನ್ 2.19.51 ಆಗಿದೆ.

ಆಂಡ್ರಾಯ್ಡ್‌ ಓಎಸ್‌

ಆಂಡ್ರಾಯ್ಡ್‌ ಓಎಸ್‌

*ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ
*ಮೈ ಆಪ್ಸ್‌ ಮತ್ತು ಗೇಮ್ಸ್‌ ಆಯ್ಕೆ ಕ್ಲಿಕ್ಕ್ ಮಾಡಿರಿ
*ನಂತರ ವಾಟ್ಸಪ್ ಮುಂದೆ 'ಅಪ್‌ಡೇಟ್' ಅಥವಾ 'ಓಪೆನ್' ಆಯ್ಕೆಗಳು ಕಾಣಿಸುತ್ತವೆ
*ಒಂದು ವೇಳೆ 'ಅಪ್‌ಡೇಟ್' ಎಂದಿದ್ದರೇ ಅಪ್‌ಡೇಟ್ ಆಯ್ಕೆ ಕ್ಲಿಕ್ಕ್ ಮಾಡಿ.
*ಓಪೆನ್ ಎಂದಿದ್ದರೇ ಅಪ್‌ಡೇಟ್ ಅಗತ್ಯವಿಲ್ಲ ಎಂದರ್ಥ.
*ಒಂದು ಬಾರಿ ಹೊಸ ವರ್ಷನ್ 2.19.134 (ಅಂಡ್ರಾಯ್ಡ್)ಇದೆಯಾ ಎಂದು ಖಚಿತ ಪಡೆಸಿಕೊಳ್ಳಿರಿ.

ಐಓಎಸ್‌(ಐಫೋನ್)

ಐಓಎಸ್‌(ಐಫೋನ್)

*ಆಪಲ್ ಆಪ್‌ ಸ್ಟೋರ್ ತೆರೆಯಿರಿ
*ಅಪ್‌ಡೇಟ್ ಆಯ್ಕೆ ಕ್ಲಿಕ್ಕ್ ಮಾಡಿರಿ
*ನಂತರ ವಾಟ್ಸಪ್ ಮುಂದೆ 'ಅಪ್‌ಡೇಟ್' ಅಥವಾ 'ಓಪೆನ್' ಆಯ್ಕೆಗಳು ಕಾಣಿಸುತ್ತವೆ
*ಒಂದು ವೇಳೆ 'ಅಪ್‌ಡೇಟ್' ಎಂದಿದ್ದರೇ ಅಪ್‌ಡೇಟ್ ಆಯ್ಕೆ ಕ್ಲಿಕ್ಕ್ ಮಾಡಿ.
*ಓಪೆನ್ ಎಂದಿದ್ದರೇ ಅಪ್‌ಡೇಟ್ ಅಗತ್ಯವಿಲ್ಲ ಎಂದರ್ಥ.
*ಒಂದು ಬಾರಿ ಹೊಸ ವರ್ಷನ್ 2.19.51(ಐಓಎಸ್‌)ಇದೆಯಾ ಎಂದು ಖಚಿತ ಪಡೆಸಿಕೊಳ್ಳಿರಿ.

ಸರ್ಚ್‌ ಮಾಡಿ ಅಪ್‌ಡೇಟ್ ಮಾಡಿ

ಸರ್ಚ್‌ ಮಾಡಿ ಅಪ್‌ಡೇಟ್ ಮಾಡಿ

ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಾಗಿದ್ದರೇ ಗೂಗಲ್ ಪ್ಲೇ ಸ್ಟೋರ್‌ ತೆರೆದು ಸರ್ಚ್‌ನಲ್ಲಿ ವಾಟ್ಸಪ್ ಸರ್ಚ್ ಮಾಡಿ ಆಗ ವಾಟ್ಸಪ್ ಅಪ್ ಕಾಣಿಸುತ್ತದೆ ಅದು ಅಪ್‌ಡೇಟ್ ಅಂತಾ ಇದ್ದರೇ ಅಪ್‌ಡೇಟ್ ಮಾಡಿಕೊಳ್ಳಿರಿ. ಹಾಗಾಯೇ ಐಫೋನ್ ಬಳಕೆದಾರರು ಸಹ ಆಪಲ್ ಸ್ಟೋರ್‌ ತೆರೆದು ಅಪ್‌ಡೇಟ್ ಬಗ್ಗೆ ನೋಡಬಹುದಾಗಿದೆ.

ಓದಿರಿ : ಹೀಗೆ ಮಾಡಿ ವಾಟ್ಸಪ್‌ನಿಂದ ಫೋನ್ ಮೆಮೊರಿ ಫುಲ್‌ ಆಗುವುದನ್ನು ತಡೆಯಿರಿ! ಓದಿರಿ : ಹೀಗೆ ಮಾಡಿ ವಾಟ್ಸಪ್‌ನಿಂದ ಫೋನ್ ಮೆಮೊರಿ ಫುಲ್‌ ಆಗುವುದನ್ನು ತಡೆಯಿರಿ!

Best Mobiles in India

English summary
WhatsApp Hack: Worried? How to Update Your App to Stay Safe.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X