ಯೂಟ್ಯೂಬ್ ವೀಡಿಯೊ ಆಫ್‌ಲೈನ್‌ನಲ್ಲಿ ಸೇವ್ ಮಾಡುವುದು ಹೇಗೆ?

Written By:

2014 ರಲ್ಲಿ ಲಾಂಚ್ ಆಗಿರುವ ಯೂಟ್ಯೂಬ್ ಆಫ್‌ಲೈನ್ ವೀಡಿಯೊ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಯೂಟ್ಯೂಬ್ ವೀಡಿಯೊಗಳನ್ನು ತಮ್ಮ ಡಿವೈಸ್‌ಗಳಲ್ಲಿ ಸೇವ್ ಮಾಡುವ ಫೀಚರ್ ಅನ್ನು ನೀಡಿದೆ. ಮೊಬೈಲ್ ಡೇಟಾ ಅಥವಾ ವೈಫೈಯನ್ನು ಬಳಸಿಕೊಂಡು ಈ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದಾಗಿದ್ದು ಜಾಹೀರಾತು ಬೆಂಬಲಿತವಾಗಿದೆ. ಭಾರತದ ಜನಪ್ರಿಯ ಯೂಟ್ಯೂಬ್ ವಿಷಯಗಳು ಮಾತ್ರವೇ ಡೌನ್‌ಲೋಡ್ ಮಾಡಲು ಲಭ್ಯವಿದ್ದು ಕೆಲವೊಂದು ವೀಡಿಯೊಗಳನ್ನು ನಿಮಗೆ ಡೌನ್‌ಲೋಡ್ ಮಾಡಲಾಗುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೂಟ್ಯೂಬ್ ಅಪ್ಲಿಕೇಶನ್

ಯೂಟ್ಯೂಬ್ ಅಪ್ಲಿಕೇಶನ್

#1

ಯೂಟ್ಯೂಬ್ ವೀಡಿಯೊಗಳನ್ನು ಆಫ್‌ಲೈನ್‌ನಲ್ಲಿ ದೊರೆಯುವಂತೆ ಮಾಡಲು ನಿಮ್ಮ ಆಂಡ್ರಾಯ್ಡ್ ಅಥವಾ ಐಓಎಸ್ ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ಅಪ್ಲಿಕೇಶನ್ ತೆರೆಯಿರಿ.

ವೀಡಿಯೊ

ವೀಡಿಯೊ

#2

ನೀವು ಡೌನ್‌ಲೋಡ್ ಮಾಡಬೇಕೆಂದಿರುವ ವೀಡಿಯೊಗೆ ಭೇಟಿ ನೀಡಿ.

ಏಡ್ ಟು ಆಫ್‌ಲೈನ್ ಐಕಾನ್

ಏಡ್ ಟು ಆಫ್‌ಲೈನ್ ಐಕಾನ್

#3

ವೀಡಿಯೊದ ಕೆಳಗಿರುವ ಏಡ್ ಟು ಆಫ್‌ಲೈನ್ ಐಕಾನ್ ಅನ್ನು ನೋಡಿ. ಹೀಗೆ ಕಂಡುಬಂದಿಲ್ಲ ಎಂದಾದಲ್ಲಿ ಆಫ್‌ಲೈನ್ ಡೌನ್‌ಲೋಡ್‌ಗಾಗಿ ಈ ವೀಡಿಯೊ ಲಭ್ಯವಿಲ್ಲ ಎಂದಾಗಿದೆ.

ಆಫ್‌ಲೈನ್ ಬಟನ್

ಆಫ್‌ಲೈನ್ ಬಟನ್

#4

ಆಫ್‌ಲೈನ್ ಬಟನ್ ಅನ್ನು ನೀವು ಕ್ಲಿಕ್ ಮಾಡಿದ ನಂತರ, ರೆಸಲ್ಯೂಶನ್ ಆಯ್ಕೆಮಾಡಲು ಯೂಟ್ಯೂಬ್ ನಿಮ್ಮನ್ನು ಕೇಳುತ್ತದೆ ನೀವು ಕ್ವಾಲಿಟಿಯನ್ನು ಆಯ್ಕೆಮಾಡಿದ ನಂತರ ನಿಮ್ಮ ಡಿವೈಸ್‌ನಲ್ಲಿ ವೀಡಿಯೊ ಸೇವ್ ಆಗಲು ಆರಂಭವಾಗುತ್ತದೆ.

ವೀಕ್ಷಣೆ ಹೇಗೆ

ವೀಕ್ಷಣೆ ಹೇಗೆ

#5

ಯೂಟ್ಯೂಬ್ ಅಪ್ಲಿಕೇಶನ್‌ನೊಳಗೆ ಮಾತ್ರ ಈ ವೀಡಿಯೊ ಲಭ್ಯವಿರುತ್ತದೆ ಎಂಬುದನ್ನು ಗಮನಿಸಿಕೊಳ್ಳಿ. ಫೈಲ್ ಲೊಕೇಟ್ ಮಾಡಲು, ಯೂಟ್ಯೂಬ್‌ನ ಹೋಮ್ ಪೇಜ್‌ಗೆ ಹೋಗಿ. ಗೆಸ್ಚರ್ ಅನ್ನು ಬಳಸಿಕೊಂಡು ವೀಡಿಯೊವನ್ನು ಎಳೆದುಕೊಳ್ಳಬಹುದಾಗಿದೆ ಇಲ್ಲಾ ಬ್ಯಾಕ್ ಬಟನ್ ಅನ್ನು ಟ್ಯಾಪ್ ಮಾಡಿ ಈ ರೀತಿ ನಿರ್ವಹಿಸಬಹುದಾಗಿದೆ.

ಹೋಮ್ ಪೇಜ್‌

ಹೋಮ್ ಪೇಜ್‌

#6

ಹೋಮ್ ಪೇಜ್‌ನಲ್ಲಿ ನೀವಿದ್ದ ನಂತರ, ಅಕೌಂಟ್ ಟ್ಯಾಬ್ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These videos can be downloaded via mobile data or Wi-Fi network. The feature is ad-supported, however, so you will have to sit through an advertisement before getting to your video.
Please Wait while comments are loading...
Opinion Poll

Social Counting