ತನ್ನೊಳಗೆ ರಹಸ್ಯಗಳನ್ನು ಹುದುಗಿಸಿಟ್ಟುಕೊಂಡಿರುವ ನಿಗೂಢ ಫೋಟೋಗಳು

By Shwetha
|

ರಹಸ್ಯಗಳು ನಿಗೂಢತೆಯನ್ನು ಒಳಗೊಂಡಿರುತ್ತವೆ. ಈ ನಿಗಢತೆಗಳಲ್ಲಿ ನಾವು ಅರಗಿಸಿಕೊಳ್ಳಲು ಸಾಧ್ಯವಾಗದೇ ಇರುವ ಕೆಲವೊಂದು ಸತ್ಯಗಳಿರುತ್ತದೆ. ಜನರಿಗೆ ಇಂತಹ ನಿಗೂಢತೆಗಳು ಇಷ್ಟವಾದರೂ ಅದನ್ನು ಬೇಧಿಸಲಾಗದೇ ಇದ್ದರೆ ಅಲ್ಲೊಂದು ಭಯ ನಿರ್ಮಾಣವಾಗುತ್ತದೆ. ಇಂತಹ ರಹಸ್ಯಮಯ ಘಟನೆಗಳು ಭೂಮಿಯ ಮೇಲೆ ಹಲವಾರು ಇದ್ದು ಅವುಗಳಿಗೆ ಪರಿಹಾರ ಅಂತೆಯೇ ಅವುಗಳನ್ನು ಬೇಧಿಸುವ ಕೆಲಸ ಇನ್ನೂ ನಡೆಯುತ್ತಲೇ ಇದೆ.

ಇಂದಿನ ಲೇಖನದಲ್ಲಿ ಕೂಡ ಅಂತಹುದೇ ಕೆಲವೊಂದು ರಹಸ್ಯಮಯ ಚಿತ್ರಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದು ಈ ಚಿತ್ರಗಳನ್ನು ನೋಡಿದಾಗ ಇದರಲ್ಲಿರುವ ರಹಸ್ಯಗಳೇನು ಎಂಬದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ ಹಾಗಿದ್ದರೆ ಆ ರಹಸ್ಯಗಳತ್ತ ನಾವು ನಿಮ್ಮನ್ನು ಕೊಂಡೊಯ್ಯುತ್ತಿದ್ದೇವೆ.

#1

#1

ಜಾನ್ ಎಫ್ ಕೆನಡಿಯ ಮರಣದ ನಂತರ ಸಾಕಷ್ಟು ರಹಸ್ಯಗಳು ಜನತೆಯನ್ನು ತಲ್ಲಣಗೊಳಿಸುತ್ತಲೇ ಇದೆ. ಅದರಲ್ಲೊಂದಾಗಿದೆ ಬಬುಶಾಕಾ ಮಹಿಳೆ. ಗುರುತಿಸಲಾಗದೇ ಇರುವ ಮಹಿಳೆಗೆ ಇಂತಹ ಅಡ್ಡ ಹೆಸರನ್ನು ನೀಡಲಾಗಿದೆ. ವೀಡಿಯೊ ರೆಕಾರ್ಡರ್‌ನಲ್ಲಿ ಈ ಮಹಿಳೆ ಕಂಡುಬಂದಿದ್ದು ಪೋಲೀಸರು ಈ ಮಹಿಳೆಯನ್ನು ಪತ್ತೆಹಚ್ಚುವ ಕಾರ್ಯಕೈಗೊಂಡಿದ್ದರೂ ಅದು ವಿಫಲತೆಯನ್ನೇ ಕಂಡಿದೆ.
http://coolintrestingstuff.com/

#2

#2

ನಾರ್ವೆಯ ಆಗಸದಲ್ಲಿ ಆಗಾಗ್ಗೆ ಕಂಡುಬಂದ ಬೆಳಕು. ವಾರಕ್ಕೆ 15-20 ಬಾರಿ ಈ ಬೆಳಕು ಕಂಡುಬರುತ್ತದೆ. ಈ ಬೆಳಕು ಹೇಗೆ ಕಂಡುಬರುತ್ತಿದೆ ಎಂಬುದಕ್ಕೆ ವೈಜ್ಞಾನಿಕ ತನಿಖೆಗಳು ಇನ್ನೂ ನಿರೂಪಿತವಾಗಿಲ್ಲ. ಅಂತೂ ಇದೊಂದು ಬೇಧಿಸಲಾಗದೇ ಇರುವ ರಹಸ್ಯವಾಗಿ ಮಾರ್ಪಟ್ಟಿದೆ.
http://coolintrestingstuff.com/

#3

#3

ಹುಕ್ ಐಲ್ಯಾಂಡ್‌ನ ಸೀ ಮಾನ್‌ಸ್ಟರ್ ಅನ್ನು ಪ್ರಸ್ತುತ ದಿನಗಳಲ್ಲಿ ತೆಗೆದದ್ದೇ ಆದರೆ ಇದನ್ನು ಫೋಟೋಶಾಪ್ ಎಂದೇ ಬಣ್ಣಿಸಬಹುದಾಗಿದೆ. ಡಿಸೆಂಬರ್ 12, 1964 ರಂದು ಈ ಫೋಟೋಗಳನ್ನು ತೆಗೆಯಲಾಗಿದ್ದು ಅಲ್ಲಿಂದೀಚೆಗೆ ಇದು ವ್ಯಾಪಕವಾಗಿ ಪ್ರಚಾರವನ್ನು ಪಡೆದುಕೊಂಡಿದೆ.
http://coolintrestingstuff.com/

#4

#4

ಜಿಮ್ ಟೆಂಪ್ಲೇಟನ್ ತನ್ನ ಪತ್ನಿ ಮತ್ತು ಪುತ್ರಿಯ ಫೋಟೋವನ್ನು ಕುಂಬ್ರಿಯಾ ಇಂಗ್ಲೇಂಡ್‌ನಲ್ಲಿ ತೆಗೆದ ಸಂದರ್ಭದಲ್ಲಿ ಅಜ್ಞಾತ ಯಾನಿಯೊಬ್ಬ ಫೋಟೋದಲ್ಲಿರುವುದನ್ನು ಗಮನಿಸಿದ್ದಾನೆ. ಫೋಟೋವನ್ನು ಕ್ಲೀನ್ ಮಾಡಿದಾಗ ಈ ಯಾನಿ ಕಂಡುಬಂದಿದೆ. ಫೋಟೋ ತೆಗೆಯುವ ವೇಳೆಯಲ್ಲಿ ಕಾಣಿಸಿಕೊಳ್ಳದ ಈ ಜೀವಿ ನಂತರ ಫೋಟೋದಲ್ಲಿ ಬಂದಿದೆ.
http://coolintrestingstuff.com/

#5

#5

ನ್ಯೂಯಾರ್ಕ್ ನಗರದಲ್ಲಿ 1924 ರಂದು ಜೇಮ್ಸ್ ಕರ್ಟನಿ ಮತ್ತು ಮಿಕೇಲ್ ಮಿಹಾನ್ ನೀರಿನ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಗ್ಯಾಸ್‌ನಿಂದಾಗಿ ಇವರಿಬ್ಬರೂ ಮರಣಹೊಂದಿದರು. ಸಮುದ್ರದಲ್ಲೇ ಇವರನ್ನು ಹೂಳಲಾಯಿತು. ಆದರೆ ಕಾಲ ಕ್ರಮೇಣ ಎರಡು ಮನುಷ್ಯರ ಮುಖಗಳು ನೀರಿನಲ್ಲಿ ಕಂಡುಬರಲು ಆರಂಭವಾಯಿತು.
http://coolintrestingstuff.com/

#6

#6

ಕಳೆದ 13,000 ವರ್ಷಗಳಿಂದ ಭೂಮಿಯ ಮೇಲೆ ಏಲಿಯನ್ ಸ್ಯಾಟಲೈಟ್ ಗಿರಕಿ ಹೊಡೆಯುತ್ತಿದೆ ಎಂಬುದಾಗಿ ಮಾಹಿತಿ ದೊರಕಿದ್ದು ಇದು ನಿಜವೇ ಸುಳ್ಳೇ ಎಂಬುದು ಇನ್ನೂ ರಹಸ್ಯವಾಗಿದೆ
http://coolintrestingstuff.com/

#7

#7

ಕೂಪರ್ ಕುಟಂಬವು ತಮ್ಮ ಹೊಸ ಮನೆಗೆ ಹೋದಾಗ ಅಲ್ಲಿ ತೆಗೆದ ಪ್ರಥಮ ಫೋಟೋ ಇದಾಗಿದೆ. ಈ ಫೋಟೋವನ್ನು ಡೆವಲಪ್ ಮಾಡಿದಾಗ ಇಲ್ಲಿ ಭಯಂಕರ ಚಿತ್ರ ದೊರಕಿದೆ. ಈ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕಿಲ್ಲ. ಆದರೆ ಇದನ್ನು ಭಯಪಡಿಸಲು ಉಂಟುಮಾಡಿದ್ದೂ ಇರಬಹುದು ಎಂಬ ವದಂತಿಯೂ ಇದೆ.
http://coolintrestingstuff.com/

#8

#8

ಅಪೊಲೊ 17 ತೆಗೆದ ಈ ಚಿತ್ರದಲ್ಲಿ ಚಂದ್ರನ ಕಪ್ಪು ವರ್ತುಲದಲ್ಲಿ ಪಿರಾಮಿಡ್ ಅಥವಾ ಪರ್ವತದ ಚಿತ್ರವನ್ನು ಗಮನಿಸಬಹುದಾಗಿದೆ. ಇದೊಂದು ದೊಡ್ಡ ಪಿರಾಮಿಡ್ ಆಗಿರಬಹುದು ಎಂಬ ವದಂತಿ ಕೂಡ ಹಬ್ಬಿದೆ.
http://coolintrestingstuff.com/

#9

#9

ಫ್ರೆಡ್ಡಿ ಜಾಕ್ಸನ್ 1919 ರಂದು ದುರಾದೃಷ್ಟವಶಾತ್ ಮರಣ ಹೊಂದಿದ್ದಾನೆ. ಈತ ಮರಣ ಹೊಂದಿದ ಎರಡನೆಯ ದಿನ ಸಹೋದ್ಯೋಗಿಗಳ ಫೋಟೋ ತೆಗೆಯುವಾಗ ಫ್ರೆಡ್ಡಿ ಆ ಫೋಟೋದಲ್ಲಿದ್ದ. ಇದು ನಿಜಕ್ಕೂ ಭಯಭೀತಗೊಳಿಸುವಂತಿದೆ.
http://coolintrestingstuff.com/

#10

#10

ಜನವರಿ 2013 ರಂದು ಎಲಿಸಾ ಲ್ಯಾಮ್ 21 ರ ಹರೆಯದ ಹುಡುಗಿ ಕಾಣೆಯಾಗಿದ್ದಾಳೆ. ಆಕೆ ಹೋಟೆಲ್ ಒಂದರಲ್ಲಿ ವಾಸವಾಗಿದ್ದಳು ಅಂತೆಯೇ ಆಕೆ ಕಾಣೆಯಾದ ಎರಡು ವಾರಗಳ ನಂತರ ಹೋಟೆಲ್‌ನ ನೀರಿನ ಟ್ಯಾಂಕ್‌ನಲ್ಲಿ ಆಕೆಯ ಶವ ಪತ್ತೆಯಾಗಿದೆ. ಆದರೆ ಆಕೆಯ ಮರಣ ನಿಗೂಢ ರಹಸ್ಯವಾಗಿರುವುದು ಕೆಲವೊಂದು ವೀಡಿಯೊಗಳಿಂದ ಸಾಬೀತಾಗಿದೆ. ಮರನ ಸಮಯದಲ್ಲಿ ಆಕೆ ತನನ್ನು ರಕ್ಷಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಅಂತೆಯೇ ಹೆಚ್ಚು ಭಯಭೀತಳಾಗಿದ್ದಳು ಎಂಬುದೂ ವೀಡಿಯೊದಿಂದ ದೊರಕಿದೆ.
http://coolintrestingstuff.com/

Most Read Articles
Best Mobiles in India

English summary
The following 10 photos and videos have experts completely baffled, leaving no definitive explanation in their wake. Find out the stories and conspiracies behind them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X