ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಿದ್ರೆ, ಮೊದಲು ಈ ಕೆಲಸ ಮಾಡಿ!

|

ಪ್ರಸ್ತುತ ಭಾರತದಲ್ಲಿ ಯುಪಿಐ ಪಾವತಿ ಬಹಳ ಜನಪ್ರಿಯವಾಗಿದ್ದು, ಹಾಗೆಯೇ ಹೆಚ್ಚು ಬಳಕೆಯಲ್ಲಿದೆ. ಯುಪಿಐ (UPI) ಪೇಮೆಂಟ್‌ನಲ್ಲಿ ಮುಖ್ಯವಾಗಿ ಗೂಗಲ್‌ ಪೇ, ಫೋನ್‌ಪೇ, ಪೇಟಿಎಮ್‌ ನಂತಹ ಆಪ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಇನ್ನು ಈ ಆಪ್‌ಗಳ ಮೂಲಕ ಹಣ ವರ್ಗಾವಣೆ ತುಂಬಾ ಸರಳ ಮತ್ತು ಸುಲಭವಾಗಿದೆ. ಅದಾಗ್ಯೂ, ಕೆಲವೊಮ್ಮೆ ಅಚಾನಕ್ ಆಗಿ ತಪ್ಪಾದ ಖಾತೆಗೆ ಹಣ ವರ್ಗಾವಣೆ ಆದರೆ ಏನು ಮಾಡುವುದು?

ಯುಪಿಐ (UPI) ಪ್ಲಾಟ್‌ಫಾರ್ಮ್‌

ಹೌದು, ಯುಪಿಐ (UPI) ಪ್ಲಾಟ್‌ಫಾರ್ಮ್‌ಗಳಲ್ಲಿ ವಹಿವಾಟು ನಡೆಸುವಾಗ ಕೆಲವೊಮ್ಮೆ ಅಚಾನಕ್ ಆಗಿ ಬೇರೆಯವರ ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಆಗಿ ಬಿಡುವ ಸಾಧ್ಯತೆಗಳಿರುತ್ತವೆ. ಇಂಥ ಸಂದರ್ಭಗಳಲ್ಲಿ ಗಾಬರಿಯಾಗುವ ಅಗತ್ಯವಿಲ್ಲ. ತಪ್ಪಾಗಿ ವರ್ಗಾವಣೆ ಮಾಡಿದ ಹಣವನ್ನು ಮರಳಿ ಪಡೆಯಬಹುದಾಗಿದೆ. ಹಾಗಾದರೆ ಯುಪಿಐ (UPI) ಪೇಮೆಂಟ್‌ ಮೂಲಕ ತಪ್ಪಾದ ಖಾತೆಗೆ ಹಣ ವರ್ಗಾವಣೆ ಆದಾಗ ಏನು ಮಾಡುವುದು ಎಂಬ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ತಪ್ಪಾದ ಖಾತೆಗೆ ಹಣ ವರ್ಗಾವಣೆ ಆಗಿದೆಯಾ?

ತಪ್ಪಾದ ಖಾತೆಗೆ ಹಣ ವರ್ಗಾವಣೆ ಆಗಿದೆಯಾ?

ಗೂಗಲ್‌ ಪೇ, ಫೋನ್‌ಪೇ, ಪೇಟಿಎಮ್‌ ನಂತಹ ಯುಪಿಐ ಆಪ್‌ಗಳು ತಪ್ಪಾದ ಖಾತೆಗೆ ವರ್ಗಾಯಿಸಲು ಜವಾಬ್ದಾರರಾಗಿರುವುದಿಲ್ಲ. ಯುಪಿಐಗೆ ಲಿಂಕ್ ಮಾಡಿರುವ ಬ್ಯಾಂಕ್ ಅನ್ನು ನೇರವಾಗಿ ಸಂಪರ್ಕಿಸಬೇಕು. ಹಣವನ್ನು ತಪ್ಪಾದ ಖಾತೆಗೆ ವರ್ಗಾಯಿಸಿದ್ದರೆ ನೇರವಾಗಿ ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಮಾಹಿತಿಯನ್ನು ನೀಡಬೇಕು.

ಯುಪಿಐ ಲಿಂಕ್

ಹಾಗೆಯೇ ಯುಪಿಐ ಲಿಂಕ್ ಮಾಡಿರುವ ಬ್ಯಾಂಕ್‌ಗೆ ಮೇಲ್ ಮಾಡುವುದು ಉತ್ತಮ. ಆದರೆ ಮೇಲ್ ಮೂಲಕ ಸಮಸ್ಯೆಯನ್ನು ಪರಿಹರಿಸದಿದ್ದರೆ, ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗುತ್ತದೆ. ಬ್ಯಾಂಕ್‌ ಬ್ರ್ಯಾಂಚ್‌ಗೆ ಭೇಟಿ ನೀಡುವ ಮೊದಲು ಮೇಲ್ ಹಾಗೂ ವಹಿವಾಟಿನ ಪ್ರಿಂಟ್‌ಔಟ್‌ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಾಗುವುದು ಸೂಕ್ತ.

ಬೇಗ ದೂರು ನೀಡುವುದು

ಬೇಗ ದೂರು ನೀಡುವುದು

ಭಾರತೀಯ ರಿಸರ್ವ್ ಬ್ಯಾಂಕ್ (RBI) ಆದೇಶದ ಪ್ರಕಾರ ತಪ್ಪು ಖಾತೆಗೆ ಹಣ ವರ್ಗಾವಣೆಯ ದೂರನ್ನು ಸ್ವೀಕರಿಸಿದ 7 ರಿಂದ 15 ದಿನಗಳಲ್ಲಿ ಬ್ಯಾಂಕ್ ದೂರನ್ನು ಇತ್ಯರ್ಥಪಡಿಸುವುದು ಅವಶ್ಯಕ. ಅಂತಹ ಪರಿಸ್ಥಿತಿಯಲ್ಲಿ ತಪ್ಪು ಖಾತೆಗೆ ಹಣ ವರ್ಗಾವಣೆಯಾದರೆ ಸಂಬಂಧಪಟ್ಟ ಬ್ಯಾಂಕ್ ಖಾತೆ ಮತ್ತು ಬ್ಯಾಂಕ್ ಅಧಿಕಾರಿಯನ್ನು ಆದಷ್ಟು ಬೇಗ ಸಂಪರ್ಕಿಸಬೇಕು.

UPI ಮೂಲಕ ಹಣ ವರ್ಗಾವಣೆ ಮಾಡುವ ಮುನ್ನ ಈ ಅಂಶ ಗಮನಿಸಿ

UPI ಮೂಲಕ ಹಣ ವರ್ಗಾವಣೆ ಮಾಡುವ ಮುನ್ನ ಈ ಅಂಶ ಗಮನಿಸಿ

ನಿಮ್ಮ ಯುಪಿಐ ಪಿನ್‌ ಯಾರೊಂದಿಗೂ ಹಂಚಿಕೊಳ್ಳಬೇಡಿ
ನಿಮ್ಮ 6 ಅಥವಾ 4 ಅಂಕಿಯ UPI ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇದು ಅಗತ್ಯ ಮತ್ತು ಪ್ರಮುಖ ಅಂಶವಾಗಿದೆ. ಯುಪಿಐ ಸಕ್ರಿಯಗೊಳಿಸಿದ ಆಪ್‌ನ ಪ್ರತಿ ಹಣ ವರ್ಗಾವಣೆಯ ಮೊದಲು ಪಿನ್‌ ಅನ್ನು ಕೇಳುತ್ತದೆ. ಆದ್ದರಿಂದ, ನಿಮ್ಮ ಯುಪಿಐ ಐಡಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಲಿಂಕ್ ಮಾಡಿದಾಗ, ಒಂದು ಪಾಸ್‌ವರ್ಡ್‌/ ಪಿನ್‌ ಅನ್ನು ಸೆಟ್‌ ಮಾಡಬೇಕಿರುತ್ತದೆ. ಎಟಿಎಂ ಪಿನ್‌ನಂತೆಯೇ ಸುರಕ್ಷಿತ ಪಾವತಿಗಳನ್ನು ಆರಂಭಿಸಲು ಈ ಪಿನ್ ಅನ್ನು ಬಳಸಲಾಗುತ್ತದೆ. ಹೀಗಾಗಿ, ನಿಮ್ಮ ಯುಪಿಐ ಪಿನ್ ಅನ್ನು ಯಾರಿಗೂ ನೀಡಬೇಡಿ.

ಹಣ ವರ್ಗಾಯಿಸುವ ಮುನ್ನ ಒಮ್ಮೆ ಪರಿಶೀಲಿಸಿ

ಹಣ ವರ್ಗಾಯಿಸುವ ಮುನ್ನ ಒಮ್ಮೆ ಪರಿಶೀಲಿಸಿ

ಯುಪಿಐ ಸಕ್ರಿಯಗೊಳಿಸಿದ ಅಪ್ ಸ್ವೀಕರಿಸುವವರ ನಿರ್ದಿಷ್ಟ ಯುಪಿಐ ಐಡಿಗೆ ಹಣವನ್ನು ವರ್ಗಾಯಿಸಲು ನೆರವು ಮಾಡುತ್ತದೆ. ಹಾಗೆಯೇ ವಿಶೇಷ ಯುಪಿಐ ಐಡಿಯನ್ನು ಬಳಸಿಕೊಂಡು ನೀವು ಇತರರಿಂದ ಪಾವತಿಗಳನ್ನು ಸ್ವೀಕರಿಸಬಹುದು. ಹೀಗಾಗಿ ಇತರರಿಂದ ಹಣವನ್ನು ಸ್ವೀಕರಿಸುತ್ತಿರುವಾಗ ಯಾವಾಗಲೂ ಸರಿಯಾದ ಯುಪಿಐ ಐಡಿಯನ್ನು ನೀಡಿ. ಹಾಗೆಯೇ ನಿಮ್ಮ ಯುಪಿಐ ಐಡಿಯನ್ನು ಎರಡು ಬಾರಿ ಪರಿಶೀಲಿಸಿ ನೀಡಿ. ಅಂತೆಯೇ, ವ್ಯವಹಾರ/ ಟ್ರಾನ್ಸಾಕ್ಶನ್ ಪ್ರಾರಂಭಿಸುವ ಮೊದಲು ಯಾವಾಗಲೂ ಸ್ವೀಕರಿಸುವವರ ಯುಪಿಐ ಐಡಿಯನ್ನು ಎರಡು ಬಾರಿ ಚೆಕ್‌ ಮಾಡಿ. ತಪ್ಪಾದ ಟ್ರಾನ್ಸಾಕ್ಶನ್ ಆಗದಂತೆ ಹಾಗೂ ಬೇರೆಯವರಿಗೆ ಸುರಕ್ಷಿತವಾಗಿ ಹಣವನ್ನು ಕಳುಹಿಸಲು ಇದು ಉಪಯುಕ್ತ.

ಒಂದಕ್ಕಿಂತ ಅಧಿಕ ಯುಪಿಐ ಆಪ್‌ಗಳು ಸೂಕ್ತವಲ್ಲ

ಒಂದಕ್ಕಿಂತ ಅಧಿಕ ಯುಪಿಐ ಆಪ್‌ಗಳು ಸೂಕ್ತವಲ್ಲ

ಫೋನಿನಲ್ಲಿ ಒಂದಕ್ಕಿಂತ ಹೆಚ್ಚು ಯುಪಿಐ ಅಪ್ಲಿಕೇಶನ್‌ಗಳು ಇದ್ದಾಗ, ಹಣ ವರ್ಗಾವಣೆ ಮಾಡುವಾಗ ಗೊಂದಲಕ್ಕೊಳಗಾಗಬಹುದು. ಅಧಿಕ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ಯಾವುದೇ ಹೆಚ್ಚುವರಿ ಪ್ರಯೋಜನವನ್ನು ಲಭ್ಯ ಇಲ್ಲ. ಬಹುತೇಕ ಎಲ್ಲ ಯುಪಿಐ ಆಪ್‌ಗಳಲ್ಲಿ ಉಚಿತ ಟ್ರಾನ್ಸಾಕ್ಶನ್ ಮಾಡಬಹುದು. ಅಲ್ಲದೇ ಯಾವುದೇ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಬಳಸಿಕೊಂಡು ಇಬ್ಬರು ಯುಪಿಐ ಬಳಕೆದಾರರ ನಡುವೆ ವಹಿವಾಟುಗಳನ್ನು ಮಾಡಬಹುದು.

Best Mobiles in India

English summary
Wrong UPI transfer? Here’s How You Can recover money.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X