ಭಾರತದಲ್ಲಿ ಲಾಂಚ್ ಆಗಿದೆ ಮಿ ಗಿಫ್ಟ್ ಕಾರ್ಡ್ ಯೋಜನೆ : ಬಳಕೆ ಹೇಗೆ?

By Tejaswini P G

  ಶಿಯೋಮಿ ಭಾರತದಲ್ಲಿ ತನ್ನ ಗ್ರಾಹಕರಿಗೆ ಮಿ ಗಿಫ್ಟ್ ಕಾರ್ಡ್ ಯೋಜನೆಯೊಂದನ್ನು ನೀಡಿದೆ. ಈ ಯೋಜನೆಯ ಮೂಲಕ ನೀವು ನಿಮ್ಮ ಆಪ್ತರಿಗೆ ಶಿಯೋಮಿ ಯ ಗಿಫ್ಟ್ ಕಾರ್ಡ್ಗಳನ್ನು ನೀಡಬಹುದಾಗಿದ್ದು, ಈ ಕಾರ್ಡ್ಗಳನ್ನು ಸ್ಮಾರ್ಟ್ಫೋನ್, ಟಿವಿ, ಸ್ಮಾರ್ಟ್ ಸಾಧನಗಳು, ಆಕ್ಸಸರಿ ಗಳು ಮೊದಲಾದ ಶಿಯೋಮಿ ಉತ್ಪನ್ನಗಳ ಖರೀದಿಯಲ್ಲಿ ಬಳಸಬಹುದಾಗಿದೆ. ಶಿಯೋಮಿ ಸಂಸ್ಥೆಯು ಈ ಗಿಫ್ಟ್ ಕಾರ್ಡ್ ಅನ್ನು ಕ್ವಿಕ್ಲಿವರ್ ಎಂಬ SaaS-ಆಧಾರಿತ ಪ್ರೀಪೇಯ್ಡ್ ಕಾರ್ಡ್ ಸೊಲ್ಯೂಶನ್ ಪ್ರೊವೈಡರ್ಗಳ ಸಹಯೋಗದಲ್ಲಿ ಲಾಂಚ್ ಮಾಡಿದೆ.

  ಭಾರತದಲ್ಲಿ ಲಾಂಚ್ ಆಗಿದೆ ಮಿ ಗಿಫ್ಟ್ ಕಾರ್ಡ್ ಯೋಜನೆ : ಬಳಕೆ ಹೇಗೆ?

  ನೀವು ಈ ಗಿಫ್ಟ್ ಕಾರ್ಡ್ ಗಳನ್ನು ಯಾರಿಗೆ ಬೇಕಾದರೂ ಈಮೇಲ್ ಮೂಲಕ ಕಳುಹಿಸಬಹುದಾಗಿದ್ದು ರೂ 100 ರಿಂದ ರೂ 10000 ಮೌಲ್ಯದ ಗಿಫ್ಟ್ ಕಾರ್ಡ್ಗಳು ಲಭ್ಯವಿದೆ. ನೀವು ಒಂದು ಆರ್ಡರ್ ನಲ್ಲಿ ಹೆಚ್ಚೆಂದರೆ 10 ಗಿಫ್ಟ್ ಕಾರ್ಡ್ ಗಳನ್ನು ಖರೀದಿಸಬಹುದಾಗಿದೆ. ಮಿ ಸ್ಟೋರ್ ಆಪ್ ನಲ್ಲಿ ಅಥವಾ Mi.com ನಲ್ಲಿ ಗಿಫ್ಟ್ ಕಾರ್ಡ್ ಗಳ ಗ್ಯಾಲರಿಯೇ ಲಭ್ಯವಿದೆ. ನಿಮಗಿಷ್ಟವಾದ ಚಿತ್ರ ಅಥವಾ ವಿನ್ಯಾಸವನ್ನು ಅಪ್ಲೋಡ್ ಮಾಡುವ ಮೂಲಕ ನೀವು ಈ ಗಿಫ್ಟ್ ಕಾರ್ಡ್ಗಳನ್ನು ಕಸ್ಟಮೈಸ್ ಮಾಡಬಹುದು ಎಂದು ಶಿಯೋಮಿ ಸಂಸ್ಥೆಯು ಮಿ ತ್ರೆಡ್ ಒಂದರಲ್ಲಿ ತಿಳಿಸಿದೆ.ಒಬ್ಬ ವ್ಯಕ್ತಿಯು ಹೀಗೆ ಈಮೇಲ್ ಮೂಲಕ ಗಿಫ್ಟ್ ಕಾರ್ಡ್ ಸ್ವೀಕರಿಸಿದ ತಕ್ಷಣ ಅದನ್ನು ಆ ಬಳಕೆದಾರರ ಮಿ ಖಾತೆಗೆ ಸೇರಿಸಲಾಗುವುದು.

  ಮಿ ಗಿಫ್ಟ್ ಕಾರ್ಡ್ ಖರೀದಿಸುವುದು ಹೇಗೆ?

  ಮಿ ಗಿಫ್ಟ್ ಕಾರ್ಡ್ ಖರೀದಿಸಲು ನೀವು ಮೊದಲಿಗೆ Mi.com ಗೆ ಭೇಟಿ ನೀಡಿ ಅಲ್ಲಿ ಗಿಫ್ಟ್ ಕಾರ್ಡ್ ಗೆಂದೇ ಮೀಸಲಾಗಿರುವ ಪೇಜ್ ಗೆ ತೆರಳಿ. ಇಲ್ಲಿ ನಿಮಗಿಷ್ಟವಾದ ಗಿಫ್ಟ್ ಕಾರ್ಡ್ ಅನ್ನು ಆಯ್ಕೆ ಮಾಡಿ ಅದರಲ್ಲಿ ಗಿಫ್ಟ್ ನೀಡುವವರ ವಿವರಗಳು, ಅದನ್ನು ಸ್ವೀಕರಿಸುವವರ ವಿವರಗಳು, ಗಿಫ್ಟ್ ಕಾರ್ಡ್ ನ ಮೊತ್ತ, ಅದನ್ನು ತಲುಪಿಸಬೇಕಾದ ದಿನಾಂಕ ಮತ್ತು ಸಂದೇಶವನ್ನು ನಮೂದಿಸಬೇಕು.

  ಈ ಪ್ರಕ್ರಿಯೆ ಸಂಪೂರ್ಣಗೊಂಡ ಬಳಿಕ ನೀವು UPI, ಕ್ರೆಡಿಟ್ ಕಾರ್ಡ್ ಮೇಲೆ EMI, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗಳ ಮೂಲಕ ಈ ಗಿಫ್ಟ್ ಕಾರ್ಡ್ ಗೆ ಹಣ ಪಾವತಿಸಬೇಕು. ಈ ಪ್ರಕ್ರಿಯೆ ಕೊನೆಗೊಂಡ ನಂತರ ನೀವು ಯಾರಿಗೆ ಈ ಗಿಫ್ಟ್ ಕಾರ್ಡ್ ಕಳುಹಿಸಿರುತ್ತೀರೋ, ಅವರು ಅದನ್ನು ಈಮೇಲ್ ಮೂಲಕ ಸ್ವೀಕರಿಸುತ್ತಾರೆ, ಮತ್ತು ಅದರಲ್ಲಿ ಈ ಟ್ರ್ಯಾನ್ಸ್ಯಾಕ್ಷನ್ ನ ವಿವರಗಳು ಮತ್ತು ಲಭ್ಯವಿರುವ ಗಿಫ್ಟ್ ಕಾರ್ಡ್ ಬ್ಯಾಲೆನ್ಸ್ ಕುರಿತು ಮಾಹಿತಿ ಇರುತ್ತದೆ.

  ಮಿ ಗಿಫ್ಟ್ ಕಾರ್ಡ್ ರಿಡೀಮ್ ಮಾಡುವುದು ಹೇಗೆ?

  ಮಿ ಗಿಫ್ಟ್ ಕಾರ್ಡ್ ರಿಡೀಮ್ ಮಾಡಲು ನೀವು ಮಿ ಸ್ಟೋರ್ ಆಪ್-> ಮೈ ಅಕೌಂಟ್ ->ಆಡ್ ಗಿಫ್ಟ್ ಕಾರ್ಡ್ ಗೆ ಹೋಗಿ. ಅಲ್ಲಿ 16-ಅಂಕಿ ಯ ಮಿ ಗಿಫ್ಟ್ ಕಾರ್ಡ್ ನಂಬರ್ ಮತ್ತು ಈಮೇಲ್ ಮೂಲಕ ಸ್ವೀಕರಿಸಿರುವ 6-ಅಂಕಿಯ ಪಿನ್ ಅನ್ನು ನಮೂದಿಸಿ. ನಂತರ 'ಆಡ್ ಗಿಫ್ಟ್ ಕಾರ್ಡ್' ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಗಿಫ್ಟ್ ಕಾರ್ಡ್ ನ ಮೊತ್ತ ನಿಮ್ಮ ಮಿ ಖಾತೆಗೆ ಜಮೆಯಾಗುತ್ತದೆ. ನೀವೀಗ ಈ ಮೊತ್ತವನ್ನು ಬಳಸಿ ಯಾವುದೇ ಶಿಯೋಮಿ ಉತ್ಪನ್ನವನ್ನು ಖರೀದಿಸಬಹುದಾಗಿದೆ.

  ಭಾರತದಲ್ಲಿ ಲಾಂಚ್ ಆಗಿದೆ ಫೇಸ್ ಅನ್ಲಾಕ್ ಹೊಂದಿರುವ ಲಾವಾ Z91 : ಹೀಗಿದೆ ಬೆಲೆ ಮತ್ತು ಫೀಚರ್ಗಳು

  ಗಿಫ್ಟ್ ಕಾರ್ಡ್ ಇಶ್ಯೂ ಮಾಡಿದ ದಿನದಿಂದ 12 ತಿಂಗಳುಗಳಲ್ಲಿ ಈ ಮಿ ಗಿಫ್ಟ್ ಕಾರ್ಡ್ ಎಕ್ಸ್ಪೈರ್ ಆಗುತ್ತದೆ ಎಂಬುದನ್ನು ಸದಾ ನೆನಪಿನಲ್ಲಿಡಿ. ಅಲ್ಲದೆ ಈ ಮಿ ಗಿಫ್ಟ್ ಕಾರ್ಡ್ ಬಳಸಿ ನೀವು ಖರೀದಿಸಿದ ಶಿಯೋಮಿ ಸಾಧನವನ್ನು ನೀವು ಒಂದು ವೇಳೆ ಹಿಂದಿರುಗಿಸಿದರೆ, ಅದರ ಖರೀದಿಯಲ್ಲಿ ನೀವು ಬಳಸಿದ ಗಿಫ್ಟ್ ಕಾರ್ಡ್ ನ ಮೊತ್ತವನ್ನು ನಿಮ್ಮ ಮಿ ಖಾತೆಗೆ ರಿಫಂಡ್ ಮಾಡಲಾಗುವುದು.

  Read more about:
  English summary
  Xiaomi has launched the Mi Gift Card program in India along with Qwikcilver, a SaaS-based prepaid card solutions provider. You can send gift cards to anyone through email and these gift cards are available from Rs. 100 to Rs. 10,000. You can purchase a maximum of 10 gift cards in one order. Here we will detail how you can purchase and redeem Mi Gift Cards.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more